Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಬಿಗ್ ಬಾಸ್ ಮನೆಯಿಂದ ಹೊರ ಬಂದ 3ನೇ ಸ್ಪರ್ಧಿ ದೀಪಿಕಾ ದಾಸ್, ರಾಕೇಶ್ ಅಡಿಗ ಮತ್ತು...

ಬಿಗ್ ಬಾಸ್ ಮನೆಯಿಂದ ಹೊರ ಬಂದ 3ನೇ ಸ್ಪರ್ಧಿ ದೀಪಿಕಾ ದಾಸ್, ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ನಡುವೆ ನಡೆಯುತ್ತಿದೆ ಜಟಾಪಟಿ ಯಾರಾಗಬಹುದು ಈ ಬಾರಿಯ ಸೀಸನ್ 9ರ ವಿನ್ನರ್.?

 

ಅಭಿಮಾನಿಗಳು ಕೈ ಕೊಟ್ಟರೋ ಅಥವಾ ಅದೃಷ್ಟ ಕೈ ಕೊಟ್ಟಿತೋ

ಬಿಗ್ ಬಾಸ್ ಮನೆಯಿಂದ ಹೊರಬಂದ 3ನೇ ಸ್ಪರ್ಧಿ ದೀಪಿಕಾ ದಾಸ್ ಈ ಬಾರಿಯೂ ಕೂಡ ದೀಪಿಕಾ ದಾಸ್ ಅವರ ಅದೃಷ್ಟ ಕೈ ತಪ್ಪಿದೆ ಹೌದು ಸೀಸನ್ ಏಳರಲ್ಲಿ ಸ್ಪರ್ಧಿಯಾಗಿದ್ದಂತಹ ದೀಪಿಕಾ ದಾಸ್ ಅವರು ಸೀಸನ್ 9ರಲ್ಲೂ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದವರು. ಪ್ರವೀಣರು ಎಂಬ ಪಟ್ಟಿಯಲ್ಲಿ ದೀಪಿಕಾ ದಾಸ್ ಅವರು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ತಮ್ಮದೇ ಆದಂತಹ ಛಾಪನ್ನು ತೋರಿಸಿದವರು ಅತ್ಯುತ್ತಮ ಆಟಗಾತಿ. ಟಾಸ್ಕ್ ಯಾವುದೇ ಇರಲಿ ಮುನ್ನುಗ್ಗಿ ಗೇಮ್ ಚೇಂಜ್ ಮಾಡುವಂತಹ ಚಾಣಾಕ್ಷತನವನ್ನು ಒಳಗೊಂಡಿದ್ದರು.

ಈ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ದಾಸ್ ಅವರು ತಮ್ಮದೇ ಆದಂತಹ ಟ್ರೇಡ್ ಮಾರ್ಕ್ ಅನ್ನು ಉಳಿಸಿಕೊಂಡಿದ್ದರು ಆದರೆ ಬಿಗ್ ಬಾಸ್ ಸೀಸನ್ 9ರಲ್ಲಿಯೂ ಕೂಡ ಒಂದು ಬಾರಿ ಎಲಿಮಿನೇಟ್ ಆದರೂ ಎಲಿಮಿನೇಟ್ ಆದ ಎರಡೇ ದಿನಕ್ಕೆ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟರು. ನಿಜಕ್ಕೂ ಇದು ಎಲ್ಲರನ್ನೂ ಕೂಡ ಆಶ್ಚರ್ಯ ಚಕಿತವನ್ನಾಗಿವಂತೆ ಮಾಡಿದ್ದು ಏಕೆಂದರೆ ಬಿಗ್ ಬಾಸ್ ಮನೆಗೆ ಹೋಗಬೇಕು ಎಂಬುದು ಸಾಕಷ್ಟು ಜನರ ಕನಸಾಗಿರುತ್ತದೆ. ಒಂದು ಬಾರಿ ಅವಕಾಶ ಸಿಕ್ಕೊತು ಅಂದರೆ ಸಾಕು ಅನ್ನುತ್ತಾರೆ ಆದರೆ ನಟಿ ದೀಪಿಕಾ ದಾಸ್ ಅವರಿಗೆ ಮಾತ್ರ 3 ಬಾರಿ ಅವಕಾಶ ದೊರೆತಿದೆ.

