● ನಿಮ್ಮ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಿ. ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ, ಸಂಪತ್ತಿನ ಇನ್ನೊಂದು ರೂಪ ಆರೋಗ್ಯವೇ ಆಗಿದೆ. ಯಾವುದೇ ಕಾರಣಕ್ಕೂ ಆರೋಗ್ಯವನ್ನು ಕಳೆದುಕೊಳ್ಳಬೇಡಿ. ಸಂಪತ್ತನ್ನು ಜೋಪಾನ ಮಾಡುವ ರೀತಿ ದೇಹದ ಆರೋಗ್ಯದ ಮೇಲೂ ನಿಗಾವಹಿಸಿ.
● ಗುರಿಗಳು ವೈಯುಕ್ತವಾಗಿರುವುದರಿಂದ ಕೆಲವು ದಾರಿಗಳಲ್ಲಿ ಏಕಾಂಗಿಯಾಗಿ ನಡೆಯುವುದನ್ನು ಕಲಿಯಬೇಕಾಗುತ್ತದೆ. ಈ ಮನಸ್ಥಿತಿಗೆ ಯಾವಾಗಲೂ ತಯಾರಾಗಿರಿ. ಇಂತಹ ಒಂದು ಸಂದರ್ಭ ಜೀವನದಲ್ಲಿ ಉನ್ನತ ಆದರ್ಶಗಳನ್ನು ಹಾಗೂ ಸಾಧನೆ ಮಾಡುವ ಹಂಬಲವನ್ನು ಹೊಂದಿರುವವರಿಗೆ ಯಾವ ಸಮಯದಲ್ಲಿ ಬೇಕಾದರೂ ಎದುರಾಗಬಹುದು, ಅದಕ್ಕಾಗಿ ತಯಾರಾಗಿರುವ ಮನಸ್ಥಿತಿಯಲ್ಲಿರಿ.
● ನಿಮ್ಮ ಬಗ್ಗೆ ನಿಮಗೆ ನಂಬಿಕೆ ಹಾಗೂ ಗೌರವ ಇರಬೇಕು, ಯಾವಾಗಲೂ ನಿಮ್ಮ ಬಗ್ಗೆ ನೆಗೆಟಿವ್ ಆಗಿ ಯೋಚನೆ ಮಾಡುವುದನ್ನು ಬಿಟ್ಟು ಬಿಡಿ, ನಿಮ್ಮ ಆಲೋಚನೆಗಳ ಬಗ್ಗೆ ಹೆಮ್ಮೆ ಇರಲಿ.
ತಕ್ಷಣಕ್ಕೆ ಹಣ ಬೇಕಿದ್ದರೆ ಈ ನಂಬರ್ ಹೇಳಿಕೊಳ್ಳಿ ಸಾಕು, ಜಾದು ನಡೆಯುತ್ತದೆ.!
● ಭಯಪಡಲು, ದುಃಖಪಡಲು ಅಥವಾ ಬೇಸರ ಮಾಡಿಕೊಳ್ಳಲು ಅಥವಾ ಇನ್ನೊಬ್ಬರ ಬಗ್ಗೆ ಚಾಡಿ ಹೇಳುತ್ತಾ ಆಡಿಕೊಳ್ಳುತ್ತಾ ನಿಮಗಿರುವ ಅಮೂಲ್ಯ ಸಮಯವನ್ನು ಕಳೆಯುವ ಬದಲು ಈ ಸಮಯವನ್ನು ನಿಮ್ಮನ್ನು ರೂಪಿಸಿಕೊಳ್ಳಲು, ನಿಮಗಾಗಿ ಹೊಸದನ್ನು ಕಲಿಯಲು ನಿಮ್ಮ ಬದುಕನ್ನು ಒಳ್ಳೆಯ ರೀತಿಯಲ್ಲಿ ಬದಲಾಯಿಸಿಕೊಳ್ಳಲು ವಿನಿಯೋಗಿಸಿಕೊಳ್ಳಿ. ಬದುಕು ಅಮೂಲ್ಯವಾದದ್ದು ಕಳೆದುಕೊಂಡ ಸಮಯ ಮತ್ತೆ ಸಿಗುವುದಿಲ್ಲ ಹಾಗಾಗಿ ಬಳಸುವ ಪ್ರತಿ ನಿಮಿಷದ ಮೌಲ್ಯ ತಿಳಿದುಕೊಂಡಿರಿ.
● ಸ್ವಾರ್ಥ ಎನ್ನುವುದು ಬಹಳ ಕೆಟ್ಟದ್ದು ಇದನ್ನು ಸುಲಭಕ್ಕೆ ಬದಲಾಯಿಸಲಾಗದು, ಸ್ವಾರ್ಥಿಗಳನ್ನು ಬದಲಾಯಿಸಲು ಎಂದು ಪ್ರಯತ್ನ ಪಡಬೇಡಿ ಅದು ಸಮಯ ವ್ಯರ್ಥ ಅಷ್ಟೇ.
● ನಿರೀಕ್ಷೆಗಳು ಯಾವಾಗಲೂ ನೋವನ್ನುಂಟು ಮಾಡುತ್ತವೆ, ಹಾಗಾಗಿ ಖುಷಿಯಾಗಿರಬೇಕು ಎನ್ನುವ ಆಸೆ ಇದ್ದರೆ ಯಾರ ಮೇಲೂ ನಿರೀಕ್ಷೆ ಇಟ್ಟುಕೊಳ್ಳಬೇಡಿ, ಯಾರಿಂದ ಏನನ್ನು ಕೂಡ ಬಯಸಬೇಡಿ.
