Sunday, June 4, 2023
HomeUseful Informationಆಧಾರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ 2 ಲಕ್ಷ ಸಾಲ ಕೇವಲ 5 ನಿಮಿಷದಲ್ಲಿ ದೊರೆಯಲಿದೆ...

ಆಧಾರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ 2 ಲಕ್ಷ ಸಾಲ ಕೇವಲ 5 ನಿಮಿಷದಲ್ಲಿ ದೊರೆಯಲಿದೆ ಹೇಗೆ ಅಂತ ನೋಡಿ.!

 

ಹೆಚ್ಚುತ್ತಿರುವ ಬೆಲೆಗಳ ಮಧ್ಯೆ ಹೊಸ ಹೊಸ ಕನಸುಗಳನ್ನು ನನಸು ಮಾಡಿಕೊಳ್ಳಲು, ಕೃಷಿ ಕಾರ್ಖಾನೆಗಳ ಕೆಲಸ ಕಾರ್ಯಗಳಲ್ಲಿ ಅಥವಾ ದಿನನಿತ್ಯದ ಚಟುವಟಿಕೆಗಳಲ್ಲಿ ನವ ತಂತ್ರಜ್ಞಾನಗಳನ್ನು ಅಳವಡಿಸಿರುವ ಯಂತ್ರೋಪಕರಣಗಳನ್ನು ಬಳಸಲು ಸಾಲವನ್ನು ಪಡೆಯುವ ಅಥವಾ ಲೋನ್ ಮಾಡುವ ಸಂದರ್ಭವು ಬಂದೊದಗುತ್ತದೆ. ಇದೀಗ ನಾವು ನೀಡಲಿರುವ ಮಾಹಿತಿಯನ್ನು ಸಂಪೂರ್ಣವಾಗಿ ಅರಿತರೆ ನಿಮಗೆ ಸಂತಸ ತರಬಹುದು.

ಸಾಲವನ್ನು ಪಡೆಯಲು ಈ ಹಿಂದೆ ಅನೇಕ ದಾಖಲಾತಿಗಳನ್ನು ನೀಡಿ ಬಹಳ ಸಮಯ ಕಾಯಬೇಕಿತ್ತು. ಹಣ ಕೈ ಸೇರುವವರೆಗೂ ತಾಳ್ಮೆ ಇರಬೇಕಿತ್ತು. ಇದೀಗ ಸಾಲ ಅಥವಾ ಲೋನ್ ಪಡೆಯುವುದು ಸುಲಭವಾಗಿದೆ. ಈ ಹಿಂದೆ ಪರ್ಸನಲ್ ಲೋನ್ ಪಡೆಯಲು ವಿಳಾಸ ಹಾಗೂ ಗುರುತಿನ ಪುರಾವೆಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದರು. ಆದರೂ ಈಗ ಕೇವಲ ಆಧಾರ್ ಕಾರ್ಡ್ ನಿಂದಲೇ ವಯಕ್ತಿಕ ಸಾಲವನ್ನು ಪಡೆಯಬಹುದು.

ಆಧಾರ್ ಕಾರ್ಡನ್ನು ಬಳಸಿ ವೈಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಧಾರ್ ಕಾರ್ಡ್‌ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನವು ಅತಿಯಾಗಿ ಹಂತಗಳಿಲ್ಲದೆ ಸರಳವಾಗಿದ್ದು, ಅದರ ಕುರಿತಾದ ಕೆಲವು ಪ್ರಮುಖ ವಿಷಯಗಳು ಇಲ್ಲಿದೆ. ಈ ಸಾಲ ಪಡೆಯಲು ನಿಮ್ಮ ಕ್ರೆಡಿಟ್ ಸ್ಕೋರ್ (CIBIL Score) ಅನ್ನು ಪರಿಶೀಲಿಸಿಕೊಳ್ಳಬೇಕು ಎಂಬ ವಿಚಾರವು ಗಮನದಲ್ಲಿರಲಿ. ಅವರ ಷರತ್ತಿಗೆ ಅನುಗುಣವಾಗಿ ಅರ್ಹರಾಗಿದ್ದವರು ಮಾತ್ರ ಸಾಲವನ್ನು ಪಡೆಯಬಹುದು.

ಆಧಾರ್ ಕಾರ್ಡ್ ಮೂಲಕವಾಗಿ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನವು ಈ ಕೆಳಗಿನಂತಿದೆ;
• ಅರ್ಜಿ ಸಲ್ಲಿಸಲು ಮೊದಲು ಬ್ಯಾಂಕಿನ ಅಧಿಕೃತ ವೆಬ್ಸೈಟ್ ಗೆಭೇಟಿ ನೀಡಬೇಕು.
• ಇಲ್ಲವೇ ಮೊಬೈಲ್ ನಲ್ಲಿ ಇರುವ ಬ್ಯಾಂಕಿನ ಅಪ್ಲಿಕೇಶನ್ ಮುಖಾಂತರವಾಗಿಯೇ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು.
• ಬಳಿಕ ನೀವು ಪಡೆದ ಓಟಿಪಿಯನ್ನು ನಮೂದಿಸಿದ ನಂತರ ವೈಯಕ್ತಿಕ ಸಾಲವನ್ನು ಆಯ್ಕೆ ಮಾಡಬೇಕು.
• ನೀವು ಪಡೆಯಲು ಇಚ್ಚಿಸುವ ಸಾಲದ ಒಟ್ಟಾರೆ ಮೊತ್ತ ಹಾಗೂ ಅಲ್ಲಿ ಕೇಳಿರುವ ಅಗತ್ಯ ಮಾಹಿತಿಗಳನ್ನು ನೀಡಬೇಕು.

