Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಣ್ಣಾವ್ರು ಅಂಬಿಗೆ ಸಿಕ್ಕ ಸ್ಮಾರಕವು ಇಲ್ಲ, ಅಪ್ಪುಗೆ ಕೊಟ್ಟ ಪ್ರಶಸ್ತಿಯೂ ಇಲ್ಲ ವಿಷ್ಣು ದಾದಾನಿಗೆ ಕರುನಾಡಲ್ಲಿ ಇದೆಂತಾ ಅನ್ಯಾಯ.? ದಾದ ಪರವಾಗಿ ನಿಂತು ಮಾತನಾಡುವ ವ್ಯಕ್ತಿ ಯಾರಿಲ್ಲವೇ.!

Posted on November 3, 2022November 3, 2022 By Kannada Trend News No Comments on ಅಣ್ಣಾವ್ರು ಅಂಬಿಗೆ ಸಿಕ್ಕ ಸ್ಮಾರಕವು ಇಲ್ಲ, ಅಪ್ಪುಗೆ ಕೊಟ್ಟ ಪ್ರಶಸ್ತಿಯೂ ಇಲ್ಲ ವಿಷ್ಣು ದಾದಾನಿಗೆ ಕರುನಾಡಲ್ಲಿ ಇದೆಂತಾ ಅನ್ಯಾಯ.? ದಾದ ಪರವಾಗಿ ನಿಂತು ಮಾತನಾಡುವ ವ್ಯಕ್ತಿ ಯಾರಿಲ್ಲವೇ.!

ಕರ್ನಾಟಕದ ಮೇರು ನಟ ಸಾಹಸಸಿಂಹ ಕರುನಾಡ ಕಣ್ಮಣಿ ನಮ್ಮೆಲ್ಲರ ಪ್ರೀತಿಯ ವಿಷ್ಣು ದಾದಾ ನಮ್ಮನ್ನು ಅ.ಗ.ಲಿ 12 ವರ್ಷಗಳಾಗುತ್ತಿವೆ. ವಂಶವೃಕ್ಷ ಎನ್ನುವ ಸಿನಿಮಾದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಇರುವವರು ನಾಗರಹಾವು ಸಿನಿಮಾದಿಂದ ಕನ್ನಡಕ್ಕೆ ಒಬ್ಬ ಭರವಸೆಯ ನಾಯಕರಾದರು, ಸಂಪತ್ ಕುಮಾರ್ ಆಗಿದ್ದ ಇವರು ವಿಷ್ಣುವರ್ಧನ್ ಆಗಿ ಬದಲಾದರು ಅಂದಿನಿಂದ ಇವರು ಮುಟ್ಟಿದ್ದೆಲ್ಲ ಚಿನ್ನ ಆಯ್ತು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಸುಮಾರು 32 ವರ್ಷಗಳಿಗಿಂತಲೂ ಹೆಚ್ಚಿನ ಕಾಲ ಕನ್ನಡ ಕಲಾ ದೇವಿಯ ಸೇವೆ ಮಾಡಿರುವ ಇವರು ಮಾಡಿರುವ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳೇ. ನಾಗರಹಾವು, ನೀ ಬರೆದ ಕಾದಂಬರಿ, ಹೃದಯಗೀತೆ, ಬಂಧನ, ಮುತ್ತಿನ ಹಾರ ಆ ದಿನಗಳಿಂದ ಹಿಡಿದು ಯಜಮಾನ, ಕೋಟಿಗೊಬ್ಬ, ಜಮೀನ್ದಾರ, ಸಿಂಹಾದ್ರಿಯ ಸಿಂಹ, ಆಪ್ತಮಿತ್ರ ಹೀಗೆ ಕೊನೆಯ ದಿನಗಳಿಗೂ ಕೂಡ ವಿಷ್ಣು ಸಿನಿಮಾಗಳನ್ನು ನೋಡಲು ಜನ ಮುಗಿ ಬೀಳುತ್ತಿದ್ದರು.

