ಬೇಸಿಗೆ ಕಾಲದಲ್ಲಿ ಐಸ್ ಕ್ಯಾಂಡಿಗಳಿಗೆ ಬೇಡಿಕೆ ಹೆಚ್ಚು. ಏಕೆಂದರೆ ಬಿಸಿಲಿನ ತಾಪಮಾನ ಹೆಚ್ಚಾಗಿ ಇರುವುದರಿಂದ ಆ ಸಂದರ್ಭದಲ್ಲಿ ತಣ್ಣಗಿರುವಂತಹ ಆಹಾರ ಪದಾರ್ಥಗಳನ್ನು ತಿನ್ನಬೇಕು ಎಂದು ಅನ್ನಿಸುತ್ತಿರುತ್ತದೆ. ಹಾಗಾಗಿ ಹೆಚ್ಚಿನ ಜನ ಹೊರಗಡೆ ಸಿಗುವಂತಹ ಐಸ್ ಕ್ಯಾಂಡಿ ಗಳನ್ನು ಅಥವಾ ತಂಪಾದ ಜ್ಯೂಸ್ ಗಳನ್ನು ತಂದು ಕುಡಿಯುತ್ತಿರುತ್ತಾರೆ.
ಆದರೆ ಅವುಗಳನ್ನು ಸೇವನೆ ಮಾಡುವುದರ ಬದಲು ಮನೆಯಲ್ಲಿಯೇ ಸುಲಭವಾಗಿ ಐಸ್ ಕ್ಯಾಂಡಿ ಮಾಡಿಕೊಂಡು ಸೇವನೆ ಮಾಡುವುದು ತುಂಬಾ ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದಲೂ ಕೂಡ ನಾವು ನಮ್ಮ ಮನೆಯಲ್ಲಿಯೇ ಐಸ್ ಕ್ಯಾಂಡಿ ಗಳನ್ನು ಮಾಡಿ ಸೇವನೆ ಮಾಡುವುದು ಬಹಳ ಒಳ್ಳೆಯದು ಹೊರಗಡೆ ಮಾರುವಂತಹ ಐಸ್ ಕ್ಯಾಂಡಿಗಳಲ್ಲಿ ಕೆಲವೊಂದಷ್ಟು ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸಿರುತ್ತಾರೆ.
ಆದ್ದರಿಂದ ಅವುಗಳನ್ನು ಸೇವನೆ ಮಾಡುವುದರ ಬದಲು ಆರೋಗ್ಯಕರ ವಾಗಿ ಶುಚಿಯಾಗಿ, ರುಚಿಯಾಗಿ ನಾವೇ ನಮ್ಮ ಮನೆಯಲ್ಲಿ ತಯಾರಿಸಿ ಕೊಂಡು ಕುಟುಂಬದವರೆಲ್ಲರೂ ಕೂಡ ಸೇವನೆ ಮಾಡಬಹುದಾಗಿದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೇವಲ ಮೂರೇ ಮೂರು ಪದಾರ್ಥ ಇದ್ದರೆ ಸಾಕು ಸುಲಭವಾಗಿ ಐಸ್ ಕ್ಯಾಂಡಿ ಹೇಗೆ ಮಾಡುವುದು ಹಾಗೂ ಆ ಮೂರು ವಸ್ತುಗಳು ಯಾವುದು ಅದನ್ನು ಹೇಗೆ ತಯಾರಿಸುವುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ತಕ್ಷಣ ಹಣದ ಅವಶ್ಯಕತೆ ಇದ್ರೆ 21 ಅಕ್ಕಿಕಾಳಿನಿಂದ ಈ ರೀತಿ ಮಾಡಿ.!
ಮೊದಲನೆಯದಾಗಿ ಐಸ್ ಕ್ಯಾಂಡಿ ಮಾಡುವುದಕ್ಕೆ ಬೇಕಾಗಿರುವಂತಹ ಮೂರು ಪದಾರ್ಥಗಳು ಯಾವುದು ಎಂದು ನೋಡುವುದಾದರೆ.
* ಒಂದು ನಿಂಬೆಹಣ್ಣು
* ಸಕ್ಕರೆ
* ಕಾರ್ನ್ ಫ್ಲೋರ್
ಮೊದಲು ನಿಂಬೆ ಹಣ್ಣಿನ ಮೇಲ್ಭಾಗದ ಸಿಪ್ಪೆಯನ್ನು ತೆಗೆದುಕೊಳ್ಳಬೇಕು ಆನಂತರ ನಿಂಬೆ ಹಣ್ಣಿನ ರಸವನ್ನು ಬೇರ್ಪಡಿಸಿ ಇಟ್ಟುಕೊಳ್ಳಬೇಕು. ಆನಂತರ ಸ್ಟೌ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದರಲ್ಲಿ ಅರ್ಧ ಲೀಟರ್ ನಷ್ಟು ನೀರನ್ನು ಹಾಕಬೇಕು ಆ ನೀರಿಗೆ ನಿಂಬೆಹಣ್ಣಿನ ಎರಡರಿಂದ ಮೂರು ಸಣ್ಣ ಸಿಪ್ಪೆಯನ್ನು ಹಾಕಿ ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ಈ ರೀತಿ ಮಾಡುವುದರಿಂದ ಅದರಲ್ಲಿ ಇರುವಂತಹ ಅಂಶ ನೀರಿನಲ್ಲಿ ಇಳಿಯುತ್ತದೆ ಆನಂತರ ಅದಕ್ಕೆ ಬೇಕಾಗುವಷ್ಟು ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಸಕ್ಕರೆ ಕರಗಿದ ಮೇಲೆ ಸ್ವಲ್ಪ ನೀರಿಗೆ ಒಂದು ಚಮಚದಷ್ಟು ಕಾನ್ಫ್ಲೋರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಆ ನೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು ಕೊನೆಯಲ್ಲಿ ನಿಂಬೆಹಣ್ಣಿನ ರಸವನ್ನು ಹಾಕಿ ಐದರಿಂದ 10 ನಿಮಿಷ ಚೆನ್ನಾಗಿ ಮಿಶ್ರಣ ಮಾಡಬೇಕು.
