ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ದೋಷಗಳು ಉಂಟಾಗಿ ನಾವು ಎಷ್ಟೇ ಪ್ರಯತ್ನ ಪಟ್ಟರು ಕೂಡ ಜೀವನದಲ್ಲಿ ಉನ್ನತಿ ಹೊಂದಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಮನೆಯಲ್ಲಿ ಗೃಹಿಣಿಯರು ಮಾಡುವ ಇಂತಹ ತಪ್ಪುಗಳಿಂದ ಅವುಗಳ ಗಂಭೀರ ಪರಿಣಾಮ ಕುಟುಂಬದ ಎಲ್ಲ ಸದಸ್ಯರ ಮೇಲೆ ಬೀಳುತ್ತದೆ. ಅಂತಹ ತಪ್ಪುಗಳು ಯಾವುವು ಎಂದು ಈ ಅಂಕಣದಲ್ಲಿ ತಿಳಿಸುತ್ತೇವೆ. ನೀವು ಕೂಡ ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಈ ಕೂಡಲೇ ತಿದ್ದುಕೊಳ್ಳಿ.
● ದೇವರ ಮನೆಯಲ್ಲಿ ಒಣಗಿದ ಹೂವುಗಳನ್ನು ಹಾಗೆ ಬಿಟ್ಟಿದ್ದರೆ ದೇವರ ಕೋಪಕ್ಕೆ ಕಾರಣವಾಗುತ್ತೇವೆ ಆಗ ಮನೆ ಅಭಿವೃದ್ಧಿ ಆಗುವುದಿಲ್ಲ.
● ಅಡುಗೆ ಮನೆಯಲ್ಲಿ ಕ್ಲೀನ್ ಮಾಡಲು ಅಥವಾ ಮನೆ ಸ್ವಚ್ಛ ಮಾಡಲು ಪುಟ್ಟ ಮಕ್ಕಳ ಬಟ್ಟೆಯನ್ನು ಉಪಯೋಗಿಸಿದರೆ ಆಗಲು ಕೂಡ ಆ ಮನೆಗೆ ಕೆಡುಕಾಗುತ್ತದೆ.
ಬೀಗದ ಕೈಯನ್ನು ಮನೆಯ ಈ ದಿಕ್ಕಿನಲ್ಲಿ ಬಚ್ಚಿಡಿ ನಿಮ್ಮ ಅದೃಷ್ಟ ಹೇಗೆ ತೆಗೆಯುತ್ತದೆ ನೀವೇ ಪರೀಕ್ಷೆ ಮಾಡಿ ನೋಡಿ.!
● ಮನೆಯ ಮುಖ್ಯದ್ವಾರದ ಮೇಲೆ ಅಥವಾ ದೇವರ ಮನೆಯಲ್ಲಿ ಹಣ ಇಡುವ ಬೀರು ಹಾಗೂ ಕಪಾಟಿನ ಮೇಲೆ ಸಿಕ್ಕಸಿಕ್ಕ ಸ್ಟಿಕ್ಕರ್ ಗಳನ್ನು ಅಂಟಿಸಿದರೆ ಅದು ಕೂಡ ದೋಷಕ್ಕೆ ಕಾರಣವಾಗುತ್ತದೆ.
● ಆಫೀಸ್ ಬ್ಯಾಗ್ ಅಥವಾ ಹ್ಯಾಂಡ್ ಪರ್ಸ್ ಇಡಲು ಮನೆಯಲ್ಲಿ ನಿಗದಿತ ಸ್ಥಳ ಇರದೆ ಎಲ್ಲೆಂದರಲ್ಲಿ ಅದನ್ನು ಬಿಸಾಕುವುದರಿಂದ ಕೂಡ ಕೆಟ್ಟದಾಗುತ್ತದೆ.
● ಮನೆಯ ಒಳಗಡೆ ರಾತ್ರಿಯಿಡೀ ಕಸ ಇಡುವುದು ಅಥವಾ ರಾತ್ರಿ ಊಟ ಮಾಡಿದ ಎಂಜಲು ಪಾತ್ರೆಗಳನ್ನು ರಾತ್ರಿಪೂರ್ತಿ ಹಾಗೆ ಇಡುವುದು ಕೂಡ ತಪ್ಪು.
● ಮುಸ್ಸಂಜೆ ಹೊತ್ತು ಮನೆಯಲ್ಲಿ ಮಲಗಿಕೊಂಡಿರುವುದು ಹಾಗೂ ಯಾವಾಗಲೂ ಹಲ್ಲನ್ನು ನಡೆಯುತ್ತಿರುವುದು ಕೂಡ ತಪ್ಪಾಗುತ್ತದೆ.
● ಅತಿಥಿ ದೇವೋಭವ ಎನ್ನುವ ಮಾತಿದೆ. ಆದರೆ ಮನೆಗೆ ಬರುವ ಅತಿಥಿಗಳ ಮೇಲೆ ಕಿರಿಕಿರಿ ಮಾಡಿಕೊಂಡರೆ ಅದು ಶುಭವಲ್ಲ.
● ಊಟ ಇರುವ ತಟ್ಟೆಯನ್ನು ಯಾವುದೇ ಕಾರಣಕ್ಕೂ ದಾಟಬಾರದು, ಇಲ್ಲವಾದರೆ ದಟ್ಟ ದರಿದ್ರವನ್ನು ಅನುಭವಿಸಬೇಕಾಗುತ್ತದೆ.
