Home Useful Information ತುಂಬಾ ಸರಳವಾಗಿ ಮಹಾಲಕ್ಷ್ಮಿ ಅಮ್ಮನವರಿಗೆ ಇಷ್ಟ ಆಗುವ ರೀತಿ ವರಮಹಾಲಕ್ಷ್ಮಿ ವ್ರತ ಮಾಡುವ ವಿಧಾನ.!

ತುಂಬಾ ಸರಳವಾಗಿ ಮಹಾಲಕ್ಷ್ಮಿ ಅಮ್ಮನವರಿಗೆ ಇಷ್ಟ ಆಗುವ ರೀತಿ ವರಮಹಾಲಕ್ಷ್ಮಿ ವ್ರತ ಮಾಡುವ ವಿಧಾನ.!

0
ತುಂಬಾ ಸರಳವಾಗಿ ಮಹಾಲಕ್ಷ್ಮಿ ಅಮ್ಮನವರಿಗೆ ಇಷ್ಟ ಆಗುವ ರೀತಿ ವರಮಹಾಲಕ್ಷ್ಮಿ ವ್ರತ ಮಾಡುವ ವಿಧಾನ.!

 

ಶ್ರಾವಣ ಮಾಸ ಬಂತು ಎಂದರೆ ಹೀಗೆ ಹಬ್ಬಗಳ ಸಾಲು, ಈ ಸಾಲಿನಲ್ಲಿ ಮೊದಲಿಗೆ ಬರುವುದೇ ವರಮಹಾಲಕ್ಷ್ಮಿ ಹಬ್ಬ. ಮಹಾಲಕ್ಷ್ಮಿ ತಾಯಿಯ ಅನುಗ್ರಹಕ್ಕಾಗಿ ಮಾಡುವ ಈ ಪೂಜೆಯನ್ನು ಅವರ ಕುಟುಂಬಗಳು ನಡೆಸಿಕೊಂಡು ಬಂದಿರುವ ಪದ್ಧತಿ ಪ್ರಕಾರ ಮಾಡುತ್ತಾರೆ. ಕೆಲವು ಮನೆಗಳಲ್ಲಿ ಲಕ್ಷ್ಮಿ ಕೂರಿಸುವ ಪದ್ಧತಿ ಇರುವುದಿಲ್ಲ, ಕೆಲವು ಮನೆಗಳಲ್ಲಿ ವಾಡಿಕೆ ಇರುತ್ತದೆ.

ಒಂದು ವೇಳೆ ನೀವು ಇದುವರೆಗೂ ಕೂಡ ಈ ರೀತಿ ಲಕ್ಷ್ಮಿ ಕೂರಿಸಿಲ್ಲ ಎಂದರೆ ಕ್ರಮವಾಗಿ ಸರಳವಾಗಿ ಮಹಾಲಕ್ಷ್ಮಿ ಅಮ್ಮನವರಿಗೆ ಇಷ್ಟ ಆಗುವ ರೀತಿ ಅವರು ಪ್ರಸನ್ನರಾಗುವ ರೀತಿ ಪೂಜೆ ಮಾಡಲು ಈ ವಿಧಾನಗಳನ್ನು ಅನುಸರಿಸಿ ಸಾಕು, ಅಮ್ಮನವರು ಸಂತೃಪ್ತಿಯಾಗಿ ಆಶೀರ್ವದಿಸುತ್ತಾರೆ.

ರೇಷನ್ ಕಾರ್ಡ್ ವಿತರಣೆಗೆ ತಾಲೂಕುಗಳಲ್ಲಿ ಪ್ರತ್ಯೇಕ ಕಛೇರಿ, ತಹಶೀಲ್ದಾರ್ ಗೆ ಕೊಟ್ಟಿದ್ದ ಅಧಿಕಾರ ವಾಪಸ್.!

