ನಾವೆಲ್ಲಾ ಕಿಡ್ನಿಯಲ್ಲಿ ಕಲ್ಲು ಉಂಟಾಗಿರುವ ಸಮಸ್ಯೆಗಳ ಬಗ್ಗೆ ಕೇಳಿದ್ದೇವೆ. ಕಿಡ್ನಿ ಸ್ಟೋನ್ ಎನ್ನುವುದು ಇತ್ತೀಚಿಗೆ ಸರ್ವೇ ಸಾಮಾನ್ಯವಾಗಿದ್ದು ಕೆಲವರು ಇದನ್ನು ಆಯುರ್ವೇದದ ಚಿಕಿತ್ಸೆಗಳ ಮೂಲಕ ಮತ್ತು ಕೆಲವರು ಶಸ್ತ್ರಚಿಕಿತ್ಸೆಗಳ ಮೂಲಕ ಇನ್ನು ಕೆಲವರು ಮನೆಮದ್ದುಗಳಲ್ಲಿ ಪರಿಹಾರ ಮಾಡಿಕೊಂಡಿರುವ ಉದಾಹರಣೆಗಳನ್ನು ನೋಡಿದ್ದೇವೆ.
ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಪಿತತ ಕೋಶದ ಕಲ್ಲುಗಳು (Gallblader stone) ಎನ್ನುವ ಸಮಸ್ಯೆ ಕೂಡ ಎಲ್ಲಾ ಕಡೆ ಕೇಳಿ ಬರುತ್ತಿದೆ. ಈ ರೀತಿ ಪಿತ್ತಕೋಶದಲ್ಲಿ ಕಲ್ಲುಗಳು ಉಂಟಾಗಲು ಕರುಳಿನ PH ವ್ಯಾಲ್ಯೂ ಹೆಚ್ಚಾಗಿ ಅಸಿಡಿಕ್ ಅಂಶವು ಹೆಚ್ಚಾಗಿರುವುದೇ ಸ್ಟೋನ್ ಆಗಲು ಕಾರಣವಾಗಿದೆ.
ಇದನ್ನು ಹೇಗೆ ನ್ಯಾಚುರಲ್ ಆಗಿ ಕಡಿಮೆ ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಪಿತ್ತಕೋಶದಲ್ಲಿ ಕಲ್ಲು ಉಂಟಾಗಿರುವ ಸಮಸ್ಯೆಗೆ ಹೆಚ್ಚಿನ ಜನರು ಶಸ್ತ್ರ ಚಿಕಿತ್ಸೆಯನ್ನು ಸೂಚಿಸುತ್ತಾರೆ. ಅದರಲ್ಲೂ ಬಹುತೇಕ ಸಮಯಗಳಲ್ಲಿ ಪಿತ್ತಕೋಶವನ್ನು ತೆಗೆಯಬೇಕು ಎಂದು ಕೂಡ ಹೇಳುತ್ತಾರೆ.
ಆದರೆ ದೇಹದ ಯಾವ ಅಂಗಗಳು ಕೂಡ ಪ್ರಯೋಜನ ಇಲ್ಲದೆ ಬೆಳವಣಿಗೆಯಾಗಿಲ್ಲ, ಹಾಗಾಗಿ ಇಂತಹ ನಿರ್ಧಾರ ತೆಗೆದುಕೊಳ್ಳುವುದರ ಬದಲು ಮೊದಲು ನ್ಯಾಚುರಲ್ ಆಗಿಯೇ ಇದನ್ನು ಪರಿಹರಿಸುವ ಮಾರ್ಗವನ್ನು ಕಂಡುಕೊಳ್ಳಬೇಕು. ಈ ಹಿಂದಿನ ಕಾಲದಲ್ಲಿ ಕೂಡ ಈ ರೀತಿಯ ಸಮಸ್ಯೆಗಳು ಇರುತ್ತಿದ್ದವು ಆದರೆ ಅವರು ಮನೆ ಮದ್ದುಗಳಲ್ಲಿ ಒಳ್ಳೆಯ ಔಷಧಿಗಳನ್ನು ಸೇರಿಸಿ ಗುಣಪಡಿಸಿಕೊಳ್ಳುತ್ತಿದ್ದರು.
ಅಂತಹ ಒಂದು ಅದ್ಭುತವಾದ ರಿಸಲ್ಟ್ ಕೊಡುವ ಒಂದು ಔಷಧಿ ಮಾಡಿಕೊಳ್ಳುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿಕೊಳ್ಳಿ.
ಇಂಗಳಾರದ ಕಾಯಿ ಎನ್ನುವುದು ಹಳ್ಳಿಗಳ ಕಡೆ ಹೆಚ್ಚಾಗಿ ಸಿಗುತ್ತದೆ ಸಿಗದಿದ್ದವರು ಆಯುರ್ವೇದಿಕ್ ಅಂಗಡಿಗಳಲ್ಲಿ ಇದನ್ನು ಖರೀದಿಸಬಹುದು ಅಥವಾ ಗ್ರಂಥಿಗೆ ಅಂಗಡಿಗಳನ್ನು ಕೂಡ ಸಿಗುತ್ತದೆ. ಈ ಇಂಗಳಾರದ ಕಾಯಿಯ ಸಿಪ್ಪೆ ತೆಗೆದು ಒಳಗಡೆ ಇರುವ ಅಂಶವನ್ನು ಉಂಡೆಗಳಾಗಿ ಮಾಡಿಕೊಳ್ಳಬೇಕು ಕಡಲೆಕಾಳು ಗಾತ್ರಕ್ಕೆ ಉಂಡೆಗಳನ್ನು ಮಾಡಿ.
ಒಂದು ದಿನಕ್ಕೆ ಆಗುವಷ್ಟು ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು ಮರುದಿನಕ್ಕೆ ಫ್ರೆಶ್ ಆಗಿ ತಯಾರಿಸಿಕೊಂಡರೆ ಹೆಚ್ಚು ಫಲಿತಾಂಶ ಸಿಗುತ್ತದೆ. ಕಾಡು ಬಸಳೆ ಸೊಪ್ಪು ತೆಗೆದುಕೊಂಡು ಅದನ್ನು ರಸ ಮಾಡಿಕೊಳ್ಳಬೇಕು ಇದನ್ನು ಕೂಡ ಪ್ರತಿ ಹೊತ್ತಿಗೂ ತಯಾರಿಸಿಕೊಳ್ಳಬೇಕು ಇದರ ಜೊತೆಗೆ ಒಂದು ಎಳನೀರನ್ನು ತೆಗೆದುಕೊಂಡು ಈ ಮೂರರಿಂದ ಒಂದು ಮನೆ ಮದ್ದು ತಯಾರಿಸಬೇಕು.
ಪ್ರಮಾಣ ಹೇಗಿರಬೇಕು ಎಂದರೆ ಇಂಗಳಾರದ ಕಾಯಿಯ ಕಡಲೆಕಾಳು ಗಾತ್ರದ ಉಂಡೆ 3, ಸೊಪ್ಪಿನ ರಸ ಮತ್ತು ಒಂದು ಎಳನೀರು ಈ ಮೂರನ್ನು ಮಿಕ್ಸ್ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಗೆ 6 ಗಂಟೆಗೆ ಒಮ್ಮೆ ತೆಗೆದುಕೊಳ್ಳಬೇಕು, ಮಧ್ಯಾಹ್ನ ಊಟಕ್ಕೂ ಮುನ್ನ 1 ಗಂಟೆಗೆ ಮುಂಚಿತವಾಗಿ ಒಂದು ಬಾರಿ ಮತ್ತು ಸಂಜೆ ಊಟಕ್ಕೂ ಮುನ್ನ 4 ಗಂಟೆ ಸಮಯಕ್ಕೆ ಒಂದು ಬಾರಿ ಈ ರೀತಿ ತೆಗೆದುಕೊಂಡರೆ ಪಿತ್ತಕೋಶದಲ್ಲಿ ಉಂಟಾಗಿರುವ ಕಲ್ಲು ತಂತಾನೆ ಕರಗುತ್ತದೆ.
ಒಂದು ವೇಳೆ ಏಳು ದಿನಗಳಲ್ಲಿ ರಿಸಲ್ಟ್ ಸಿಗಲಿಲ್ಲ ಎಂದರೆ ಇದರ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕು. 2 ಉಂಡೆ, 30 ml ಕಾಡು ಬಸಳೆ ಸೊಪ್ಪಿನ ರಸ ಹಾಗೂ ಒಂದು ಎಳನೀರನ್ನು ಸೇವಿಸಬೇಕು. ಇನ್ನು ನೋವು ಶ್ರಮನವಾಗಿಲ್ಲ ಸಮಸ್ಯೆ ಕಂಡು ಬರುತ್ತಿದೆ ಎಂದರೆ ಮತ್ತೆ ಕೆಲವು ದಿನಗಳವರೆಗೆ ಮುಂದುವರೆಸಿ ಪ್ರಮಾಣ ಕಡಿಮೆ ಮಾಡಬೇಕು 1 ಇಂಗಳಾರದ ಕಾಯಿ ಉಂಡೆ 20ml ಕಾಡು ಬಸಳೆ ರಸ ಹಾಗೂ ಒಂದು ಎಳನೀರನ್ನು ನಿಯಮಿತವಾಗಿ ದಿನದಲ್ಲಿ 3 ಸಮಯವೂ ತೆಗೆದುಕೊಂಡು ಬಂದರೆ ವೈದ್ಯರೇ ಆಶ್ಚರ್ಯ ಪಡುವಂತೆ ಗಾಲ್ ಬ್ಲೆಡರ್ ಸ್ಟೋನ್ ಮಾಯವಾಗಿರುತ್ತದೆ.