ಬುಲೆಟ್ ಬೈಕ್ ಅತ್ತಿ 31 ಜಿಲ್ಲೆನಾ 60 ದಿನ ತಿರುಗಿ ಕ್ರಾಂತಿ ಸಿನಿಮಾ ಪ್ರಚಾರ ಮಾಡಿದ ವ್ಯಕ್ತಿ ಇದೀಗಾ ಕೆಲಸ ಕಳೆದುಕೊಂಡಿದ್ದಾನೆ. ಲೈವ್ ನಲ್ಲಿಯೇ ಕಣ್ಣಿರಿಟ್ಟ ಡಿ ಬಾಸ್ ಅಭಿಮಾನಿ. ಈ ವರ್ಷ ಮೊದಲ ಸ್ಟಾರ್ ಸಿನಿಮಾ ಆಗಿ ಬಿಡುಗಡೆ ಆದ ಕ್ರಾಂತಿ (Kranthi) ಸಿನಿಮಾ ಕರ್ನಾಟಕದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ ಎನ್ನಬಹುದು. ಸಿನಿಮಾ ಕಲೆಕ್ಷನ್ ವಿಚಾರ ಮಾತ್ರ ಅಲ್ಲದೇ ಸಿನಿಮಾದ ಪ್ರಚಾರ ವಿಚಾರದಿಂದಲೇ ಕ್ರಾಂತಿ ಖ್ಯಾತಿ ಆಗಿದೆ.
ಮಾಧ್ಯಮಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರನ್ನು ಬ್ಯಾನ್ ಮಾಡಿದ್ದ ಕಾರಣ ಅವರಿಗೆ ಸೆಡ್ಡು ಹೊಡೆದು ನಿಂತ ದರ್ಶನ್ ಅಭಿಮಾನಿಗಳು ಇಡೀ ನಾಡಿನಾದ್ಯಂತ ವಿವಿಧ ಬಗೆಯಾಗಿ ಕ್ರಾಂತಿ ಸಿನಿಮಾವನ್ನು ತಾವೇ ಪ್ರಚಾರ ಮಾಡುವ ಜವಾಬ್ದಾರಿಯನ್ನು ಸ್ವತಃ ಅವರೇ ಹೊತ್ತುಕೊಂಡು ತಮ್ಮ ಕೈಲಿ ಮೀರಿ ಕರ್ನಾಟಕದ ಕಡೇ ಹಳ್ಳಿ ತನಕ ದರ್ಶನ್ ಕ್ರಾಂತಿ ಸಿನಿಮಾ ವಿಚಾರವನ್ನು ತಲುಪಿಸಿದ್ದಾರೆ.
ಇದೆಲ್ಲದರ ಫಲವಾಗಿ ಇಂದು ಕ್ರಾಂತಿ ಸಿನಿಮಾ ಒಳ್ಳೆ ಪ್ರದರ್ಶನ ಹಾಗೂ ಕಲೆಕ್ಷನ್ ಮಾಡುತ್ತ ಮುನ್ನುಗ್ಗುತ್ತಿದೆ. ಆದರೆ ಸಿನಿಮಾ ಪ್ರಚಾರ ಮಾಡಿದ ಅಭಿಮಾನಿಯೋರ್ವ ತೊಂದರೆಗೆ ಸಿಲುಕಿದ್ದಾನೆ. ಅವಿನಾಶ್ ನಾಗರಾಜ್ (Avinash Nagaraj) ಎನ್ನುವ ಈತ ತನ್ನದೇ ಆದ ಯುಟ್ಯೂಬ್ ಚಾನೆಲ್ (You tube) ಸಹ ಹೊಂದಿದ್ದಾನೆ. ಈ ಹಿಂದೆ ಅನೇಕ ಬಾರಿ ಕ್ರಾಂತಿ ಸಿನಿಮಾದ ಪ್ರಮೋಷನ್ ವಿಚಾರವಾಗಿ ಈತನ ವಿಡಿಯೋಗಳನ್ನು ನಾವು ನೋಡಿರುತ್ತೇವೆ.
ಕರ್ನಾಟಕದ 30 ಜಿಲ್ಲೆಗಳಿಗೂ ಹೋಗಿ ಕ್ರಾಂತಿ ಸಿನಿಮಾ ಪ್ರಚಾರ ಮಾಡಿ ಬಂದಿದ್ದ, ಜೊತೆಗೆ ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟ ಮತ್ತು ನಟಿಯರ ಮನೆಗೆ ಹೋಗಿ ದರ್ಶನ್ ಅವರ ಕ್ರಾಂತಿ ಸಿನಿಮಾಗೆ ಬೆಂಬಲ ನೀಡುವಂತೆ ಕೋರಿಕೊಂಡಿದ್ದ. ಅದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳನ್ನು ಸಹ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಳ್ಳುತ್ತಿದ್ದ.
