ಸಂತಾನ ಭಾಗ್ಯ ಎನ್ನುವುದು ಎಷ್ಟು ಶ್ರೇಷ್ಠ ಎನ್ನುವುದನ್ನು ಮಕ್ಕಳನ್ನು ಪಡೆದವರಿಗಿಂತ ಮಕ್ಕಳನ್ನು ಹೆರದವರು ಅರಿತಿರುತ್ತಾರೆ ಎಂದು ಹೇಳಬಹುದು. ಯಾಕೆಂದರೆ, ಮಕ್ಕಳಿರದ ದಂಪತಿಗಳನ್ನು ಈ ಪ್ರಪಂಚ ನೋಡುವುದೇ ಬೇರೆ ರೀತಿ ಇರುತ್ತದೆ. ಆ ಮಾನಸಿಕ ವೇದನೆ, ಚುಚ್ಚುಮದ್ದುಗಳು ಎಷ್ಟೇ ಆತ್ಮವಿಶ್ವಾಸದಿಂದ ಇರುವವರನ್ನು ಕೂಡ ಕುಗ್ಗಿಸಿ ಬಿಡುತ್ತದೆ.
ಆದರೆ ಮಕ್ಕಳಾಗದವರ ಬದುಕು ಅಕ್ಷರಶಃ ನರಕವೇ. ಯಾಕೆಂದರೆ ಅವರ ಬದುಕಿನಲ್ಲಿ ಆಶಾಭಾವನೆಗೆ ಇರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಕೂಡ ಮಕ್ಕಳು ಎಂದರೆ ಹಂಬಲಿಸುತ್ತಾರೆ. ಮದುವೆ ಆದ ತಕ್ಷಣ ಮಕ್ಕಳಾದರೆ ಸಾಕು ಎಂದು ಕೇಳಿಕೊಳ್ಳುತ್ತಾರೆ. ನಾನಾ ಸಮಸ್ಯೆಗಳಿಂದ ಅನೇಕರಿಗೆ ಹಲವು ವರ್ಷಗಳ ವರೆಗೆ ಮಕ್ಕಳಾಗುವುದೇ ಇಲ್ಲ. ಈ ರೀತಿ ಸಮಸ್ಯೆ ಇದ್ದವರು ದೇವರ ಮೊರೆ ಹೋಗುತ್ತಾರೆ.
ನಕ್ಷತ್ರದ ಮೂಲಕವೇ ನಿಮ್ಮ ಮದುವೆ ಜೀವನದ ಗುಟ್ಟನ್ನು ತಿಳಿದುಕೊಳ್ಳಬಹುದು.!
ಈಗ ವೈದ್ಯಲೋಕ ಬಹಳಷ್ಟು ಮುಂದುವರೆದಿದೆ. ವೈದ್ಯರಿಂದ ಪರಿಹರಿಸಲಾಗದ ಸಮಸ್ಯೆಗಳೇ ಇಲ್ಲ. ಆದರೆ ಮಕ್ಕಳ ವಿಷಯದಲ್ಲಿ ಮಾತ್ರ ಭಗವಂತನ ಆಶೀರ್ವಾದ ಇಲ್ಲದಿದ್ದರೆ ಆ ಋಣ ಇಲ್ಲದಿದ್ದರೆ ಏನು ಕೂಡ ಸಾಧ್ಯವಾಗುವುದಿಲ್ಲ. ಹೀಗಾಗಿ ನಮ್ಮ ಹಿರಿಯರು ಮೊದಲು ಅದಕ್ಕೆ ಸಂಬಂಧಪಟ್ಟ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಹೇಳುತ್ತಾರೆ.
ಎಷ್ಟೋ ಜನರು ತಮಗಿರುವ ನಾಗದೋಷ, ಮಂಗಳ ದೋಷ ಮುಂತಾದವುಗಳನ್ನು ಪರಿಹರಿಸಿಕೊಂಡ ಮೇಲೆ ತಂದೆ ತಾಯಿ ಆಗಿದ್ದಾರೆ ಕೆಲವರಿಗೆ ತಾವು ಕೈಬಿಟ್ಟಿದ್ದ ಮನೆ ದೇವರ ಪೂಜೆಯನ್ನು ನೆರವೇರಿಸಿದ ಮೇಲೆ ಅವರ ದೋಷ ಪರಿಹಾರವಾಗಿದೆ. ಇನ್ನು ಕೆಲವರ ವಿಚಾರದಲ್ಲಿ ಅವರ ಇಷ್ಟದ ದೇವರಿಗೆ ಹರಕೆ ಕಟ್ಟಿಕೊಂಡ ಮೇಲೆ ಮತ್ತು ಕೆಲವರಿಗೆ ಸಂತಾನ ಭಾಗ್ಯ ನೀಡುವುದಕ್ಕೆ ಹೆಸರುವಾಸಿ ಆಗಿರುವ ದೇವಾಲಯಕ್ಕೆ ಭೇಟಿ ಕೊಟ್ಟ ಮೇಲೆ ಈ ಸಮಸ್ಯೆ ಬಗ್ಗೆ ಹರಿದಿರುತ್ತದೆ.
