Home Useful Information ಎರಡನೇ ಹೆಂಡತಿಯ ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಇದೆಯಾ ಅಥವಾ ಇಲ್ಲವಾ.? ಕಾನೂನು ಈ ಬಗ್ಗೆ ಏನು ಹೇಳುತ್ತೆ ನೋಡಿ.

ಎರಡನೇ ಹೆಂಡತಿಯ ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಇದೆಯಾ ಅಥವಾ ಇಲ್ಲವಾ.? ಕಾನೂನು ಈ ಬಗ್ಗೆ ಏನು ಹೇಳುತ್ತೆ ನೋಡಿ.

0
ಎರಡನೇ ಹೆಂಡತಿಯ ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಇದೆಯಾ ಅಥವಾ ಇಲ್ಲವಾ.? ಕಾನೂನು ಈ ಬಗ್ಗೆ ಏನು ಹೇಳುತ್ತೆ ನೋಡಿ.

 

ಭಾರತ ದೇಶದಲ್ಲಿ ಜನಸಾಮಾನ್ಯರಿಗೆ ಕಾನೂನು ಕುರಿತು ಮಾಹಿತಿ ಕೊರತೆ ಇದೆ. ಅದರಲ್ಲೂ ಆಸ್ತಿಭಾಗದ ಕುರಿತು ಜನ ಹೆಚ್ಚು ಗೊಂದಲಕ್ಕೆ ಒಳಗಾಗಿದ್ದಾರೆ. ಭಾರತದಲ್ಲಿ ಸಂಬಂಧಗಳನ್ನೇ ಆಸ್ತಿ ಎಂದು ತಿಳಿದುಕೊಳ್ಳಲಾಗಿದೆ. ಆದರೂ ಒಟ್ಟು ಕುಟುಂಬದ ಆಸ್ತಿ ವಿಭಾಗದ ವಿಚಾರ ಬಂದಾಗ ನಾನಾ ರೀತಿಯ ಗೋಜಲಾಗುವುದು ಇದ್ದೇ ಇದೆ. ಹೆಚ್ಚಿನ ಪ್ರಕರಣಗಳಲ್ಲಿ ಕುಟುಂಬದ ನಡುವೆ ಆಸ್ತಿ ವಿಭಾಗದ ಕುರಿತು ತೀರ್ಮಾನಗಳು ಒಪ್ಪಿಗೆ ಆಗದೆ ಕಾನೂನಿನ ಮೊರೆ ಹೋಗಿರುವ ಉದಾಹರಣೆಗಳು ಇವೆ.

ಆದರೆ ಒಂದು ವಿಚಾರದಲ್ಲಿ ಇನ್ನೂ ಜನತೆಗೆ ತಪ್ಪು ತಿಳುವಳಿಕೆ ಇದೆ. ಅದೇನೆಂದರೆ ಒಬ್ಬ ವ್ಯಕ್ತಿಗೆ ಇಬ್ಬರು ಹೆಂಡತಿಯರಿದ್ದು, ಇಬ್ಬರಿಗೂ ಮಕ್ಕಳಿದ್ದರೆ ಆತನ ಆಸ್ತಿಯಲ್ಲಿ ಇಬ್ಬರು ಹೆಂಡತಿಯರಿಗೆ ಸಮಪಾಲು ಸಿಗುತ್ತದೆಯಾ ಅಥವಾ ಮಕ್ಕಳ ನಡುವೆ ಸಮಾನವಾಗಿ ಹಂಚಿಕೆಯಾಗುತ್ತದೆಯಾ ಎಂದು. ಇದೇ ವಿಚಾರದ ಕುರಿತು ಇಂದು ಸ್ಪಷ್ಟವಾಗಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.

ಹಿಂದು ವಿವಾಹ ಕಾಯ್ದೆ ಪ್ರಕಾರ ಮೊದಲನೇ ಹೆಂಡತಿ ಜೀವಂತ ಇದ್ದಾಗ ಎರಡನೇ ಮದುವೆ ಆದರೆ ಅದು ಅಸಿಂಧು ಆಗುತ್ತದೆ. ಆದರೆ ಒಬ್ಬ ವ್ಯಕ್ತಿಗೆ ಮೊದಲನೇ ಮದುವೆಯಾಗಿ ಒಬ್ಬಳು ಮಗಳಿದ್ದಾಳೆ, ನಂತರ ಮೊದಲ ಪತ್ನಿ ಮರಣ ಹೊಂದಿದ ಕಾರಣಕ್ಕೆ ಎರಡನೇ ಮದುವೆ ಆಗಿದ್ದಾನೆ ಎಂದು ಇಟ್ಟುಕೊಳ್ಳೋಣ. ಈಗ ಎರಡನೇ ಹೆಂಡತಿಗೆ 2 ಗಂಡು ಮಕ್ಕಳು ಹಾಗೂ 3 ಹೆಣ್ಣು ಮಕ್ಕಳು ಮಕ್ಕಳಿದ್ದಾರೆ ಎಂದುಕೊಳ್ಳೋಣ.

ಒಟ್ಟು ಆ ವ್ಯಕ್ತಿಗೆ 6 ಮಕ್ಕಳು ಇದ್ದಂತೆ ಆಯಿತು. ಈಗ ಆ ವ್ಯಕ್ತಿ 6 ಎಕರೆ ಜಮೀನು ಹೊಂದಿದ್ದಾಗ, ಆ 6 ಎಕರೆ ಜಮೀನು ಆತನ ಮರಣ ನಂತರ ವಿಭಜನೆ ಆದರೆ ಮೊದಲ ಹೆಂಡತಿ ಮಕ್ಕಳಿಗೆ 3 ಎಕರೆ, ಎರಡನೇ ಹೆಂಡತಿ ಮಕ್ಕಳಿಗೆ 3 ಎಕರೆ ಸಿಗುತ್ತದೆ ಎಂದು ತಪ್ಪು ತಿಳಿದುಕೊಂಡಿರುತ್ತಾರೆ. ಆದರೆ ಕಾನೂನು ಇದರ ಕುರಿತು ಬೇರೆ ಹೇಳುತ್ತದೆ.

ಯಾವುದೇ ವ್ಯಕ್ತಿಯ ಆಸ್ತಿ ವ್ಯಕ್ತಿಯ ಮ.ರಣದ ನಂತರ ಆತನ ವಾರಸ್ದಾರರಿಗೆ ಆಸ್ತಿ ಮೇಲಿನ ಹಕ್ಕು ವಿಭಜನೆ ಆಗುವ ಸಮಯದಲ್ಲಿ ಆಸ್ತಿ ಮೂಲವನ್ನು ಮುಖ್ಯವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಯಾಕೆಂದರೆ ಆಸ್ತಿ ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಅಥವಾ ಉಡುಗೊರೆ ರೂಪದಲ್ಲಿ ಬಂದಿದ್ದರೆ ಮುಂದಿನ ಹಂತದಲ್ಲಿ ಆಸ್ತಿ ವಿಭಜನೆ ಮಾಡುವಾಗ ಸುಲಭ ಆಗುತ್ತಿದೆ. ಒಂದು ವೇಳೆ ಸ್ವಯಾರ್ಜಿತವಾಗಿ ಆಸ್ತಿ ಸಂಪಾದನೆ ಮಾಡಿದ್ದರೆ, ಆತನ ಯಾವ ಮಕ್ಕಳಿಗೆ ಬೇಕಾದರೂ ಅವರು ಅವರ ಆಸ್ತಿಯ ಹಕ್ಕು ವರ್ಗಾವಣೆ ಮಾಡಿಕೊಡಬಹುದು.

ಒಂದು ವೇಳೆ ಆ ವ್ಯಕ್ತಿ ಪಿತ್ರಾರ್ಜಿತವಾಗಿ ಬಂದ ಆಸ್ತಿ ಹೊಂದಿದ್ದರೆ ಆತ ಮದುವೆ ಆದ ನಂತರವೇ ಮಡದಿಗೆ ಮತ್ತು ಆತನ ಮಕ್ಕಳು ಕೂಡ ಹುಟ್ಟಿನಿಂದಲೇ ಆಸ್ತಿ ಮೇಲೆ ಹಕ್ಕು ಹೊಂದಿರುತ್ತಾರೆ. ಪಿತ್ರಾಜಿತವಾಗಿ ಬಂದ ಜಮೀನು ಹೊಂದಿದ್ದರೆ ಆ ವ್ಯಕ್ತಿಯ ಮರಣದ ನಂತರ ಆತನ ಎಲ್ಲಾ ಮಕ್ಕಳಿಗೂ ಕೂಡ ಸಮಭಾಗವಾಗಿ ಅದು ವಿಭಜನೆ ಆಗುತ್ತದೆ. ಎಲ್ಲ ಮಕ್ಕಳಿಗೂ ತಲ ಒಂದು ಎಕರೆ ಆಸ್ತಿ ಸಿಗುತ್ತದೆ.

ಒಂದು ವೇಳೆ ಆರು ಎಕರೆ ಆಸ್ತಿಯಲ್ಲಿ ಸ್ವಲ್ಪ ಭಾಗ ಅವರ ಸ್ವಯಚಿತ ಆಸ್ತಿ ಆಗಿದ್ದರೆ ಅವರು ಇದ್ದಾಗ ದಾನ ಪತ್ರದ ಮೂಲಕ ಅಥವಾ ಕ್ರಯ ಪತ್ರದ, ಗಿಫ್ಟ್ ಡೀಡ್ ಮೂಲಕ ಅವರಿಚ್ಛೆಯ ಯಾರಿಗಾದರೂ ಅದನ್ನು ಮಾಡಿಕೊಡಬಹುದು. ಉಳಿದ ಆಸ್ತಿ ಎಲ್ಲಾ ಮಕ್ಕಳಿಗೂ ಸಮಾನವಾದ ಅಧಿಕಾರ ಬರುತ್ತಿದೆ. ಈ ವಿಷಯದ ಕುರಿತು ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಅಥವಾ ನಿಮ್ಮ ಪರಿಚಯದ ವಕೀಲರ ಬಳಿ ಈ ಕುರಿತು ಇರುವ ಕಾನೂನಿನ ಬಗ್ಗೆ ಕೇಳಿ ತಿಳಿಯಿರಿ.

LEAVE A REPLY

Please enter your comment!
Please enter your name here