ಈಗಿನ ಕಾಲದಲ್ಲಿ ಮದುವೆ ವಿಳಂಬ ಎನ್ನುವುದು ಬಹಳ ದೊಡ್ಡ ಸಮಸ್ಯೆ ಆಗುತ್ತಿದೆ. ಮದುವೆ ಆಗುವ ಸಮಯಕ್ಕೆ ಮದುವೆಯಾಗಿ ಬಿಡಬೇಕು. ಅದು ಪೋಷಕರಿಗೆ ನೆಮ್ಮದಿ ತರುವ ವಿಷಯ. ತಮ್ಮ ಮಕ್ಕಳಿಗೆ ಮದುವೆ ಸೆಟ್ ಆಗುತ್ತಿಲ್ಲ, ಎಷ್ಟು ಸಂಬಂಧಗಳು ಬಂದರು ಯಾವುದು ಒಪ್ಪಿಗೆ ಆಗುತ್ತಿಲ್ಲ ಎಂದರೆ ತಂದೆ-ತಾಯಿ ಹಿರಿಯರು ನೊಂದುಕೊಳ್ಳುತ್ತಾರೆ.
ಹಾಗೆಯೇ 30, 35, 40 ವರ್ಷ ಆದರೂ ಮದುವೆ ಆಗದೆ ಇದ್ದರೆ ಸ್ನೇಹಿತರಿಂದ ಸಂಬಂಧಿಗಳಿಂದ ಆ ಹೆಣ್ಣು ಮಕ್ಕಳು ಅಥವಾ ಗಂಡು ಮಕ್ಕಳು ಅವಮಾನ ಅನುಭವಿಸಬೇಕಾಗುತ್ತದೆ. ಈ ರೀತಿ ವಿವಾಹ ವಿಳಂಬ ಆಗುವುದಕ್ಕೆ ಹತ್ತಾರು ಕಾರಣಗಳಿರಬಹುದು ಇವುಗಳಿಗೆ ಎಲ್ಲದಕ್ಕೂ ಪರಿಹಾರ ಮಾತ್ರ ಭಗವಂತನ ಆಶೀರ್ವಾದ.
ಹಾಗಾಗಿ ಶೀಘ್ರವೇ ಕಲ್ಯಾಣ ಭಾಗ್ಯ ಕೂಡಿ ಬರಲು ನಾವು ಹೇಳುವ ಈ ಸರಳ ಪರಿಹಾರ ಮಾಡಿ. ಹೆಣ್ಣು ಮಕ್ಕಳು ತಮಗೆ ಆದಷ್ಟು ಬೇಗ ಕಂಕಣ ಭಾಗ್ಯ ಕೂಡಿ ಬರಬೇಕು ಎಂದರೆ ಸೋಮವಾರದ ದಿನ ಶಿವನ ದೇವಸ್ಥಾನಕ್ಕೆ ಹೋಗಿ 5 ತೆಂಗಿನ ಕಾಯಿಯನ್ನು ಅರ್ಚಕರಿಗೆ ಕೊಟ್ಟು ಶಿವಲಿಂಗದ ಮುಂದೆ ಇಟ್ಟು ಪೂಜೆ ಮಾಡಿಕೊಡುವಂತೆ ಹೇಳಿ.
ಈ ಸುದ್ದಿ ಓದಿ:- ಪ್ರಾಣ ಹೋದರೂ ಸರಿ ಈ 9 ವಿಷಯಗಳನ್ನು ಯಾರಿಗೂ ಹೇಳಬೇಡಿ.!
ನಂತರ ಆ ತೆಂಗಿನಕಾಯಿಯನ್ನು ಹೊಡೆದು ದೇವರಿಗೆ ನೈವೇದ್ಯವಾಗಿ ಅರ್ಪಿಸಿ ಅದನ್ನು ಮನೆಗೆ ವಾಪಸ್ಸು ತರಬೇಕು, ಮನೆಗೆ ತಂದ ಮೇಲೆ ಅದರಿಂದ ಸಿಹಿ ಪದಾರ್ಥ ಮಾಡಿ ಆ ಹೆಣ್ಣು ಮಗಳು ಸೇವಿಸಬೇಕು. ನೆನಪಿನಲ್ಲಿ ಇರಲಿ ಈ ತೆಂಗಿನಕಾಯಿ ಖಾಲಿ ಆಗುವವರೆಗೂ ಅದರಿಂದ ಮಾಡುವ ಪದಾರ್ಥವನ್ನು ಆ ಹೆಣ್ಣು ಮಗಳು ಮಾತ್ರ ಸೇವಿಸಬೇಕು ಹೀಗೆ ಮಾಡಿದರೆ ಆದಷ್ಟು ಬೇಗ ಆಕೆಗೆ ಮದುವೆ ಯೋಗ ಬರುತ್ತದೆ.
