ಸಾಲ ಎನ್ನುವುದು ಜೀವನದಲ್ಲಿ ಬಹಳ ದೊಡ್ಡ ಹೊರೆ ಎನ್ನಬಹುದು. ಯಾಕೆಂದರೆ ಸಾಲ ಇದ್ದವರಿಗೆ ಒಂದರ ಹಿಂದೆ ಒಂದರಂತೆ ಎಲ್ಲಾ ಸಮಸ್ಯೆಗಳು ಕೂಡ ಹುಡುಕಿಕೊಂಡು ಬರುತ್ತವೆ. ಸಾಲ ಹೆಚ್ಚಾದಾಗ ಆದಾಯ ಕಡಿಮೆ ಆಗುತ್ತದೆ, ಸಾಲ ತೆಗೆದುಕೊಂಡು ಸರಿಯಾದ ಸಮಯಕ್ಕೆ ಕೊಡಲು ಆಗದೇ ಇದ್ದಾಗ ಸ್ನೇಹ ಕಳೆದುಕೊಳ್ಳುತ್ತೇವೆ, ಸುಳ್ಳು ಹೇಳುವ ಸಂದರ್ಭ ಬರುತ್ತದೆ ಈ ಒತ್ತಡ ಹೆಚ್ಚಾದಾಗ ಕಿರಿಕಿರಿ ಉಂಟಾಗಿ ಮಾನಸಿಕ ಶಾಂತಿ ಹೊರಟು ಹೋಗುತ್ತದೆ.
ಇದೇ ವಿಷಯದಲ್ಲಿ ಮನೆಯಲ್ಲಿ ಎಲ್ಲರ ಮೇಲೆ ವಿನಾಕಾರಣ ಕೋಪ ಬರುವುದು, ಮನಸ್ತಾಪ ಮಾಡಿಕೊಳ್ಳುವುದು ಇದೆಲ್ಲ ಆಗುತ್ತದೆ. ಈ ರೀತಿ ಸಮಸ್ಯೆ ಉಂಟಾಗಿದ್ದರೆ ನೀವು ಎಷ್ಟೇ ಪ್ರಯತ್ನ ಪಟ್ಟರು ಸಾಲ ತೀರಿಸಲು ಆಗುತ್ತಿಲ್ಲ ಎಂದರೆ ಅದಕ್ಕೆ ನಿಮ್ಮ ಜನ್ಮ ಕರ್ಮಗಳು ಕೂಡ ಕಾರಣ ಆಗಿರಬಹುದು ಈಗ ನಾವು ಹೇಳುವ ಈ ಸುಲಭ ವಿಧಾನಗಳನ್ನು ಪಾಲಿಸಿ, ಆದಷ್ಟು ಬೇಗ ನಿಮ್ಮ ಋಣದಿಂದ ಮುಕ್ತಿ ಹೊಂದಿ.
ಗೃಹಿಣಿಯರಿಗೆ ಉತ್ತಮವಾದ ಅಡುಗೆ ಟಿಪ್ಸ್ ಗಳು ಇವು.!
● ಸೂರ್ಯದೇವನನ್ನು ಆರಾಧಿಸಬೇಕು. ಪ್ರತಿದಿನ ಮುಂಜಾನೆ ಬೇಗ ಎದ್ದು ಸೂರ್ಯದೇವನಿಗೆ ಭಕ್ತಿಯಿಂದ ನಮಸ್ಕಾರ ಮಾಡಿ, ನಿತ್ಯ ಕರ್ಮಗಳನ್ನು ಮುಗಿಸಿ ಮಡಿ ಉಟ್ಟುಕೊಂಡು ಸೂರ್ಯ ಉದಯಿಸುವ ವೇಳೆಗೆ ಸೂರ್ಯನಿಗೆ ತರ್ಪಣ ಅರ್ಪಿಸಿ. 11 ಬಾರಿ ಓಂ ಆದಿತ್ಯಾಯ ನಮಃ ಎಂದು ಹೇಳುವುದರಿಂದ ನಿಮ್ಮ ಸಾಲದ ಸುಳಿಯಿಂದ ಆಚೆ ಬರಬಹುದು. ಸಾಲದ ಸಮಸ್ಯೆ ಮಾತ್ರವಲ್ಲದೆ ಆರೋಗ್ಯ ಸಮಸ್ಯೆ ಅಥವಾ ಜೀವನದ ಇನ್ಯಾವುದೇ ಸಮಸ್ಯೆ ಇದ್ದರೂ ಕೂಡ ಎಲ್ಲದಕ್ಕೂ ಸೂರ್ಯದೇವನ ಆರಾಧನೆ ಪರಿಹಾರವಾಗಬಲ್ಲದು.
