ಗೃಹಿಣಿಯರಿಗೆ ಉತ್ತಮವಾದ ಅಡುಗೆ ಟಿಪ್ಸ್ ಗಳು ಇವು.!

● ಅನ್ನ ಮಾಡುವಾಗ ಅಕ್ಕಿಗೆ ಸ್ವಲ್ಪ ನಿಂಬೆರಸ ಹಾಕಿದರೆ ಅನ್ನ ಉದುರುದುರಾಗಿ ಬರುತ್ತದೆ ಹಾಗೂ ತುಂಬಾ ಬೆಳ್ಳಗೆ ಇರುತ್ತದೆ.
● ಹಸಿಮೆಣಸಿನಕಾಯಿ ಹಚ್ಚಿದಾಗ ಕೈಗಳು ಹೆಚ್ಚಾಗಿ ಉರಿಯುತ್ತವೆ ಈ ರೀತಿ ಕೈಗಳು ಖಾರ ಆಗಿ ಉರಿಯುತ್ತಿದ್ದರೆ ತಕ್ಷಣವೇ ಹರಳೆಣ್ಣೆಯನ್ನು ಹಚ್ಚಿ ಆಗ ಉರಿ ಕಡಿಮೆಯಾಗುತ್ತದೆ.

● ಕಾಫಿ ಮತ್ತು ಚಹಾದ ಕಪ್ ಗಳಲ್ಲಿ ಹಳೆಯ ಕಲೆ ಹಾಗೆ ಉಳಿದುಕೊಂಡಿರುತ್ತದೆ, ಅದು ಕಪ್ ಗಳ ಲುಕ್ ನ್ನೇ ಹಾಳು ಮಾಡುತ್ತದೆ. ನಿಮ್ಮ ಕಪ್ ಹೊಸತರಂತೆ ಹೊಳೆಯಬೇಕು ಎಂದರೆ ನಿಂಬೆರಸ ಹಾಗೂ ಸೋಡಾ ಪುಡಿಯನ್ನು ಹಾಕಿ ಎರಡು ಗಂಟೆಗಳ ಕಾಲ ಕಾಫಿ ಕಪ್‌ಗಳನ್ನು ನೆನೆಯಲು ಬಿಡಿ. ನಂತರ ಚೆನ್ನಾಗಿ ಉಜ್ಜಿ ವಾಶ್ ಮಾಡಿ ನಿಮ್ಮ ಕಪ್ ಹೊಸದರಂತೆ ಆಗುತ್ತದೆ.

ಆರೋಗ್ಯ ಸಮಸ್ಯೆಗಳಿಗೆ ಉಪಯುಕ್ತವಾಗುವ ಮನೆಮದ್ದುಗಳು.!

● ನಾವು ಹಸಿಮೆಣಸಿಕಾಯಿಯನ್ನು ಹೆಚ್ಚಾಗಿ ತಂದು ಫ್ರಿಡ್ಜ್ ನಲ್ಲಿ ಇಟ್ಟಾಗ ಅದು ತುಂಬಾ ದಿನಗಳ ವರೆಗೆ ಬಾಳಿಕೆ ಬರುವುದಿಲ್ಲ, ಬೇಗ ಕೆಟ್ಟು ಹೋಗುತ್ತದೆ. ನೀವು ಹಸಿಮೆಣಸಿನ ಕಾಯಿ ತೊಟ್ಟನ್ನು ಬೇರ್ಪಡಿಸಿ ನಂತರ ಮೆಣಸಿನಕಾಯಿಯನ್ನು ಒಂದು ಡಬ್ಬದಲ್ಲಿ ಹಾಕಿ ಇಡಬೇಕು. ಈ ರೀತಿ ಮಾಡಿದಾಗ ತಿಂಗಳುಗಟ್ಟಲೆ ಅದು ಬಾಳಿಕೆ ಬರುತ್ತದೆ.

● ಬೆಣ್ಣೆ ಮಾಡಲು ಮೊಸರನ್ನು ಕಡಿಯುವಾಗ ಮೊಸರಿಗೆ ಒಂದು ಚಮಚ ಸಕ್ಕರೆಯನ್ನು ಹಾಕಿ ನಂತರ ಕಡೆದರೆ ಬೆಣ್ಣೆ ಹೆಚ್ಚಾಗಿ ಬರುತ್ತದೆ ಎಂದು ಹೇಳಲಾಗುತ್ತದೆ.
● ಈರುಳ್ಳಿ ಹಚ್ಚುವಾಗ ಕಣ್ಣೀರು ಬರುತ್ತದೆ ಎನ್ನುವುದು ಹಲವರ ಸಮಸ್ಯೆ. ಇದಕ್ಕಾಗಿ ಕನ್ನಡಕ ಹಾಕಿಕೊಂಡು ಈರುಳ್ಳಿ ಕಟ್ ಮಾಡುವವರು ಇದ್ದಾರೆ. ಇದಕ್ಕಿಂತ ಬೆಟರ್ ಟಿಪ್ ಎಂದರೆ ಈರುಳ್ಳಿಗಳನ್ನು 10 ನಿಮಿಷ ನೀರಿನಲ್ಲಿ ನೆನೆಸಿ ನಂತರ ಹೆಚ್ಚಿ, ಈ ರೀತಿ ಮಾಡುವುದರಿಂದ ಹೆಚ್ಚುವಾಗ ಕಣ್ಣೀರು ಬರುವುದಿಲ್ಲ ಕಣ್ಣು ಉರಿಯುವುದಿಲ್ಲ.

