ಕಣ್ಣು ನಮ್ಮ ಜೀವನದ ಪ್ರಮುಖ ಅಂಗ, ಮನುಷ್ಯ ಹುಟ್ಟಿದಾಗಲಿಂದ ಸಾವಿನವರೆಗೂ ಬೆಳೆಯದಿರುವ ಒಂದೇ ಅಂಗ ಕಣ್ಣು. ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಯಾಕೆ ಮುಖ್ಯ ಎಂದರೆ ಕಣ್ಣು ಇಲ್ಲದಿದ್ದರೆ ಬದುಕು ಕತ್ತಲಾದಂತೆ ಆತ ಜೀವನದಲ್ಲಿ ಏನನ್ನು ಕೂಡ ಮಾಡಲಾಗದೆ ಇನ್ನೊಬ್ಬರಿಗೆ ಹೊರೆಯಾಗುತ್ತಾನೆ.
ಹುಟ್ಟಿನಿಂದ ಕಣ್ಣು ಕಾಣದವರ ಸಮಸ್ಯೆ ಒಂದಾದರೆ ದೇವರು ಕಣ್ಣು ಕೊಟ್ಟಿದ್ದನ್ನು ಕಾಪಾಡಿಕೊಳ್ಳದೆ ನಾವು ಹಾಳು ಮಾಡಿಕೊಂಡರೆ ಅದು ಇನ್ನೂ ಒಂದು ರೀತಿಯ ದುರಂತ. ಹಾಗಾಗಿ ನಾವು ನಮ್ಮ ಯಾವ ತಪ್ಪುಗಳಿಂದ ಕಣ್ಣನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಮತ್ತು ಕಣ್ಣಿನ ಆರೋಗ್ಯಕ್ಕೆ ಏನು ಮಾಡಬೇಕು ಎನ್ನುವ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ವಿದೇಶಗಳಲ್ಲಿ ಮಗು ಹುಟ್ಟಿದ ತಕ್ಷಣದಿಂದ ಹಿಡಿದು ಯಾವಾಗಲೂ ಕಣ್ಣುಗಳ ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತಾರೆ. ಅಲ್ಲಿ ಚಿಕ್ಕ ಮಕ್ಕಳಿಗೂ ಸನ್ ಗ್ಲಾಸ್ ಹಾಕುವುದು ಬೇರೆ ಬೇರೆ ರೀತಿಯ ಗ್ಲಾಸ್ ಗಳನ್ನು ಹಾಕುವುದು ಮಾಮೂಲಿ.
ಇದು ತಪ್ಪಲ್ಲ ನಾವು ಕೂಡ ಬಿಸಿಲಿಗೆ ಹೋದಾಗ ಸೂರ್ಯನ ನೇರ ಕಿರಣಗಳು ಕಣ್ಣಿನ ಜೀವಕೋಶಗಳಿಗೆ ಹಾನಿ ಆಗದಂತೆ ಸನ್ ಗ್ಲಾಸ್ ಬಳಸುವುದು ಬಳಸಿದರೇ ಅದು ಒಳ್ಳೆಯದೇ ಮತ್ತು ಇದೇ ರೀತಿ ಲೈಟ್ ಎಮಿಷನ್ ಗಳನ್ನು ತಡೆಯಲು ಗ್ಲಾಸ್ ಗಳನ್ನು ಬಳಸುವುದು ಒಳ್ಳೆಯದೇ ಹಾಗೆ ಧೂಳು ಹೊಗೆ ಇಂತಹ ವಾತಾವರಣದಲ್ಲಿರುವಾಗಲು ಕೂಡ ಕಣ್ಣಿನ ಪ್ರೊಟೆಕ್ಷನ್ ಗಾಗಿ ಕನ್ನಡಕ ಬಳಸಿದರೆ ಅದು ತಪ್ಪಲ್ಲ.
ಆದರೆ ನಮ್ಮಲ್ಲಿ ಮೊದಲಿನಿಂದಲೂ ಕನ್ನಡಕ ಬಳಸುವುದು ಶೋಕಿ ಅಥವಾ ದೃಷ್ಟಿ ದೋಷಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಮಾತ್ರ ಕನ್ನಡಕ ಬಳಸಬೇಕು ಎನ್ನುವ ಭಾವನೆ ಆಳವಾಗಿ ಬೇರೂರಿದೆ. ಸಾಮಾನ್ಯವಾಗಿ 40 ವರ್ಷ ವಯಸ್ಸಿಗೆ ಪ್ರತಿಯೊಬ್ಬರಿಗೂ ಕನ್ನಡದ ಅವಶ್ಯಕತೆ ಇರುತ್ತದೆ ಆಗ ದೂರ ದೃಷ್ಟಿ ಹಾಗೂ ಸಮೀಪ ದೃಷ್ಟಿ ಪವರ್ ವ್ಯತ್ಯಾಸವಾಗುತ್ತದೆ.
