Home Entertainment ಭರ್ಜರಿ ಪ್ರದರ್ಶನ ಕಾಣ್ತಿದ್ರು ಕ್ರಾಂತಿ ಸಿನಿಮಾ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳಿಗೆ ನಟ ಪ್ರಮೋದ್ ಹೇಳಿದ್ದೇನು ಗೊತ್ತ.?

ಭರ್ಜರಿ ಪ್ರದರ್ಶನ ಕಾಣ್ತಿದ್ರು ಕ್ರಾಂತಿ ಸಿನಿಮಾ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳಿಗೆ ನಟ ಪ್ರಮೋದ್ ಹೇಳಿದ್ದೇನು ಗೊತ್ತ.?

0
ಭರ್ಜರಿ ಪ್ರದರ್ಶನ ಕಾಣ್ತಿದ್ರು ಕ್ರಾಂತಿ ಸಿನಿಮಾ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳಿಗೆ ನಟ ಪ್ರಮೋದ್ ಹೇಳಿದ್ದೇನು ಗೊತ್ತ.?

ಕ್ರಾಂತಿ ಸಿನಿಮಾದ ಅಪಪ್ರಚಾರದ ಬಗ್ಗೆ ಕಿಡಿಕಾರಿದ ನಟ ಪ್ರಮೋದ್. ಪ್ರಮೋದ್ (Pramod) ಅಲಿಯಾಸ್ ಪಂಜು ಅವರು ಈಗ ತಾನೆ ಬೆಳ್ಳಿ ತೆರೆಯಲ್ಲಿ ಕಣ್ಣು ಬಿಡುತ್ತಿರುವ ಪ್ರತಿಭೆ. ಮಾಡಿದ್ದು ಕೆಲವೇ ಸಿನಿಮಾಗಳು ಆದರೂ ಕೂಡ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳು. ರತ್ನನ್ ಪ್ರಪಂಚ ಸಿನಿಮಾದ ಉಡ್ಯಾಳ ಬಸ್ಯ ನ ಪಾತ್ರ ಹಾಗೂ ಗೀತಾ ಬ್ಯಾಂಗಲ್ ಸ್ಟೋರ್ ಸಿನಿಮಾದ ವೀರಭದ್ರ ಪಾತ್ರ ಎಂದಿಗೂ ಜನ ಮಾನಸದಲ್ಲಿ ಶಾಶ್ವತವಾಗಿ ಇರುತ್ತದೆ.

ಆ ಪಾತ್ರಗಳಿಗೆ ಜೀವ ತುಂಬಿ ಕಣ್ಣಿಗೆ ಕಟ್ಟಿದ ಹಾಗೆ ಅಭಿನಯಿಸಿರುವ ಇವರು ಕಿರುತೆರೆ ಲೋಕಕ್ಕೆ ಬಹಳ ಪರಿಚಿತರು. ಈಗಾಗಲೇ ಎಲ್ಲಾ ವಾಹಿನಿಗಳ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿ ಮನೆ ಮನೆ ಮಾತಾಗಿರುವ ಹೆಂಗಳೆಯರ ಡ್ರೀಮ್ ಬಾಯ್ ಪ್ರಮೋದ್ ಅವರು ಹಿರಿತೆರೆಯಲ್ಲೂ ಕೂಡ ಸ್ವಂತಂತ್ರ ಹೀರೋ ಆಗಿ ಈಗಷ್ಟೇ ಬಾಂಡ್ ರವಿ ಚಿತ್ರದ ಮೂಲಕ ಲಾಂಚ್ ಆಗಿದ್ದಾರೆ.

ಪ್ರೀಮಿಯರ್ ಪದ್ಮನಿ ಸಿನಿಮಾದಲ್ಲಿ ಕೂಡ ಜಗ್ಗೇಶ್ ಅವರಿಗೆ ಕಾರ್ ಡ್ರೈವರ್ ಪಾತ್ರ ಮಾಡಿ ಮನಗೆದ್ದಿರುವ ಇವರು ಸೈಮಾ (SIIMA) ಅವಾರ್ಡ್ ಅಲ್ಲಿ ಪ್ರಾಮಿಸಿಂಗ್ ಆಕ್ಟರ್ ಅವಾರ್ಡನ್ನು ಗಿಟ್ಟಿಸಿಕೊಂಡಿದ್ದಾರೆ. ಇದೀಗ ಅವರು ಕನ್ನಡದ ಬಹುನಿರೀಕ್ಷಿತ ಚಿತ್ರವಾಗಿದ್ದ ಕ್ರಾಂತಿ (Kranthi) ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ನಾನು ಸಹ ಕ್ರಾಂತಿ ಸಿನಿಮಾವನ್ನು ನೋಡಿದೆ ಬೇಕೆಂತಲೆ ಯಾರೋ ಅಪಪ್ರಚಾರ ಮಾಡುತ್ತಿದ್ದಾರೆ.