10 ರೂಪಾಯಿ ನೋಟಿನಿಂದ ಈ ರೀತಿ ಮಾಡಿ ಸಾಕು, ಮನೆಯಲ್ಲಿ ಹಣದ ಸುರಿಮಳೆಯೇ ಆಗುತ್ತದೆ.!

● ಮನೆಗೆ ಯಾರಾದರೂ ಗೆಸ್ಟ್ ಬಂದಾಗ ಊಟಕ್ಕೆ ಕೊಡಲು ಮೊಸರು ಇಲ್ಲ ಎಂದಾಗ ತಕ್ಷಣವೇ ಮೊಸರು ರೆಡಿಯಾಗಬೇಕು ಎಂದರೆ ಒಂದು ಪಾತ್ರೆಗೆ ಹಾಲನ್ನು ಹಾಕಿ ಅದಕ್ಕೆ ಹೆಪ್ಪನ್ನು ಹಾಕಿ ಪಾತ್ರೆಯ ಕೆಳಗಡೆ ಒಂದು ಬಟ್ಟಲಿನಲ್ಲಿ ನೀರು ತುಂಬಿ ಅದರ ಮೇಲೆ ಪಾತ್ರೆ ಇಟ್ಟರೆ ಬಹಳ ಬೇಗ ಮೊಸರು ತಯಾರಾಗುತ್ತದೆ.
● ಸಿಂಕ್ ಕ್ಲೀನ್ ಮಾಡದೆ ಜಿಗುಟಾಗಿದ್ದರೆ ಸೋಡಾ ಪುಡಿ ಹಾಕಿ ಚೆನ್ನಾಗಿ ಉಜ್ಜಿ ತೊಳೆಯಿರಿ, ಆಗ ಮತ್ತೆ ಮೊದಲಿನಂತೆ ಪಳಪಳ ಎಂದು ಹೊಳೆಯುತ್ತದೆ.

● ಆಲೂಗೆಡ್ಡೆ ಬಹಳ ದಿನಗಳದಾಗಿದ್ದು ಫ್ರೆಶ್ ಇಲ್ಲ ಎಂದರೆ ಅದನ್ನು ಬೇಯಿಸುವಾಗ ಸ್ವಲ್ಪ ನಿಂಬೆರಸ ಸೇರಿಸಿ ಈ ರೀತಿ ಮಾಡುವುದರಿಂದ ಆಲೂಗಡ್ಡೆ ಬೆಳ್ಳಗಾಗುತ್ತದೆ ಹಾಗೂ ಫ್ರೆಶ್ ಆಗಿರುತ್ತದೆ.
● ಹೂ ಕೋಸು ಬೇಯಿಸುವಾಗ ಒಂದು ಚಮಚ ಸಕ್ಕರೆ ಹಾಕಿ ಬೇಯಿಸಿದರೆ ಅದರಲ್ಲಿರುವ ಬಿಳಿ ಬಣ್ಣ ಹಾಗೆ ಉಳಿಯುತ್ತದೆ.
● ಬೆಂಡೆಕಾಯಿ ಸೀಳಿಕ ಬಿಡಬಾರದು ಎಂದರೆ ಅದನ್ನು ಉರಿಯುವಾಗ ಸ್ವಲ್ಪ ಹುಣಸೆರಸ ಸೇರಿಸಿ ಫ್ರೈ ಮಾಡಿ.

ಮನೆ ಅಭಿವೃದ್ಧಿ ಆಗದೇ ಇರಲು ಇದೇ ಮುಖ್ಯವಾದ ಕಾರಣ.!

● ಮೆಣಸಿನ ಕಾಯಿಯಲ್ಲಿ ಹೆಚ್ಚು ಖಾರ ಇದ್ದಾಗ ಅದರ ಬೀಜಗಳನ್ನು ತೆಗೆದು ಬಳಸಿ ಆಗ ಖಾರ ಕಡಿಮೆ ಆಗುತ್ತದೆ.
● ಇನ್ಸ್ಟಂಟ್ ಕಾಫಿ ಪೌಡರ್ ಗಳು ಗಟ್ಟಿಯಾಗಿದ್ದರೆ ಅದಕ್ಕೆ ಸ್ವಲ್ಪ ಬಿಸಿ ನೀರು ಸೇರಿಸಿ ಫ್ರಿಜ್ಜಿನಲ್ಲಿ ಇಡಿ ನಿಮಗೆ ಬೇಕಾದಾಗ ಅದನ್ನು ಬಳಸಬಹುದು.
● ತುಪ್ಪ ಕಾಯಿಸುವಾಗ ವೀಳ್ಯದೆಲೆ ಹಾಗೂ ಲವಂಗ ಹಾಕಿ ಕಾಯಿಸಿದರೆ ತುಪ್ಪ ತುಂಬಾ ದಿನದವರೆಗೆ ಚೆನ್ನಾಗಿರುತ್ತದೆ ಹಾಗೂ ಒಳ್ಳೆಯ ಪರಿಮಳ ಕೂಡ ಬರುತ್ತದೆ.
● ಜೇನುತುಪ್ಪ ಡಬ್ಬದಲ್ಲಿ ಗಟ್ಟಿಯಾಗಿದ್ದರೆ ಅದನ್ನು ಬಿಸಿನೀರಿನ ಪಾತ್ರೆಯಲ್ಲಿ ಇಡಿ ಆಗ ಮತ್ತೆ ಮೊದಲಿನಂತೆ ಆಗುತ್ತದೆ.

Leave a Comment