● ಯಾವುದೇ ಹಬ್ಬ ಅಥವಾ ವ್ರತ ಆಚರಿಸುವ ಮುನ್ನ ಮನೆಯನ್ನು ಶುದ್ಧವಾಗಿಟ್ಟುಕೊಳ್ಳುವುದು ಮುಖ್ಯ
● ಶುಕ್ರವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಒಂದು ತಟ್ಟೆಗೆ 5 ಹಿಡಿ ಅಕ್ಕಿ ಹಾಕಿ, ಅಷ್ಟದಳ ಪದ್ಮ ರಂಗೋಲಿ ಹಾಕಿ ಹೂವು ಇಟ್ಟು ಕೈಮುಗಿದು ನಿಮ್ಮ ಶಕ್ತಿಯನುಸಾರ ಹಿತ್ತಾಳೆ, ತಾಮ್ರ, ಪಂಚಲೋಹ ಅಥವಾ ಬೆಳ್ಳಿಯ ಚೊಂಬನ್ನು ಇಡಿ ಮತ್ತು ಆ ಚೊಂಬಿಗೆ ಮಡಿ ನೀರನ್ನು ತುಂಬಿಸಿ, ನೀರಿಗೆ ಅರಿಶಿನ ಕುಂಕುಮ ಅಕ್ಷತೆ ಒಂದು ಹೂವು ಹಾಗೂ ಒಂದು ನಾಣ್ಯವನ್ನು ಕೂಡ ಹಾಕಿ.

● ನಿಮ್ಮ ಬಳಿ ಬೆಳ್ಳಿ ನಾಣ್ಯಗಳು, ಗೋಮತಿ ಚಕ್ರ, ಕವಡೆಗಳು, ಕಮಲದ ಬೀಜ, ಕೆಂಪು ಕಲ್ಲು ಸಕ್ಕರೆ, 6 ಲವಂಗಗಳು, 6 ಏಲಕ್ಕಿ ಈ ರೀತಿ ನಿಮಗೆ ಲಕ್ಷ್ಮಿ ಸಂಕೇತವಾಗಿ ಸಿಗುವ ಇತರ ವಸ್ತುಗಳನ್ನು ಕೂಡ ಆ ಚೊಂಬಿನ ಒಳಗಡೆ ಹಾಕಬಹುದು.
● ವೀಳ್ಯದೆಲೆ ಅಥವಾ ಮಾವಿನ ಎಲೆಯನ್ನು ಹಾಕಿ ಕಲಶ ಮಾಡಿ ತೆಂಗಿನಕಾಯಿ ಇಟ್ಟು ಆ ಕಳಶಕ್ಕೆ ಹೂವಿನಿಂದ ಅಲಂಕಾರ ಮಾಡಿ
● ಮಾಂಗಲ್ಯ, ಗೆಜ್ಜೆ ವಸ್ತ್ರ, ಕಮಲದ ಹೂ ಇವುಗಳನ್ನು ಅರ್ಪಿಸಿ.

ರಾಜ್ಯದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ, ಕಾಯಕ ಯೋಜನೆಯಡಿ 5 ಲಕ್ಷದವರೆಗೆ ಸಹಾಯಧನ.! ಆಸಕ್ತರು ಅರ್ಜಿ ಸಲ್ಲಿಸಿ.!

