ಕುಚ್ಚಿಕು ಗೆಳೆಯರು ಒಂದಾಗುತ್ತಿದ್ದಾರೆ
ಕಿಚ್ಚನ ಮಾತುಗಳಲ್ಲಿ ದರ್ಶನ್ ಹೆಸರು ದರ್ಶನ್ ಬಾಯಿಲ್ಲಿ ಸುದೀಪ್ ಜೊತೆ ಸಿನಿಮಾ ಬಗ್ಗೆ ಮಾತು ಮುನಿಸು ಮರೆತು ಒಂದಾಗಿದ್ದಾರಾ ದೋಸ್ತಿಗಳು.
ಚಂದನವನದ ಸ್ನೇಹಿತರ ಬಗ್ಗೆ ಉದಾಹರಣೆ ಕೊಡುವುದಾದರೆ ಅಂಬರೀಶ್ ಹಾಗೂ ವಿಷ್ಣುವರ್ಧನ್ ಸ್ನೇಹವನ್ನು ಎಲ್ಲರೂ ಮೊದಲಿಗೆ ಹೇಳುತ್ತಾರೆ. ವಿಷ್ಣುವರ್ಧನ್ ಅವರು ಶಾಂತ ಸ್ವಭಾವದ ನಾಚಿಕೆ ವ್ಯಕ್ತಿತ್ವದ ಸಂತನ ರೀತಿಯ ಬದುಕು ಬದುಕಿದವರು. ಇತ್ತ ರೆಬಲ್ ಸ್ಟಾರ್ ಮಾತಿನಲ್ಲಿ ರಫ್ ಮತ್ತು ಮುಖ ಮೂತಿ ನೋಡದೆ ಯಾರಿಗೆ ಆದರೂ ಅವರ ಎದುರಿಗೆ ಇದನ್ನು ಹೇಳಿಬಿಡುವ ವ್ಯಕ್ತಿತ್ವ ಇಬ್ಬರ ಟೇಸ್ಟ್ಗಳು ಕೂಡ ಬೇರೆ, ಇಬ್ಬರು ಬೆಳೆದು ಬಂದ ರೀತಿ ಹಾಗೂ ಬದುಕುತ್ತಿದ್ದ ರೀತಿ ಕೂಡ ಬೇರೆ ಬೇರೆ.
ಆದರೆ ಇವರಿಬ್ಬರ ನಡುವೆ ಇದ್ದ ಗಾಢವಾದ ಸ್ನೇಹ ಎಂತದ್ದು ಎಂದು ಈಗಾಗಲೇ ಕನ್ನಡಿಗರು ಕಂಡಿದ್ದಾರೆ. ಆ ಸ್ನೇಹವನ್ನು ಮತ್ತೆ ನೆನಪಿಸುವಂತಹ ಮತ್ತೊಂದು ಸ್ಟಾರ್ ಜೋಡಿಗಳು ಇಂಡಸ್ಟ್ರಿಯಲ್ಲಿ ಇದ್ದರು. ಜೂನಿಯರ್ ವಿಷ್ಣುವರ್ಧನ್ ಮತ್ತು ಅಂಬರೀಶ್ ಎಂದೇ ಅವರು ಕರೆಸಿಕೊಳ್ಳುತ್ತಿದ್ದರು.
ಇದು ಬೇರೆ ಯಾರು ಅಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು. ಇವರಿಬ್ಬರು ಒಂದೇ ಸಮಯದಲ್ಲಿ ಚಿತ್ರರಂಗ ಪ್ರವೇಶ ಮಾಡಿ ಒಂದೇ ಸಮಯದಲ್ಲಿ ಸ್ಟಾರ್ ಹೀರೋ ಆಗಿ ಬೆಳೆದವರು. ಎಷ್ಟೇ ಬಾರಿ ಇಬ್ಬರ ಚಿತ್ರಗಳು ಕೂಡ ಒಂದೇ ದಿನ ರಿಲೀಸ್ ಆಗಿವೆ. ಆದರೆ ಮೊದಲಿನಿಂದಲೂ ಇವರಿಬ್ಬರ ನಡುವೆ ಒಂದು ಅಂತರ ಕಾಡುತ್ತಿತ್ತು.
ಉಳಿದ ಎಲ್ಲಾ ಸ್ಟಾರ್ಟಗಳ ಜೊತೆ ಬೆರೆಯುತ್ತಿದ್ದರೂ ಕೂಡ ಇವರಿಬ್ಬರು ಮಾತ್ರ ಎಂದೂ ಒಟ್ಟಿಗೆ ಕಾಣಿಸಿಕೊಂಡವರಲ್ಲ. ಯಾವಾಗ ದರ್ಶನ್ ಬದುಕಿನಲ್ಲಿ ಬಿರುಗಾಳಿ ಎದ್ದಿತು. ಅಂದಿನಿಂದ ದರ್ಶನ್ ಗೆ ಸುದೀಪ್ ಸಾಥ್ ಕೊಡಲು ಶುರು ಮಾಡಿದರು. ದರ್ಶನ್ ಅವರ ಅಂತಹ ಕೆಟ್ಟ ಪರಿಸ್ಥಿತಿಯಲ್ಲಿ ಅವರ ಸ್ನೇಹಕ್ಕೆ ಕೈಜೋಡಿಸಿದ ಮೊದಲ ಸ್ಟಾರ್ ಸುದೀಪ್.
