ಭಾರತದ ಕುಟುಂಬಗಳಲ್ಲಿ ಆಸ್ತಿ ವಿಭಜನೆ ಕುರಿತಾದ ವಿಷಯ ಬಹಳ ಜಟಿಲವಾದ ಸಮಸ್ಯೆ ಆಗಿದೆ. ಇಂದು ಕೋರ್ಟುಗಳಲ್ಲಿ ದಾಖಲಾಗುತ್ತಿರುವ ಕೇಸ್ ಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಯ ಮೇಲಿನ ಹಕ್ಕಿನ ಕುರಿತಾದ ಕೇಸ್ ಗಳೇ ಹೆಚ್ಚಾಗಿ ಇರುತ್ತವೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಪಾಲಿನ ಹಕ್ಕುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡಲೇ ಬೇಕು. ಆಸ್ತಿಯ ಮೇಲೆ ತಮ್ಮ ಹಕ್ಕು ಏನಿದೆ ಎನ್ನುವುದನ್ನು ಅರಿತಿಕೊಂಡಿರಬೇಕು.
ಹಿಂದೂ ಉತ್ತರಾಧಿಕಾರತ್ವದ ಕಾಯಿದೆ ಪ್ರಕಾರ ಯಾವುದೇ ಮಗ ಅಥವಾ ಮಗಳು ಹುಟ್ಟಿದಾಗ ಆಸ್ತಿಯ ಭಾಗವಾಗಿರುತ್ತಾರೆ ಅಂದರೆ ನಾಲ್ಕು ತಲೆಮಾರುಗಳಿಂದ ಆ ವಿಭಜಿತ ಕುಟುಂಬದಲ್ಲಿ ಪುರುಷ ಸದಸ್ಯರು ಅಥವಾ ಮಹಿಳಾ ಸದಸ್ಯರು ಪಾರಂಪರಿಕವಾಗಿ ವರ್ಗಾವಣೆ ಮಾಡಿಕೊಂಡು ಬಂದಿರುವ ಆಸ್ತಿಯಲ್ಲಿ ಆ ಕುಟುಂಬದಲ್ಲಿ ಜನಿಸಿದ ಪ್ರತಿಯೊಂದು ಮಗ ಅಥವಾ ಮಗಳಿಗೂ ಕೂಡ ಜನ್ಮಸಿದ್ಧವಾದ ಹಕ್ಕು ಇರುತ್ತದೆ.
ಹಾಗೆಯೇ ಒಬ್ಬ ಅಜ್ಜನು ಒಂದು ಆಸ್ತಿಯನ್ನು ಆತ ಸ್ವಯಂ ಸಾಧೀನಪಡಿಸಿಕೊಂಡಿದ್ದರೆ ಆತನದ್ದು ಸ್ವಯಾರ್ಜಿತ ಆಸ್ತಿ ಆಗಿದ್ದರೆ ಅದರಲ್ಲಿ ಹಕ್ಕು ಕೇಳಲು ಯಾರಿಗೂ ಸಹ ಅವಕಾಶವೇ ಇರುವುದಿಲ್ಲ. ಆತನು ತಾನು ಸಂಪಾದನೆ ಮಾಡಿದ ಆತನ ಸ್ವಯಾರ್ಜಿತ ಆಸ್ತಿಯನ್ನು ತನ್ನ ಯಾವುದೇ ಹೆಣ್ಣು ಮಕ್ಕಳಿಗೆ ಅಥವಾ ಗಂಡು ಮಕ್ಕಳಿಗೆ ಅಥವಾ ಮೊಮ್ಮಕ್ಕಳಿಗೆ ಬೇಕಾದರೂ ದಾನ ಪತ್ರದ ಮೂಲಕ ಅಥವಾ ಕ್ರಯ ಮಾಡಬೇಕು ಆಸ್ತಿ ಹಕ್ಕನ್ನು ವರ್ಗಾವಣೆ ಮಾಡಬಹುದು.
ಹಾಗಾದರೆ ಅಜ್ಜನ ಯಾವ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಪಾಲು ಇರುತ್ತದೆ ಎಂದು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಎಂದರೆ ಈ ಅಂಕಣವನ್ನು ಪೂರ್ತಿಯಾಗಿ ಓದಲೇಬೇಕು. ಯಾಕೆಂದರೆ ಒಂದು ಆಸ್ತಿಯ ಹಕ್ಕು ಅದು ಹೇಗೆ ವರ್ಗಾವಣೆ ಆಗಿದೆ ಅಥವಾ ಆಸ್ತಿಯು ಹೇಗೆ ಬಂದಿದೆ ಎನ್ನುವುದರ ಆಧಾರದ ಮೇಲೆ ಉಳಿದ ಹಕ್ಕುಗಳು ನಿರ್ಧಾರ ಆಗುತ್ತದೆ.