● ನಿಮ್ಮ ಬಳಿ ಒಡವೆಗಳು ಇದ್ದರೆ ಆ ಒಡವೆಗಳನ್ನು ಕೂಡ ಲಕ್ಷ್ಮಿ ಸ್ವರೂಪವಾದ ಕಳಶಕ್ಕೆ ಹಾಕಿ ಪೂಜಿಸಬಹುದು.
● ಲಕ್ಷ್ಮೀ ಮುಂದೆ ಹಚ್ಚುವ ದೀಪಗಳು ಬೆಸ ಸಂಖ್ಯೆಯಲ್ಲಿ ಇರಬೇಕು, ಎರಡು ದೀಪದ ಕಂಬ ಒಂದು ಕಾಮಾಕ್ಷಿ ದೀಪ ಈ ರೀತಿ ಹಚ್ಚಬಹುದು.
● ಅನುಕೂಲ ಇದ್ದರೆ ಹೊಸ ಸೀರೆಯನ್ನು ತಂದು ಕಳಶಕ್ಕೆ ಉಡಿಬಹುದು ಆದರೆ ಅದೇ ರೀತಿ ಮಾಡಬೇಕು ಎಂದೇನಿಲ್ಲ, ಪೂಜೆ ಮಾಡುವುದಕ್ಕೆ ಆಡಂಬರಕ್ಕಿಂತ ಶ್ರದ್ಧೆ, ಭಕ್ತಿ , ನಂಬಿಕೆ, ಆಸಕ್ತಿ ಮುಖ್ಯ. ಒಂದು ಬ್ಲೌಸ್ ಪೀಸ್ ಕೂಡ ಇಟ್ಟು ಪೂಜೆ ಮಾಡಬಹುದು.

● ಇನ್ನು ನೈವೇದ್ಯ ಮಾಡುವುದನ್ನು ಮರೆಯಬಾರದು ಅದರಲ್ಲೂ ಮಹಾಲಕ್ಷ್ಮಿ ಅಮ್ಮನವರಿಗೆ ಇಷ್ಟವಾದ ಬೆಲ್ಲದನ್ನ, ಕೋಸಂಬರಿ, ಪಾನಕ, ನಿಂಬೆ ಹಣ್ಣಿನ ಚಿತ್ರಾನ್ನ, ಹೋಳಿಗೆ, ಪಾಯಸ ಇವುಗಳಲ್ಲಿ ನಿಮಗೆ ಯಾವುದು ಮಾಡಲು ಸಾಧ್ಯ ಅವುಗಳನ್ನು ಮಾಡಿ ನೈವೇದ್ಯ ಮಾಡಿ
● ಸಾಧ್ಯವಾದರೆ ಐದು ಜನ ಮುತ್ತೈದೆಯರಿಗೆ ಮನೆಗೆ ಕರೆದು ಅರಿಶಿನ ಕುಂಕುಮ ಹೂವು ಹಾಗೂ ಒಂದು ಸಿಹಿ ತಿನಿಸು ಕೊಟ್ಟು ಕಳುಹಿಸಿದರೆ ಒಳ್ಳೆಯದು.

ಏರ್ಟೆಲ್‌ನಿಂದ ಭರ್ಜರಿ ಆಫರ್ ಜಸ್ಟ್‌ ಕೇವಲ 99 ರೂ. ರಿಚಾರ್ಜ್ ಮಾಡಿದ್ರೆ ಅನ್ಲಿಮಿಟೆಡ್ 5G ಡೇಟಾ.!

● ಈ ರೀತಿ ಒಮ್ಮೆ ಈ ವ್ರತ ಮಾಡುವುದನ್ನು ಪ್ರಾರಂಭಿಸಿದರೆ ಪ್ರತಿ ವರ್ಷದಿಂದ ವರ್ಷಕ್ಕೆ ಇನ್ನಷ್ಟು ಗ್ರಾಂಡ್ ಆಗಿ ಹಬ್ಬ ಮಾಡುವ ಶಕ್ತಿ ಬರುತ್ತದೆ ಎಂದು ನಂಬಿಕೆ. ಈ ರೀತಿ ಸರಳವಾಗಿ ಹಾಗೂ ಅನುಕೂಲಕ್ಕೆ ತಕ್ಕ ಹಾಗೆ ವೈಭವದಿಂದ ವರಮಹಾಲಕ್ಷ್ಮಿ ಹಬ್ಬವನ್ನು ಮಾಡಬಹುದು.

LEAVE A REPLY

Please enter your comment!
Please enter your name here