ಆನಂತರ ಇವರಿಬ್ಬರೂ ಕಾಣಿಸಿಕೊಳ್ಳುತ್ತಿದ್ದ ಬಗೆ ನೋಡಿ ಚಡ್ಡಿ ದೋಸ್ತ್ಗಳಿರಬೇಕು ಎಂದು ಎಲ್ಲರೂ ಮಾತನಾಡುವಂತಿತ್ತು. ಸುದೀಪ್ ಅವರಿಗಾಗಿ ಸಿಸಿಎಲ್ಅಲ್ಲಿ ದರ್ಶನ್ ಅವರು ಆಟ ಆಡಿದ್ದರು, ದರ್ಶನ್ ಅವರ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಕಥೆ ಹೈಲೈಟ್ಸ್ ಹೇಳಲು ಸುದೀಪ್ ಅವರು ಧ್ವನಿಕೊಟ್ಟು ಚಿತ್ರದ ಮೆರಗನ್ನು ಹೆಚ್ಚಿಸಿದ್ದರು. ಇಬ್ಬರು ಒಟ್ಟಿಗೆ ಅಕ್ಕ ಪಕ್ಕ ಕೂತು ಊಟ ಮಾಡುತ್ತಿದ್ದರು ಒಂದೇ ಕಾರಿನಲ್ಲಿ ತೆರಳುತ್ತಿದ್ದರು.
ಹೀಗೆ ಒಬ್ಬರನ್ನು ಒಬ್ಬರು ಬಿಟ್ಟಿರಲಾಗದಷ್ಟು ಹೆಗಲ ಮೇಲೆ ಕೈ ಹಾಕಿ ಕೊಂಡು ಓಡಾಡುತ್ತಿದ್ದರು. ಆದರೆ ಅದು ಯಾವ ಕೆಟ್ಟ ದೃಷ್ಟಿ ಈ ಸ್ನೇಹದ ಮೇಲೆ ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ. ಮಧ್ಯದವರ ಹುಳಿ ಹಿಂಡುವಿಕೆಯಿಂದ ಇಬ್ಬರ ನಡುವೆ ಈಗ ಕೋಲ್ಡ್ ವಾರ್ ನಡೆಯುತ್ತಿದೆ. ದರ್ಶನ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ಸುದೀಪ್ ನನ್ನ ಸ್ನೇಹಿತ ಅಲ್ಲ ಇಬ್ಬರು ಒಂದೇ ಇಂಡಸ್ಟ್ರಿಯ ನಾಯಕರು ಅಷ್ಟೇ ಎಂದು ಟ್ವೀಟ್ ಮಾಡುವಷ್ಟು ಇಬ್ಬರ ನಡುವೆ ತಂದಿಟ್ಟು ತಮಾಷೆ ನೋಡಿದ್ದಾರೆ.
ಇದೆಲ್ಲಾ ಆಗಿ ಹಲವು ಸಮಯ ಕಳೆದಿದ್ದರೂ ಕೂಡ ಸುದೀಪ್ ಎಂದು ದರ್ಶನ್ ಬಗ್ಗೆ ಹಗುರವಾಗಿ ಮಾತನಾಡಿದವರಲ್ಲ. ಬದಲಾಗಿ ಮೀಡಿಯಾದವರು ಬೇಕೆಂದಲೇ ಕಾಂಟ್ರವರ್ಸಿ ಮಾಡಿ ಪ್ರಶ್ನೆ ಕೇಳಿದಾಗಲೂ ದರ್ಶನ್ ನನ್ನ ಸ್ನೇಹಿತ ಎಂದೇ ಉತ್ತರ ಕೊಟ್ಟಿದ್ದಾರೆ. ಇತ್ತ ಕ್ರಾಂತಿ ಸಿನಿಮಾದ ಪ್ರಚಾರ ವೇಳೆ ಕೂಡ ಮಲ್ಟಿಸ್ಟಾರ್ ಸಿನಿಮಾ ಮಾಡುವ ಬಗ್ಗೆ ದರ್ಶನ್ ಅವರನ್ನು ಪ್ರಶ್ನಿಸಿದಾಗ.
ದರ್ಶನ್ ಅವರು ಸಹ ಸುದೀಪ್ ಅವರೊಂದಿಗೆ ಯಶ್ ಅವರೊಂದಿಗೆ ಶಿವಣ್ಣ ಅವರೊಂದಿಗೆ ಸಿನಿಮಾ ಮಾಡುವ ಇಚ್ಛೆ ಇದೆ ಎಂದು ಓಪನ್ ಆಗಿ ಹೇಳಿಕೊಂಡಿದ್ದಾರೆ. ಇವರಿಬ್ಬರ ನಿಜ ಅಭಿಮಾನಿಗಳು ಈಗಾಗಲೇ ಸಾಕಷ್ಟು ಬಾರಿ ಇಬ್ಬರು ಒಟ್ಟಿಗೆ ಸಿನಿಮಾ ಮಾಡಿ ಎಂದು ರಿಕ್ವೆಸ್ಟ್ ಕೂಡ ಮಾಡಿದ್ದಾರೆ. ಕನ್ನಡಿಗರ ಅಭಿಲಾಷೆಗೋಸ್ಕರ ಆದರು ದಚ್ಚು ಹಾಗೂ ಕಿಚ್ಚ ಮುನಿಸು ಮರೆತು ಒಂದಾಗಲಿ ಎನ್ನುವುದೇ ಅಭಿಮಾನಿಗಳ ಆಶಯ.