ಎಲ್ಲರಿಗೂ ತಿಳಿದಿರುವಂತೆ ಬೇಸಿಗೆಕಾಲದಲ್ಲಿ ಹಾಲಿಗೆ ಹೆಪ್ಪನ್ನು ಹಾಕುವುದರಿಂದ ಮೊಸರು ಬೇಗನೆ ತಯಾರಾಗುತ್ತದೆ. ಆದರೆ ಚಳಿಗಾಲದಲ್ಲಿ ನಾವು ಹಾಲಿಗೆ ಹೆಪ್ಪನ್ನು ಹಾಕುವುದಕ್ಕೆ ಅಂದರೆ ಹಾಲಿಗೆ ಮೊಸರನ್ನು ಹೆಪ್ಪಾಕಿದ್ದರೆ ಅದು ಹೆಚ್ಚಿನ ಸಮಯ ತೆಗೆದುಕೊಳ್ಳುವುದರ ಮೂಲಕ ಮೊಸರನ್ನು ನಮಗೆ ಕೊಡುತ್ತದೆ.
ಆದರೆ ಇಂತಹ ಒಂದು ಸಂದರ್ಭದಲ್ಲಿ ಈಗ ನಾವು ಹೇಳುವಂತಹ ಈ ಒಂದು ಟ್ರಿಕ್ ಅನ್ನು ನೀವು ಅನುಸರಿಸಿದರೆ ಕೇವಲ 15 ನಿಮಿಷದಲ್ಲಿಯೇ ಗಟ್ಟಿಯಾದಂತಹ ಮೊಸರನ್ನು ನೀವು ಪಡೆಯಬಹುದು. ಹಾಗೂ ಸುಲಭ ವಿಧಾನ ಅನುಸರಿಸುವುದರ ಮೂಲಕ ಯಾವುದೇ ರೀತಿಯ ಹೆಚ್ಚಿನ ಶ್ರಮ ಪಡದೆ ಕಡಿಮೆ ಸಮಯದಲ್ಲಿ ತಕ್ಷಣಕ್ಕೆ ಗಟ್ಟಿ ಮೊಸರನ್ನು ನೀವು ಪಡೆಯಬಹುದಾಗಿದೆ.
ಹಾಗಾದರೆ ಈ ದಿನ ನೀರಿನಂತೆ ತೆಳ್ಳಗಿರುವಂತಹ ಹಾಲಿನಿಂದ ಕೇವಲ 15 ನಿಮಿಷ ಬಳಸಿಕೊಂಡು ನಾವು ಹೇಗೆ ಆ ಒಂದು ಹಾಲಿನಿಂದ ಗಟ್ಟಿಯಾದ ಮೊಸರನ್ನು ತಯಾರಿಸಬಹುದು ಹಾಗೂ ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರ ಮೂಲಕ ನಾವು ಮೊಸರನ್ನು ಪಡೆಯಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ
ಈ ದಿನ ತಿಳಿಯೋಣ.
ಈ ಸುದ್ದಿ ಓದಿ:-ಈ ಗುಣಗಳಿರುವ ಪತಿ ಸಿಕ್ಕಿದ್ರೆ ಹೆಣ್ಣು ಮಕ್ಕಳೇ ನಿಮ್ಮಷ್ಟು ಅದೃಷ್ಟಶಾಲಿಗಳು ಯಾರು ಇಲ್ಲ.!
ಮೊದಲು ನಾವು ಯಾವುದೇ ಹಾಲನ್ನು ತಂದರು ಅದನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು. ಅದರಲ್ಲಿರುವಂತಹ ನೀರಿನ ಅಂಶ ಸಂಪೂರ್ಣವಾಗಿ ಹೋಗುವ ತನಕ ಅದನ್ನು ಬಿಸಿ ಮಾಡಿ ಅದು ಉಗುರು ಬೆಚ್ಚಗೆ ಆಗುವತನಕ ತಣ್ಣಗಾಗಲು ಬಿಡಬೇಕು. ಆನಂತರ ಅದನ್ನು ತಣ್ಣಗಾಗಿಸಿ ಒಂದು ಕಡೆ ಇಟ್ಟುಕೊಳ್ಳಬೇಕು.
ಆನಂತರ ಒಂದು ಮಣ್ಣಿನ ಗಡಿಗೆಯನ್ನು ತೆಗೆದುಕೊಳ್ಳಬೇಕು ಅದನ್ನು ಚೆನ್ನಾಗಿ ತೊಳೆದು ಅದರ ಒಳಗಿನ ಭಾಗಕ್ಕೆ ಗಟ್ಟಿಯಾದ ಮೊಸರನ್ನು ಹಾಕಿ ಅದನ್ನು ಆ ಒಂದು ಗಡಿಗೆಯ ಸುತ್ತ ಸವರಿ ಬಿಡಬೇಕು ಆನಂತರ ಬಿಸಿ ಮಾಡಿ ಉಗುರು ಬೆಚ್ಚಗೆ ಮಾಡಿರುವಂತಹ ಹಾಲನ್ನು ಅದರ ಒಳಗಡೆ ಹಾಕಿ ಒಂದರಿಂದ ಎರಡು ಚಮಚ ಮೊಸರನ್ನು ಅದರ ಒಳಗಡೆ ಹಾಕಿ ಆ ಒಂದು ಗಡಿಗೆ ಗಾಳಿ ಆಡಲು ಜಾಗವಿಲ್ಲದಿರುವಷ್ಟು ಅಗಲದ ತಟ್ಟೆಯನ್ನು ಮುಚ್ಚಿ ಬಿಡಬೇಕು.
ಆನಂತರ ಒಂದು ಕುಕ್ಕರ್ ನಲ್ಲಿ ಸ್ವಲ್ಪ ನೀರನ್ನು ಹಾಕಿ ಅದನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು ಆನಂತರ ಅದರ ಒಳಗಡೆ ಈ ಒಂದು ಗಡಿಗೆಯನ್ನು ಇಟ್ಟು ಯಾವುದೇ ವಿಷಲ್ ಹಾಕದೆ ಕುಕ್ಕರ್ ನಲ್ಲಿ 15 ನಿಮಿಷಗಳ ಕಾಲ ಹಾಗೆ ಬಿಟ್ಟು ಆನಂತರ ತಣ್ಣಗಾದ ಮೇಲೆ ಕುಕ್ಕರ್ ತೆಗೆಯಬೇಕು.
ಈ ಸುದ್ದಿ ಓದಿ:-ದೇವರ ಮುಂದೆ ಬೇಡಿಕೊಳ್ಳುವಾಗ ಈ ಒಂದು ತಪ್ಪನ್ನು ಮಾಡಬೇಡಿ ಯಾವ ಬೇಡಿಕೆನೂ ಈಡೇರುವುದಿಲ್ಲ.!
ಈ ರೀತಿ ತಣ್ಣಗಾದ ಮೇಲೆ ನೀವು ಆ ಒಂದು ಗಡಿಗೆಯನ್ನು ತೆಗೆದು ನೋಡಿದರೆ ಸಾಕು ನಿಮಗೆ ಸುಲಭವಾಗಿ ಮೊಸರು ಸಿಗುತ್ತದೆ. ಇದಕ್ಕೆ ಯಾವುದೇ ರೀತಿಯ ಹೆಚ್ಚಿನ ಶ್ರಮ ಪಡುವ ಅವಶ್ಯಕತೆ ಇಲ್ಲ ಹಾಗೂ ಸುಲಭವಾಗಿ ತಕ್ಷಣಕ್ಕೆ ಯಾರಾದರೂ ಮನೆಗೆ ಸಂಬಂಧಿಕರ ಬಂದಂತಹ ಸಂದರ್ಭದಲ್ಲಿ ಈ ವಿಧಾನವನ್ನು ಅನುಸರಿಸುವುದರ ಮೂಲಕ ನಾವು ಸುಲಭವಾಗಿ ಮೊಸರನ್ನು ಕೇವಲ 15 ನಿಮಿಷದಲ್ಲಿಯೇ ತಯಾರಿಸಿ ಕೊಳ್ಳಬಹುದು.
ಈ ವಿಧಾನ ಬಹಳ ಸುಲಭವಾಗಿದ್ದು ಪ್ರತಿಯೊಬ್ಬರೂ ಕೂಡ ಇನ್ನು ಮುಂದೆ ಈ ವಿಧಾನ ಅನುಸರಿಸುವುದು ತುಂಬಾ ಒಳ್ಳೆ ಯದು. ಅದರಲ್ಲೂ ಚಳಿಗಾಲದ ಸಂದರ್ಭದಲ್ಲಿ ಈ ಒಂದು ವಿಧಾನ ಪ್ರತಿಯೊಬ್ಬರಿಗೂ ಕೂಡ ತುಂಬಾ ಅನುಕೂಲವನ್ನು ಉಂಟುಮಾಡು ತ್ತದೆ ಎಂದೇ ಹೇಳಬಹುದು. ಹೆಚ್ಚಿನ ಜನ ಬೆಳಿಗ್ಗೆ ಹೆಪ್ಪು ಹಾಕಿ ಮಧ್ಯಾಹ್ನ ಸಂಜೆಯ ತನಕವೂ ಕೂಡ ಹೆಪ್ಪು ಆಗಿರುವುದಿಲ್ಲ ಅಂತಹ ಸಂದರ್ಭದಲ್ಲಿ ಈಗ ನಾವು ಹೇಳಿದ ಈ ವಿಧಾನ ಅನುಸರಿಸಿ ಮಾಡಿದರೆ ನೀವು ಕಡಿಮೆ ಸಮಯದಲ್ಲಿ ಮೊಸರನ್ನು ಪಡೆಯಬಹುದು.