ಸಾಲದ ಸುಳಿಯಿಂದ ಪಾರಾಗಲು ಪರಿಹಾರಗಳನ್ನು ಮಾಡಿ, ನೂರಕ್ಕೆ ನೂರು ರಷ್ಟು ಫಲಿತಾಂಶ ಸಿಗುತ್ತದೆ.!
● ಪ್ರಯತ್ನ ಯಾವಾಗಲೂ ಸದ್ದಿಲ್ಲದೇ ಸಾಗಬೇಕು, ಸಿಗೂವ ಯಶಸ್ಸಿನ ಸುದ್ದಿಯನ್ನು ನಗಾರಿ ಹೊಡೆದು ಹಬ್ಬಿಸಬೇಕು ಹಾಗಾಗಿ ನಿಮ್ಮ ಪ್ಲಾನ್ ಗಳ ಬಗ್ಗೆ ನಿಮ್ಮ ಕನಸುಗಳ ಬಗ್ಗೆ ನಿಮ್ಮ ಮುಂದಿನ ಗುರಿಯ ಬಗ್ಗೆ ಯಾರ ಜೊತೆಗೂ ಕೂಡ ಡಿಸ್ಕಸ್ ಮಾಡಬೇಡಿ, ನಿಮ್ಮ ಗುರಿ ಕಡೆಗೆ ಗಮನ ಇಟ್ಟು ಸೈಲೆಂಟ್ ಆಗಿ ಸಾಗಿರಿ.
● ನಿಮ್ಮ ಮನಸ್ಸಿಗೆ ಖುಷಿ ಇಲ್ಲದ ನೀವು ಮನಸಾರೆ ನಗದ ದಿನವನ್ನು ನೀವು ಬದುಕಿದರೆ ಆ ದಿನವನ್ನು ವೇಸ್ಟ್ ಮಾಡಿದಂತೆ. ಹಾಗಾಗಿ ಸದಾ ನಗುತ್ತಾ ಇರಿ ಅದು ಮಾತ್ರ ಅಲ್ಲದೆ ನಿಮ್ಮ ಮನಸ್ಸಿಗೆ ಇಷ್ಟವಾಗುವಂತಹ ಒಂದು ಕೆಲಸವನ್ನಾದರೂ ಆ ದಿನದ ಚಟುವಟಿಕೆಗಳಲ್ಲಿ ನೀವು ಮಾಡಿರಬೇಕು. ಆಗ ನಿಮ್ಮಲ್ಲಿ ಹೊಸ ಉತ್ಸಾಹ ತುಂಬುತ್ತದೆ ಬದುಕಿನ ಬಗ್ಗೆ ಆಸಕ್ತಿ ಬರುತ್ತದೆ.
ಗೃಹಿಣಿಯರಿಗೆ ಉತ್ತಮವಾದ ಅಡುಗೆ ಟಿಪ್ಸ್ ಗಳು ಇವು.!
● ನಿಮ್ಮ ಸಮಸ್ಯೆಗಳನ್ನು ಸಿಕ್ಕಸಿಕ್ಕವರೆಲ್ಲರ ಬಳಿ ಹೇಳಿಕೊಳ್ಳುವುದನ್ನು ಕಡಿಮೆ ಮಾಡಿ, ಇದರಿಂದ ಸಲಹೆ ಕೊಡುವವರ ಸಂಖ್ಯೆ ಹೆಚ್ಚಾಗಬಹುದು ಹೊರತು ಸಹಾಯ ಮಾಡುವವರದಲ್ಲ. ಹಾಗಾಗಿ ಇನ್ನೊಬ್ಬರ ಮೇಲೆ ಡಿಪೆಂಡ್ ಆಗುವುದನ್ನು ಕಡಿಮೆ ಮಾಡಿ, ನಿಮ್ಮ ಸಮಸ್ಯೆಗಳನ್ನು ನೀವೇ ಸರಿಪಡಿಸಿಕೊಳ್ಳಲು ಪ್ರಯತ್ನಿಸಿ. ಇತರರ ಸಲಹೆಗಳ ಮೇಲೆ ಹೆಚ್ಚು ಅವಲಂಬಿತರಾಗಬೇಡಿ.
● ನಿಮ್ಮ ಭಾವನೆಗಳನ್ನು ನಿಯಂತ್ರಿಸಿದರೆ ನಿಮಗೆ ಹೆಚ್ಚು ಗೌರವ ಲಭಿಸುತ್ತದೆ, ಜೀವನದಲ್ಲಿ ಪ್ರಬುದ್ಧತೆಯಿಂದ ಬದುಕಬೇಕು ಎಂದರೆ ನಿಮ್ಮ ಪ್ರತಿಕ್ರಿಯೆಗಳ ಬಗ್ಗೆ ಜಾಗರೂಕರಾಗಿರಬೇಕು.
● ಯಾರ ದೃಷ್ಟಿಯಲ್ಲಿ ಕೂಡ ಒಳ್ಳೆಯವರಾಗಿ ಇರಬೇಕು ಎಂದು ಪ್ರಯತ್ನಿಸಬೇಡಿ ಯಾಕೆಂದರೆ ಕೊನೆಯ ತನಕ ಯಾವುದು ಕೂಡ ಮೊದಲಿನಂತಿರುವುದಿಲ್ಲ, ಹಾಗಾಗಿ ನೀವು ಹೇಗಿದ್ದಿರೋ ಹಾಗೆ ಇದ್ದುಬಿಡಿ ಇನ್ನೊಬ್ಬರನ್ನು ಮೆಚ್ಚಿಸುವ ಪ್ರಯತ್ನ ಬೇಡ.