ಕನ್ನಡ ಮತ್ತು ತೆಲುಗು ಚಿತ್ರರಂಗಗಳಲ್ಲಿ ತಮ್ಮ ಅಭಿನಯದಿಂದ ತನ್ನದೇ ಆದ ಛಾಪು ಮೂಡಿಸಿ ಹೆಸರು ಗಳಿಸಿದಂತವರು ನಟಿ ಪ್ರೇಮ. ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಯಶಸ್ವಿಗೊಂಡು ತನ್ನ ಅಭಿನಯ ಪ್ರೌಢಿಮೆಯನ್ನು ಮೆರೆದಿರುವ ಪ್ರೇಮ ಅವರು ಮೂಲತಃ ಕರ್ನಾಟಕ ರಾಜ್ಯದ ಕೊಡಗಿನವರು. ಇವರು 1977 ರ ಜನವರಿ 6 ರಂದು ಕೊಡಗಿನ ನೆರವಂಡ ಎಂಬ ಕುಟುಂಬ ಒಂದರಲ್ಲಿ ಜನಿಸಿದವರು. ಇವರು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತ ಇದ್ದ ದಿನಗಳಲ್ಲಿ ಇವರಿಗೆ ಕ್ರೀಡೆಯಲ್ಲಿ ಬಹಳ ಆಸಕ್ತಿ ಇತ್ತು. ಅದರಲ್ಲಿಯೂ ಎತ್ತರ ಜಿಗಿತ ಮತ್ತು ವಾಲಿಬಾಲ್ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಇವರ ಸಹೋದರ ಅಯ್ಯಪ್ಪ ಅವರು ಕರ್ನಾಟಕ ರಣಜಿ ತಂಡದಲ್ಲಿ ಗುರುತಿಸಿ ಕೊಂಡಿದ್ದು ಕನ್ನಡದ ಬಿಗ್ ಬಾಸ್ ನ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ನಂತರ 2006 ರಲ್ಲಿ ನಟಿ ಪ್ರೇಮ ಅವರಿಗೆ 21 ವರ್ಷ ವಯಸ್ಸಾಗಿದ್ದ ಸಂದರ್ಭದಲ್ಲಿ ಇವರಿಗೆ ಮನೆಯವರೆಲ್ಲಾ ನೋಡಿ ನಿಶ್ಚಯಿಸಿ ಮದುವೆ ಮಾಡಲು ಮುಂದಾಗುತ್ತಾರೆ. ಕೊನೆಯದಾಗಿ ಕೊಡಗು ಮೂಲದ ಜೀವನ್ ಅಪ್ಪಚ್ಚು ಎಂಬುವವರನ್ನು ನೋಡಿ ಅವರ ಜೊತೆ ಪ್ರೇಮ ಅವರಿಗೆ ಮದುವೆ ಮಾಡುತ್ತಾರೆ. ಮದುವೆ ಆಗುವ ಸಂದರ್ಭದಲ್ಲಿ ಜೀವನ್ ಅವರು ತಾನೊಬ್ಬ ಸಾಫ್ಟ್ವೇರ್ ಉದ್ಯಮಿಯಾಗಿ ಬೆಂಗಳೂರಿನ ಕಂಪನಿ ಒಂದರಲ್ಲಿ ಕೆಲಸ ಮಾಡುವುದಾಗಿ ಹೇಳಿಕೊಂಡಿರುತ್ತಾರೆ. ಆರಂಭದಲ್ಲಿ ಇವರ ವೈವಾಹಿಕ ಜೀವನ ಸುಂದರವಾಗಿ ಸಾಗುತ್ತಾ ನೆಮ್ಮದಿಯಾಗಿ ಜೀವನ ನಡೆಸುತ್ತಾ ಇರುತ್ತಾರೆ. ಹಾಗೂ ಪ್ರೇಮ ಅವರು ಸಿನಿಮಾಗಳಲ್ಲಿ ನಟಿಸಲು ಯಾವುದೇ ಅಡ್ಡಿ ಆಗುವುದಿಲ್ಲ ಎಂದು ಜೀವನ್ ಅವರು ಹೇಳಿರುತ್ತಾರೆ. ಆದರೆ ಮುಂದೆ ಯಾವುದೋ ಸಮಯದಲ್ಲಿ ನಟಿ ಪ್ರೇಮ ಮತ್ತು ಜೀವನ್ ಅವರ ದಾಂಪತ್ಯ ಯಾವ ರೀತಿಯಲ್ಲು ಚೆನ್ನಾಗಿ ಇಲ್ಲ ಎಂಬ ಆಶ್ಚರ್ಯಕರ ವಿಚಾರ ಒಂದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತದೆ.
ಅಲ್ಲದೆ ಶಿಶಿರ ಸಿನಿಮಾದಲ್ಲಿ ಪ್ರೇಮ ಅವರ ಹೇರ್ ಸ್ಟೈಲ್ ನೋಡಿ ಆರೋಗ್ಯದಲ್ಲಿಯೂ ಕೂಡ ಸಮಸ್ಯೆ ಇದೆ ಎಂದು ಹೇಳಲಾಗುತ್ತ ಇತ್ತು. ಅಷ್ಟೇ ಅಲ್ಲದೆ ಈ ದಂಪತಿಗಳಿಗೆ ಮಕ್ಕಳು ಕೂಡ ಆಗಿರುವುದಿಲ್ಲ. ಹೀಗೆ ತದನಂತರ ಒಂದೊಂದೇ ವಿಚಾರಗಳು ಹೊರ ಬರುತ್ತಾ ಕೊನೆಗೆ ಜೀವನ್ ಅವರು ಸಾಫ್ಟ್ವೇರ್ ಉದ್ಯಮಿ ಅಲ್ಲ ಎಂಬ ವಿಷಯ ತಿಳಿಯುತ್ತದೆ. ಯಾವ ಉದ್ಯೋಗವನ್ನು ಹೊಂದಿರದ ಜೀವನ್ ಅವರು ಪ್ರೇಮ ಅವರು ಒಬ್ಬ ದೊಡ್ಡ ನಟಿ ಎಂಬ ಕಾರಣಕ್ಕಾಗಿ ಸುಳ್ಳು ಹೇಳಿ ಮದುವೆ ಆಗಿರುತ್ತಾರೆ. ಇದು ತಿಳಿದ ನಂತರ ಇಬ್ಬರ ನಡುವೆ ಜಗಳ ಪ್ರಾರಂಭ ವಾಗುತ್ತದೆ.
ಆದ್ದರಿಂದ ಪ್ರೇಮ ಅವರು ಮಾನಸಿಕವಾಗಿ ನೊಂದು ಡಿಪ್ರೆಷನ್ ಗೆ ಹೋಗಿದ್ದರು, ಅಲ್ಲದೆ ದೈಹಿಕವಾಗಿಯು ಕೂಡ ಕುಗ್ಗಿ ಹೋಗಿರುತ್ತಾರೆ. ಆ ಕಾರಣದಿಂದ 2009 ರ ನಂತರ ಸಿನಿಮಾ ರಂಗದಿಂದ ದೂರ ಉಳಿದ ಪ್ರೇಮ ಅವರು ಮನಃಶಾಂತಿಗಾಗಿ ವಿದೇಶಕ್ಕೆ ಹೋಗಿ ಅಲ್ಲೆ ನೆಲೆಸಿರುತ್ತಾರೆ. ನಂತರ 2013 ರಲ್ಲಿ ಈ ದಂಪತಿಗಳು ವಿ-ಚ್ಚೇ-ದ-ನ ಪಡೆದುಕೊಂಡು ಇಬ್ಬರು ದೂರವಾಗುತ್ತಾರೆ. ಈ ಸಮಯದಲ್ಲಿ ಇವರಿಗೆ ಮಕ್ಕಳು ಇದ್ದಾರೆ ಎಂಬ ವದಂತಿ ಎಲ್ಲೆಡೆ ಹರಿದಾಡಿತು ಇದಕ್ಕೆ ಪ್ರೇಮ ಅವರು ನಮಗೆ ಮದುವೆ ಆಗಿತ್ತು ಆದರೆ ಮಕ್ಕಳು ಇಲ್ಲ ಎಂದು ಮಾಧ್ಯಮದ ಮುಂದೆ ಕೈ ಮುಗಿದು ಸ್ಪಷ್ಟನೆ ನೀಡಿದರು. ಪ್ರೇಮ ಅವರ ಈ ದು-ರಂ-ತ ಬದುಕಿನ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ ಧನ್ಯವಾದಗಳು ಸ್ನೇಹಿತರೆ.