ನಿಜವಾಗಿಯೂ ಕನ್ನಡಕ್ಕೆ ಹಾಗೂ ಕರ್ನಾಟಕಕ್ಕೆ ಮತ್ತು ಸರ್ಕಾರ ಶಾಲೆಗಳಿಗಾಗಿ ಎಲ್ಲೂ ಕೂಡ ಲಾಸ್ ಆಗುವುದಿಲ್ಲ. ಕನ್ನಡ ಎಂದು ಕಡೆಗಣಿಸುತ್ತಿರುವ ಹಾಗೂ ಸರ್ಕಾರಿ ಶಾಲೆಗಳಿಗೆ ಆಗುತ್ತಿರುವ ಮೋಸ ಮತ್ತು ದೌರ್ಜನ್ಯದ ಕುರಿತು ಸಿನಿಮಾದಲ್ಲಿ ಬೆಳಕು ಚೆಲ್ಲಲಾಗಿದೆ. ಬೇಕೆಂದಲೇ ಸಿನಿಮಾ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಇದು ಕನ್ನಡಕ್ಕೆ ಮಾಡುವ ಅನ್ಯಾಯವಾಗುತ್ತದೆ. ದಯವಿಟ್ಟು ಸಿನಿಮಾ ನೋಡಿ ಆ ಬಳಿಕ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಯಾರ್ಯಾರದೋ ಮಾತುಗಳಿಗೆ ಕಿವಿ ಗೊಡಬೇಡಿ.

ನಿಜವಾಗಿಯೂ ಕನ್ನಡಿಗ ನೋಡಲೇ ಬೇಕಾದ ಸಿನಿಮಾ ಕ್ರಾಂತಿ ಎಂದು ಹೇಳಿದ್ದಾರೆ. ಕ್ರಾಂತಿ ಸಿನಿಮಾದ ಬಗ್ಗೆ ಪ್ರಚಾರ ಎಷ್ಟು ಬರದಿಂದ ಸಾಗುತ್ತಿದೆಯೋ , ಕೆಲ ದುರ್ಜನರು ತೆರೆ ಹಿಂದೆ ಅಷ್ಟೇ ಅಪಪ್ರಚಾರವನ್ನು ಮಾಡುತ್ತಿದ್ದಾರೆ ಈಗಾಗಲೇ ಸಿನಿಮಾ ರಿಲೀಸ್ ಆದ ದಿನವೇ ಟ್ವಿಟರ್ ಅಲ್ಲಿ ಡಿಸಾಸ್ಟರ್ ಕ್ರಾಂತಿ ಎನ್ನುವ ಟ್ರೆಂಡ್ ನಡೆಯುತ್ತಿದೆ. ಹಲವರು ಇದಕ್ಕೆ ಸಪೋರ್ಟ್ ಕೂಡ ಮಾಡಿದ್ದಾರೆ. ಆದರೆ ಇದೆಲ್ಲವೂ ದರ್ಶನ್ ( Darshan) ಅವರನ್ನು ಕ್ರಾಂತಿ ಸಿನಿಮಾದ ಖ್ಯಾತಿಯನ್ನು ಕುಗ್ಗಿಸುವ ಕೆಲಸ ಆಗಿದ್ದು, ಬರಿ ಇಷ್ಟಕ್ಕೆ ಅವರನ್ನು ತಗ್ಗಿಸಲು ಆಗುವುದಿಲ್ಲ ಎನ್ನುವುದು ಅಷ್ಟೇ ಸತ್ಯ.

ಈಗೀಗ ಎಲ್ಲಾ ಸೆಲೆಬ್ರಿಟಿಗಳು ಕೂಡ ಸಿನಿಮಾ ನೋಡಿ ತಮ್ಮ ತಮ್ಮ ಅಭಿಪ್ರಾಯ ತಿಳಿಸುತ್ತಿರುವಂತೇ ಪ್ರಮೋದ್ ಅವರು ಸಹ ಸಿನಿಮಾ ಬಗ್ಗೆ ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದಾರೆ. ಕ್ರಾಂತಿ ಸಿನಿಮಾ ನೋಡಿ ಥಿಯೇಟರ್ ನಿಂದ ಹೊರಬಂದವರಲ್ಲಿ 90 ಪ್ರತಿಶತದಷ್ಟು ಜನರು ಒಳ್ಳೆ ವಿಮರ್ಶೆಯನ್ನೇ ಕೊಡುತ್ತಿದ್ದಾರೆ. ಗಳಿಕೆಯಲ್ಲೂ ಕೂಡ ಕ್ರಾಂತಿ ಸಿನಿಮಾವು ಬಹಳ ಉತ್ತಮವಾದ ರೆಸ್ಪಾನ್ಸ್ ಪಡೆಯುತ್ತಿದೆ. ಹಾಡುಗಳಂತೆಮೂ ವರ್ಷದ ಸೂಪರ್ ಹಿಟ್ ಹಾಡುಗಳ ಲಿಸ್ಟ್ ಗೆ ಈಗಾಗಲೇ ಸೇರಿದ್ದು ಆಗಿದೆ.

ಇಷ್ಟಿದ್ದರೂ ಕೂಡ ಕ್ರಾಂತಿ ಸಿನಿಮಾ ಫ್ಲಾಫ್ ಎಂದು ಸುಳ್ಳು ಹೇಳುತ್ತಿರುವ ಮಂದಿಗೇನು ಕಡಿಮೆ ಇಲ್ಲ. ಇಂಥವರ ವಿರುದ್ಧ ಯುವನಟ ಸೆಟೆದು ನಿಂತು ಕನ್ನಡ ಸಿನಿಮಾ ಪರವಾಗಿ ನಿಂತಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ನೀವು ಸಹ ಕನ್ನಡ ಅಭಿಮಾನಿಗಳಾಗಿದ್ದರೆ ಅಪಾರ ಕಲಾವಿದರ ದಂಡೇ ಇರುವ ಅತ್ಯುತ್ತಮ ಸಂದೇಶ ಹೊತ್ತಿರುವ ಕ್ರಾಂತಿ ಚಿತ್ರವನ್ನು ತಪ್ಪದೆ ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

LEAVE A REPLY

Please enter your comment!
Please enter your name here