ಶ್ವೇತ ಚಂಗಪ್ಪ (Shwetha chengappa) ಎನ್ನುವ ಕನ್ನಡದ ಹೆಸರಾಂತ ನಟಿಯ (Actress) ಹೆಸರನ್ನು ಆಕೆ ನಿಜ ಹೆಸರಿಗಿಂತ ಅವರ ಅಭಿನಯಿಸಿರುವ ಪಾತ್ರಗಳ ಹೆಸರಿನಿಂದಲೇ ಜನ ಗುರುತಿಸುವುದು ಹೆಚ್ಚು. ಶ್ವೇತ ಚಂಗಪ್ಪ ಅವರು ಎಸ್. ನಾರಾಯಣ (S. Narayan direction) ಅವರ ನಿರ್ದೇಶನದ ಸುಮತಿ (Sumathi serial) ಎನ್ನುವ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು (Debut). ಕಳೆದ ಎರಡು ದಶಕಗಳಿಂದಲೂ ಕಿರುತೆರೆಯಲ್ಲಿ ಒಂದಲ್ಲ ಒಂದು ಸೂಪರ್ ಹಿಟ್ ಸೀರಿಯಲ್ ಗಳನ್ನು ನೀಡುವ ಮೂಲಕ ಕಿರುತೆರೆ ಲೋಕವನ್ನು ಆಳಿದರು.
ಸುಮತಿ, ಸುಕನ್ಯಾ, ಅರುಂಧತಿ, ಕಾದಂಬರಿ ಇನ್ನು ಮುಂತಾದ ಅನೇಕ ಧಾರಾವಾಹಿಗಳಿಗೆ ಬಣ್ಣ ಹಚ್ಚಿದ ಶ್ವೇತ ಚಂಗಪ್ಪ ಅವರು ಕಾದಂಬರಿ (Kadambari megha serial) ಎನ್ನುವ ಮೆಗಾ ಧಾರವಾಹಿಯ ಪಾತ್ರ ಮತ್ತು ಅಭಿನಯವನ್ನು ಕನ್ನಡಿಗರು ಎಂದೂ ಮರೆಯುವುದಿಲ್ಲ. ಉದಯ ಟಿವಿಯಲ್ಲಿ ಬಾಲಾಜಿ ಟೆಲಿ ಫಿಲಂಸ್ ಅವರ ನಿರ್ಮಾಣದಲ್ಲಿ ತೆರೆಕಂಡಿದ್ದ ಈ ಕಾದಂಬರಿ ಧಾರಾವಾಹಿ 90’s ಕಿಡ್ಸ್ ಗಳ ಸವಿ ಸವಿ ನೆನಪುಗಳಲ್ಲಿ ಒಂದು.
ಕಾದಂಬರಿ ಧಾರಾವಾಹಿಯ ಫೇಮ್ ಇಂದ ಈಕೆಗೆ ಹಿರಿತರೆಯಲ್ಲೂ ಕೂಡ ಕಾಣಿಸಿಕೊಳ್ಳುವ ಅದೃಷ್ಟ ಒಲಿದು ಬಂತು. ನಾಯಕ ನಟಿ ಆಗದಿದ್ದರೂ ಸೂಪರ್ ಸ್ಟಾರ್ಗಳ ತಂಗಿಯಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ವಿಷ್ಣುವರ್ಧನ್ ಅವರಿಗೆ ವರ್ಷ ಸಿನಿಮಾದಲ್ಲಿ ತಂಗಿಯಾಗಿ ಮತ್ತು ದರ್ಶನ್ ಅವರಿಗೆ ತಂಗಿಗಾಗಿ ಮತ್ತು ತಂಗಿಯಾಗಿ (Sister role in Darshan and Vishnuvardhan movies) ಕಾಣಿಸಿಕೊಂಡು ಅಮೋಘ ಅಭಿನಯದ ಮೂಲಕ ಗಮನ ಸೆಳೆದಿದ್ದರು.
ನಂತರ ಕಿರಣ್ ಅಪ್ಪಚ್ಚು ಅವರನ್ನು ವಿವಾಹವಾಗಿ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದ ಇವರು ಜಿಯನ್ ಅಯ್ಯಪ್ಪ ಎನ್ನುವ ಗಂಡು ಮಗುವಿನ ತಾಯಿ ಆಗಿದ್ದಾರೆ. ನಂತರ ರಿಯಾಲಿಟಿ ಶೋಗಳ (Reality show) ಮೂಲಕ ತನ್ನ ಕೆರಿಯರ್ ಸೆಕೆಂಡ್ ಇನ್ನಿಂಗ್ (second innings) ಆರಂಭಿಸಿದ್ದಾರೆ. ಮೊದಲಿಗೆ ಝೀ ಕನ್ನಡ ವಾಹಿನಿಯಲ್ಲಿ ಯಾರಿಗುಂಟು ಯಾರಿಗಿಲ್ಲ ಎನ್ನುವ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ ಇವರು ಬಿಗ್ ಬಾಸ್ ಗೆ ಹೋಗಿ ಬಂದ ಮೇಲೆ ರಿಯಾಲಿಟಿ ಶೋಗಳಲ್ಲಿ ಮತ್ತಷ್ಟು ಕಾಣಿಸಿಕೊಳ್ಳಲು ಶುರು ಮಾಡಿದರು.
ಬಿಗ್ ಬಾಸ್ ಇಂದ ಬಂದ ಮೇಲೆ ಸೃಜನ್ ಲೋಕೇಶ್ ಅವರು ಶುರು ಮಾಡಿದ ಮಜಾ ಟಾಕೀಸ್ ಎನ್ನುವ ಕಾರ್ಯಕ್ರಮದಲ್ಲಿ ಸೃಜನ್ ಅವರ ಸಪ್ನೋಂ ಕಿ ರಾಣಿಯಾಗಿ ಕಾಣಿಸಿಕೊಂಡ ಇವರು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಅದುವರೆಗೆ ಕೂಡ ಕಣ್ಣೀರಿನ ನಾಯಕಿ ಆಗಿ ಕಂಡಿದ್ದ ಶ್ವೇತಾ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದರು. ಈಗ ಝೀ ಕನ್ನಡ ವಾಹಿನಿಯ ಸೂಪರ್ ಕ್ವೀನ್ಸ್ (Super Queens) ಕಾರ್ಯಕ್ರಮದಲ್ಲೂ ನಿರೂಪಕಿ (Anchor) ಆಗಿದ್ದಾರೆ.
ಇದಕ್ಕೂ ಮುನ್ನ ಪ್ರಸಾರವಾದ ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲೂ ನಿರೂಪಕಿ ಆಗಿದ್ದರು. ಈ ಮೂಲಕ ತಾವಿನ್ನು ಝೀ ಕನ್ನಡ ವಾಹಿನಿಯ ಮತ್ತೊಬ್ಬ ಪರಮನೆಂಟ್ ಆಂಕರ್ ಎನ್ನುವುದನ್ನು ರಿಜಿಸ್ಟರ್ ಮಾಡುತ್ತಿದ್ದಾರೆ. ಇದರ ಜೊತೆಗೆ ತನ್ನದೇ ಆದ ಉದ್ಯಮಗಳನ್ನು ಸಹ ಹೊಂದಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದಾರೆ. ಸದಾ ಒಂದಲ್ಲ ಒಂದು ವಿಷಯಗಳನ್ನು ಪೋಸ್ಟ್ ಹಾಕುವ ಇವರು ರೀಲ್ಸ್ ಗಳನ್ನು ಮಾಡುತ್ತಾ ಫೇಮಸ್ ಆಗಿದ್ದಾರೆ.
ಮೊದಲಿನಿಂದಲೂ ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಇವರು ಅಪ್ರತಿಮ ಸುಂದರಿಗೆ ಸರಿ. ಇದೇ ಕಾರಣಕ್ಕೆ ಶೂಟಿಂಗ್ ಸೆಟ್ ಅಲ್ಲಿ ತಮ್ಮ ಕಾಸ್ಟ್ಯೂಮ್ ಜೊತೆ ತಪ್ಪದೆ ಫೋಟೋ ಅಥವಾ ರೀಲ್ಸ್ ತೆಗೆದು ಹಾಕಿಬಿಡುತ್ತಾರೆ. 43ರ ವಸಂತಕ್ಕೆ ಈಗಷ್ಟೇ ಕಾಲಿಟ್ಟಿರುವ ಈ ಕೊಡಗಿನ ಬೆಡಗಿ ಎಳೆ ಹೀರೋಯಿನ್ ಗಳಿಗೂ ಪೈಪೋಟಿ ಕೊಡುವಂತೆ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ. ಇವರ ಹೊಸ ರೀಲ್ಸ್ ಇನ್ಸ್ಟಾಗ್ರಾಮ್ ಅಲ್ಲಿ ಅಪ್ಲೋಡ್ ಆಗಿದ್ದು ದೇವಲೋಕದ ಅಪ್ಸರೆಯಂತೆ ಆ ಹಳದಿ ಅನಾರ್ಕಲಿ ಬಟ್ಟೆಯಲ್ಲಿ ಮಿಂಚುತ್ತಿದ್ದಾರೆ.