ಈಗಿನ ಕಾಲದಲ್ಲಿ ಜನರಿಗೆ ಕಾಡುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಹಲ್ಲಿಗೆ ಸಂಬಂಧಪಟ್ಟ ಸಮಸ್ಯೆಯೂ ಕೂಡ ಸೇರಿದೆ. ಹಲ್ಲು ನೋವು, ಹಲ್ಲಿನ ಬೇರು ಸಡಿಲಾಗುವುದು, ವಸಡುಗಳ ಸವಕಳಿ, ಹಲ್ಲಿನ ಸೆನ್ಸಿಟಿವಿಟಿ, ದಂತಕ್ಷಯ ವಸಡುಗಳಲ್ಲಿ ರಕ್ತ ಬರುವುದು ಇವುಗಳ ಜೊತೆ ಮೌತ್ ಅಲ್ಸರ್ ಈ ಎಲ್ಲಾ ಸಮಸ್ಯೆಗಳಿಗೂ ಕೂಡ ನಾವು ಬಳಸುವ ಫೇಸ್ಟ್ ಔಷಧಿ ಎಂದು ತಿಳಿದುಕೊಂಡಿದ್ದೇವೆ.
ಆದರೆ ನಿಜಕ್ಕೂ ಇಂದು ನಾವು ಬಳಸುತ್ತಿರುವ ಪೇಸ್ಟ್ ಗಳು ಆರೋಗ್ಯಕ್ಕೆ ಪೂರಕವಾಗುವುದರ ಬದಲು ಬಹಳ ದೊಡ್ಡ ತೊಂದರೆ ಮಾಡುತ್ತಿವೆ. ಯಾಕೆಂದರೆ ಈ ಪೇಸ್ಟ್ ಗಳಲ್ಲಿ ಕೆಮಿಕಲ್ ಅಂಶ ಬಹಳ ಹೆಚ್ಚಾಗಿರುತ್ತದೆ ಯಾವುದೇ ಪೇಸ್ಟ್ ಆದರೂ ಅದರಲ್ಲಿ 1000 ppm ಗಿಂತಲೂ ಅಧಿಕವಾಗಿ ಫ್ಲೋರೈಡ್ ಅಂಶ ಮತ್ತು ಇನ್ನಿತರ ರಾಸಾಯನಿಕಗಳು ಗಳಿರುತ್ತವೆ.
ಫ್ಲೋರೈಡ್ ಅಂಶವನ್ನು ನಾವು ಪೇಸ್ಟ್ ರೂಪದಲ್ಲಿ ಬೆಳ್ಳಂಬೆಳಗ್ಗೆ ಉಪಯೋಗಿಸುವುದರಿಂದ ಇದು ಬಾಯಿಯ ಒಳಗೆ ಸಲೈವಗಳನ್ನು ಸ್ರವಿಸುವ ಗ್ರಂಥಿಗಳ ಕಾರ್ಯ ಚಟುವಟಿಕೆಯನ್ನು ಕುಂಠಿತಗೊಳಿಸುತ್ತದೆ. ಆಹಾರದ ಮೂಲಕ ಫ್ಲೋರೈಡ್ ಅಂಶ ದೇಹ ಸೇರಿದರೆ ಹೃದಯದ ಸಮಸ್ಯೆ, ಕಿಡ್ನಿ ಸಮಸ್ಯೆ ಹಾಗೂ ಮೆದುಳಿನ ಆರೋಗ್ಯಕ್ಕೆ ಬಹಳ ಹಾನಿಕರ.
ಈ ರೀತಿ ಅಂಗಾಂಗಗಳ ವೈಫಲ್ಯವನ್ನು ಉಂಟುಮಾಡುವ ಈ ಕೆಮಿಕಲ್ ನ್ನು ಬೆಳಂಬೆಳಗ್ಗೆ ನಾವು ಬಳಸುವುದು ಸೂಕ್ತವಲ್ಲ. ಯಾವ ಆಯುರ್ವೇದವು ಕೂಡ ಪೇಸ್ಟ್ ಗಳನ್ನು ಸೂಚಿಸುವುದಿಲ್ಲ ಆಯುರ್ವೇದದಲ್ಲಿ ಚೂರ್ಣ ಇದೆ ಈ ಚೂರ್ಣಗಳನ್ನು ಬಳಸಿ ನಾವು ಹಲ್ಲುಜ್ಜಿದಾಗ ನೊರೆಗಳು ಉಂಟಾಗುವುದಿಲ್ಲ ಆದರೆ ನಮ್ಮ ಕಲ್ಪನೆ ಏನೆಂದರೆ ನೊರೆ ಜಾಸ್ತಿ ಬರುತ್ತಿದೆ ಎಂದರೆ ನಮ್ಮ ಹಲ್ಲುಗಳು ಚೆನ್ನಾಗಿ ಕ್ಲೀನ್ ಆಗುತ್ತಿದ್ದೆ ಎಂದುಕೊಳ್ಳುತ್ತೇವೆ.