● ನಿಮ್ಮ ಊರಿನಲ್ಲಿ ವಿಷ್ಣುವಿನ ಅವತಾರದ ಯಾವುದೇ ದೇವಾಲಯ ಇದ್ದರೂ ಕೂಡ ಅದರ ಬಳಿ ಬಾಳೆಹಣ್ಣಿನ ಗಿಡ ನೆಡಿ ಒಂದು ವೇಳೆ ವಿಷ್ಣು ದೇವರ ದೇವಸ್ಥಾನ ಇಲ್ಲದಿದ್ದರೂ ಯಾವ ದೇವಸ್ಥಾನ ಇದೆಯೋ ಅದರ ಬಳಿ ಬಾಳೆಹಣ್ಣುಗಳ ಗಿಡವನ್ನು ನೆಡಿ. ನಿಮ್ಮ ಶಕ್ತಿಯನುಸಾರ ಸಂಖ್ಯೆಯಲ್ಲಿ ನೆಟ್ಟು ಚೆನ್ನಾಗಿ ಬೆಳೆಸಿ, ಅವು ಬೆಳೆದು ಹಣ್ಣು ಬಿಡಲು ಆರಂಭಿಸುತ್ತಿದ್ದಂತೆ ನಿಮ್ಮ ಜೀವನದ ಸಮಸ್ಯೆಗಳು ಕೂಡ ಕ್ರಮೇಣ ಕಡಿಮೆಯಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಆ ಫಲಗಳನ್ನು ನೀವು ತಿನ್ನಬಾರದು ಅದನ್ನು ಬಡವರಿಗೆ ಅಥವಾ ವಯಸ್ಸಾದವರಿಗೆ ಅಥವಾ ಚಿಕ್ಕ ಮಕ್ಕಳಿಗೆ ಕೊಡಬೇಕು.
ಆರೋಗ್ಯ ಸಮಸ್ಯೆಗಳಿಗೆ ಉಪಯುಕ್ತವಾಗುವ ಮನೆಮದ್ದುಗಳು.!
● ಸೂಕ್ತವಾದ ನವರತ್ನ ಧಾರಣೆ ಮಾಡಿ. ನಿಮ್ಮ ಜನ್ಮ ಕುಂಡಲಿಯನ್ನು ಒಳ್ಳೆ ಜ್ಯೋತಿಷ್ಯರ ಬಳಿ ತೋರಿಸಿ ಅವರು ಸೂಚಿಸುವ ರತ್ನವನ್ನು ಅವರು ಹೇಳಿದ ದಿನದಂದು ನಿಮ್ಮ ಇಷ್ಟ ದೈವದ ದೇವಸ್ಥಾನದಲ್ಲಿ ಪೂಜೆ ಮಾಡಿಸಿ, ಅನುಗ್ರಹಕ್ಕಾಗಿ ಪ್ರಾರ್ಥಿಸಿ, ಧಾರಣೆ ಮಾಡಿ. ಈ ರೀತಿ ಸೂಕ್ತವಾದ ನವರತ್ನಗಳನ್ನು ಧಾರಣೆ ಮಾಡುವುದರಿಂದ ಸಮಸ್ಯೆಗಳು ಕಡಿಮೆಯಾಗುತ್ತವೆ.
● ಶ್ರೀ ಸೂಕ್ತದ ಪಠಣೆ ಮಾಡಿ. ಶುಕ್ಲಪಕ್ಷದ ಗುರುವಾರದಂದು ಮಧ್ಯಾಹ್ನ 12 ಗಂಟೆಗೆ ಶ್ರೀಸೂಕ್ತದ ಪಠಣೆ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳು ಕಡಿಮೆ ಆಗುತ್ತದೆ ಎನ್ನುವುದನ್ನು ಹಿರಿಯರು ತಿಳಿಸುತ್ತಾರೆ. ಆದರೆ ಈ ಸಮಯದಲ್ಲಿ ತಪ್ಪದೆ ನೀವು ಹಣಗೆ ಚಂದನ ಹಾಗೂ ಕೇಸರಿ ತಿಲಕವನ್ನು ಇಟ್ಟುಕೊಂಡು ಭಕ್ತಿಯಿಂದ ಪಠಣೆ ಮಾಡಬೇಕು.
10 ರೂಪಾಯಿ ನೋಟಿನಿಂದ ಈ ರೀತಿ ಮಾಡಿ ಸಾಕು, ಮನೆಯಲ್ಲಿ ಹಣದ ಸುರಿಮಳೆಯೇ ಆಗುತ್ತದೆ.!
● ನಿಮ್ಮ ಮನೆ ಅಕ್ಕ ಪಕ್ಕ ನಾಯಿಗಳಿದ್ದರೆ ಅದರಲ್ಲೂ ಕಪ್ಪು ಬಣ್ಣದ ನಾಯಿ ಇದ್ದರೆ ಅದಕ್ಕೆ ಆಹಾರವನ್ನು ಹಾಕಿ. ನಿಮ್ಮ ಸಾಲದ ಹೊರೆ ಕ್ರಮೇಣ ಇಳಿಯುತ್ತದೆ. ಆದರೆ ಯಾವುದೇ ಕಾರಣಕ್ಕೂ ಹಳಸಿದ ಕೆಟ್ಟು ಹೋದ ನಿಮಗೆ ಬೇಡವಾದ ಆಹಾರವನ್ನು ಹಾಕಬೇಡಿ.
● ಹನುಮಾನ್ ಚಾಲೀಸಾ ಪಠಿಸಿ, 40 ದಿನಗಳವರೆಗೆ ಕಠಿಣವಾದ ವ್ರತ ಆಚರಣೆ ಮಾಡಿ. ಪ್ರತಿದಿನವೂ ಮನೆಯನ್ನು ಶುದ್ಧವಾಗಿದ್ದುಕೊಂಡು ಈರುಳ್ಳಿ ಬೆಳ್ಳುಳ್ಳಿ ಮಾಂಸಾಹಾರಗಳ ಸೇವನೆಯನ್ನು ತ್ಯಜಿಸಿ ಆಂಜನೇಯನ ಆರಾಧನೆ ಮಾಡಿ. ಹಾಗೂ 40 ದಿನವೂ ತಪ್ಪದೆ 108 ಬಾರಿ ಹನುಮಾನ್ ಚಾಲೀಸಾ ಪಠಿಸಿ, ನಿಮಗೆ ಖಂಡಿತಾ ಪರಿಹಾರ ಸಿಗುತ್ತದೆ.
● ನಿಮ್ಮ ಊರಿನಲ್ಲಿ ರಸ್ತೆ ಬದಿಗಳಲ್ಲಿ ನಿಮ್ಮ ಶಕ್ತಿಯನುಸಾರ ಆದಷ್ಟು ಮರಗಳನ್ನು ನೆಡಿ. ಆಲದಮರ, ಅಶ್ವತ್ಥರಳೀಮರ, ಬೇವಿನ ಮರ ಮುಂತಾದ ಮರಗಳನ್ನು ನೆಟ್ಟರೆ ಇನ್ನು ಶ್ರೇಷ್ಠ. ಇವುಗಳಿಂದ ಕೂಡ ಸಮಸ್ಯೆಗೆ ಪರಿಹಾರ ಸಿಗುತ್ತದೆ..