ತೆಂಗಿನಕಾಯಿ ಚಿಪ್ಪನ್ನು ಪ್ರತಿಯೊಬ್ಬರೂ ಕೂಡ ಅದನ್ನು ಹೇಗೆ ಮತ್ತೆ ಮರುಬಳಕೆ ಮಾಡಿಕೊಳ್ಳಬೇಕು ಎನ್ನುವಂತಹ ಮಾಹಿತಿ ತಿಳಿದಿಲ್ಲ. ಕೆಲವೊಂದಷ್ಟು ಜನ ಅದನ್ನು ಬಿಸಿ ನೀರನ್ನು ಕಾಯಿಸುವುದಕ್ಕೆ ಒಲೆಗೆ ಹಾಕುತ್ತಾರೆ. ಇನ್ನೂ ಕೆಲವು ಜನರು ಅದನ್ನು ಆಚೆ ಬಿಸಾಡುತ್ತಿರುತ್ತಾರೆ ಆದರೆ ಇನ್ನು ಮುಂದೆ ತೆಂಗಿನಕಾಯಿ ಚಿಪ್ಪನ್ನು ಆಚೆ ಬಿಸಾಡುವ ಅಗತ್ಯವಿಲ್ಲ.
ಬದಲಿಗೆ ಅದನ್ನು ಬಹಳ ಪ್ರಮುಖವಾದಂತಹ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಹಾಗೂ ಅದು ನಿಮಗೆ ತುಂಬಾ ಅನುಕೂಲವನ್ನು ಸಹ ಉಂಟುಮಾಡುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ತೆಂಗಿನ ಕಾಯಿ ಚಿಪ್ಪನ್ನು ಹೇಗೆ ಬಳಸಬಹುದು ಹಾಗೂ ಅದರಿಂದ ನಾವು ಯಾವ ರೀತಿಯ ಲಾಭಗಳನ್ನು ಪಡೆದುಕೊಳ್ಳ ಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.
ಮೊದಲು ತೆಂಗಿನಕಾಯಿ ಚಿಪ್ಪಿನಲ್ಲಿ ಸಂಪೂರ್ಣವಾಗಿ ಕಾಯಿಯನ್ನು ಆಚೆ ತೆಗೆಯಬೇಕು. ಆನಂತರ ಅದನ್ನು ಒಂದು ಪೇಪರ್ ಸಹಾಯದಿಂದ ಅಥವಾ ಇನ್ಯಾವುದೇ ಸಹಾಯದಿಂದ ಸುಟ್ಟು ಅದನ್ನು ಒಣಗಿಸಿಕೊಳ್ಳ ಬೇಕು. ಈ ರೀತಿ ಸುಟ್ಟಂತಹ ತೆಂಗಿನಕಾಯಿ ಚಿಪ್ಪನ್ನು ಹೇಗೆ ಯಾವುದೆಲ್ಲ ಕೆಲಸಗಳಿಗೆ ಉಪಯೋಗ ಮಾಡಿಕೊಳ್ಳಬಹುದು ಎಂದು ಈ ಕೆಳಗೆ ತಿಳಿಯೋಣ.
ಈ ಸುದ್ದಿ ಓದಿ:- ಬೆಳ್ಳಿ ಹಿತ್ತಾಳೆ ಕಂಚು ಮತ್ತು ತಾಮ್ರ ಪಾತ್ರೆಗಳನ್ನು ಸುಲಭವಾಗಿ ಕ್ಲೀನ್ ಮಾಡಿ.!
* ಸುಟ್ಟಂತಹ ತೆಂಗಿನಕಾಯಿ ಚಿಪ್ಪಿನ ಸ್ವಲ್ಪ ಭಾಗವನ್ನು ಒಂದು ಟಿಶ್ಯೂ ಪೇಪರ್ ಒಳಗಡೆ ಇಟ್ಟು ಫ್ರಿಡ್ಜ್ ನಲ್ಲಿ ಇಡುವುದರಿಂದ ಫ್ರಿಡ್ಜ್ ನಲ್ಲಿ ಬರುವಂತಹ ದುರ್ವಾಸನೆಯನ್ನು ತೆಗೆದು ಹಾಕಬಹುದು.
* ಅದೇ ರೀತಿಯಾಗಿ ಸುಟ್ಟಂತಹ ತೆಂಗಿನಕಾಯಿ ಚಿಪ್ಪನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ಆನಂತರ ಒಂದು ಚಿಕ್ಕ ಬೌಲಿಗೆ ಕಾಲು ಚಮಚ ತೆಂಗಿನ ಚಿಪ್ಪಿನ ಪುಡಿ ಹಾಗೂ ಒಂದು ಚಮಚ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರು ವಂತಹ ಡಾರ್ಕ್ ಸರ್ಕಲ್, ಪಿಗ್ಮೆಂಟೇಷನ್ ಇವೆಲ್ಲವೂ ಸಹ ಸಂಪೂರ್ಣವಾಗಿ ಆಚೆ ಹೋಗುತ್ತದೆ. ಅದೇ ರೀತಿಯಾಗಿ ನೀವು ತಲೆಗೆ ಹಚ್ಚುವಂತ ಯಾವುದೇ ರೀತಿಯ ಎಣ್ಣೆ ಇದ್ದರೂ ಅದಕ್ಕೆ ಅರ್ಧ ಚಮಚ ಈ ಒಂದು ಪುಡಿಯನ್ನು ಮಿಶ್ರಣ ಮಾಡಿ ನಿಮ್ಮ ತಲೆಗೆ ಹಚ್ಚುತ್ತಾ ಬಂದರೆ ಕೂದಲು ಬೆಳ್ಳಗಾಗಿದ್ದರೆ ದಿನೇ ದಿನೇ ಅದು ಕಪ್ಪಗಾಗುತ್ತಾ ಬರುತ್ತದೆ.
ಹಾಗೂ ಕೂದಲು ದಿನೇ ದಿನೇ ದಪ್ಪ ಹಾಗೂ ಉದ್ದವಾಗಿ ಬೆಳೆಯಲು ಪ್ರಾರಂಭಿಸುತ್ತದೆ ಆದ್ದರಿಂದ ಈ ವಿಧಾನವನ್ನು ಅನುಸರಿಸುವುದರಿಂದ ತುಂಬಾ ಒಳ್ಳೆಯದು. ಅದೇ ರೀತಿಯಾಗಿ ಈ ಒಂದು ಪುಡಿಯನ್ನು ಉಪಯೋಗಿಸಿ ನೀವು ಹಲ್ಲನ್ನು ಉಜ್ಜುವುದರಿಂದ ವಸಡಿನಲ್ಲಿ ಉಂಟಾಗುವಂತಹ ಯಾವುದೇ ಸಮಸ್ಯೆ ಇದ್ದರೂ ಅವೆಲ್ಲವೂ ಗುಣವಾಗುತ್ತದೆ.
ಈ ಸುದ್ದಿ ಓದಿ:- ಹಿಮ್ಮಡಿ ಎಷ್ಟೇ ಒಡೆದು ಚುರಾಗಿದ್ದರು ಕೇವಲ ಒಂದೇ ದಿನ ಹಚ್ಚಿ ಸಾಕು……..!! ಹಿಮ್ಮಡಿಯ ಬಿರುಕು ಮಾಯ….!!
ಹಾಗೂ ಕೆಲವೊಂದಷ್ಟು ಜನರಿಗೆ ಹಲ್ಲಿನಲ್ಲಿ ಹಳದಿ ಬಣ್ಣ ಇರುತ್ತದೆ ಅದನ್ನು ದೂರ ಮಾಡಬೇಕು ಎಂದರೆ ಅವರು ಈ ಒಂದು ಪುಡಿಯನ್ನು ಉಪಯೋಗಿಸಿ ಹಲ್ಲನ್ನು ಉಜ್ಜುವುದು ಬಹಳ ಮುಖ್ಯವಾಗಿರುತ್ತದೆ. ಇದು ಯಾವುದೇ ರೀತಿಯ ಹಾನಿಯನ್ನು ಉಂಟುಮಾಡುವುದಿಲ್ಲ ಬದಲಿಗೆ ನಿಮ್ಮ ಹಲ್ಲಿಗೆ ಹೆಚ್ಚು ಬಿಳಿ ಹೊಳಪನ್ನು ತಂದುಕೊಡುತ್ತದೆ. ಹಾಗೂ ನಿಮ್ಮ ವಸಡಿನ ಆರೋಗ್ಯ ಹಲ್ಲಿನ ಆರೋಗ್ಯವನ್ನು ಕಾಪಾಡುತ್ತದೆ.
* ತೆಂಗಿನಕಾಯಿ ಚಿಪ್ಪಿನ ಪುಡಿಯನ್ನು ನಿಮ್ಮ ಗಿಡಗಳ ಬೇರಿಗೆ ಹಾಕುತ್ತಾ ಬಂದರೆ ಆ ಗಿಡ ಸಂಪೂರ್ಣವಾಗಿ ಯಾವುದೇ ರೀತಿಯ ರೋಗರುಜನೆ ಇಲ್ಲದೆ ಚೆನ್ನಾಗಿ ಬೆಳೆಯುತ್ತದೆ ಹಾಗೂ ಅತಿ ಹೆಚ್ಚಿನ ಹೂವು ಬಿಡಲು ಪ್ರಾರಂಭಿಸುತ್ತದೆ. ಇದು ಒಂದು ರೀತಿಯ ಔಷಧಿಯಾಗಿ ಕೆಲಸ ಮಾಡುತ್ತದೆ.
* ಜೊತೆಗೆ ಈ ಪುಡಿಯನ್ನು ಉಪಯೋಗಿಸಿ ಪಾತ್ರೆಯನ್ನು ತೊಳೆಯುವು ದರಿಂದ ಪಾತ್ರೆಯಲ್ಲಿರುವಂತಹ ಮಸಿ ಬಣ್ಣ ಆಗಿರಬಹುದು ಇನ್ಯಾವುದೇ ಕೊಳೆ ಇದ್ದರೆ ಅದು ಸಂಪೂರ್ಣವಾಗಿ ಶುಚಿಯಾಗುತ್ತದೆ.
* ಈ ಒಂದು ಪುಡಿಯನ್ನು ಉಪಯೋಗಿಸಿ ಬೆಳ್ಳಿ ಪಾತ್ರೆ ತಾಮ್ರ ಹಿತ್ತಾಳೆ ಪಾತ್ರೆಗಳನ್ನು ತೊಳೆಯುವುದರಿಂದ ಅದರಲ್ಲಿರುವಂತಹ ಜಿಡ್ಡಿನ ಅಂಶ ಎಲ್ಲವೂ ಸಹ ದೂರವಾಗುತ್ತದೆ.