ಕನ್ನಡದಲ್ಲಿ ಇದುವರೆಗೆ ಅತಿ ಹೆಚ್ಚು ಸಿನಿಮಾಗಳಲ್ಲಿ ದ್ವಿಪಾತ್ರ ಮಾಡಿದ ಕಲಾವಿದ ಎಂದು ಖ್ಯಾತಿಗೆ ಒಳಗಾಗಿರುವ ಇವರು ತ್ರಿಪಾತದಲ್ಲೂ ಕೂಡ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆ ಮಹಿಳಾ ಅಭಿಮಾನಿಗಳನ್ನು ಹೊಂದಿದ್ದ ನಟ ಎನ್ನುವ ಖ್ಯಾತಿಗೂ ಕೂಡ ಒಳಗಾಗಿರುವ ಇವರ ವ್ಯಕ್ತಿತ್ವ ಕೂಡ ಅದೇ ರೀತಿ ಇತ್ತು. ಅಭಿನಯದಲ್ಲಿ ತೆರೆ ಮೇಲೆ ಸಿಂಹದಂತೆ ಘರ್ಜಿಸುತ್ತಿದ್ದ ನಮ್ಮ ದಾದಾ ನಿಜ ಜೀವನದಲ್ಲಿ ಸಂತನಂತೆ ಬದುಕಿದವರು.

ವೈಯಕ್ತಿಕವಾಗಿ ಬಹಳ ಶುದ್ಧ ಹೃದಯ ಹೊಂದಿದ್ದ ಇವರು ಸಾಯಿಬಾಬನ ಭಕ್ತನಾಗಿ ಸಹನೆ ಕರುಣೆ ಸಹಾನುಭೂತಿಯಿಂದ ಬದುಕಿದವರು. ಇವರ ಹೆಸರು ಸಿನಿಮಾದಲ್ಲಿದ್ದರೆ ನಿರ್ಮಾಪಕರ ಜೇಬು ತುಂಬುತ್ತಿದ್ದು, ಆದರೆ ವಿಷ್ಣುವರ್ಧನ್ ಮಾತ್ರ ತಾವು ಗಳಿಸಿದ್ದಲ್ಲಿ ಹೆಚ್ಚಿನ ಪ್ರಮಾಣವನ್ನು ಸಮಾಜ ಸೇವೆಗಾಗಿಯೇ ಖರ್ಚು ಮಾಡಿ ಕೊನೆಗಾಲದಲ್ಲಿ ಖಾಲಿ ಕೈ ಆದವರು. ಆದರೆ ಇಂದಿಗೂ ಕೂಡ ಎಲ್ಲಿಗೂ ಕೂಡ ತಾವು ಮಾಡಿದ ಸೇವೆಗಳ ಬಗ್ಗೆ ಪ್ರಚಾರ ಪಡೆದವರಲ್ಲ.

ಜನ ಸೇವೆಯ ವಿಚಾರದಲ್ಲೂ ಹಾಗೂ ಸಾಧನೆಯ ವಿಚಾರದಲ್ಲೂ ಕೂಡ ವಿಷ್ಣುವರ್ಧನ್ ಅವರದ್ದು ಮೇಲುಗೈ. ಆದರೆ ಕರ್ನಾಟಕ ಸರ್ಕಾರ ಮಾತ್ರ ಅವರನ್ನು ಗುರುತಿಸುವಲ್ಲಿ ವಿಫಲವಾಗಿದೆ ಇದೇ ವಿಚಾರ ವಿಷ್ಣುವರ್ಧನ್ ಅವರ ಅಭಿಮಾನಿಗಳ ಮನಕೆರಳಿಸಿದೆ. ಈಗಾಗಲೇ ವಿಷ್ಣುವರ್ಧನ್ ಅವರ ಸ್ಮಾರಕವನ್ನು ನಿರ್ಮಿಸುವ ವಿಚಾರದಲ್ಲಿ ಸರ್ಕಾರ ಬಹಳಷ್ಟು ಅನ್ಯಾಯ ಮಾಡಿದೆ. 2010 ನೇ ಇಸವಿಯಿಂದಲೂ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಸರ್ಕಾರ ಪುಣ್ಯಭೂಮಿ ವಿಚಾರದಲ್ಲಿ ಅನ್ಯಾಯ ಎಸಗಿದೆ.

ಆಗಾಗ ಸ್ಥಳ ಬದಲಾವಣೆ ವಿಷಯ ಹೇಳಿ ದಾರಿ ತಪ್ಪಿಸುತ್ತಿರುವ ಸರ್ಕಾರದಲ್ಲಿ ಐದಾರು ಮಂತ್ರಿ ಮುಖ್ಯಮಂತ್ರಿಗಳ ಬದಲಾದರೂ ಕೂಡ ಕರ್ನಾಟಕದ ಶ್ರೇಷ್ಠ ನಟನೊಬ್ಬನಿಗೆ ಸಮಾಧಿ ನಿರ್ಮಾಣಕ್ಕೆ ಸ್ಥಳ ಮಾಡಿಕೊಡಲು ಆಗುತ್ತಿಲ್ಲ ಎನ್ನುವುದು ಸರ್ಕಾರಕ್ಕೆ ನಾಚಿಕೆಗೇಡಿನ ವಿಷಯ. ಕುಟುಂಬಸ್ಥರು ಮತ್ತು ಅಭಿಮಾನಿಗಳು ಹಾಗೂ ಚಿತ್ರರಂಗದವರು ಈಗಾಗಲೇ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಿ ಸೋತು ಹೋಗಿದ್ದಾರೆ.

ಇನ್ನೂ ಕೂಡ ಜಗ್ಗದ ಸರ್ಕಾರ ವಿಷ್ಣು ಅವರ ಪುಣ್ಯ ಸ್ಮರಣ ದಿನ ಮಾತ್ರ ಆ ವಿಷಯ ಮಾತನಾಡುತ್ತದೆ. ಇನ್ನು ಪ್ರಶಸ್ತಿ ವಿಚಾರವಾಗಿ ಹೇಳುವುದಾದರೆ 200 ಸಿನಿಮಾಗಳಲ್ಲಿ ನಟಿಸಿರುವ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಯಾಕೆ ಕೊಟ್ಟಿಲ್ಲ ಎನ್ನುವ ವಿಚಾರವೂ ಕೂಡ ಈಗ ಅಭಿಮಾನಿಗಳಿಗೆ ಬೇಸರ ತರಿಸಿದೆ. ಆದರೆ ಇತ್ತೀಚೆಗೆ ಬೇರೆ ಕಲಾವಿದರಿಗೆ ಪ್ರಶಸ್ತಿದೆ ದೊರೆತಿದೆ ಎನ್ನುವುದು ಅಭಿಮಾನಿಗಳ ಕೋಪಕ್ಕೆ ಕಾರಣವಲ್ಲ ಅವರ ಜೊತೆ ಇವರಿಗೂ ಕೊಡಬಹುದಿತ್ತಲ್ಲ ಎಂದು ನೆಚ್ಚಿನ ನಟನ ಪರವಾಗಿ ಕೇಳುತ್ತಿದ್ದಾರೆ ಅಷ್ಟೇ.

ಇನ್ನು ಮುಂದಾದರೂ ಸರ್ಕಾರ ಎಚ್ಚೆತ್ತು ಈ ದುರಂತ ನಾಯಕನಿಗೆ ನ್ಯಾಯ ದೊರಕಿಸುತ್ತದೆಯೇ ಇಲ್ಲವೋ ಎಂಬುದನ್ನು ಕಾದು ನೋಡೋಣ. ಒಂದು ರೀತಿಯಲ್ಲಿ ಇವೆಲ್ಲವನ್ನೂ ನೋಡುತ್ತಿದ್ದರೆ ವಿಷ್ಣು ದಾದಾ ಪರವಾಗಿ ಯಾವ ನಟನು ಕೂಡ ಮಾತನಾಡುತ್ತಿಲ್ಲ ಈ ಕಾರಣಕ್ಕಾಗಿ ಇವರಿಗೆ ಸಲ್ಲಬೇಕಾದ ಗೌರವ ಸಿಗುತ್ತಿಲ್ಲ ಎಂದು ಕೆಲವು ಅಭಿಮಾನಿಗಳು ತಮ್ಮ ಆ.ಕ್ರೋ.ಶ.ವ.ನ್ನು ವ್ಯಕ್ತಪಡಿಸಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

Entertainment Tags:Vishnu dada, Vishnuvardhan
WhatsApp Group Join Now
Telegram Group Join Now

Post navigation

Previous Post: ಅಪ್ಪು ಅಗಲಿದ ನಂತರ ಇದೇ ಮೊದಲ ಬಾರಿಗೆ ಮದುವೆ ಮನೆಯಲ್ಲಿ ಸಖತ್ ಗ್ಲಾಮರಸ್ಸಾಗಿ ಕಾಣಿಸಿಕೊಂಡ ಅಶ್ವಿನಿ.! ಈ ವಿಡಿಯೋ ನೋಡಿ
Next Post: ಬೀಚ್ ಮಧ್ಯೆ ನಿಂತು ಸಂಜೆಯ ತಣ್ಣನೆಯ ಗಾಳಿಯ ಜೊತೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ರಾಗಿಣಿ ಅವರ ಈ ಹಾಟ್ ಡ್ಯಾನ್ಸ್ ಒಮ್ಮೆ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore