ನಾವೆಲ್ಲರೂ ಕೂಡ ದೀಪಾವಳಿ ಹಬ್ಬವನ್ನು ಬಹಳ ಸಡಗರ ಸಂಭ್ರಮ ದಿಂದ ಆಚರಿಸುತ್ತೇವೆ ಆದರೆ ಎಲ್ಲರೂ ತಿಳಿದಿರುವುದು ದೀಪಾವಳಿ ಹಬ್ಬ ಎಂದರೆ ಮನೆಯಲ್ಲಿ ಸಿಹಿ ತಿನಿಸುಗಳನ್ನು ಮಾಡಿ ದೀಪ ಹಚ್ಚುವುದರ ಮೂಲಕ ದೀಪಾವಳಿ ಹಬ್ಬ ಮಾಡುವುದು ಎಂದು ತಿಳಿದುಕೊಂಡಿದ್ದಾರೆ. ಆದರೆ ಅದರ ಅರ್ಥ ಬೇರೆಯೇ ಇದೆ.
ಹೌದು ಈ ಒಂದು ದೀಪಾವಳಿಯ ಸಮಯದಲ್ಲಿ ನಾವು ಲಕ್ಷ್ಮಿ ದೇವಿಯ ಕಟಾಕ್ಷವನ್ನು ಪಡೆದುಕೊಳ್ಳಬೇಕು ಎಂದರೆ ದೀಪಾವಳಿಯ ಐದು ದಿನದಲ್ಲಿ ಒಂದು ದಿನ ಈ ಮೂರು ಕೆಲಸ ಗಳನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ ಹೌದು ಈ ದಿನ ನಾವು ಲಕ್ಷ್ಮಿ ದೇವಿಯನ್ನು ಪೂಜೆ ಮಾಡುವುದರ ಮೂಲಕ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬಹುದು.
ಹಾಗಾದರೆ ಈ ದೀಪಾವಳಿಯ ಸಮಯವೂ ಯಾವ ಒಂದು ವಿಶೇಷತೆ ಗಳನ್ನು ಹೊಂದಿದೆ ಹಾಗೂ ಇದರ ಮಹತ್ವ ಏನು ಹಾಗೂ ಆ ಐದು ದಿನದಲ್ಲಿ ಮಾಡಬೇಕಾದಂತಹ ಕೆಲಸಗಳು ಏನು ಎಂದು ಈಗ ತಿಳಿಯೋಣ. ಅಯೋಧ್ಯೆಗೆ ರಾಮ ಮರಳಿ ಬಂದಂತಹ ಸಮಯ ಇದಾಗಿದ್ದು ಈ ಸಮಯದಲ್ಲಿ ರಾವಣನನ್ನು ಸಂಹಾರ ಮಾಡಿರಲಾಗುತ್ತದೆ.
ಆದ್ದರಿಂದ ಈ ಸಮಯವು ಬಹಳ ಉತ್ತಮವಾಗಿದ್ದು ಇದನ್ನು ಪ್ರತಿಯೊಬ್ಬರು ಕೂಡ ಬಹಳ ವಿಜೃಂಭಣೆಯಿಂದ ಮಾಡುವುದು ಬಹಳ ಒಳ್ಳೆಯದು. ಒಟ್ಟಾರೆಯಾಗಿ ಹೇಳಬೇಕು ಎಂದರೆ ಕೆಟ್ಟದರ ಮೇಲೆ ವಿಜಯವನ್ನು ಸಾಧಿಸಿರುವುದು ಎಂದರ್ಥ. ಎಲ್ಲ ದುಷ್ಟ ಶಕ್ತಿಗಳ ಸಂಹಾರ ಮಾಡಿ ಅವೆಲ್ಲವನ್ನು ಕೂಡ ಜಯಿಸಿ ಬಂದಿರುವಂತಹ ಸಮಯ ಇದಾಗಿದ್ದು ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ದೀಪಾವಳಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಿರುತ್ತಾರೆ.
ಇಲ್ಲಿ ನಾವು ದೀಪಾವಳಿಯನ್ನು ಐದು ದಿನ ಆಚರಿಸುತ್ತೇವೆ ಹಾಗಾದರೆ ಆ ಐದು ದಿನಗಳು ಯಾವುದು ಎಂದು ನೋಡುವುದಾದರೆ.
• ಧನತ್ರಯೋದಶಿ ದಿನ ತ್ರಯೋದಶಿ ಎಂದರೆ ಅಮಾವಾಸ್ಯೆ ಹಿಂದಿನ ದಿನ ಬರುವಂತದ್ದು.
• 13ನೇ ದಿನ ನಂತರ ಬರುವಂಥದ್ದು.
• 14ನೇ ದಿನ ನರಕ ಚತುರ್ದಶಿ
• ಬಲಿಪಾಡ್ಯಮಿ
• ಭಗಿನಿ ಭೋಜನ ಹಾಗಾಗಿ ಈ ಐದು ದಿನಗಳು ಕೂಡ ಬಹಳ ವಿಶೇಷವಾಗಿದ್ದು.
ಈ ಒಂದು ಧನ ತ್ರಯೋದಶಿ ದಿನ ವಿದ್ಯಾರ್ಥಿಗಳಾಗಿರಬಹುದು, ಮನೆಯ ಮಹಿಳೆಯರು, ವ್ಯಾಪಾರ ವ್ಯವಹಾರ ಮಾಡುವಂತಹ ಜನರು, ತಮಗೆ ಅಗತ್ಯವಿರುವಂತಹ ವಸ್ತುಗಳನ್ನು ಖರೀದಿ ಮಾಡಿ ಅಂದಿನ ದಿನ ಮಹಾಲಕ್ಷ್ಮಿಯ ಪೂಜೆಯನ್ನು ಮಾಡುತ್ತಾ ದೇವರನ್ನು ನೆನಯಬೇಕು ಈ ದಿನ ಈ ವಿಧವಾಗಿ ಲಕ್ಷ್ಮಿ ಪೂಜೆಯನ್ನು ಮಾಡುವುದ ರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಸಹ ಪರಿಹಾರ ಸಿಗುತ್ತದೆ.
ಈ ದಿನದಲ್ಲಿ ನಾವು ಖರೀದಿ ಮಾಡುವಂತಹ ಯಾವುದೇ ವಸ್ತುವಾಗಿರ ಬಹುದು, ಪ್ರತಿಯೊಂದು ಕೂಡ ಮುಂದಿನ ದಿನದಲ್ಲಿ ದುಪ್ಪಟ್ಟಾಗುತ್ತದೆ ಎನ್ನುವ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಕೂಡ ಇದೆ. ಆದ್ದರಿಂದ ಈ ಒಂದು ದಿನ ಬಹಳ ಮುಖ್ಯವಾಗಿ ನಮಗೆ ಅಗತ್ಯವಾಗಿರುವಂತಹ ವಸ್ತುಗಳನ್ನು ಖರೀದಿ ಮಾಡುವುದು ತುಂಬಾ ಒಳ್ಳೆಯದು.
* ಇನ್ನು ಎರಡನೆಯದಾಗಿ ನರಕ ಚತುರ್ದಶಿ ದಿನ. ಪಿತೃಪೂಜೆಗಳನ್ನು ಮಾಡಿಕೊಳ್ಳಬೇಕು ಅಂದರೆ ದಕ್ಷಿಣ ದಿಕ್ಕಿಗೆ ಯಮದೀಪವನ್ನು ಹಚ್ಚ ಬೇಕಾಗುತ್ತದೆ. ಹೌದು ಭೂಲೋಕದಲ್ಲಿರುವಂತಹ ನಮ್ಮ ಹಿರಿಯರು ನಮ್ಮ ಪ್ರೀತಿ ಪಾತ್ರರನ್ನು ಸಂತೃಪ್ತಿಗೊಳಿಸಿ ಅವರನ್ನು ಮತ್ತೆ ಭೂಲೋಕಕ್ಕೆ ಕಳಿಸುವಂತಹ ವಿಧಾನ ಇದಾಗಿದ್ದು ಪ್ರತಿಯೊಬ್ಬರೂ ಕೂಡ ಪಿತೃಪೂಜೆಗಳನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.