ಹೌದು ಸೀಸನ್ ಏಳರಲ್ಲಿಯೂ ಕೂಡ ಅವಕಾಶ ಗಿಟ್ಟಿಸಿಕೊಂಡರು ಇದಾದ ನಂತರ ಸೀಸನ್ 9ರಲ್ಲಿ ಅವಕಾಶ ಗಿಟ್ಟಿಸಿಕೊಂಡರು ತದನಂತರ ಎಲಿಮಿನೇಟ್ ಆಗಿ ವರ್ಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಒಟ್ಟಾರೆಯಾಗಿ ಮೂರು ಬಾರಿ ಬಿಗ್ ಬಾಸ್ ಮನೆಗೆ ಬರುವಂತಹ ಅವಕಾಶವನ್ನು ಪಡೆದುಕೊಂಡಿದ್ದರು. ಫಿನಲೇ ಅಂತಕ್ಕೂ ಕೂಡ ಸೆಲೆಕ್ಟ್ ಆಗಿದ್ದರು ಆದರೆ ಅಭಿಮಾನಿಗಳು ಕೈಹಿಡಿಯಲಿಲ್ಲವೋ ಅಥವಾ ಅದೃಷ್ಟ ಎಂಬುದು ಕೈ ಹಿಡಿಯಲಿಲ್ಲವೋ ಗೊತ್ತಿಲ್ಲ ಬಿಗ್ ಬಾಸ್ ಮನೆಯಿಂದ ಮೂರನೇ ರನ್ನರ್ ಅಪ್ ಆಗಿ ದೀಪಿಕಾ ದಾಸ್ ಅವರು ಹೊರ ಬಿದ್ದಿದ್ದಾರೆ.

 

ಸದ್ಯಕ್ಕೆ ದೀಪಿಕಾ ದಾಸ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಂತಹ ಕೆಲವೊಂದು ಫೋಟೋಸ್ಗಳು ಮತ್ತು ವಿಡಿಯೋಗಳು ವೈರಲ್ ಆಗಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ ಏಕೆಂದರೆ ಮಹಿಳಾ ಸ್ಪರ್ಧೆಗಳಲ್ಲಿ ದೀಪಿಕಾ ದಾಸ್ ಅವರು ಸಿಕ್ಕಾಪಟ್ಟೆ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದರು. ಯಾವುದೇ ಗುಂಪಿಗೆ ಸೇರ್ಪಡೆಯಾಗದೆ ಒಂಟಿಯಾಗಿ ತಮ್ಮ ಆಟವನ್ನು ಆಡುತ್ತಿದ್ದರು. ಈ ಕಾರಣಕ್ಕಾಗಿಯೇ ದೀಪಿಕಾ ದಾಸ್ ಅವರನ್ನು ಎಲ್ಲರೂ ಇಷ್ಟ ಪಡುತ್ತಿದ್ದರು ಆದರೆ ಇವರ ಆಟಕ್ಕೆ ತಕ್ಕ ಪರಿಶ್ರಮ ಸಿಕ್ಕಿಲ್ಲ ಎಂಬುದು ಕೆಲವು ಅಭಿಮಾನಿಗಳ ವಾದವಾಗಿದೆ.

ಇನ್ನು ಕೆಲವರ ಪ್ರಕಾರ ಪ್ರತಿಬಾರಿಯೂ ಕೂಡ ಪುರುಷರೇ ವಿನ್ನರಾಗುತ್ತಿದ್ದರೆ ಈ ಬಾರಿ ದೀಪಿಕಾ ದಾಸ್ ಅವರು ವಿನ್ ಆಗಬೇಕು ಅಂತ ಹೇಳುತ್ತಿದ್ದರು. ಆದರೆ ಅವರ ಆಸೆಗೂ ಕೂಡ ಇದೀಗ ತಣ್ಣೀರು ಎರಚಿದಂತಾಗಿದೆ ದೀಪಿಕಾ ದಾಸ್ ಅವರು ಹೊರಬಂದ ನಂತರ ಇದೀಗ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಅವರ ನಡುವೆ ಜಟಾಪಟಿ ನಡೆಯುತ್ತಿದೆ. ಹೌದು ಈ ಇಬ್ಬರು ಕಂಟೆಸ್ಟೆಂಟ್ಗಳಲ್ಲಿ ಒಬ್ಬರು ಈ ಬಾರಿಯ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಅಗಲಿದ್ದಾರೆ, ವಿಶೇಷ ಏನೆಂದರೆ ಈ ಇಬ್ಬರು ಸ್ಪರ್ದಿಗಳು ಕೂಡ ಮಿನಿ ಬಿಗ್ ಬಾಸ್ ಓಟಿಟಿಯಿಂದ ಬಂದವರು. ಅಂದರೆ ಇಲ್ಲಿಯವರೆಗೂ ಸುಮಾರು 150 ದಿನಗಳ ಕಾಲ ಬಿಗ್ ಬಾಸ್ ನಲ್ಲಿ ಕಾಲ ಕಳೆದಿದ್ದಾರೆ ಇವರಿಬ್ಬರಲ್ಲಿ ವಿನ್ನರ್ ಯಾರಾಗಬಹುದು ಎಂಬುವುದೇ ಇದೀಗ ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗಬೇಕು.