ರಾತ್ರಿ ನಾವು ಮಲಗುವಾಗ ಯಾವ ದಿಕ್ಕಿಗೆ ತಲೆ ಇಟ್ಟು ಮಲಗುತ್ತೀವಿ ಎನ್ನುವುದು ಕೂಡ ನಮ್ಮ ಜೀವನದ ಯಶಸ್ಸಿಗೆ ಕೂಡ ಬಹು ಪ್ರಮುಖವಾದ ಪಾತ್ರವಹಿಸುತ್ತದೆ ಎಂದರೆ ನೀವು ನಂಬಲೇಬೇಕು. ಅಂದಹಾಗೆ ನೀವು ರಾತ್ರಿ ಮಲಗುವಾಗ ಯಾವ ದಿಕ್ಕಿಗೆ ತಲೆ ಇಟ್ಟು ಮಲಗುತ್ತೀರಾ ದಕ್ಷಿಣ ದಿಕ್ಕಿಗ, ಉತ್ತರಕ್ಕ, ಪೂರ್ವಕ್ಕ ಇಲ್ಲವಾ ಪಶ್ಚಿಮ ದಿಕ್ಕಿಗೆ ಯಾವ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಏನು ಫಲ? ಜೀವನದಲ್ಲಿ ಎಂತೆಂಥ ಘಟನೆಗಳು ನಡೆದು ಬಿಡುತ್ತದೆ ಎನ್ನುವಂತಹ ರಹಸ್ಯ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
ನಮ್ಮ ನಿಮ್ಮೆಲ್ಲರ ಜೀವನದಲ್ಲಿ ನಿದ್ದೆ ಎಷ್ಟು ಪ್ರಮುಖವಾದದ್ದು ಎಂದು ಬೇರೆಯ ರೀತಿ ಏನು ಹೇಳುವ ಅಗತ್ಯ ಇಲ್ಲ ಇಂದಿನ ವೇಗದ ಯಾಂತ್ರಿಕ ಜೀವನಶೈಲಿಯಲ್ಲಿ ಕೆಲವೊಂದಷ್ಟು ಜನರಿಗೆ ನಿದ್ದೆ ಮಾಡುವುದಕ್ಕೂ ಕೂಡ ಸಮಯ ಸಿಗುವುದಿಲ್ಲ.
ಅಬ್ಬಬ್ಬಾ ಎಂದರೆ ಮೂರರಿಂದ ನಾಲ್ಕು ಗಂಟೆಗಳ ಸಮಯ ನಿದ್ದೆ ಮಾಡಬಹುದು ಅಷ್ಟೇ ಮತ್ತೆ ಕೆಲವೊಂದಷ್ಟು ಜನರಿಗೆ 8 ಗಂಟೆ ಗಳ ಸಮಯ ನಿದ್ದೆ ಮಾಡುವು ದಕ್ಕೆ ಅವಕಾಶ ಇದ್ದರೂ ಸಹ ಅತಿಯಾದ ಚಿಂತೆ ಒತ್ತಡ ಹೀಗೆ ನಾನಾ ಕಾರಣಗಳಿಂದ ನಿದ್ದೆಯೇ ಬರುವುದಿಲ್ಲ ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು? ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು? ಎನ್ನುವ ರಹಸ್ಯ ಮಾಹಿತಿಯ ಬಗ್ಗೆ ಈಗ ತಿಳಿಯೋಣ.
ಈ ಸುದ್ದಿ ಓದಿ:- ದೇವರ ಮುಂದೆ ಬೇಡಿಕೊಳ್ಳುವಾಗ ಈ ಒಂದು ತಪ್ಪನ್ನು ಮಾಡಬೇಡಿ ಯಾವ ಬೇಡಿಕೆನೂ ಈಡೇರುವುದಿಲ್ಲ.!
* ಪೂರ್ವ ದಿಕ್ಕು ಶುಭವನ್ನೇ ಹೊತ್ತು ತರುತ್ತದೆ. ಸೂರ್ಯ ಹುಟ್ಟುವ ದಿಕ್ಕು ಜೀವನದಲ್ಲಿ ಎಂದಿಗೂ ನಿರಾಶೆಯನ್ನು ತರುವುದಿಲ್ಲ ಹಾಗಾಗಿ ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗುವುದು ಶುಭ ಅಂತ ಹೇಳಲಾಗುತ್ತದೆ. ಆದರೆ ಇದು ಎರಡನೇ ಉತ್ತಮವಾದ ದಿಕ್ಕು. ಪೂರ್ವ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ನೀವು ದೇವರ ಆಶೀರ್ವಾದವನ್ನು ಪಡೆಯುತ್ತೀರಿ.
