ವಾಷಿಂಗ್ ಮಿಷಿನ್ ಪ್ರತಿಯೊಬ್ಬ ಉದ್ಯೋಗಸ್ಥ ಮಹಿಳೆಯ ಮನೆಯಲ್ಲಿ ಕೂಡ ಇರಬೇಕು. ಯಾಕೆಂದರೆ ಇದು ಮಹಿಳೆಯ ಬಹಳ ಸಮಯ ಉಳಿತಾಯ ಮಾಡುತ್ತದೆ ಮತ್ತು ಆಕೆಗೆ ಅನಗತ್ಯ ಶ್ರಮವಾಗಿ ಸುಸ್ತಾಗುವುದನ್ನು ಕೂಡ ತಪ್ಪಿಸುತ್ತದೆ. ವಾಷಿಂಗ್ ಮಿಷನ್ ಮನೆಯಲ್ಲಿ ಇದ್ದರೆ ಹೆಣ್ಣು ಮಕ್ಕಳಿಗೆ ಏನೋ ಒಂದು ರೀತಿಯ ಧೈರ್ಯ ಬರುತ್ತದೆ.
ಮನೆಯಲ್ಲಿ ಇತರ ಕೆಲಸ ಮಾಡುತ್ತಲೇ ಮಿಷನ್ ಗೆ ಬಟ್ಟೆ ಹಾಕಿದರೆ ಅದು ಕ್ಲೀನ್ ಆಗಿರುತ್ತದೆ ನಂತರ ಒಣಗಿಸಿ ಇಟ್ಟುಕೊಳ್ಳಬಹುದು ಮತ್ತು ಮಿಷನ್ ನಲ್ಲಿಯೇ ಡ್ರೈ ಕೂಡ ಆಪ್ಷನ್ ಇರುವುದರಿಂದ ಸ್ವಲ್ಪ ಹೊತ್ತು ಒಣಗಿಸಿದರೆ ಸಾಕು. ಇಷ್ಟೆಲ್ಲಾ ಅನುಕೂಲತೆ ಇದೆ ನಿಜ ಆದರೆ ವಾಷಿಂಗ್ ಮಷೀನ್ ಖರೀದಿಸುವುದು ಮಾತ್ರವಲ್ಲದೆ ಖರೀದಿಸಿ ಬಳಸುವಾಗ ಕೂಡ ಕೆಲ ವಿಷಯಗಳ ಬಗ್ಗೆ ಕೂಡ ನಿಗಾ ವಹಿಸಬೇಕು. ಇಲ್ಲವಾದಲ್ಲಿ ಅದರಿಂದಲೇ ನಮಗೆ ಕಂಟಕವೂ ಆಗಬಹುದು.
ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!
ಮುಖ್ಯವಾಗಿ ನೀವೇನಾದರೂ ಟಾಪ್ ಲೋಡ್ ವಾಷಿಂಗ್ ಮಿಷನ್ ಬಳಸುತ್ತಿದ್ದರೆ ಟಾಪ್ ಲೋಡ್ ಗೆ ಬಟ್ಟೆಗಳನ್ನು ಹಾಕುವಾಗ ಜಾಗ್ರತೆಯಿಂದ ಒಂದೊಂದಾಗಿ ಹಾಕಬೇಕು ಟಿವಿ ಸೀರಿಯಲ್ ನೋಡುತ್ತಾ ಹೀಗೆ ಟಾಪ್ ಲೋಡ್ ಗೆ ಬಟ್ಟೆ ಹಾಕುವಾಗ ಮಹಿಳೆ ಒಬ್ಬಳು ಮಾಡಿದ ದು’ರಂ’ತದಿಂದ ಏನಾಯ್ತು ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತಿದೆ. ಇಂತಹ ಘಟನೆ ಮತ್ತೆಂದೂ ಮರುಕಳಿಸುವುದು ಬೇಡವೇ ಬೇಡ ಹಾಗಾಗಿ ಜಾಗೃತೆಯಿಂದ ಇರಬೇಕು.
* ಟಾಪ್ ಲೋಡ್ ಅಥವಾ ಫ್ರಂಟ್ ಲೋಡ್ ಯಾವುದೇ ಆಗಲಿ ಬಟ್ಟೆಗಳನ್ನು ಹಾಕಿದ ಮೇಲೆ ಡೋರ್ ಕ್ಲೋಸ್ ಆಗಿದೆಯೇ ಎನ್ನುವುದನ್ನು ಸರಿಯಾಗಿ ಗಮನಿಸಬೇಕು. ಇಲ್ಲವಾದಲ್ಲಿ ಮಿಷನ್ ಆನ್ ಆಗುವುದಿಲ್ಲ ಅಥವಾ ಆನ್ ಆದ ಮೇಲೆ ಸಡನ್ ಆಗಿ ಹೊಡೆದು ನೀರು ಹೊರಬಹುದು.
ಈ ಸುದ್ದಿ ಓದಿ:-ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!
* ಯಾವಾಗಲೂ ಲೋಡ್ ಗಿಂತ ಹೆಚ್ಚಿನ ಬಟ್ಟೆಗಳನ್ನು ಹಾಕಲೇ ಬಾರದು. ಹಾಗೆ ಮಾಡಿದವರೆ ಮಿಷನ್ ಗೆ ಹಾನಿಯಾಗುತ್ತದೆ. ಮಿಷನ್ ಮೇಲೆಯೇ ಅದರ ಸಾಮರ್ಥ್ಯ ಎಷ್ಟು ಎಂದು ಬರೆದಿರುತ್ತದೆ ಅದನ್ನು ನೋಡಿಕೊಂಡು ಅದರ ಪ್ರಕಾರವಾಗಿ ಮೆಂಟೇನ್ ಮಾಡಬೇಕು. ಲೋಡ್ ಹೆಚ್ಚಾದರೆ ಸರಿಯಾಗಿ ಕ್ಲೀನ್ ಕೂಡ ಆಗುವುದಿಲ್ಲ ನಾವು ಮಿಷನ್ ಗೆ ಹಾಕುವ ಲಿಕ್ವಿಡ್ ಕೂಡ ಸರಿಯಾಗಿ ಸ್ಪ್ರೆಡ್ ಆಗುವುದಿಲ್ಲ
* ಮಿಷನ್ ಗೆ ಬಟ್ಟೆ ಹಾಕಿದ ಮೇಲೆ ಮೊದಲು ನೀವು ಯಾವ ಆಪ್ಷನ್ ಸೆಲೆಕ್ಟ್ ಮಾಡುತ್ತೀರಾ ಅದನ್ನು ನಿಲ್ಲಿಸಿ ಆನ್ ಮಾಡಿ. ನೀರು ಸೋಪ್ ಬಾಕ್ಸ್ ನಲ್ಲಿ ಬಂದು ತಿರುಗಲು ಆರಂಭಿಸಿದ ಮೇಲೆ ಲಿಕ್ವಿಡ್ ಹಾಕಬೇಕು ಹೀಗೆ ಮಾಡಿದಾಗ ತುಂಬಾ ಚೆನ್ನಾಗಿ ಲಿಕ್ವಿಡ್ ಬಟ್ಟೆಗಳೊಂದಿಗೆ ಮಿಶ್ರಣ ಆಗುತ್ತದೆ ಇಲ್ಲವಾದಲ್ಲಿ ಸರಿಯಾಗಿ ಸ್ಪ್ರೆಡ್ ಆಗದೆ ಹೋಗುತ್ತದೆ.
ಈ ಸುದ್ದಿ ಓದಿ:-ವಯಸ್ಸಾದವರು ಬೀಳಬಾರದೆಂದರೆ ಈ 5 ವ್ಯಾಯಾಮ ಮಾಡಿ ಸಾಕು.!
* ಮನೆಯಲ್ಲಿ ಮಕ್ಕಳು ಇದ್ದರೆ ಚೈಲ್ಡ್ ಲಾಕ್ ಮಾಡುವುದು ಬೆಸ್ಟ್ ಇಲ್ಲವಾದಲ್ಲಿ ಅವರು ಮಿಷನ್ ಬಲವಂತವಾಗಿ ಎಳೆದು ತೊಂದರೆ ಮಾಡಿಕೊಳ್ಳಬಹುದು. ಅಥವಾ ಮಿಷನ್ ಗೆ ಹೊಡೆದು ತೊಂದರೆ ಮಾಡಬಹುದು. ಇದು ಕೂಡ ನಿರ್ಲಕ್ಷಿಸುವ ವಿಚಾರ ಅಲ್ಲ ಅದರಲ್ಲೂ ಮಿಷನ್ ಇರುವಾಗ ಮಕ್ಕಳು ಅದರ ತಂಟೆಗೆ ಹೋಗದಂತೆ ಅರ್ಥ ಮಾಡಿಸುವುದು ಒಳ್ಳೆಯದು.
* ಮೊದಲ ಬಾರಿಗೆ ಹೊಸ ಬಟ್ಟೆಯನ್ನು ವಾಶ್ ಮಿಡುವುದಿದ್ದರೆ ಮಿಷನ್ ಗೆ ಹಾಕದೆ ಇರುವುದೇ ಉತ್ತಮ. ಯಾಕೆಂದರೆ ಅದು ಕಲರ್ ಹೋಗುತ್ತದೆಯೋ ಇಲ್ಲವೋ ಗೊತ್ತಾಗುವುದಿಲ್ಲ. ಮಿಷನ್ ಗೆ ಹಾಕಿದರೆ ಎಲ್ಲ ಬಟ್ಟೆಗೂ ಸ್ಪ್ರೆಡ್ ಆಗಿ ಬಿಡಬಹುದು. ಆದ್ದರಿಂದ ಎಚ್ಚರಿಕೆ ಇರಲಿ.
ಈ ಸುದ್ದಿ ಓದಿ:-ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ
* ಮಿಷನ್ ನಲ್ಲಿಯೇ ಬೇರೆ ಬೇರೆ ಆಪ್ಷನ್ ಗಳು ಇರುತ್ತದೆ. ಸ್ಪೋರ್ಟ್ಸ್ ಬಟ್ಟೆ ಹಾಕುವಾಗ, ಮಕ್ಕಳ ಬಟ್ಟೆ ಹಾಕುವಾಗ, ಬೆಡ್ ಶೀಟ್ ಹಾಕುವಾಗ ಅಥವಾ ನಮ್ಮ ದಿನನಿತ್ಯದ ಬಳಕೆ ಬಟ್ಟೆ ಹಾಕುವಾಗ ಬೇರೆ ಬೇರೆ ಆಪ್ಷನ್ ಗಳು ಇರುತ್ತವೆ. ಅದಕ್ಕೆ ಅನುಸಾರವಾಗಿ ಸೆಲೆಕ್ಟ್ ಮಾಡಿದರೆ ಬಟ್ಟೆ ಹಾಗೂ ಮಿಷನ್ ಎರಡು ಕೂಡ ಬಾಳಿಕೆಗೆ ಬರುತ್ತದೆ.