• ನಿಮ್ಮ ಪಾನ್ ಕಾರ್ಡ್ ಮಾಹಿತಿಯನ್ನು ಕೂಡ ನಮೂದಿಸಬೇಕಾಗಬಹುದು.
• ಅಗತ್ಯ ಮಾಹಿತಿಗಳನ್ನು ಹಾಗೂ ದಾಖಲಾತಿ ಪತ್ರಗಳನ್ನು ಸಲ್ಲಿಸಿದ ಬಳಿಕ ಬ್ಯಾಂಕ್ ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತದೆ. ಸಲ್ಲಿಸಿದ ಎಲ್ಲ ಮಾಹಿತಿಗಳು ಸತ್ಯವೇ ನ್ಯಾಯಯುತವಾಗಿವೆಯೇ ಎಂದು ಪರೀಕ್ಷಿಸುತ್ತದೆ.
• ನೀವು ಸಲ್ಲಿಸಿದ ಅರ್ಜಿಯು ಸರಿಯಾಗಿದ್ದು, ದಾಖಲಾತಿಗಳು ಅವರು ಕೇಳಿದ ಎಲ್ಲಾ ಮಾಹಿತಿಗಳನ್ನು ಖಚಿತಪಡಿಸುವಂತಿದ್ದು ನಿಮಗೆ ನೀಡಬೇಕಾದ ಸಾಲವನ್ನು ಅವರು ಅನುಮೋದಿಸಿದರೆ ಸಾಲವನ್ನು ಪಡೆಯಲು ನೀವು ಅರ್ಹರಾಗುತ್ತೀರಿ. ಬಳಿಕ ಸಾಲದ ಮೊತ್ತವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಯಾವ ಯಾವ ಬ್ಯಾಂಕ್ ಗಳು ಈ ರೀತಿಯ ಸಾಲವನ್ನು ನೀಡುತ್ತಿದೆ ಎಂಬ ಪ್ರಶ್ನೆಯು ನಿಮ್ಮನ್ನು ಕಾಡುತ್ತಿದ್ದರೆ ಇಲ್ಲಿದೆ ಉತ್ತರ. ನಿಮ್ಮ ಆಧಾರ್ ಕಾರ್ಡನ್ನು ಬಳಸಿಕೊಂಡು ವೈಯಕ್ತಿಕ ಸಾಲವನ್ನು ಪಡೆಯಲು ಇಚ್ಚಿಸಿದರೆ, ಅದಕ್ಕೆ ಸುಲಭದ ಮಾರ್ಗ ತೋರುವ ಬ್ಯಾಂಕ್ ಗಳೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚಡಿಎಫ್ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಗಳು ಸೇರಿದಂತೆ ಅನೇಕ ಭಾರತೀಯ ಬ್ಯಾಂಕ್ ಗಳು ಸಹಾಯ ಹಸ್ತವನ್ನು ಚಾಚಿವೆ.

ಗ್ರಾಹಕರು ಆಧಾರ್ ಕಾರ್ಡ್ ಮೂಲಕವಾಗಿ ಸಾಲವನ್ನು ಪಡೆಯಲು ಇಚ್ಚಿಸಿದರೆ ಗಮನದಲ್ಲಿಡಬೇಕಾದ ಮುಖ್ಯ ಅಂಶವೆಂದರೆ ನಿಮ್ಮ ಕ್ರೆಡಿಟ್ ಸ್ಕೋರ್ ಅವರು ನಿಗದಿಪಡಿಸಿದಕ್ಕಿಂತ ಕಡಿಮೆ ಇರಬಾರದು. ನಿಮ್ಮ ಕ್ರೆಡಿಟ್ ಸ್ಕೋರ್ ಕನಿಷ್ಠ 750 ಇರಬೇಕು ಅಥವಾ ಅದಕ್ಕೂ ಹೆಚ್ಚಿನದಾಗಿರಬೇಕು. ಈ ರೀತಿಯಾಗಿ ಅರ್ಜಿಯನ್ನು ಸಲ್ಲಿಸಿ ಎರಡು ಲಕ್ಷ ರೂಪಾಯಿಗಳವರೆಗಿನ ಸಾಲವನ್ನು ಪಡೆಯಬಹುದು. ಅನೇಕ ಬಾರಿ ಸಲ್ಲಿಸಿದ ಅರ್ಜಿಯು ಕೇವಲ 5 ನಿಮಿಷಗಳಲ್ಲಿಯೇ ಅಪ್ರೂವಲ್ ಆಗುತ್ತದೆ. ತಕ್ಷಣವೇ ಸಾಲವನ್ನು ಕೂಡ ವಿತರಿಸಲಾಗುತ್ತದೆ.