ನಮ್ಮಲ್ಲಿ ಹೆಚ್ಚಿನ ಜನ ಊಟ ತಿಂಡಿ ಆದ ತಕ್ಷಣ ಮಲಗಿಬಿಡುತ್ತಾರೆ ಅಥವಾ ಕೂತಲ್ಲಿಯೇ ಕೆಲಸಗಳನ್ನು ಮಾಡುತ್ತಿರುತ್ತಾರೆ ಆದರೆ ಈ ರೀತಿ ಮಾಡುವುದರಿಂದ ನಮಗೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಇದರ ಜೊತೆ ಬಿಪಿ ಶುಗರ್, ನಮ್ಮ ದೇಹದ ತೂಕ ಹೆಚ್ಚಾಗುವುದು ಅಂದರೆ ಬೊಜ್ಜು ಹೀಗೆ ಇನ್ನೂ ಹಲವಾರು ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಆದ್ದರಿಂದ ಊಟ ಆದ ತಕ್ಷಣ ಈಗ ನಾವು ಹೇಳುವಂತಹ ಈ ಒಂದು ಕೆಲಸ ಮಾಡಿದರೆ ಸಾಕು ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕೂಡ ಉಂಟಾಗುವುದಿಲ್ಲ ನಿಮ್ಮ ಜೀವನದಲ್ಲಿ ನೀವು ತುಂಬಾ ಆರೋಗ್ಯಕರವಾದಂತಹ ಜೀವನ ನಡೆಸಲು ಸಾಧ್ಯವಾಗುತ್ತದೆ.
ಹಾಗಾದರೆ ಪ್ರತಿಯೊಬ್ಬರೂ ಕೂಡ ಊಟ ತಿಂಡಿ ಆದ ತಕ್ಷಣ ಯಾವ ಪ್ರಮುಖವಾದಂಥ ಕೆಲಸವನ್ನು ಮಾಡಬೇಕು ಹಾಗೂ ಅದನ್ನು ಮಾಡುವುದರಿಂದ ನಮಗೆ ಹೇಗೆ ಪ್ರಯೋಜನ ಉಂಟಾಗುತ್ತದೆ ಅದು ನಮ್ಮನ್ನು ಹೇಗೆ ಸಂರಕ್ಷಿಸುತ್ತದೆ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ತಕ್ಷಣ ಹಣದ ಅವಶ್ಯಕತೆ ಇದ್ರೆ 21 ಅಕ್ಕಿಕಾಳಿನಿಂದ ಈ ರೀತಿ ಮಾಡಿ.!
ಎಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಕೂಡ ಹೆಚ್ಚಾಗಿ ಕುಳಿತುಕೊಂಡು ಕೆಲಸ ಮಾಡುವಂತಹ ಸನ್ನಿವೇಶಗಳು ಇದೆ. ಹಾಗಾಗಿ ಹೆಚ್ಚಿನ ಜನ ಕೆಲಸ ಮಾಡುವಂತಹ ಉದ್ದೇಶದಿಂದ ಊಟ ತಿಂಡಿಯಾದ ತಕ್ಷಣ ಒಂದೇ ಸಮ ಕುಳಿತು ಕೆಲಸ ಮಾಡುತ್ತಿರು ತ್ತಾರೆ ಹಾಗೂ ಇನ್ನೂ ಕೆಲವೊಂದಷ್ಟು ಜನ ಕೆಲಸ ಮಾಡುತ್ತಲೇ ಕುಂತಲ್ಲಿಯೇ ಆಹಾರವನ್ನು ಸೇವನೆ ಮಾಡುತ್ತಿರುತ್ತಾರೆ.
ಆದರೆ ಈ ರೀತಿ ಮಾಡುವುದರಿಂದ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ಹಾಗೂ ಅದರಲ್ಲಿರುವಂತಹ ಯಾವುದೇ ಪೋಷಕಾಂಶಗಳು ಸಹ ನಮ್ಮ ಜೀವ ಸತ್ವಕ್ಕೆ ನಮ್ಮ ದೇಹಕ್ಕೆ ಸೇರುವುದಿಲ್ಲ. ಹಾಗಾಗಿ ನಾವು ಊಟ ತಿಂಡಿ ಆದ ತಕ್ಷಣ ಸ್ವಲ್ಪಮಟ್ಟಿಗೆ ಎಕ್ಸರ್ಸೈಜ್ ಅಥವಾ ವಾಕಿಂಗ್ ಮಾಡುವುದು ಬಹಳ ಉತ್ತಮ ಎಂದು ವೈದ್ಯರು ಹೇಳುತ್ತಾರೆ.
