Sunday, May 28, 2023
HomeEntertainmentಎರಡು ವರ್ಷದ ಬಳಿಕ ಸಿಹಿ ಸುದ್ದಿ ಹಂಚಿಕೊಂಡ ನಟಿ ವೈಷ್ಣವಿ ಗೌಡ.

ಎರಡು ವರ್ಷದ ಬಳಿಕ ಸಿಹಿ ಸುದ್ದಿ ಹಂಚಿಕೊಂಡ ನಟಿ ವೈಷ್ಣವಿ ಗೌಡ.

ನಟಿ ವೈಷ್ಣವಿ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಇವರನ್ನು ವೈಷ್ಣವಿ ಗೌಡ ಅನ್ನುವುದಕ್ಕಿಂತ ಸನ್ನಿಧಿ ಅಂದರೆ ಎಲ್ಲರೂ ಬಹುಬೇಗ ಗುರುತು ಹಿಡಿಯುತ್ತಾರೆ. ಏಕೆಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ಸನ್ನಿಧಿ ಪಾತ್ರವನ್ನು ವೈಷ್ಣವಿ ಗೌಡ ಅವರು ಮಾಡಿದ್ದರು. ಆಗಿನಿಂದಲೂ ಕೂಡ ಇವರ ನಿಜ ಹೆಸರು ವೈಷ್ಣವಿ ಗೌಡ ಎಂಬುದನ್ನೇ ಪ್ರೇಕ್ಷಕರು ಮರೆತು ಬಿಟ್ಟಿದ್ದಾರೆ ಅಷ್ಟರ ಮಟ್ಟಿಗೆ ಇವರು ಸನ್ನಿಧಿ ಎಂಬ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು.

ಸುಮಾರು 4 ವರ್ಷಗಳ ಕಾಲ ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ನಟನೆ ಮಾಡುವುದರ ಮೂಲಕ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದ್ದರು. ಈ ಧಾರಾವಾಹಿಯಿಂದ ಇವರಿಗೆ ಸಿಕ್ಕ ಕೀರ್ತಿ ಹೆಸರು ಪ್ರತಿಷ್ಠೆ ಸರು ಅಷ್ಟಿಷ್ಟಲ್ಲ ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ನಟನೆ ಮಾಡುವುದಕ್ಕಿಂತ ಮುಂಚೆ ಉದಯ ಟಿವಿಯಲ್ಲಿ ದೇವಿ ಎಂಬ ಧಾರಾವಾಹಿಯಲ್ಲಿ ಅಭಿನಯ ಮಾಡಿದರು. ಆದರೆ ಈ ಪಾತ್ರದಿಂದ ಇವರು ಹೆಚ್ಚು ಗುರುತಿಸಿಕೊಳ್ಳಲಿಲ್ಲ ಮತ್ತು ಖ್ಯಾತಿಯನ್ನು ಕೂಡ ಗಳಿಸಲಿಲ್ಲ ಆದರೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟನೆ ಮಾಡಿದ ನಂತರವೇ ಎಲ್ಲರಿಗೂ ವೈಷ್ಣವಿ ಗೌಡ ಅವರು ಚಿರಪರಿಚಿತರಾಗುತ್ತಾರೆ.

ಇನ್ನು ಅಗ್ನಿಸಾಕ್ಷಿಯಲ್ಲಿ ನಟನೆ ಮಾಡಿದ ನಂತರ ಇವರಿಗೆ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಹೋಗುವಂತಹ ಅವಕಾಶ ದೊರೆಯುತ್ತದೆ. ಈ ಅವಕಾಶವನ್ನು ಬಳಕೆ ಮಾಡಿಕೊಂಡು ಬಿಗ್ ಬಾಸ್ ಮನೆಯಲ್ಲಿ ಸುಮಾರು 100 ದಿನಗಳ ಕಾಲ ವಾಸ ಮಾಡುತ್ತಾರೆ ಚಿಕ್ಕದೊಂದು ಕಾಂಟ್ರವರ್ಸಿಯನ್ನು ಕೂಡ ಮಾಡಿಕೊಳ್ಳುವುದಿಲ್ಲ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಯಾವುದೇ ರೀತಿಯಾದಂತಹ ಆಫರ್ಗಳು ದೊರೆಯಲಿಲ್ಲ.