ಮೊದಲೇ ತಿಳಿಸಿದಂತೆ ಒಬ್ಬ ಅಜ್ಜನಿಗೆ ಆಸ್ತಿಯು ಆತನ ತಂದೆಯಿಂದ ಬಂದಿದ್ದರೆ ಮೊಮ್ಮಕ್ಕಳಿಗೂ ಕೂಡ ಅದರಲ್ಲಿ ಹಕ್ಕು ಇರುತ್ತದೆ. ಹಾಗೆಯೇ ವಿಭಜನೆ ಆಗುವ ಸಂದರ್ಭದಲ್ಲಿ ಆ ತಾತನಿಗೆ ಐದು ಜನ ಮಕ್ಕಳಿದ್ದು 10 ಎಕರೆ ಆಸ್ತಿ ಇತ್ತು ಎಂದು ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಐದು ಜನ ಮಕ್ಕಳಿಗೆ ಸಮಾನವಾಗಿ ತಲಾ ಎರಡೆಎರಡು ಎಕರೆ ಆಸ್ತಿ ಬರುತ್ತದೆ.
ಈಗ ಇದು ಮೊಮ್ಮಕಳಿಗೆ ಅವರ ತಂದೆಯ ಆಸ್ತಿ ಆಯಿತು. ಈಗ ಆ ಮೊಮ್ಮಕ್ಕಳಿಗೆ ತಂದೆಯ ಪಾಲಿನ ಆಸ್ತಿ ಮಾತ್ರ ಬರುತ್ತದೆ. ಐದು ಜನ ಮೊಮ್ಮಕ್ಕಳದಲ್ಲಿ ಒಬ್ಬ ಮಗನಿಗೆ ಇಬ್ಬರು ಮಕ್ಕಳಿದ್ದು ಮತ್ತೊಬ್ಬ ಮಗನಿಗೆ ಒಬ್ಬನೇ ಮಗನಿದ್ದರೆ ಇಬ್ಬರು ಮಕ್ಕಳನ್ನು ಹೊಂದಿದ್ದ ಮಗನ ಮೊಮ್ಮಕ್ಕಳಿಗೆ ತಲಾ ಒಂದೊಂದು ಎಕರೆ ಆಸ್ತಿ, ಒಬ್ಬನೇ ಮಗನನ್ನು ಹೊಂದಿದ್ದ ಮೊಮ್ಮಗನಿಗೆ ಅಜ್ಜನ ಆಸ್ತಿಯಲ್ಲಿ ಎರಡು ಎಕರೆ ಆಸ್ತಿ ಸಿಗುತ್ತದೆ.
ಒಂದು ವೇಳೆ ತಂದೆಯು ಜೀವಂತವಾಗಿಲ್ಲದ ಪಕ್ಷದಲ್ಲಿ ತಾತನು ಮೊಮ್ಮಕ್ಕಳಿಗೆ ಆಸ್ತಿ ಕೊಡಲು ನಿರಾಕರಿಸಿದ ಸಂದರ್ಭದಲ್ಲಿ ಮೊಮ್ಮಕ್ಕಳು ಕೇಸು ದಾಖಲಿಸಿ ಆಸ್ತಿ ಮೇಲಿನ ಹಕ್ಕನ್ನು ಕೇಳಬಹುದು. ಆದರೆ ತಂದೆಯ ಪಾಲಿನ ಆಸ್ತಿ ಮಾತ್ರ ಮೊಮ್ಮಕ್ಕಳಿಗೆ ಸಿಗುತ್ತದೆ. ಮತ್ತೊಮ್ಮೆ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಂಶ ಏನು ಎಂದರೆ ತಾತನ ಸ್ವಯಾರ್ಜಿತ ಆಸ್ತಿ ಆಗಿದ್ದರೆ ಮೊಮ್ಮಕ್ಕಳಿಗೆ ಕೋರ್ಟಿನಲ್ಲಿ ಕೇಸು ಹಾಕಲು ಅವಕಾಶ ಇರುವುದಿಲ್ಲ.
ಒಂದು ವೇಳೆ ತಾತ ಅದನ್ನು ಯಾರಿಗೂ ತನ್ನ ಆಸ್ತಿಯ ಮೇಲಿನ ಹಕ್ಕನ್ನು ವರ್ಗಾವಣೆ ಮಾಡದೆ ಮರಣ ಹೋಗಿದ್ದರೆ ಆ ಸಂದರ್ಭದಲ್ಲಿ ಉಳಿದ ಎಲ್ಲಾ ವಾರಸುದಾರರು ಕೂಡ ಸಮಾನವಾಗಿ ಭಾಗ ಮಾಡಿಕೊಳ್ಳಬಹುದು. ಈ ಬಗ್ಗೆ ನಿಮಗೆ ಏನೇ ಗೊಂದಲಗಳಿದ್ದರೂ ಹತ್ತಿರದಲ್ಲಿರುವ ವಕೀಲರಿಂದ ಕಾನೂನಿನ ಸಲಹೆ ಪಡೆದುಕೊಂಡು ಸಮಸ್ಯೆ ಬಗೆ ಹರಿಸಿಕೊಳ್ಳಿ.