ಮೆಜೆಸ್ಟಿಕ್ ಸಿನಿಮಾದಲ್ಲಿ ದರ್ಶನ್ ಹೀರೋ ಆಗಲು ಇವರೇ ಕಾರಣವಂತೆ, ಕೊನೆಗೂ ಹೊರ ಬಿದ್ದ ಸತ್ಯಾಂಶ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರು ಮೂರು ದಶಕಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದಾರೆ. ಎರಡು ದಶಕಗಳಿಗಿಂತ ಹೆಚ್ಚು ಸಮಯ ಅವರು ಹೀರೋ ಆಗಿ ಅಭಿನಯಿಸಿದ್ದಾರೆ. ಈ ತನಕ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಬಾಕ್ಸ್ ಆಫೀಸ್ ಸುಲ್ತಾನ (Box office Sulthan) ಎನಿಸಿಕೊಂಡಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದಾರೆ ದರ್ಶನ್ ಅವರು ಈ ಹಿಂದೆ ಎಷ್ಟೇ ಹಿಟ್ ಸಿನಿಮಾ ಕೊಟ್ಟಿದ್ದರು ಮುಂದೆ ಕೂಡ ಎಷ್ಟೇ ಸಿನಿಮಾ ಮಾಡಿದರು ಅವರ ಪಾಲಿಗೆ ಮೆಜೆಸ್ಟಿಕ್ (Mejestic) ಸಿನಿಮಾ ತುಂಬಾ ಸ್ಪೆಷಲ್.
ಈ ಸಿನಿಮಾ ಗೆ ಇಂದು 21 ವರ್ಷ ತುಂಬಿದ ಸಂಭ್ರಮ. ಇದೇ ಸಂದರ್ಭದಲ್ಲಿ ಮೆಜೆಸ್ಟಿಕ್ ಸಿನಿಮಾ ಕುರಿತ ಕೆಲವೊಂದು ಸತ್ಯಾಂಶ ಹೊರ ಬಿದ್ದಿದೆ. ಈ ಸಿನಿಮಾ ಗೆ ದರ್ಶನ್ ಅವರನ್ನು ಯಾರು ರೆಫರ್ ಮಾಡಿದ್ದು ಎನ್ನುವುದೇ ಒಂದು ದೊಡ್ಡ ವಿವಾದ ಆಗಿದ್ದು ಎಲ್ಲರಿಗೂ ತಿಳಿದೇ ಇದೆ ದರ್ಶನ್ (Darshan) ಹಾಗೂ ಸುದೀಪ್ (Sudeep) ನಡುವಿದ್ದ ಸ್ನೇಹ ಸಂಬಂಧಕ್ಕೆ ಹುಳಿ ಹಿಂಡಿದ್ದೆ ಈ ವಿಷಯ ಎಂದು ಹೇಳಬಹುದು ಯಾಕೆಂದರೆ ಒಂದು ಸಮಯದ ನಂತರ ದರ್ಶನ್ ಹಾಗೂ ಸುದೀಪ್ ಅವರು ಬಹಳ ಆತ್ಮೀಯರಾಗಿದ್ದರು.
ಚಡ್ಡಿ ದೋಸ್ತ್ ಗಳಂತೆ ಎಲ್ಲೆಡೆ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಎಷ್ಟೋ ವರ್ಷದ ಪರಿಚಯ ಗೆಳೆತನ ಎನ್ನುವಂತೆ ಇವರಿಬ್ಬರ ಮನಸಿನಲ್ಲಿ ಒಬ್ಬರಿಗೊಬ್ಬ ಮೇಲೆ ಒಬ್ಬರಿಗೆ ಪ್ರೀತಿ ಗೌರವ ಎಲ್ಲವೂ ಇತ್ತು. ಆದರೆ ಮೆಜೆಸ್ಟಿಕ್ ಸಿನಿಮಾ ವಿಷಯ ಅದೆಲ್ಲವನ್ನು ಕೆಡಿಸಿ ಬಿಟ್ಟಿತ್ತು. ಸುದೀಪ್ ಅವರು ದರ್ಶನ್ ಅನ್ನು ಆ ಸಿನಿಮಾಗೆ ರೆಫರ್ ಮಾಡಿದ್ದು ನಾನು, ಮೊದಲಿಗೆ ಅವಕಾಶ ನನಗೆ ಬಂದಿತ್ತು ಎಂದು ಹೇಳಿದ್ದರು ಅದೇ ವಿಷಯ ಇವರಿಬ್ಬರ ಸ್ನೇಹ ಕೆಡಲು ಮುಖ್ಯ ಕಾರಣ ಆಯ್ತು ಎನ್ನುವುದು ಇವರಿಬ್ಬರ ಹತ್ತಿರದವರು ಹೇಳುವ ಮಾತು.