ಈತ ಸುದೀಪ್ (Sudeep) ಅವರ ಮನೆ ಮುಂದೆ ನಿಂತು ಸುದೀಪ್ ಅವರ ಬರುವಿಕೆಗಾಗಿ ಕಾಯುತ್ತಿದ್ದ ಆ ವಿಡಿಯೋ ಕೂಡ ವೈರಲ್ ಆಗಿತ್ತು. ಇವರು ಈ ಕ್ರಾಂತಿ ಯಾತ್ರೆ ಆರಂಭಿಸುವ ಮುನ್ನ ದರ್ಶನ್ ಅವರಿಂದಲೇ ಶುರು ಮಾಡಿ ಅವರಿಂದ ಆಲ್ ದ ಬೆಸ್ಟ್ ಏಇಳಿಸಿಕೊಂಡು ಗಾಡಿ ಪೂರ್ತಿ ಕ್ರಾಂತಿ ಸಿನಿಮಾದ ಪೋಸ್ಟರ್ ಅನ್ನು ಹಾಕಿಕೊಂಡು ಬೈಕ್ ರೈಡ್ (Bike ride) ಮಾಡುತ್ತಾ ಕ್ರಾಂತಿ ಪ್ರಚಾರ ಆರಂಭಿಸಿದ್ದರು.
ಇದಕ್ಕೆ ದರ್ಶನ್ ಅವರ ಅನುಮತಿ ಕೇಳಲು ಹೋಗಿದ್ದಾಗ ದರ್ಶನ್ ಅವರು ಮೊದಲಿಗೆ ಬೇಡ ಎಂದು ಹೇಳಿದರಂತೆ, ಆದರೂ ಅಭಿಮಾನಿ ಆಗಿ ಇದು ನನ್ನ ಕರ್ತವ್ಯ ಎಂದು ಬಹಳ ಆಸೆಪಟ್ಟು ಈತನೇ ಈ ಕೆಲಸಕ್ಕೆ ಮುಂದಾಗಿದ್ದ. ಜೊತೆಗೆ ದರ್ಶನ ಅವರ ಜೊತೆ ಫೋಟೋ ತೆಗೆಸಿಕೊಂಡು ಅವರಿಂದಲೇ ಗಾಡಿ ಸ್ಟಾರ್ಟ್ ಮಾಡಿಸಿದ್ದ. ಆದರೆ ಈತ ಎಲ್ಲಾ ಜಿಲ್ಲೆಯನ್ನು ಸುತ್ತಿ ಬರುವಷ್ಟರಲ್ಲಿ ಇವನ ಬದುಕಿಗೆ ದೊಡ್ಡ ಹೊಡೆತ ಬಿದ್ದಿದೆ.
ಈತನಿಗೆ ಗೊತ್ತೇ ಆಗದಂತೆ ಇವರನ್ನು ಕಂಪನಿಯವರು ಕೆಲಸದಿಂದ ಟರ್ಮಿನೆಟ್ (terminate) ಮಾಡಿದ್ದಾರೆ. ಕ್ರಾಂತಿ ಸಿನಿಮಾದ ಪ್ರಚಾರ ಮಾಡಲು ಇಷ್ಟು ದಿನ ರಜೆ ತೆಗೆದುಕೊಂಡ ಕಾರಣ ಕಾದು ಸಾಕಾಗಿದ್ದ ಕಂಪನಿ ಈತನಿಗೆ ಇನ್ಫರ್ಮ್ ಮಾಡದೆ ಟರ್ಮಿನೆಟ್ ಮಾಡಿದೆ. ಟರ್ಮಿನೆಟ್ ಆದವರಿಗೆ ಬೇರೆ ಕಂಪನಿಯಲ್ಲಿ ಉದ್ಯೋಗ ಸಿಗುವುದು ಕೂಡ ಕಷ್ಟವೇ ಹಾಗಾಗಿ ವಿಷಯವನ್ನು ಆತನೇ ವಿಡಿಯೋ ಮಾಡಿ ಹಂಚಿಕೊಂಡಿದ್ದಾನೆ.
ಈತ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಿದ್ದಂತೆ ಇವರ ಸಹಾಯಕ್ಕೆ ನಿಂತಿರುವ ದರ್ಶನ್ ಅಭಿಮಾನಿಗಳು ನಾವೆಲ್ಲ ಇದ್ದೇವೆ ಎಂದು ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದಲೇ ತಿಳಿಯುತ್ತದೆ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಕ್ರೇಝ್ ಹೇಗಿದೆ ಎಂದು. ದರ್ಶನ್ ತನಕ ವಿಷಯದ ತಲುಪಿದ ಮೇಲೆ ಏನು ಮಾಡುತ್ತಾರೆ ಎಂದು ಎಲ್ಲರೂ ಕಾದು ನೋಡುತ್ತಿದ್ದಾರೆ.