ಆದರೂ ಕೂಡ ನೃತ್ಯದಲ್ಲಿ ಹೆಚ್ಚಿದ ಆಸಕ್ತಿಯನ್ನು ಹೊಂದಿದಂತಹ ಇವರು ತಮ್ಮ ಮನೆಯಲ್ಲೇ ಡಾನ್ಸಿಂಗ್ ಕ್ಲಾಸನ್ನು ತೆರೆಯುತ್ತಾರೆ ಮಕ್ಕಳಿಗೆ ಉಚಿತವಾಗಿಯೂ ಕೂಡ ಡ್ಯಾನ್ಸ್ ಹೇಳಿ ಕೊಡುತ್ತಾರೆ. ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ಅತೀವ ಆಸಕ್ತಿಯನ್ನು ಹೊಂದಿದ್ದಾರೆ ಹಾಗಾಗಿ ಹೊಸ ಹೊಸ ಫೋಟೋ ಶೂಟ್ ಮಾಡಿಸುವ ಮೂಲಕ ಪ್ರೇಕ್ಷಕರಿಗೂ ಮನರಂಜನೆಯನ್ನು ನೀಡುತ್ತಿದ್ದರು.

ಸದ್ಯಕ್ಕೆ ನಟಿ ವೈಷ್ಣವಿ ಗೌಡ ಅವರಿಗೆ ಹೊಸದೊಂದು ಸೀರಿಯಲ್ ನಲ್ಲಿ ನಟನೆ ಮಾಡುವಂತಹ ಅವಕಾಶ ದೊರೆತಿದೆ ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಎಂಬ ಧಾರಾವಾಹಿಯಲ್ಲಿ ಖಡಕ್ ವಿಲ್ಲನ್ ನಟಿ ವೈಷ್ಣವಿ ಗೌಡ ಅವರಿಗೆ ಅಭಿನಯಿಸಲು ಆಫರ್ ದೊರೆತಿದೆ. ಈ ಆಫರ್ ಅನ್ನು ಸ್ವೀಕಾರ ಮಾಡಿದಂತಹ ವೈಷ್ಣವಿ ಗೌಡ ಅವರು ಲಕ್ಷಣ ದಾರವಾಹಿಯಲ್ಲಿ ಭೂಪತಿ ಅಂದರೆ ಜಗನ್ ಅವರ ಹೆಂಡತಿಯ ಸ್ಥಾನಕ್ಕೆ ಬರಲಿದ್ದಾರೆ.

ಈ ಒಂದು ಪ್ರೋಮೋ ಶೂಟಿಂಗ್ ಸೀನ್ ಅನ್ನು ನಟಿ ವೈಷ್ಣವಿ ಗೌಡ ಅವರು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಇದನ್ನು ನೋಡಿದಂತಹ ಅಭಿಮಾನಿಗಳು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಅನುಮಾನವನ್ನು ಕೂಡ ವ್ಯಕ್ತಪಡಿಸಿದ್ದಾರೆ ಏಕೆಂದರೆ ಇಲ್ಲಿಯವರೆಗೂ ಕೂಡ ವೈಷ್ಣವಿ ಗೌಡ ಅವರು ಸಾಫ್ಟ್ ಪಾತ್ರಗಳನ್ನು ಮಾತ್ರ ಮಾಡಿಕೊಂಡು ಬಂದಿದ್ದರು. ಆದರೆ ಇದೇ ಮೊದಲ ಬಾರಿಗೆ ಖಡಕ್ ವಿಲ್ಲನ್ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಹಾಗಾಗಿ ಈ ಪಾತ್ರವನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದು ವೈಷ್ಣವಿ ಗೌಡ ಅಭಿಮಾನಿಗಳ ಪ್ರಶ್ನೆಯಾಗಿದೆ.

ಇನ್ನು ವೈಷ್ಣವಿ ಗೌಡ ಅಭಿಮಾನಿಗಳಂತೂ ಯಾವುದಾದರೂ ಪಾತ್ರವಾದರೂ ಸರಿ ತೆರೆಯ ಮೇಲೆ ಮತ್ತೆ ಬರುತ್ತಿದ್ದಾರೆ ಎಲ್ಲಾ ಅದೇ ಖುಷಿಯ ವಿಚಾರ ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ‌. ಸದ್ಯಕ್ಕೆ ವೈಷ್ಣವಿ ಗೌಡ ಅವರು ಲಕ್ಷಣ ಧಾರವಾಹಿಯಲ್ಲಿ ಇನ್ನು ಮುಂದೆ ಕಾಣಿಸಿಕೊಳ್ಳಲಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮುಖಾಂತರ ತಿಳಿಸಿ.!