ಆದರೆ ಸತ್ಯಾಂಶ ಏನು ಎಂದರೆ ಮೊದಲಿಗೆ ಈ ಸಿನಿಮಾಗೆ ಹೀರೋ ಆಗಲು ಆಫರ್ ಸುದೀಪ್ ಅವರಿಗೆ ಹೋಗಿತ್ತು. ಸುದೀಪ್ ಅವರು ಆಗ ಹುಚ್ಚ ಸಿನಿಮಾ ಗೆದ್ದ ಸಂಭ್ರಮದಲ್ಲಿ ಇದ್ದರು ಆಗ ಅವರು ಈಗ ಈ ಸಿನಿಮಾದಲ್ಲಿ ನಾನು ಅಭಿನಯಿಸುವುದಿಲ್ಲ ಎಂದು ಹೇಳಿದರಂತೆ ಅಷ್ಟೇ ಆದರೆ ಸುದೀಪ್ ಹೇಳಿಕೊಳ್ಳುವಂತೆ ನಾನು ಮಾಡಲು ಆಗುವುದಿಲ್ಲ ಆದರೆ ನೀವು ದರ್ಶನ್ ಬಳಿ ಹೋಗಿ ಎಂದಿದ್ದರಂತೆ ಆನಂತರ ನಿರ್ದೇಶಕರು ದರ್ಶನ್ ಅವರ ಬಳಿ ಹೋದರಂತೆ.
ಈ ಸಿನಿಮಾದಲ್ಲಿ ಛಾಯಾಗ್ರಹಕರಾಗಿರುವ ಅಣಜಿ ನಾಗರಾಜ್ (Anaji Nagaraj) ಅವರು ಈ ಮೊದಲೇ ದರ್ಶನ್ ಅವರಿಗೆ ಪರಿಚಯ ಇದ್ದರಂತೆ. ಹಾಗಾಗಿ ನಿರ್ದೇಶಕ ಪಿ.ಎನ್ ಸತ್ಯ ನಿರ್ಮಾಪಕ ರಾಮಮೂರ್ತಿ ಮತ್ತು ಮತ್ತು ಛಾಯಾಗ್ರಹಕ ಅಣಜಿ ನಾಗರಾಜ್ ಈ ಮೂರು ಜನ ಮೆಜೆಸ್ಟಿಕ್ ಸಿನಿಮಾಗೆ ಕಾರಣಕರ್ತರು ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ ಭಾಮ ಹರೀಶ್ ಅವರು ಸಹ ಈ ಸಿನಿಮಾದ ಸಹ ನಿರ್ಮಾಪಕ ಆಗಿದ್ದಾರೆ.
ಆ ತನಕ ದರ್ಶನ್ ಅವರು ಸಣ್ಣ ಪುಟ್ಟ ಪಾತ್ರ ಮಾಡಿಕೊಂಡಿದ್ದರು. ಮೊದಲ ಬಾರಿಗೆ ತೆರೆ ಮೇಲೆ ಹೀರೋ ಆಗಿ ಲಾಂಚ್ ಆಗಿದ್ದೆ ಈ ಸಿನಿಮಾ ಮೂಲಕ. ಆನಂತರ ಅದು ಒಂದು ಇತಿಹಾಸವೇ ಆಗಿ ಹೋಯಿತು ಮೆಜೆಸ್ಟಿಕ್ ಸಿನಿಮಾದ ದರ್ಶನ್ ಅವರ ಅಭಿನಯ ಇಂದು ಅವರು ಈ ಮಟ್ಟಕ್ಕೆ ತಲುಪಲು ಕಾರಣ ಆಯಿತು. ಕಳೆದ ವರ್ಷ ದರ್ಶನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಮೆಜೆಸ್ಟಿಕ್ ಸಿನಿಮಾವನ್ನೇ ಮತ್ತೆ ರಿಲೀಸ್ ಮಾಡಲಾಗಿತ್ತು. ಈಗ ಮತ್ತೊಮ್ಮೆ ಸಿನಿಮಾ 21 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಎಲ್ಲರೂ ಈ ಸಿನಿಮಾವನ್ನು ನೆನೆಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ಅವರಿಗೆ ನಾಯಕಿ ಆಗಿ ರೇಖಾ (Rekha) ಅವರು ಕಾಣಿಸಿಕೊಂಡಿದ್ದರು.