ನಮ್ಮ ಧರ್ಮ ಗ್ರಂಥಗಳ ಪ್ರಕಾರ ಮನುಷ್ಯ 84 ಲಕ್ಷ ಜೀವರಾಶಿಯನ್ನು ದಾಟಿ ಈ ಜನ್ಮ ಪಡೆದಿರುತ್ತಾನೆ ಮತ್ತು ಪ್ರತಿ ಜನ್ಮದ ಕರ್ಮಾನುಸಾರವಾಗಿ ಆತನಿಗೆ ಮುಂದಿನ ಜನ್ಮ ನಿರ್ಧಾರವಾಗುತ್ತದೆ. ಹೀಗೆ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗುವವರೆಗೂ ಕೊಳೆಯಾದ ಬಟ್ಟೆಯನ್ನು ಕಳಚಿ ಹೊಸ ಬಟ್ಟೆ ತೊಡುವಂತೆ ಸಾವಿಲ್ಲದ ಆತ್ಮವು ದೇಹವನ್ನು ಆರಿಸಿಕೊಳ್ಳುತ್ತಾ ಹೋಗುತ್ತದೆ.
ತಾಯಿ ಗರ್ಭದಿಂದ ಹೊರಬಂದು ಮಗು ಮಾತು ಕಲಿತ ನಂತರ ಅದಕ್ಕೆ ಹಿಂದಿನ ಜನ್ಮದ ನೆನಪುಗಳು ಮರೆತು ಹೋಗುತ್ತವೆ ಎಂದು ಮತ್ತೊಂದು ನಂಬಿಕೆ ಹೇಳುತ್ತದೆ. ಆದರೆ ಕೆಲವರಿಗೆ ಆಗಾಗ ಕೆಲವು ವಿಚಿತ್ರವಾದ, ನೆನಪುಗಳು, ಅನುಭವಗಳು ಬರುತ್ತದೆ, ಅವುಗಳಲ್ಲಿ ಹಿಂದಿನ ಜನ್ಮದ ನೆನಪುಗಳು ಇರುತ್ತವೆ ಎಂದು ಹೇಳಲಾಗುತ್ತದೆ. ಯಾವ ರೀತಿಯ ವಿಷಯಗಳಿಂದ ಹಿಂದಿನ ಜನ್ಮದ ಬಗ್ಗೆ ತಿಳಿದುಕೊಳ್ಳಬಹುದು ಎನ್ನುವ ಕುತೂಹಲಕಾರಿ ಅಂಶದ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಶೀಘ್ರ ವಿವಾಹಕ್ಕೆ ಸರಳ ಪರಿಹಾರ, ತಾಯಿ ಬನಶಂಕರಮ್ಮನಿಗೆ ಹೀಗೆ ಸಂಕಲ್ಪ ಮಾಡಿ.!
* ಕೆಲವರಿಗೆ ಹುಟ್ಟಿದಾಗಲೇ ಕೆಲವು ಮಚ್ಚೆಗಳು ಇರುತ್ತವೆ. ಅವುಗಳನ್ನು ಹಿಂದಿನ ಜನ್ಮದ ಮಚ್ಚೆಗಳು ಮತ್ತು ಒಂದು ಜನ್ಮದಿಂದ ಮತ್ತೊಂದು ಜನ್ಮಕ್ಕೆ ಈ ಮಚ್ಚೆಗಳು ವರ್ಗಾವಣೆ ಆಗುತ್ತದೆ ಆದರೆ ಇದು ಸ್ವಲ್ಪ ಸ್ವಲ್ಪ ಕರಗುತ್ತಾ ಬರುತ್ತದೆ ಎಂದು ಹೇಳಲಾಗುತ್ತದೆ ಮತ್ತು ಮತ್ತೊಂದು ನಂಬಿಕೆಯ ಪ್ರಕಾರವಾಗಿ.
ಮನುಷ್ಯನಿಗೆ ಆತನ ಕರ್ಮಾನುಸಾರವಾಗಿ ಹಿಂದಿನ ಜನ್ಮದ ಪಾಪಫಲದ ಪರಿಣಾಮ ನರಕದಲ್ಲಿ ಶಿಕ್ಷೆ ಆಗಿರುತ್ತದೆ. ಅಲ್ಲಿಂದ ನೋವಿನ ನೆನಪುಗಳು ದೇಹದ ಮೇಲಿನ ಗುರುತುಗಳಾಗಿ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಕೆಲವರಿಗೆ ಈ ರೀತಿ ಮಚ್ಚೆಗಳನ್ನು ನೋಡಿದಾಗ ಹಿಂದಿನ ಜನ್ಮದ ಕೆಲ ನೆನಪುಗಳು ಬರುತ್ತವೆ.
* ದೇಜಾವೋ ಎಂದರೆ ಯಾವುದೋ ಒಂದು ಸ್ಥಳ ವಿಷಯ ವ್ಯಕ್ತಿ ಸಂಗತಿ ಮತ್ತೆ ಮರುಕಳಿಸಿದೆ ಎನಿಸುವುದು. ನನಗೆ ಈ ಹಿಂದೆ ಇದೇ ಜಾಗದಲ್ಲಿ ಈ ರೀತಿ ಆಗಿತ್ತು, ಇದು ಎರಡನೇ ಬಾರಿಗೆ ಆಗುತ್ತಿದೆ ಎಂದು ಅನಿಸುವುದು ಇದೆಲ್ಲವೂ ಕೂಡ ಹಿಂದಿನ ಜನ್ಮದ ಬಗ್ಗೆ ತಿಳಿಸುತ್ತದೆ ಎಂದು ಹೇಳಲಾಗುತ್ತದೆ.
ಈ ಸುದ್ದಿ ಓದಿ:- ಈ 6 ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ, ಈ 6 ರಾಶಿಯವರು ಏನು ಮಾಡಿದರು ಲಾಭನೇ.!
* ವಿಚಿತ್ರವಾದ ಕನಸುಗಳು ಕೂಡ ಇದೇ ಸುಳಿವು ಕೊಡುತ್ತದೆ ಎಂದು ಹೇಳಲಾಗುತ್ತದೆ. ಮನುಷ್ಯನಿಗೆ ಸಹಜವಾಗಿ ಪ್ರಸ್ತುತ ಜನ್ಮಕ್ಕೆ ಅನುಸಾರವಾಗಿ ಆತನ ಜೀವನದ ಕುರಿತಾಗಿ ಕನಸುಗಳು ಬರುತ್ತಾ ಇರುತ್ತವೆ. ಇದು ನ್ಯಾಚುರಲ್ ಆದರೆ ಕೆಲವರಿಗೆ ತಾವು ನೋಡೇ ಇರದ ಸ್ಥಳ ತಾವು ನೋಡೇ ಇರದ ವ್ಯಕ್ತಿಗಳು ಕನಸಿನಲ್ಲಿ ಬಂದ ರೀತಿ ಆಗುತ್ತದೆ ಮತ್ತು ಅವರು ತುಂಬಾ ಚೆನ್ನಾಗಿ ಗೊತ್ತು
ಆ ಸ್ಥಳ ಪರಿಚಿತ ಎನಿಸುತ್ತದೆ ಮತ್ತು ಈ ರೀತಿ ಕನಸು ಪದೇಪದೇ ಒಂದೇ ರೀತಿ ಬೀಳುತ್ತಿದ್ದರೆ ಅದು ಹಿಂದಿನ ಜನ್ಮದಲ್ಲಿ ನಡೆದಿರುವ ಘಟನೆ ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ನಿಮ್ಮ ಕನಸಿನಲ್ಲಿ ನೀವು ಯಾವಾಗಲೂ ಒಂದೇ ರೀತಿ ಸಾ’ವನ್ನಪ್ಪುತ್ತಿದ್ದರೆ ಅದು ಕೂಡ ನೀವು ಹಿಂದಿನ ಜನ್ಮದಲ್ಲಿ ಸ’ತ್ತಿದ್ದರ ರಹಸ್ಯ ತಿಳಿಸುತ್ತಿರಬಹುದು ಎಂದು ಹೇಳಲಾಗುತ್ತಿದೆ.
* ನಿಮಗೆ ಯಾವುದಾದರೂ ಒಂದು ವಸ್ತುವಿನ ಮೇಲೆ ತುಂಬಾ ಭ’ಯ ಕಾರಣವಿಲ್ಲದೇ ಇದ್ದರೆ ಅದು ಹಿಂದಿನ ಜನ್ಮಕ್ಕೆ ಸಂಬಂಧಿಸಿದ ವಿಷಯದಿಂದ ಆಗುತ್ತಿರುವ ಭ’ಯ ಎಂದು ಹೇಳಲಾಗುತ್ತದೆ. ಕೆಲವರಿಗೆ ಡಾಲ್ ನೋಡಿದರೆ ಈ ರೀತಿ ಭಯ ಬರುತ್ತದೆ, ಕೆಲವರಿಗೆ ಎತ್ತರದ ಸ್ಥಳ ನೋಡಿದರ,
ಈ ಸುದ್ದಿ ಓದಿ:- ನೀವು ಕೇಳಿದ್ದನ್ನೆಲ್ಲ ದೇವರು ಕೊಡಬೇಕು ಎಂದರೆ ಈ ರೀತಿ ಪ್ರಾರ್ಥಿಸಿ
ಕೆಲವರಿಗೆ ನೀರು ತುಂಬಿರುವ ಜಾಗ ನೋಡಿದರೆ. ಇನ್ನು ಕೆಲವರಿಗೆ ಚೂಪಾದ ವಸ್ತುಗಳನ್ನು ನೋಡಿದರೆ ಭ’ಯ ಆಗುತ್ತದೆ. ಇದನ್ನು ಹಿಂದಿನ ಜನ್ಮಕ್ಕೆ ಹೋಲಿಕೆ ಮಾಡಲಾಗುತ್ತದೆ. ನಿಮಗೆ ಇದರಲ್ಲಿ ಯಾವುದಾದರೂ ಅನುಭವವಾಗಿದೆಯಾ ಎನ್ನುವುದನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.