ಆದರೆ ಇದು ಹಲ್ಲುಗಳ ಹೊರ ಕವಚವಾದ ಎನಾಮಲ್ ನ್ನು ಸವೆಸಿ ಹಲ್ಲುಗಳ ಆರೋಗ್ಯ ಕ್ಷೀಣಿಸುವಂತೆ ಮಾಡುತ್ತಿವೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ನಮ್ಮ ಹಿರಿಯರು ಆಗಿನ ಕಾಲದಲ್ಲಿ ಯಾವುದೇ ರೀತಿಯ ಪೇಸ್ಟ್ ಆಗಲಿ ಬ್ರಷ್ ಆಗಲಿ ಬಳಸುತ್ತಿರಲಿಲ್ಲ ಬೇವಿನ ಕಡ್ಡಿ, ಇಟ್ಟಿಗೆ ಪುಡಿ, ಕಲ್ಲಿದ್ದಲನ್ನು ಪುಡಿ ಇವುಗಳನ್ನು ಬಳಸಿ ಹಲ್ಲುಜ್ಜಿ ವಯಸ್ಸಾದರೂ ರೊಟ್ಟಿ ತಿನ್ನುತ್ತಾ ಹಲ್ಲನ್ನು ಗಟ್ಟಿಮುಟ್ಟಾಗಿ ಇಟ್ಟುಕೊಂಡಿದ್ದರು.
ಈಗ ನಮಗೆ ಈ ಮೇಲೆ ತಿಳಿಸಿದ ವಸ್ತುಗಳು ಪ್ರತಿದಿನವೂ ಸಿಗದೇ ಇರುವುದರಿಂದ ಆಯುರ್ವೇದದಲ್ಲಿ ಒಂದು ಚೂರ್ಣವನ್ನು ತಿಳಿಸಲಾಗಿದೆ. ಈ ಚೂರ್ಣವನ್ನು ಕೂಡ ಮನೆಯಲ್ಲೇ ಮಾಡಿ ಇಟ್ಟುಕೊಂಡು ಪ್ರತಿದಿನವೂ ಬಳಸಬಹುದು ಇದು ತುಂಬಾ ಪರಿಣಾಮಕಾರಿಯಾಗಿ ಹಲ್ಲಿನ ಆರೋಗ್ಯ ರಕ್ಷಣೆ ಮಾಡುತ್ತದೆ.
ಜಾಲಿ ಗಿಡದ ಕಟ್ಟಿಗೆ ಪುಡಿ ಅಥವಾ ಚಕ್ಕೆಯನ್ನು ಪುಡಿ ಮಾಡಿ ಚೆನ್ನಾಗಿ ಒಣಗಿಸಬೇಕು. ಇದರ ಜೊತೆ ಬೇವಿನ ಚಕ್ಕೆ ಅಥವಾ ಬೇವಿನ ಎಲೆಯನ್ನು ಕೂಡ ಒಣಗಿಸಬೇಕು. ನೆಲ ನೆಲ್ಲಿಯನ್ನು ಕೂಡ ಚೆನ್ನಾಗಿ ಒಣಗಿಸಿ ಶುದ್ಧವಾದ ಅರಿಶಿಣ ಕೊಂಬಿನಿಂದ ತಯಾರಿಸಿದ ಅರಿಶಿಣ ಪುಡಿಯನ್ನು ತೆಗೆದುಕೊಳ್ಳಬೇಕು.
ಈ ಮೇಲಿನ ಎಲ್ಲಾ ಪದಾರ್ಥಗಳು 100 ಗ್ರಾಂ ಇದ್ದರೆ ಇದಕ್ಕೆ 200 ಗ್ರಾಂ ನಷ್ಟು ಸೈಂಧವ ಲವಣವನ್ನು ಸೇರಿಸಿ 200 ಗ್ರಾಂ ನಷ್ಟು ನಾಟಿ ಹಸುವಿನ ಬೆರಣಿ ಯನ್ನು ಉರಿಸಿದ ಬೂದಿಯನ್ನು ಹಾಕಿ ಮಿಕ್ಸ್ ಮಾಡಿ ಇವೆಲ್ಲವನ್ನು ಹಾಕಿಕೊಂಡು ಪ್ರತಿದಿನವೂ ಬ್ರಶ್ ಮಾಡಿದರೆ ಹಲ್ಲಿನ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತದೆ.
ಸಾಧ್ಯವಾದಷ್ಟು ಬ್ರಷ್ ಗಳ ಬಳಕೆಯನ್ನು ತಪ್ಪಿಸುವುದು ಒಳ್ಳೆಯದು, ಒಂದು ವೇಳೆ ಬಳಸಲೇಬೇಕು ಎಂದರೆ ತಪ್ಪದೇ ತಿಂಗಳಿಗೊಮ್ಮೆ ಇದನ್ನು ಬದಲಾಯಿಸಬೇಕು. ಈ ಮೇಲೆ ತಿಳಿಸಿದ ಪುಡಿಯನ್ನು ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದವರು ದಂತ ರೋಗ ನಿವಾರಕ ಲೇಪ ಎನ್ನುವ ಚೂರ್ಣ ಕೂಡ ಆಯುರ್ವೇದ ಅಂಗಡಿಯಲ್ಲಿ ಸಿಗುತ್ತದೆ ಇದನ್ನು ಕೂಡ ಬಳಸಬಹುದು.