Home Useful Information ಹಾಸಿಗೆಯನ್ನು ಹೊಸದರಂತೆ ಮಾಡ್ಬೇಕಾ.! ಹಾಸಿಗೆಯನ್ನು ಕ್ಲೀನ್ ಮಾಡುವ ಸೂಪರ್ ಟಿಪ್ಸ್ .!

ಹಾಸಿಗೆಯನ್ನು ಹೊಸದರಂತೆ ಮಾಡ್ಬೇಕಾ.! ಹಾಸಿಗೆಯನ್ನು ಕ್ಲೀನ್ ಮಾಡುವ ಸೂಪರ್ ಟಿಪ್ಸ್ .!

0
ಹಾಸಿಗೆಯನ್ನು ಹೊಸದರಂತೆ ಮಾಡ್ಬೇಕಾ.! ಹಾಸಿಗೆಯನ್ನು ಕ್ಲೀನ್ ಮಾಡುವ ಸೂಪರ್ ಟಿಪ್ಸ್ .!

 

ಮನೆ ಎಂದ ಮೇಲೆ ಅಲ್ಲಿ ನಾವು ಪ್ರತಿಯೊಂದು ಕೆಲಸವನ್ನು ಕೂಡ ಸಮಯಕ್ಕೆ ಸರಿಯಾಗಿ ಸ್ವಚ್ಛ ಮಾಡಿಕೊಳ್ಳುವುದು ಉತ್ತಮ ಇಲ್ಲವಾದರೆ ಆ ಕೆಲಸವನ್ನು ನಾವು ಆ ಸಮಯದಲ್ಲಿ ಮಾಡದೆ ಇದ್ದರೆ ಮುಂದಿನ ದಿನದಲ್ಲಿ ಆ ಕೆಲಸ ಮತ್ತಷ್ಟು ಕಷ್ಟವಾಗಿರುತ್ತದೆ ಹಾಗೂ ನಾವು ಆ ಕೆಲಸವನ್ನು ಮಾಡದೆ ಇದ್ದರೆ ಮನೆ ಸ್ವಚ್ಛತೆಯಿಂದ ಇರುವುದಿಲ್ಲ.

ಅದೇ ರೀತಿಯಾಗಿ ನಾವು ಮಲಗುವಂತಹ ಸ್ಥಳ ನಾವು ಅಡುಗೆ ಮಾಡುವ ಸ್ಥಳ ಹೀಗೆ ಪ್ರತಿಯೊಂದು ಸ್ಥಳವು ಕೂಡ ಬಹಳ ಸ್ವಚ್ಛವಾಗಿ ಇರುವುದು ಬಹಳ ಮುಖ್ಯವಾಗಿರುತ್ತದೆ. ನಮ್ಮ ಆರೋಗ್ಯದ ದೃಷ್ಟಿಯಿಂದ ನಮ್ಮ ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ವಾಷಿಂಗ್ ಮೆಷಿನ್ ಗೆ ಬಟ್ಟೆ ಹಾಕುವಾಗ ಈ ತಪ್ಪುಗಳನ್ನು ಮಾಡಬೇಡಿ.!

ಅದೇ ರೀತಿಯಾಗಿ ನಾವು ಮಲಗುವಂತಹ ಹಾಸಿಗೆ ಕೂಡ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಂದರೆ ನಾವು ಮಲಗುವಂತಹ ಹಾಸಿಗೆಯನ್ನು ಕೂಡ ನಾವು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ನಾವು ಹೆಚ್ಚು ದಿನಗಳವರೆಗೆ ಹಾಸಿಗೆಯನ್ನು ಸ್ವಚ್ಛ ಮಾಡದೇ ಹಾಗೆ ಬಿಟ್ಟರೆ ಅದರಲ್ಲಿ ವಾಸನೆ ಬರುವುದು.

ಅದರಲ್ಲಿ ಧೂಳು ಕೂರುವುದು ಹಾಗೂ ಕೆಲವೊಮ್ಮೆ ವಾಸನೆ ಬಂದಂತಹ ಸಂದರ್ಭದಲ್ಲಿ ಜಿರಳೆ, ತಿಗಣೆ ಇಂತಹ ಕ್ರಿಮಿಕೀಟಗಳು ಕೂಡ ಸೇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ನಾವು ವಾರಕ್ಕೆ ಒಮ್ಮೆಯಾದರೂ ಹಾಸಿಗೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಮೇಲೆ ಹೇಳಿದಂತೆ ಇರುವೆಗಳು ಜಿರಳೆ ತಿಗಣೆ ಇವುಗಳು ನಮಗೆ ಕಚ್ಚುವ ಸಾಧ್ಯತೆ ಇರುತ್ತದೆ.

ಈ ಸುದ್ದಿ ಓದಿ:- ವಿಪರೀತ ಸಾಲ ಆಗಿದೆಯಾ.? ಚಿಂತೆ ಬಿಡಿ ಕೇವಲ 3 ರೂಪಾಯಿ ಇಲ್ಲಿ ಬಚ್ಚಿಡಿ ಸಾಕು 21 ದಿನದಲ್ಲೇ ಸಾಲ ತೀರುತ್ತೆ.!

ಹಾಗಾದರೆ ಈ ದಿನ ನಾವು ಮಲಗುವಂತಹ ಹಾಸಿಗೆಯನ್ನು ಯಾವ ರೀತಿಯಾಗಿ ಸ್ವಚ್ಛ ಮಾಡಬೇಕು ಯಾವ ಕೆಲವು ಪದಾರ್ಥವನ್ನು ಉಪಯೋಗಿಸಿ ಯಾವ ಒಂದು ಟ್ರಿಕ್ಸ್ ಅನುಸರಿಸಿ ಹಾಸಿಗೆಯನ್ನು ಸುಲಭವಾಗಿ ಕಡಿಮೆ ಸಮಯದಲ್ಲಿ ಹೆಚ್ಚು ಶ್ರಮಪಡದೆ ಸ್ವಚ್ಛ ಮಾಡಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

* ನಾವು ಹಾಸಿಗೆಯನ್ನು ಸ್ವಚ್ಛ ಮಾಡುವಂತಹ ಸಂದರ್ಭದಲ್ಲಿ ನಮಗೆ ಬಹಳ ಮುಖ್ಯವಾಗಿ ಬೇಕಾಗಿರುವಂತಹ ಪದಾರ್ಥ ಅಡುಗೆ ಸೋಡಾ ಅಡುಗೆ ಸೋಡವನ್ನು ನಾವು ಹಾಸಿಗೆಯ ಮೇಲೆ ಎಲ್ಲಾ ಕಡೆ ಹರಡಬೇಕು. ಅಡುಗೆ ಸೋಡಾ ನಮ್ಮ ಹಾಸಿಗೆಯಲ್ಲಿ ಇರುವಂತಹ ಎಲ್ಲಾ ಕ್ರಿಮಿಕೀಟಗಳನ್ನು ಸಹ ನಾಶ ಮಾಡುವಂತಹ ಗುಣವನ್ನು ಹೊಂದಿದೆ ಆದ್ದರಿಂದ ಇದು ಹಾಸಿಗೆಯನ್ನು ಸ್ವಚ್ಛ ಮಾಡುವುದಕ್ಕೆ ಬಹಳ ಮುಖ್ಯವಾಗಿ ಬೇಕಾಗಿರುವಂತಹ ಒಂದು ಪದಾರ್ಥ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ಸುದ್ದಿ ಓದಿ:- ಸ್ತ್ರೀಯರಿಗಾಗಿ ವಿಶೇಷ ಜೂನ್ 2024 ಕರ್ಕಾಟಕ ರಾಶಿ ಮಾಸ ಭವಿಷ್ಯ.!

* ಈ ರೀತಿ ಅಡುಗೆ ಸೋಡವನ್ನು ಹಾಕಿ ಎರಡರಿಂದ ಮೂರು ಗಂಟೆಗಳ ತನಕ ಹಾಗೆ ಬಿಡಬೇಕು. ಆನಂತರ ಒಂದು ಬಟ್ಟೆಯ ಸಹಾಯದಿಂದ ಅದನ್ನು ಆಚೆ ತೆಗೆಯಬೇಕು ಆನಂತರ ಒಂದು ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿ ಅದಕ್ಕೆ ಒಂದು ಚಮಚ ಸೋಪ್ ಪೌಡರ್ ಅನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.

ಆನಂತರ ಒಂದು ಕಾಟನ್ ಬಟ್ಟೆಯನ್ನು ತೆಗೆದು ಕೊಂಡು ಅದರಲ್ಲಿ ಅದನ್ನು ಅದ್ದಿ ಒಂದು ಕಡೆಯಿಂದ ಹಾಸಿಗೆಯ ಮೇಲೆ ಸ್ವಚ್ಛ ಮಾಡುತ್ತಾ ಬರಬೇಕು. ಈ ರೀತಿ ಮಾಡುವುದರಿಂದ ಹಾಸಿಗೆಯ ಮೇಲೆ ಇರುವಂತಹ ಎಲ್ಲಾ ಕೊಳೆಯೂ ಕೂಡ ಸುಲಭವಾಗಿ ಬರುತ್ತದೆ. ಆನಂತರ ಮತ್ತೊಮ್ಮೆ ಸ್ವಚ್ಛವಾದಂತಹ ನೀರಿನಲ್ಲಿ ಹಾಸಿಗೆಯನ್ನು ಒರೆಸುವುದರಿಂದ.

ಹಾಸಿಗೆಯ ಮೇಲೆ ವಾಸನೆ ಬರುತ್ತಿದ್ದರೆ ಇಂತಹ ಸಮಸ್ಯೆಗಳಿಂದ ನಾವು ಮುಕ್ತಿಯನ್ನು ಪಡೆಯಬಹುದು. ಈ ಒಂದು ವಿಧಾನ ಬಹಳ ಸುಲಭವಾಗಿದ್ದು ಈ ವಿಧಾನವನ್ನು ಅನುಸರಿಸುವುದರ ಮೂಲಕ ನೀವು ನಿಮ್ಮ ಹಾಸಿಗೆಯನ್ನು ಸುಲಭವಾಗಿ ಸ್ವಚ್ಛ ಮಾಡಬಹುದು.

LEAVE A REPLY

Please enter your comment!
Please enter your name here