ಈ ರೀತಿ ನಾವು ಊಟ ತಿಂಡಿಯಾದ ತಕ್ಷಣ ಕೆಲ ಸಮಯ ವಾಕಿಂಗ್ ಮಾಡುವುದು ಎಕ್ಸರ್ಸೈಜ್ ಮಾಡುವುದರಿಂದ ನಾವು ತಿಂದಂತಹ ಆಹಾರವು ಅದರಲ್ಲಿರುವಂತಹ ಎಲ್ಲ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ನೇರವಾಗಿ ಸರಬರಾಜಾಗುತ್ತದೆ ಹಾಗೂ ದೇಹದಲ್ಲಿರುವ ಎಲ್ಲ ಪೋಷ ಕಾಂಶಗಳಿಗೂ ಸಹ ತಲುಪುತ್ತದೆ ಈ ರೀತಿ ಪೋಷಕಾಂಶಗಳು ನಮ್ಮ ದೇಹಕ್ಕೆ ಸೇರಿದಾಗ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ.
ಈ ಸುದ್ದಿ ಓದಿ:-ಮುರಿದು ಹೋಗಿರುವ ಮೂಳೆಗಳನ್ನು ವೇಗವಾಗಿ ಜೋಡಿಸುತ್ತೆ ಇದರ ಎಲೆ. ಕೈಕಾಲು ಸೊಂಟ ಮಂಡಿ ಜಾಯಿಂಟ್ ಪೈನ್ ಗೂ ಇದು ರಾಮಬಾಣ.!
ಬದಲಿಗೆ ಆ ಪೋಷಕಾಂಶಗಳಿಗೆ ಬೇಕಾಗಿರು ವಂತಹ ಎಲ್ಲಾ ಜೀವ ಸತ್ವಗಳು ನಾವು ತಿಂದಂತಹ ಆಹಾರದಲ್ಲಿ ಸಂಪೂರ್ಣವಾಗಿ ಸಿಗುತ್ತದೆ. ಹಾಗಾಗಿ ಈ ವಿಧಾನವನ್ನು ಅನುಸರಿಸುವುದು ಉತ್ತಮ. ಇದರ ಜೊತೆ ಕೆಲವೊಂದಷ್ಟು ಜನರಿಗೆ ನಡೆದಾಡಲು ಸಮಯವಿಲ್ಲ ಎಕ್ಸರ್ಸೈಜ್ ಮಾಡಲು ಸಾಧ್ಯವಿಲ್ಲ ಎನ್ನುವವರು ಊಟ ಆದ ತಕ್ಷಣ ಒಂದು ಚೇರ್ ಮೇಲೆ ಕುಳಿತುಕೊಂಡು ಎರಡು ಪಾದಗಳನ್ನು ಸಹ ನೆಲಕ್ಕೆ ತಾಕುವಂತೆ ಇಟ್ಟು ನೇರವಾಗಿ ಕುಳಿತುಕೊಳ್ಳಬೇಕು.
ಆನಂತರ ನಿಮ್ಮ ಬೆರಳನ್ನು ಮುಂದಕ್ಕೆ ಒತ್ತಿ ಹಿಡಿದು ಹಿಮ್ಮಡಿಯನ್ನು ಮೇಲಕ್ಕೆ ಎತ್ತುತ್ತಾ ಐದರಿಂದ ಆರು ನಿಮಿಷ ಮಾಡಬೇಕು ಈ ರೀತಿ ಮಾಡುವುದರಿಂದಲೂ ಕೂಡ ನೀವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುತ್ತದೆ ಹಾಗೂ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ ಈ ವಿಧಾನವನ್ನು ನೀವು ನಿಂತುಕೊಂಡು ಸಹ ಮಾಡಬಹುದು.
ಅದು ಹೇಗೆ ಎಂದರೆ ಎರಡು ಕೈಗಳನ್ನು ನೇರವಾಗಿ ಇಟ್ಟುಕೊಂಡು ನಿಮ್ಮ ದೇಹದ ತೂಕವನ್ನು ಬೆರಳುಗಳಿಗೆ ಬಿಡುತ್ತಾ ಹಿಮ್ಮಡಿಯನ್ನು ಎತ್ತಬೇಕು ಮತ್ತೆ ಕೆಳಗಡೆ ಬಿಡಬೇಕು ಈ ರೀತಿ ವಿಧಾನವನ್ನು ಸಹ ನೀವು ಮಾಡುವುದು ಉತ್ತಮ. ಈ ವಿಧಾನಗಳನ್ನು ನೀವು ಟಿವಿ ನೋಡುವಂತಹ ಸಂದರ್ಭಗಳಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಮಾಡುವುದರಿಂದ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದಾಗಿದೆ.