Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದರ್ಶನ್ ಸುದೀಪ್ ಇಬ್ಬರು ಮೊದಲಿನ ರೀತಿ ಒಂದಾಗ್ತಾರ ಅಂತ ಕೇಳಿದಕ್ಕೆ ರವಿಶಂಕರ್ ಹೇಳಿದ್ದೇನು ಗೊತ್ತ.? ಒಂದು ಕ್ಷಣ ಎಲ್ಲರೂ ಮೂಖ ವಿಸ್ಮಿತ

Posted on January 17, 2023 By Kannada Trend News No Comments on ದರ್ಶನ್ ಸುದೀಪ್ ಇಬ್ಬರು ಮೊದಲಿನ ರೀತಿ ಒಂದಾಗ್ತಾರ ಅಂತ ಕೇಳಿದಕ್ಕೆ ರವಿಶಂಕರ್ ಹೇಳಿದ್ದೇನು ಗೊತ್ತ.? ಒಂದು ಕ್ಷಣ ಎಲ್ಲರೂ ಮೂಖ ವಿಸ್ಮಿತ

 

ರವಿಶಂಕರ್ ಅವರು ಕನ್ನಡದ ಸಿನಿಮಾಗಳಲ್ಲಿ ಖಳನಾಯಕನಾಗಿ ನಾಯಕ ನಟನಾಗಿ ಪೋಷಕ ಪಾತ್ರದಾರಿಯಾಗಿ ಕಾಮಿಡಿ ಆಕ್ಟರ್ ಆಗಿ ಕಳೆದ ಒಂದು ದಶಕದಲ್ಲಿ ನಾನಾ ರೀತಿ ನಮ್ಮನ್ನು ಮನೋರಂಜಸಿದ್ದಾರೆ. ಇವರನ್ನು ನಮ್ಮ ಇಂಡಸ್ಟ್ರಿಗೆ ಕರೆ ತಂದಿದ್ದೇ ಕಿಚ್ಚ ಸುದೀಪ್ ಅವರು. ಇದನ್ನು ಅವರೇ ಎಷ್ಟೋ ಬಾರಿ ಹಲವು ವೇದಿಕೆಗಳಲ್ಲಿ ಹೇಳಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕೆಂಪೇಗೌಡ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ರವಿಶಂಕರ್ ಅವರು ಸುದೀಪ್ ಅವರ ಆತ್ಮೀಯರು. ಈಗ ದರ್ಶನ್ ರ ಕ್ರಾಂತಿ ಸಿನಿಮಾದಲ್ಲೂ ಕೂಡ ಒಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಬಗ್ಗೆ ಕ್ರಾಂತಿ ಸಿನಿಮಾದ ಪ್ರಚಾರದಲ್ಲಿ ಅವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದು ದರ್ಶನ್ ಮತ್ತು ಸುದೀಪ್ ಅವರ ಫ್ರೆಂಡ್ ಶಿಪ್ ಬಗ್ಗೆ ಕೂಡ ಮಾತನಾಡಿದ್ದಾರೆ ಮತ್ತು ಕೆಲವು ಹಳೆ ವಿಷಯಗಳ ನೆನಪು ಮಾಡಿಕೊಂಡು ಅವುಗಳ ಅನುಭವಗಳನ್ನು ಹಚ್ಚಿಕೊಂಡಿದ್ದಾರೆ.

ರವಿಶಂಕರ್ ಅವರು ಹೇಳಿದ್ದು ಈ ರೀತಿ ನಾನು ಸುದೀಪ್ ಅವರಿಂದ ಇಲ್ಲಿಗೆ ಬಂದದ್ದಾದರೂ ಇಂದು ದರ್ಶನ್ ಜೊತೆ ಪುನೀತ್ ಜೊತೆ ಶಿವಣ್ಣ ಯಶ್ ಹೀಗೆ ಬಹುತೇಕ ಎಲ್ಲರ ಜೊತೆಗೆ ಸಿನಿಮಾ ಮಾಡಿದ್ದೇನೆ. ಇದು ನನ್ನ ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ. ಒಬ್ಬೊಬ್ಬ ಸ್ಟಾರ್ ಗೂ ಕೂಡ ಅವರದ್ದೇ ರೀತಿಯ ಒಂದೊಂದು ಸ್ಟೈಲ್ ಇರುತ್ತದೆ. ಹಾಗೆ ದರ್ಶನ್ ಅವರದು ಒಂದು ರೀತಿ ಸುದೀಪ್ ಅವರದೇ ಒಂದು ರೀತಿ‌.

ಒಟ್ಟಿನಲ್ಲಿ ನೋಡುಗರನ್ನು ಮೆಚ್ಚಿಸಬೇಕು ಅಷ್ಟೇ ಎಂದ ಅವರು ಕ್ರಾಂತಿ ಸಿನಿಮಾದ ಪ್ರಚಾರದ ವೇಳೆ ದರ್ಶನ್ ಅವರಿಗಾದ ಅವಮಾನದ ಘಟನೆ ಬಗ್ಗೆ ಕೂಡ ಮಾತನಾಡಿದ್ದಾರೆ. ದರ್ಶನ್ ಅವರಂತಹ ಮೇರುನಟ ಈ ಒಂದು ಘಟನೆಗೆ ರಿಯಾಕ್ಟ್ ಮಾಡಿರುವ ರೀತಿಗೆ ಕೈ ಮುಗಿಯಬೇಕು. ಯಾಕೆಂದರೆ ದರ್ಶನ್ ಅವರೇ ಹೇಳಿದ್ದಾರೆ. ಹಾರ ಹಾಕುವ ಕೈಗಳು ಈ ರೀತಿ ಮಾಡಿದ್ದಾವೆ ಎಂದರೆ ಅದನ್ನು ಕೂಡ ಅದೇ ಪ್ರೈಡ್ ಅಲ್ಲಿ ತೆಗೆದುಕೊಳ್ಳುತ್ತೇನೆ ಎಂದು ಅದು ಎಲ್ಲರಿಗೂ ಬರುವುದಿಲ್ಲ ಈ ವಿಷಯದಲ್ಲಿ ನಾನು ಎಂದಿಗೂ ಕೂಡ ದರ್ಶನ್ ಅವರ ಪರವಾಗಿ ಇದ್ದೇನೆ.