ಅದಕ್ಕೆ ತಕ್ಕ ಪವರ್ ಗ್ಲಾಸ್ ಗಳನ್ನು ಬಳಸುತ್ತಾರೆ. ನಾವು ನ್ಯಾಚುರಲ್ ಆಗಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರೆ ತಪ್ಪದೇ ಕಣ್ಣಿಗೆ ಇರುವ ಸಾಮಾನ್ಯ ವ್ಯಾಯಾಮಗಳಾದ ಕಣ್ಣನ್ನು ಎಡದಿಂದ ಬಲಕ್ಕೆ ತಿರುಗಿಸುವುದು, ಬಲದಿಂದ ಎಡಕ್ಕೆ ತಿರುಗಿಸುವುದು, ಮೇಲಿಂದ ಕೆಳಕ್ಕೆ ಮತ್ತು ಕೆಳಗೆನಿಂದ ಮೇಲಕ್ಕೆ ನೋಡುವುದು.
ಕಣ್ಣನ್ನು ಪ್ರದಕ್ಷಣೀಯ ಹಾಗೂ ಆ ಪ್ರದಕ್ಷಣೀಯವಾಗಿ ತಿರುಗಿಸುವುದು ಇವುಗಳನ್ನು ಕನಿಷ್ಠ 10ರಿಂದ 20 ಬಾರಿಯಾದರೂ ಮಾಡಬೇಕು ಮತ್ತು ಹತ್ತಿರದಿಂದ ಮೊಬೈಲ್, ಲ್ಯಾಪ್ಟಾಪ್ ಅಥವಾ ಟಿವಿಗಳನ್ನು ನೋಡಬಾರದು. ಈ ರೀತಿ ನೋಡುವಾಗಲೂ ಕಣ್ಣುಗಳನ್ನು ಆಗಾಗ ಬ್ಲಿಂಕ್ ಮಾಡಬೇಕು ಮತ್ತು ಹತ್ತಿರದಿಂದ ಪುಸ್ತಕ ಅಥವಾ ಫೋನ್ ನೋಡಿದರೂ ಆಗಾಗ ದೃಷ್ಟಿ ಬದಲಾಯಿಸಿ ದೂರದಲ್ಲಿರುವುದನ್ನು ನೋಡಬೇಕು, ಧೂಳು ಇರುವ ಕಡೆ ಓಡಾಡುವಾಗ ಕಣ್ಣಿನ ರಕ್ಷಣೆಗೆ ಕನ್ನಡಕ ಬಳಸಬೇಕು, ಕಣ್ಣನ್ನು ಉಜ್ಜಬಾರದು.
ಆಯುರ್ವೇದದಲ್ಲಿ ದರ್ಪಣ ಚಿಕಿತ್ಸೆ ಎಂದು ಮಾಡುತ್ತಾರೆ. ಶುದ್ಧ ಹಸುವಿನ ತುಪ್ಪವನ್ನು ಕಣ್ಣಿಗೆ ಹಾಕಿ ಕಣ್ಣಿನ ಕಲ್ಮಶಗಳನ್ನು ಹೊರ ತರುತ್ತಾರೆ. ಇದನ್ನು ಮಾಡಿಸಲಾಗದವರು ಮನೆಯಲ್ಲಿ ಸಿಗುವ ಶುದ್ಧ ಹರಳೆಣ್ಣೆಯನ್ನು ಶುದ್ಧ ಹರಳೆಣ್ಣೆ ಅಥವಾ ಶುದ್ಧ ಕೊಬ್ಬರಿ ಎಣ್ಣೆಯನ್ನು ಮಲಗುವಾಗ ಕಣ್ಣಿನ ರೆಪ್ಪೆಗಳಿಗೆ ಹಚ್ಚಿ ಮಲಗಿದರೆ ಬಹಳ ಉತ್ತಮ ರಿಸಲ್ಟ್ ಕೊಡುತ್ತದೆ ಮತ್ತು ಮಲಗುವ ಎರಡು ತಾಸು ಮುಂಚೆ ಮೊಬೈಲ್ ಟಿವಿ ನೋಡುವುದನ್ನು ನಿಲ್ಲಿಸಬೇಕು.
ಕಣ್ಣಿನ ಮೇಲೆ ಸೌತೆಕಾಯಿ ಇಟ್ಟುಕೊಳ್ಳುವುದು, ಕಣ್ಣಿನ ಮೇಲೆ ಆಲೂಗಡ್ಡೆ ಕಟ್ ಮಾಡಿ ಇಟ್ಟುಕೊಂಡು ಮಲಗುವುದು ಕೂಡ ಕಂಫರ್ಟ್ ನೀಡುತ್ತದೆ, ಉರಿಯನ್ನು ಕಡಿಮೆ ಮಾಡುತ್ತದೆ, ಕಣ್ಣಿನ ಕಲ್ಮಶಗಳನ್ನು ಆಚೆ ತರುತ್ತದೆ.