ನಿಮ್ಮ ಮನೆಯಲ್ಲಿ ನೀವು ಮಾತ್ರ ಸಂಪಾದನೆ ಮಾಡುವಂತಹ ಸದಸ್ಯರಾಗಿದ್ದರೆ ಅಥವಾ ನೀವು ಕೆಲಸ ಮತ್ತು ವ್ಯಾಪಾರವನ್ನು ಮಾಡುತ್ತಾ ಇದ್ದರೆ ನಿಮ್ಮ ತಲೆಯನ್ನು ಪೂರ್ವ ದಿಕ್ಕಿಗೆ ಇಟ್ಟು ಮಲಗುವುದು ಉತ್ತಮ ಅಂತ ಪರಿಗಣಿಸಲಾಗುತ್ತದೆ. ನೀವು ವಿದ್ಯಾರ್ಥಿಯಾಗಿದ್ದರೆ ನಿಮ್ಮ ತಲೆಯನ್ನು ಪೂರ್ವಕ್ಕೆ ಇಟ್ಟು ಮಲಗು ವುದು ಒಳ್ಳೆಯದು.
ಯಾಕೆ ಎಂದರೆ ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ. ಮಲಗುವ ಮುನ್ನ ನೀವು ಮಲಗುವಂತಹ ಕೋಣೆಯಲ್ಲಿ ಕರ್ಪೂರ ವನ್ನು ಹಚ್ಚಿ. ಇದು ಪರಿಸರವನ್ನು ಶುದ್ಧೀಕರಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ದೂರ ಇಡುತ್ತದೆ.
ಈ ಸುದ್ದಿ ಓದಿ:- ಈ ಗುಣಗಳಿರುವ ಪತಿ ಸಿಕ್ಕಿದ್ರೆ ಹೆಣ್ಣು ಮಕ್ಕಳೇ ನಿಮ್ಮಷ್ಟು ಅದೃಷ್ಟಶಾಲಿಗಳು ಯಾರು ಇಲ್ಲ.!
ಇದು ಉತ್ತಮ ನಿದ್ರೆಯನ್ನು ನೀಡುತ್ತದೆ. ಮಲಗುವ ಮುನ್ನ ತಲೆಯಲ್ಲಿ ಇರುವಂತಹ ನಕಾರಾತ್ಮಕ ಆಲೋಚನೆಗಳನ್ನು ತಲೆಯಿಂದ ತೆಗೆದು ಹಾಕಬೇಕು. ನಿಮ್ಮ ಗುರಿಯ ಬಗ್ಗೆ ಸಕಾರಾತ್ಮಕ ಆಲೋಚನೆ ಮಾತ್ರ ಇಟ್ಟುಕೊಳ್ಳಬೇಕು. ಮಲಗುವ ಮುನ್ನ ನಿಮಗೆ ಪ್ರಿಯವಾದ ದೇವರನ್ನು ಅಥವಾ ಹನುಮಂತನ ಧ್ಯಾನವನ್ನು ಮಾಡಿಕೊಂಡು ಮಲಗಬೇಕು. ಈ ಕಾರಣದಿಂದಾಗಿ ನೀವು ಮಲಗುವಂತಹ ಕೋಣೆಯಲ್ಲಿ ಧನಾತ್ಮಕ ಶಕ್ತಿಯು ನೆಲೆಸುವುದಕ್ಕೆ ಪ್ರಾರಂಭಿಸುತ್ತದೆ. ಮ
ನೀವು ಮಲಗುವಾಗ ನಿಮ್ಮ ಪಾದಗಳು ನಿಮ್ಮ ಬಾಗಿಲಿನ ವಿರುದ್ಧ ದಿಕ್ಕಿನಲ್ಲಿ ಇರಬೇಕು ಅನ್ನುವುದನ್ನು ನೆನಪಿನಲ್ಲಿಡಬೇಕು. ನೀವು ಇದನ್ನೆಲ್ಲಾ ಅನುಸರಿಸದೇ ಇದ್ದರೆ ಅನಾರೋಗ್ಯ ಕಾಡುವುದಕ್ಕೆ ಶುರುವಾಗಬಹುದು. ನಕಾರಾತ್ಮಕ ಶಕ್ತಿಗಳು ನಿಮ್ಮ ಮೇಲೆ ಪ್ರಭಾವ ಬೀರಬಹುದು. ಯಾವುದೇ ವ್ಯಕ್ತಿ ಮಲಗವ ಸಮಯದಲ್ಲಿ ಪಾದಗಳನ್ನು ತೊಳೆಯದೆ ಮುಖ ತೊಳೆಯದೆ ಮಲಗಬಾರದು ಅಂತ ಹೇಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.