ಗಂಡು ಮಕ್ಕಳು ಗುರುವಾರದಂದು ಮತ್ತೊಂದು ರೀತಿಯ ಪರಿಹಾರ ಮಾಡಿಕೊಳ್ಳಬೇಕು. ಗುರುವಾರದ ದಿನ ಎರಡು ರೊಟ್ಟಿ ತೆಗೆದುಕೊಳ್ಳಬೇಕು ಈ ಜೋಡಿ ರೊಟ್ಟಿಗೆ ಮಧ್ಯೆ ಅರಿಶಿಣವನ್ನು ಹಚ್ಚಬೇಕು. ನಿಮ್ಮ ಮನೆ ಬಳಿ ಇರುವ ಗೋಮಾತೆಗೆ ಅಥವಾ ನೀವೇ ಹುಡುಕಿಕೊಂಡು ಹೋಗಿ ಗೋಮಾತೆಗೆ ಈ ರೊಟ್ಟಿ ಅಥವಾ ಚಪಾತಿಯನ್ನು ತಿನ್ನಿಸಿ ಬರಬೇಕು.
ಮೂರು ಗುರುವಾರಗಳ ಕಾಲ ತಪ್ಪದೆ ಈ ರೀತಿ ಆಚರಣೆ ಮಾಡಿಕೊಂಡು ಬಂದರೆ ಅಂತಹ ಗಂಡು ಮಕ್ಕಳಿಗೆ ಆದಷ್ಟು ಬೇಗ ಮದುವೆ ಫಿಕ್ಸ್ ಆಗುತ್ತದೆ. ಈ ರೀತಿ ಪರಿಹಾರಗಳನ್ನು ಮಾಡಿಕೊಂಡ ಮೂರು ತಿಂಗಳ ಒಳಗೆ ನೀವು ಇದರ ಶುಭ ಫಲಿತಾಂಶವನ್ನು ಕೇಳಬಹುದು. ಯಾವುದೇ ಅನುಮಾನ ಇಲ್ಲದೆ ಮನಸ್ಸಿನಲ್ಲಿ ಶ್ರದ್ದೆ ಭಕ್ತಿಯಿಂದ ಎಲ್ಲಾ ಭಾರವನ್ನು ಭಗವಂತನ ಮೇಲೆ ಹಾಕಿ ಈ ರೀತಿ ಮಾಡಿ ಖಂಡಿತ ರಿಸಲ್ಟ್ ನಿಮ್ಮ ಪರವಾಗಿರುತ್ತದೆ.
ಈ ಸುದ್ದಿ ಓದಿ:- ಈ 6 ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ, ಈ 6 ರಾಶಿಯವರು ಏನು ಮಾಡಿದರು ಲಾಭನೇ.!
ನಮ್ಮ ಕೈ ಮೀರಿ ಇರುವ ಸಂಗತಿಗಳಿಗೆ ಭಗವಂತನ ಆಶೀರ್ವಾದ ಒಂದೇ ದಾರಿ. ಈ ರೀತಿ ದೇವರ ಕೃಪೆ ಇದ್ದರೆ ಎಂತಹ ಕಷ್ಟಗಳಿದ್ದರೂ ಕರಗುತ್ತವೆ ದೋಷಗಳು ಇದ್ದರೂ ಪರಿಹಾರವಾಗುತ್ತದೆ ಹಾಗಾಗಿ ನಿಮ್ಮ ಇಷ್ಟಾರ್ಥ ಸಿದ್ದಿಗೆ ಈ ರೀತಿಯಾಗಿ ದೇವರನ್ನು ಪೂಜಿಸಿ. ನೆನಪಿನಲ್ಲಿ ಇಡಿ ಯಾರಿಗೆ ಮದುವೆ ಆಗಬೇಕು ಅವರೇ ಈ ಆಚರಣೆಗಳನ್ನು ಮಾಡುವುದರಿಂದ ಬಹಳ ಬೇಗ ಅದರ ಪ್ರತಿಫಲ ದೊರೆಯುತ್ತದೆ.
ಅವರ ಪರವಾಗಿ ಕುಟುಂಬದ ಇತರ ಸದಸ್ಯರು ಕೂಡ ಮಾಡಬಹುದು ಆದರೆ ಅವರೇ ಮಾಡುವುದು ಅತ್ಯಂತ ಶ್ರೇಷ್ಠ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರೊಂದಿಗೆ ಹಂಚಿಕೊಂಡು ಎಲ್ಲರಿಗೂ ಈ ಮಾಹಿತಿ ತಿಳಿಯುವಂತೆ ಮಾಡಿ.