ಆ ಉದಾಹರಣೆಗೆ ನಮ್ಮ ನಾಡಿನಲ್ಲಿರುವ ಮತ್ತೊಂದು ದೇವಾಲಯ ಸೇರುತ್ತದೆ. ಈ ದೇವಸ್ಥಾನ ಇರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ದೊಡ್ಡಬಳ್ಳಾಪುರ ಸಮೀಪದ ದೊಡ್ಡ ಬೈಲಹೊಂಗಲದ ಅಜ್ಜನಕಟ್ಟೆ (ಶಾಂತಿನಗರ) ಎನ್ನುವ ಗ್ರಾಮದಲ್ಲಿ. ಈ ಗ್ರಾಮದ ದೇವಾಲಯದಲ್ಲಿ ಸಾಕ್ಷಾತ್ ರೇಣುಕಾ ದೇವಿ ಅವತಾರದ ತಾಯಿ ಎಲ್ಲಮ್ಮ ನೆಲೆಸಿದ್ದಾಳೆ ಎಂದೇ ಇಲ್ಲಿಗೆ ಬರುವ ಭಕ್ತಾದಿಗಳ ನಂಬಿಕೆ.
ಅದು ಅಲ್ಲದೆ ಈ ದೇವಾಲಯದಲ್ಲಿ ಇರುವ ಒಬ್ಬರು ಜೋಗತಿ ಸಾಕ್ಷಾತ್ ರೇಣುಕ ದೇವಿ ಎಲ್ಲಮ್ಮನಂತೆ ಅವರನ್ನು ನಂಬಿ ಬಂದ ಭಕ್ತಾದಿಗಳ ಕ’ಷ್ಟಗಳನ್ನು ಕೇಳಿ ಅದನ್ನು ಪರಿಹರಿಸುತ್ತಾರೆ. ಈ ತಾಯಿಯನ್ನು ನಂಬಿ ಬರುವವರಿಗೆ ಕಟ್ಟಿಕೊಂಡ ಹರಕೆ ನೆರವೇರಿದೆ ಎನ್ನುವುದಕ್ಕೆ ಸಾವಿರಾರು ಉದಾಹರಣೆ ಸಿಗುತ್ತದೆ.
ಪ್ರತಿದಿನವೂ ಈ ದೇವಾಲಯದಲ್ಲಿ ಭಕ್ತಸಾಗರ ತುಂಬಿರುತ್ತದೆ. ನಾಡಿನ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತಾದಿಗಳು ವಿಶೇಷ ದಿನಗಳಂದು ಇಲ್ಲಿಗೆ ಭೇಟಿ ಕೊಡುತ್ತಾರೆ. ಮಕ್ಕಳಾಗದ ದಂಪತಿಗಳಿಗೆ ಈ ದೇವಸ್ಥಾನದಲ್ಲಿ ಬಂದು ಇಲ್ಲಿರುವ ಪದ್ದತಿ ಪ್ರಕಾರ ಹರಕೆ ಮಾಡಿಕೊಂಡು ಹೋದರೆ ಖಂಡಿತ ಮಕ್ಕಳಾಗುತ್ತದೆ ಹಾಗೆಯೇ ಆರೋಗ್ಯ ಸಮಸ್ಯೆ ಇರಲಿ ವ್ಯಾಪಾರದ ಅಭಿವೃದ್ಧಿಯಲ್ಲಿ ಅಥವಾ ಮಾನಸಿಕ ಶಾಂತಿ ಅಥವಾ ಜೀವನದ ಇನ್ಯಾವುದೇ ಸಮಸ್ಯೆ ಇದ್ದರೂ ಕೂಡ.
ಈ ದೇವಸ್ಥಾನಕ್ಕೆ ಬರುವುದರಿಂದ ಮತ್ತು ಇಲ್ಲಿ ಎಲ್ಲಮ್ಮ ತಾಯಿಯನ್ನು ಪೂಜಿಸುವುದರಿಂದ ಆ ಎಲ್ಲಾ ಸಮಸ್ಯೆಗಳು ಕೂಡ ಶೀಘ್ರವಾಗಿ ಪರಿಹಾರ ಆಗುತ್ತದೆ. ನೀವು ಕೂಡ ಜೀವನದಲ್ಲಿ ಒಮ್ಮೆಯಾದರೂ ಈ ದೇವಾಲಯಕ್ಕೆ ಭೇಟಿ ಕೊಟ್ಟು ತಾಯಿಯ ದರ್ಶನವನ್ನು ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ದೇವಾಲಯದ ದೂರವಾಣಿ ಸಂಖ್ಯೆಯನ್ನು ಕೂಡ ನೀಡುತ್ತಿದ್ದೇವೆ. ದೂರವಾಣಿ ಸಂಖ್ಯೆ – 9880825797