ಪ್ರತಿನಿತ್ಯ ಕೂಡ ನಮ್ಮ ಬದುಕಿಗೆ ಸಂಬಂಧಪಟ್ಟ ಹಾಗೆ ನಾವು ಹೊಸ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಸವಾಲುಗಳನ್ನು ಸ್ವೀಕರಿಸಬೇಕಾಗುತ್ತದೆ. ಈ ಹಾದಿಯಲ್ಲಿ ಒಮ್ಮೊಮ್ಮೆ ನಮಗೆ ಗೊಂದಲವಾಗುವುದು ಉಂಟು.
ನಾವು ಮಾಡುತ್ತಿರುವ ಕೆಲಸ ಸರಿಯೇ ತಪ್ಪೇ ಅಥವಾ ನಾವು ಈ ಕೆಲಸ ಮಾಡಿದರೆ ಅದು ಪೂರ್ತಿ ಆಗುತ್ತದೆಯೇ ಇಲ್ಲವೋ ಇದನ್ನು ಮಾಡಿದರೆ ನಾವು ಅಂದುಕೊಂಡ ರೀತಿ ಪ್ರತಿಫಲ ಸಿಗುತ್ತದೆಯೋ? ಇಲ್ಲವೋ? ಇದು ಲಾಭವೋ?, ನಷ್ಟವೋ? ಈ ರೀತಿ ಹತ್ತಾರು ಅನುಮಾನಗಳು ಮೂಡುತ್ತವೆ ಅದು ಆಸ್ತಿ ಕೊಂಡುಕೊಳ್ಳುವ ವಿಚಾರವಾಗಿರಬಹುದು.
ಅಥವಾ ಮದುವೆ ಸಂಬಂಧ ಬಂದಾಗ ಆಗುವ ಗೊಂದಲ ಇರಬಹುದು ಅಥವಾ ನಾವು ಸಂದರ್ಶನಗಳಿಗೆ ಹೋದಾಗ ಯಾವುದನ್ನು ಸೆಲೆಕ್ಟ್ ಮಾಡುವುದು ಎನ್ನುವ ಗೊಂದಲ ಇರಬಹುದು. ಹೀಗೆ ಬದುಕಿನಲ್ಲಿ ನಿಮ್ಮ ಯಾವುದೇ ಕನ್ಫ್ಯೂಷನ್ ಇದ್ದರು ನೀರಿನಿಂದಲೇ ಅದಕ್ಕೆ ಪರಿಹಾರ ತಿಳಿದುಕೊಳ್ಳಬಹುದು ಅದಕ್ಕಾಗಿ ನಾವು ಹೇಳುವ ಈ ಸರಳ ವಿಧಾನ ಪಾಲಿಸಿ ಸಾಕು.
ಈ ಸುದ್ದಿ ಓದಿ:- ಬಡ ಹಾಗೂ ಮಧ್ಯಮ ವರ್ಗದವರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್.! ರೇಷನ್ ಕಾರ್ಡ್ ಇದ್ದವರಿಗೆ 5 ಲಕ್ಷ, ಇಲ್ಲದವರಿಗೆ 1.5 ಲಕ್ಷ ಉಚಿತ.!
ಇದನ್ನು ದಿನದ ಯಾವುದೇ ಸಮಯದಲ್ಲಿ ವಾರದ ಯಾವುದೇ ದಿನ ಬೇಕಾದರೂ ಮಾಡಬಹುದು ಆದರೆ ಮಾಡುವ ಮುನ್ನ ನೀವು ಸ್ನಾನ ಮಾಡಿ ಮಡಿ ಉಟ್ಟುಕೊಂಡು ಸಾಧ್ಯವಾದರೆ ದೇವರ ಕೋಣೆಯಲ್ಲಿ ಕುಳಿತುಕೊಳ್ಳಿ ಇಲ್ಲವಾದಲ್ಲಿ ಮನೆಯ ಹಾಲಿನಲ್ಲಿ ಒಂದು ಪ್ರಶಾಂತವಾದ ಜಾಗದಲ್ಲಿ ಕುಳಿತುಕೊಳ್ಳಿ ಇದು ಪೂರ್ತಿ ಆಗುವವರೆಗೂ ಕೂಡ ನೀವು ಅಲ್ಲೇ ಇರಬೇಕಾಗುತ್ತದೆ.
ಮೊದಲಿಗೆ ನಿಮ್ಮ ಮನೆದೇವರು ಕುಲದೇವರು ಇಷ್ಟ ದೇವರನ್ನು ಪ್ರಾರ್ಥಿಸಿ ಐದು ನಿಮಿಷಗಳ ಕಾಲ ದೇವರ ಧ್ಯಾನ ಮಾಡಿ ಈಗ ಒಂದು ಗಾಜಿನ ಬೌಲ್ ನಲ್ಲಿ ಮುಕ್ಕಾಲು ಭಾಗ ನೀರು ತೆಗೆದುಕೊಳ್ಳಿ ನೆನಪಿರಲಿ ಇದಕ್ಕೆ ಗಾಜಿನ ಬೌಲ್ ಬಳಸಿದರೆ ಬಹಳ ಉತ್ತಮ.
ಸ್ವಲ್ಪ ಪೇಪರ್ ತೆಗೆದುಕೊಂಡು ನೀಲಿ ಬಣ್ಣದ ಪೆನ್ನಿನಿಂದ ನಿಮ್ಮ ಇಷ್ಟವಾದ ದೇವರ ಹೆಸರನ್ನು ಮೂರು ಬಾರಿ ಬರೆಯಿರಿ ಒಂದೆರ ಕೆಳಗೆ ಒಂದರಂತೆ ಉದಾಹರಣೆಗೆ ನಿಮ್ಮ ಇಷ್ಟವಾದ ದೇವರು ಈಶ್ವರ ಆಗಿದ್ದರೆ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದು ಬರೆದು ಆ ಪೇಪರ್ ಹೆಸರು ಇರುವಷ್ಟು ಭಾಗ ಮಾತ್ರ ಕಟ್ ಮಾಡಿಕೊಳ್ಳಿ.
ಈ ಸುದ್ದಿ ಓದಿ:- ವೀಳ್ಯದೆಲೆ ಹಾಗೂ ಸುಣ್ಣದಿಂದ ಸಾಲಕ್ಕೆ ಮುಕ್ತಿ ಸಿಗುತ್ತದೆ. ಎಲೆ ಮೇಲೆ ಹೀಗೆ ಬರೆದು 21 ದಿನ ಈ ಸ್ಥಳದಲ್ಲಿ ಇಟ್ಟರೆ ಸಾಕು.!
ಈಗ ಇದನ್ನು ಕೈಯಲ್ಲಿ ಹಿಡಿದು ಈಶ್ವರನನ್ನು ಒಮ್ಮೆ ಮನಸ್ಸಿನಲ್ಲಿ ಈ ರೀತಿಯಾಗಿ ಪ್ರಾರ್ಥಿಸಿ ಶಿವನೇ ನಾನು ಮಾಡುತ್ತಿರುವ ಕೆಲಸ ಸರಿ ಇದ್ದರೆ ಈ ಕೆಲಸ ಮಾಡಿದ್ದರೆ ಸೂಕ್ತ ಪ್ರತಿಫಲ ಸಿಗುತ್ತದೆ ಎನ್ನುವುದಾದರೆ ನೀರಿಗೆ ಹಾಕಿದಾಗ ಇದು ಬಲಕ್ಕೆ ತಿರುಗಬೇಕು ಈ ಕೆಲಸ ವಿಳಂಬವಾಗುತ್ತದೆ ವಿಘ್ನಗಳು ಹೆಚ್ಚು ಎಂದರೆ ಎಡಕ್ಕೆ ತಿರುಗಬೇಕು ಬಹಳ ಸವಾಲುಗಳು ಬರುತ್ತದೆ.
ಆದರೂ ಇದನ್ನು ಮಾಡಲೇಬೇಕು ಮುಂದೆ ಒಳ್ಳೆಯದಾಗುತ್ತದೆ ಎನ್ನುವುದಾದರೆ ಮುಂದಕ್ಕೆ ಬರಬೇಕು ಈ ಕೆಲಸ ಮಾಡಲೇಬಾರದು ಎಂದರೆ ಹಿಂದಕ್ಕೆ ಹೋಗಬೇಕು ಎಂದುಕೊಂಡು ಗಾಜಿನ ಬೌಲ್ ಆಗಲಿ ನೀರನ್ನಾಗಲಿ ಅಲುಗಾಡಿಸದೆ ಆ ಪೇಪರ್ ನ್ನು ನೀರಿನ ಒಳಗೆ ಹಾಕಬೇಕು ಮತ್ತು ನೀವು ಓಂ ನಮಃ ಶಿವಾಯ ಓಂ ನಮಃ ಶಿವಾಯ ಅಥವಾ ಈಶ್ವರನ ಇತರೆ ಹೆಸರುಗಳನ್ನು ಹೇಳುತ್ತಾ ಅದು ಯಾವ ಕಡೆಗೆ ಜರಗುತ್ತದೆ ಎಂದು ನೋಡಿಕೊಳ್ಳುತ್ತಿರಬೇಕು.
ಈಗ ಅದು ಯಾವ ಕಡೆ ತಿರುಗಿದೆ ಎನ್ನುವುದರ ಆಧಾರದ ಮೇಲೆ ನಿಮ್ಮ ಫಲ ನಿರ್ಧಾರವಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಇದು ಆದಮೇಲೆ ನಿಮಗೆ ರಿಸಲ್ಟ್ ಸಿಕ್ಕಿದ ಮೇಲೆ ಆ ನೀರನ್ನು ಮತ್ತು ಪೇಪರ್ ನ್ನು ಯಾವುದಾದರೂ ಗಿಡದ ಬುಡಕ್ಕೆ ಅಥವಾ ಯಾರು ತಿಳಿಯದ ಜಾಗಕ್ಕೆ ಹಾಕಿ. ಕೆಲವರಿಗೆ ಬೇಗ ಸಿಗುತ್ತದೆ ಕೆಲವರಿಗೆ ಬಹಳ ವಿಳಂಬ ಆಗುತ್ತದೆ ಆದರೆ ನಿಮ್ಮ ಪ್ರಶ್ನೆಗೆ ಉತ್ತರ ಬೇಕು ಎಂದರೆ ನೀವು ಅದು ಚಲಿಸಿ ಉತ್ತರ ಕೊಡುವವರೆಗೂ ಕಾಯಲೇ ಬೇಕು.