ಈ ಸುದ್ದಿ ಓದಿ:- ಮುರಿದು ಹೋಗಿರುವ ಮೂಳೆಗಳನ್ನು ವೇಗವಾಗಿ ಜೋಡಿಸುತ್ತೆ ಇದರ ಎಲೆ. ಕೈಕಾಲು ಸೊಂಟ ಮಂಡಿ ಜಾಯಿಂಟ್ ಪೈನ್ ಗೂ ಇದು ರಾಮಬಾಣ.!
ಈ ರೀತಿ ಮಿಶ್ರಣ ಮಾಡಿದಂತಹ ನೀರನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು ಆನಂತರ ನಿಮ್ಮ ಮನೆಯಲ್ಲಿ ಐಸ್ ಕ್ರೀಮ್ ತಯಾರಿಸಲು ಇರುವಂತಹ ಐಸ್ ಕ್ಯಾಂಡಿ ಮೋಲ್ಡ್ ಒಳಗಡೆ ಆ ನೀರನ್ನು ಹಾಕಿ ಅದರ ಮೇಲೆ ಅಲ್ಯೂಮಿನಿಯಂ ಪೇಪರ್ ಅನ್ನು ಹಾಕಿ ಚೆನ್ನಾಗಿ ಕವರ್ ಮಾಡಿಕೊಳ್ಳಬೇಕು.
ಆನಂತರ ಅದರ ಮಧ್ಯಭಾಗದಲ್ಲಿ ಚಾಕುವಿನಿಂದ ಹೋಲ್ ಮಾಡಿ ಅದಕ್ಕೆ ಐಸ್ ಕ್ಯಾಂಡಿ ಸ್ಟಿಕ್ ಅನ್ನು ಹಾಕಿ ಫ್ರಿಡ್ಜ್ ನಲ್ಲಿ ಏಳರಿಂದ ಎಂಟು ಗಂಟೆಗಳ ತನಕ ಇಡಬೇಕು. ನಿಮ್ಮ ಮನೆಯಲ್ಲಿ ಐಸ್ ಕ್ಯಾಂಡಿಕ್ ಮೋಲ್ಡ್ ಇಲ್ಲದೆ ಇದ್ದರೆ ಒಂದು ಸ್ಟೀಲ್ ಲೋಟಕ್ಕೆ ಹಾಕಿ ಅದರ ಮೇಲೆ ಒಂದು ಪ್ಲಾಸ್ಟಿಕ್ ಕವರ್ ಹಾಕಿ ಅದರ ಸುತ್ತ ಬಿಗಿಯಾಗಿ ರಬ್ಬರ್ ಹಾಕಬೇಕು ಅದರ ಮಧ್ಯಕ್ಕೆ ಹೋಲ್ ಮಾಡಿ ಅಲ್ಲಿಗೆ ಸ್ಪೂನ್ ಹಾಕಿ.
ಅದನ್ನು ಸಹ ಏಳರಿಂದ ಎಂಟು ಗಂಟೆಗಳ ತನಕ ಫ್ರಿಡ್ಜ್ ನಲ್ಲಿ ಇಡಬೇಕು ಆನಂತರ ಅದನ್ನು ತೆಗೆಯುವ ಸಂದರ್ಭದಲ್ಲಿ ಒಂದು ಪಾತ್ರೆಯಲ್ಲಿ ತಣ್ಣೀರನ್ನು ಹಾಕಿ ಅದರೊಳಗೆ ಅದನ್ನು ಇಟ್ಟು ಆನಂತರ ಸುಲಭವಾಗಿ ನೀವು ಐಸ್ ಕ್ಯಾಂಡಿಯನ್ನು ತೆಗೆಯಬಹುದು ಈ ರೀತಿ ಸುಲಭವಾಗಿ ಅನುಸರಿಸುವುದರಿಂದ ನೀವೇ ನಿಮ್ಮ ಮನೆಯಲ್ಲಿ ಐಸ್ ಕ್ಯಾಂಡಿಗಳನ್ನು ತಯಾರಿಸಬಹುದಾಗಿದೆ.