ಗೃಹಣಿಯರಿಗೆ ಅಡುಗೆ ಮನೆಯಲ್ಲಿ ಉಪಯುಕ್ತವಾಗುವ ಸೂಪರ್ ಟಿಪ್ಸ್ ಗಳು.!
● ಹೊಸ್ತಿಲ ಹೊರಗಡೆ ಒಂದು ಕಾಲು ಹಾಗೂ ಒಳಗಡೆ ಒಂದು ಕಾಲು ಇಟ್ಟುಕೊಂಡು ನಿಂತುಕೊಳ್ಳುವುದು ಅಥಾವ ಈ ರೀತಿ ನಿಂತುಕೊಂಡು ಏನನ್ನಾದರೂ ಕೊಡುವುದು ಅಥವಾ ತೆಗೆದುಕೊಳ್ಳುವುದು ಕೂಡ ಮನೆಗೆ ಉಂಟಾಗುವ ದೋಷಕ್ಕೆ ಕಾರಣವಾಗುತ್ತದೆ.
● ಹಾಲು ಹಾಗೂ ನೀರು ಎರಡನ್ನು ಕೂಡ ಒಟ್ಟಿಗೆ ಮನೆಗೆ ತರುವುದು ಕೂಡ ತಪ್ಪು.
● ವರ್ಷಕ್ಕೆ ಒಮ್ಮೆ ಆದರೂ ಬಡವರಿಗೆ ನಿಮ್ಮ ಕೈಲಾದಷ್ಟು ಹಣ ಅಥವಾ ಊಟವನ್ನು ನೀಡಬೇಕು ಇಲ್ಲವಾದರೆ ಅದು ಕೂಡ ಒಂದು ರೀತಿಯ ದೋಷವಾಗುತ್ತದೆ.
● ಮನೆಯ ಮುಂದೆ ಹೂವಿನವರು ಮಾರಲು ಬಂದು ಕೇಳಿದಾಗ ಗೃಹಿಣಿ ಅದನ್ನು ಬೇಡ ಎಂದು ಹೇಳಬಾರದು, ಅದರ ಬದಲು ಅವರಿಗೆ ಏನಾದರೂ ನೆಪ ಹೇಳಿ ನಾಳೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಸಮಾಧಾನಕರವಾಗಿ ಕಳುಹಿಸಬೇಕು.
● ರೊಟ್ಟಿ ಹಂಚನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಬೋರಲು ಇಡಬಾರದು.
ಫ್ಯಾನ್ ಕ್ಲೀನ್ ಮಾಡಲು ಈ ವಿಧಾನ ಅನುಸರಿಸಿ ಕೇವಲ 5 ನಿಮಿಷದಲ್ಲಿ ಹೊಸ ಪ್ಯಾನ್‌ನಂತೆ ಕಾಣುತ್ತೆ.!
● ದೇವರ ಕೋಣೆಯಲ್ಲಿ ದೇವರ ಫೋಟೋ ಮಾತ್ರ ಇರಬೇಕು ಸತ್ತವರ ಫೋಟೋ ಅಥವಾ ಹಿರಿಯರ ಫೋಟೋವನ್ನು ದೇವರ ಮನೆಯಲ್ಲಿ ಹಾಕಬಾರದು. ಬೇರೆ ಎಲ್ಲೇ ಈ ರೀತಿ ಫೋಟೋಗಳನ್ನು ಹಾಕಿದರೂ ಕೂಡ ದೇವರ ಫೋಟೋಗೆ ಸಮವಾಗಿ ಅಥವಾ ದೇವರ ಫೋಟೋ ಜೊತೆಯಲ್ಲಿ ಹಾಕಬಾರದು ಇಲ್ಲವಾದಲ್ಲಿ ದೋಷ ತಪ್ಪಿದ್ದಲ್ಲ.
● ಹೆಣ್ಣು ಮಕ್ಕಳ ಜೊತೆ ಕೆಟ್ಟದಾಗಿ ನಡೆದುಕೊಳ್ಳುವುದು. ಯಾವಾಗಲೂ ಅವರನ್ನು ಬೈಯುತ್ತಾ ಇರುವುದು, ಕೀಳಾಗಿ ಕಾಣುವುದು ಈ ರೀತಿ ಅವಮಾನ ಮಾಡುವವರ ಮನೆಗೆ ಲಕ್ಷ್ಮಿ ದೇವಿ ಬರುವುದಿಲ್ಲ ಹಾಗಾಗಿ ಹೆಣ್ಣು ಮಕ್ಕಳ ಜೊತೆ ವಿನಿಯದಿಂದ ವರ್ತಿಸಿ ಅವರಿಗೆ ಗೌರವ ಕೊಡಿ.
● ಪೊರಕೆ ಎಷ್ಟೇ ಸವೆದಿದ್ದರೂ ಕೂಡ ಮನೆ ಕ್ಲೀನ್ ಮಾಡಲು ಅದನ್ನೇ ಬಳಸುವುದು ಕೂಡ ತಪ್ಪು
● ಹಾಸಿಗೆಯನ್ನು ಪೊರಕೆಯಿಂದ ಕ್ಲೀನ್ ಮಾಡುವುದರಿಂದ ಕೂಡ ಆ ಮನೆಗೆ ದರಿದ್ರ ಬರುತ್ತದೆ, ಇಂತಹ ಅಭ್ಯಾಸಗಳಿದ್ದರೆ ಇಂದಿನಿಂದಲೇ ಬಿಟ್ಟುಬಿಡಿ.