ನಾವೆಲ್ಲಾ ಬಣ್ಣ ಹಚ್ಚುವುದೇ ಸೆಲೆಬ್ರಿಟಿಗಳಿಗಾಗಿ ಅವರನ್ನು ಮನೋರಂಜಿಸುವ ಸಲುವಾಗಿ. ದರ್ಶನ್ ಅವರಿಗೆ ಮಾತ್ರವಲ್ಲ ಯಾರಿಗೂ ಕೂಡ ಈ ರೀತಿ ಆಗಬಾರದು ಎಂದಿದ್ದಾರೆ. ಮತ್ತು ದರ್ಶನ್ ಅವರ ಹಾಗೂ ಸುದೀಪ್ ಅವರ ಫ್ರೆಂಡ್ಶಿಪ್ ಬಗ್ಗೆ ಕೂಡ ಪ್ರಶ್ನೆ ಬಂದಾಗ ರವಿಶಂಕರ್ ಅವರು ಈ ರೀತಿ ಉತ್ತರಿಸಿದ್ದಾರೆ. ಹೇಗೆ ಸುದೀಪ್ ಅವರು ದರ್ಶನ್ ಅವರ ಪರವಾಗಿ ರಾಗಿ ನಿಂತು ಟ್ವಿಟ್ ಮಾಡಿದರು, ದರ್ಶನ್ ಅವರು ರಿಪ್ಲೈ ಮಾಡಿದಾಗ ಕರ್ನಾಟಕ ಅದನ್ನು ಹೇಗೆ ಅದನ್ನು ಸೆಲೆಬ್ರೇಟ್ ಮಾಡಿದರೂ ನಾನು ಕೂಡ ಅವರಿಬ್ಬರ ಜೊತೆಗಾರನಾಗಿ ಅಷ್ಟೇ ಖುಷಿ ಪಟ್ಟೆ.

ಅವರಿಬ್ಬರೂ ಪ್ರೊಫೆಷನಲ್ ಡೀಸೆನ್ಸಿ ಮೇಂಟೇನ್ ಮಾಡುತ್ತಿದ್ದಾರೆ. ಅವರಿಬ್ಬರ ನಡುವೆ ಇರುವ ಗಾಢಸ್ನೇಹ ಎಂತದ್ದು ಎಂದು ನಾನು ಇಬ್ಬರನ್ನು ಹತ್ತಿರದಿಂದ ಬಲ್ಲೆ. ನಾವು ಆ ದಿನಗಳಲ್ಲಿ ಒಟ್ಟಿಗೆ ಒಂದು ಬೈಕ್ ರೈಡ್ ಕೂಡ ಮಡಿಕೇರಿಗೆ ಹೋಗಿದ್ದೆವು. ಆ ಸಮಯದಲ್ಲಿ ಕಳೆದ ಒಂದೊಂದು ದಿನ ಒಂದೊಂದು ಕ್ಷಣವೂ ಕೂಡ ಕೊನೆವರೆಗೆ ನನಗೆ ನೆನಪಿನಲ್ಲಿ ಇರುತ್ತದೆ. ಮತ್ತೆ ಆ ದಿನಗಳು ಬರಲಿ ಎನ್ನುವುದೇ ಎಲ್ಲರಂತೆ ನನ್ನ ಆಸೆ ಕೂಡ. ಆದರೆ ಅದು ಅವರ ವೈಯಕ್ತಿಕ ಅದು ಅವರ ಕಡೆಯಿಂದಲೇ ಬರುವವರೆಗೆ ನಾವು ಬಲವಂತವಾಗಿ ಅದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ನಾನು ಸಹ ಆ ದಿನಗಳಿಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

Entertainment Tags:Challenging star darshan, Ravi Shankar, Sudeep
WhatsApp Group Join Now
Telegram Group Join Now

Post navigation

Previous Post: ಡಿ-ಬಾಸ್ ನಾ ನೋಡಿ ಕಲಿಬೇಕು, ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡ್ತಾರೆ, ಅವ್ರನ್ನ ಹೇಗೆ ಸೇಫ್ ಮಾಡ್ತಾರೆ ಅಂತ. ನಾನು ಅದನ್ನ ಕಣ್ಣಾರೆ ಕಂಡಿದ್ದೆನೆ ಎಂದ ನಟಿ ರಚಿತಾ ರಾಮ್.
Next Post: ಫಿಲ್ಮ್ ಚೇಂಬರ್ ನಲ್ಲಿ ವಿಷ್ಣು ಬಯೋಡೇಟಾನೇ ಇಲ್ಲ ಅದ್ಕೆ ಪದ್ಮಶ್ರೀ ಅವಾರ್ಡ್ ಗೆ ಶಿಫಾರಸ್ಸು ಮಾಡಲ್ಲ. ಶಾ-ಕಿಂಗ್ ಹೇಳಿಕೆ ನೀಡಿದ ನಟಿ ಜಯಮಾಲ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore