ಗಂಧದಗುಡಿ ಸಿನಿಮಾವು ಪ್ರತಿಯೊಬ್ಬ ಕನ್ನಡಿಗನು ನೋಡಲೇಬೇಕಾದ ಕರ್ನಾಟಕದ ಹೆಮ್ಮೆಯ ಸಿನಿಮಾ ಎನ್ನಬಹುದು. ಪುನೀತ್ ಅವರ ಕಡೆಯ ಸಿನಿಮಾ ಆಗಿರುವ ಗಂಧದಗುಡಿ ಸಿನಿಮಾ ಅವರ ಕನಸಿನ ಪ್ರಾಜೆಕ್ಟ್ ಆಗಿತ್ತು. ತಮ್ಮದೇ ಪಿ ಆರ್ ಕೆ ಪ್ರೊಡಕ್ಷನ್ ಅಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ ಪುನೀತ್ ಅವರು ನಮ್ಮನ್ನು ಅಗಲುವ ಮುನ್ನ ಇಡೀ ಕರ್ನಾಟಕದ ವೈಭವವನ್ನು ಕಣ್ಣಲ್ಲಿ ನೋಡಿ ನಮಗೂ ಸಹ ಕಣ್ತುಂಬಿಕೊಳ್ಳುವ ಅವಕಾಶ ನೀಡಿ ಕನ್ನಡಿಗರಿಗೆ ಎಂದು ತುಂಬಲಾಗದ ಋಣದ ಹೊರೆ ಹೊರೆಸಿದ್ದಾರೆ.
ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164
ನಿಜಕ್ಕೂ ಪುನೀತ್ ರಾಜಕುಮಾರ್ ಅವರಿಗೆ ಈ ಸಿನಿಮಾ ಮಾಡಬೇಕೆನ್ನುವ ಆಸೆ ಯಾಕೆ ಬಂದಿತ್ತು ,ಇದೇ ಅವರ ಕೊನೆಯ ಸಿನಿಮಾ ಯಾಕಾಯಿತು ಎನ್ನುವುದನ್ನು ನೆನೆಸಿಕೊಂಡರೆ ಈ ಪರಮಾತ್ಮನ ಮೇಲಿರುವ ಗೌರವ ಮತ್ತಷ್ಟು ಹೆಚ್ಚಾಗುತ್ತದೆ. ಸಿನಿಮಾದಲ್ಲಿ ಕರ್ನಾಟಕದ ಮಲೆನಾಡಿನಲ್ಲಿ ಹಿಡಿದು ಬಯಲು ಸೀಮಲೆವರೆಗೂ.
ಚಾಮರಾಜನಗರದಿಂದ ಹಿಡಿದು ರಾಜ್ಯದ ಮೂಲೆ ಮೂಲೆಗೂ ಪುನೀತ್ ಹಾಗೂ ಅಮೋಘವರ್ಷ ಅವರು ಪ್ರಯಾಣ ಮಾಡಿ ಕರ್ನಾಟಕದ ಪ್ರಾಕೃತಿಕ ಸೊಬಗು, ವನ್ಯಜೀವಿ ವಲಯ, ಕಾಡು, ಬೆಟ್ಟ, ಗುಡ್ಡ, ನದಿ, ಜಲಪಾತ ಎಲ್ಲದರ ವೈಭವವನ್ನು ಸೆರೆ ಹಿಡಿದು ಚಿತ್ರವಾಗಿ ಕನ್ನಡಿಗರ ಮುಂದಿಟ್ಟಿದ್ದಾರೆ. ನಿಜಕ್ಕೂ ಇಂತಹ ಅದ್ಭುತ ಪ್ರಯತ್ನ ಮತ್ತು ಆಲೋಚನೆಗೆ ಮತ್ತೊಮ್ಮೆ ಅಪ್ಪುಗೆ ಹ್ಯಾಟ್ಸಾಫ್ ಹೇಳಲೇಬೇಕು.
ಸಿನಿಮಾದಲ್ಲಿ ಕಾಡಿನಲ್ಲಿ ಸಮಯ ಕಳೆಯುವ ಅಪ್ಪು ಅವರು ಆ ಅನುಭವಗಳ ಬಗ್ಗೆ ಹೇಳುತ್ತಿದ್ದಾಗ ನಾವೇ ಕಾಡಿನ ಮಧ್ಯೆ ಕಾರಿರುಳ ರಾತ್ರಿಯಲ್ಲಿ ಇರುವ ಅನುಭವ ಬರುತ್ತದೆ. ಗಾಜನೂರಿನ ಮನೆ ಒಳಗೆ ಹೊಕ್ಕು, ಅಣ್ಣಾವ್ರ ಬಗ್ಗೆ ಹೇಳುವಾಗ ನಾವೇ ಗಾಜನೂರಿಗೆ ಹೋಗಿದ್ದೇವೆನೋ ಎನ್ನುವ ಅನುಭವ ಬರುತ್ತದೆ. ಅಣ್ಣಾವ್ರ ಬಗ್ಗೆ ಕೂಡ ಸಿನಿಮಾದಲ್ಲಿ ಸಾಕಷ್ಟು ವಿಷಯ ಹೇಳಿರುವ ಇವರು ತಮ್ಮ ಅಣ್ಣಂದಿರು ಹಾಗೂ ಅಣ್ಣಂದಿರ ಸಿನಿಮಾ ಬಗ್ಗೆ ಕೂಡ ಮಾತನಾಡಿದ್ದಾರೆ.
ಅರಣ್ಯ ಸಿಬ್ಬಂದಿ ಅವರ ಕಷ್ಟ ಸುಖವನ್ನು ಕೇಳುವ ಅಪ್ಪು ಅವರು ಅವರೊಂದಿಗೆ ಅಲ್ಲಿ ಕೋಟ್ಯಾಧಿಪತಿ ಆಟವನ್ನು ಆಡಿದ್ದಾರೆ, ವಿಶೇಷತೆ ಏನು ಎಂದರೆ ಅಪ್ಪು ಅವರು ಪುನೀತ್ ರಾಜಕುಮಾರ್ ಆಗಿಯೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಬದುಕಿನುದ್ದಕ್ಕೂ ಪರರ ಕಷ್ಟಗಳಿಗೆ ಮಿಡಿಯುತ್ತಿದ್ದ ಅಪ್ಪು ಹೃದಯ ವೈಶಾಲತೆ ಬಗ್ಗೆ ಎಷ್ಟು ಹೊಗಳಿದರು ಕಡಿಮೆಯೇ.
ಕರ್ನಾಟಕದ ಜನ ಇಂತಹ ಒಬ್ಬ ನಟನನ್ನು ಮತ್ತು ಶ್ರೇಷ್ಠ ವ್ಯಕ್ತಿಯನ್ನು ಪಡೆಯಲು ಅದೆಷ್ಟು ಪುಣ್ಯ ಮಾಡಿತ್ತೋ. ತನ್ನ ಜವಾಬ್ದಾರಿಯನ್ನು ಈಗ ಪತ್ನಿಯ ಹೇಗಲೇರಿಸಿ ತಂದೆ ತಾಯಿಯ ಮಡಿಲಿನಲ್ಲಿ ಲೀನವಾಗಿರುವಾಗ ಅಪ್ಪು ಅವರ ಗಂಧದಗುಡಿ ಸಿನಿಮಾ ಪ್ರೇಕ್ಷಕರ ಮಡಿಲಿನಲ್ಲಿದೆ. ಅಪ್ಪು ಅವರ ಪುಣ್ಯ ದಿನದ ಸ್ಮರಣಾರ್ಥ ಕೊನೆಯ ಸಿನಿಮಾದ ಗಂಧದಗುಡಿ ಅನ್ನು ರಿಲೀಸ್ ಮಾಡಲಾಗಿತ್ತು. ರಿಲೀಸ್ ಆಗಿರುವ ಒಂದು ವಾರಕ್ಕೆ 23 ಕೋಟಿ ಕಲೆಕ್ಷನ್ ಬಾಚಿಕೊಂಡಿರುವ ಸಿನಿಮಾವು ಅದರ ಬಜೆಟ್ಗಿಂತ ದುಪ್ಪಟ್ಟು ಹಣವನ್ನು ಪಡೆದಿದೆ ಎನ್ನುವ ಮಾಹಿತಿಗಳು ಬರುತ್ತಿವೆ.
ಅಪ್ಪು ಅವರ ಪ್ರತಿ ವಿಷಯವನ್ನು ಹಬ್ಬದಂತೆ ಆಚರಿಸುವ ಕರ್ನಾಟಕದ ಜನತೆ ಗಂಧದಗುಡಿ ಸಿನಿಮಾವನ್ನು ಅಪ್ಪಿಕೊಂಡಿದ್ದಾರೆ. ಶಾಲಾ ಮಕ್ಕಳಿಂದ ಹಿಡಿದು ಎಲ್ಲರೂ ಗುಂಪು ಗುಂಪಾಗಿ ಬಂದು ಸಿನಿಮಾವನ್ನು ಕಣ್ತುಂಬಿ ಕೊಳ್ಳುತ್ತಿದ್ದಾರೆ. ಇನ್ನು ಈ ಸಿನಿಮಾದಿಂದ ಬಂದ ಹಣದ ಬಗ್ಗೆ ಮಾತನಾಡಿರುವ ಅಶ್ವಿನಿ ಪುನೀತ್ ಅವರು ಸಿನಿಮಾ ತುಂಬಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಆದರೆ ಇದರಿಂದ ಬರುವ ಹಣದಲ್ಲಿ ಅರ್ಧದಷ್ಟು ಶಕ್ತಿ ದಾಮ ಕೇಂದ್ರಕ್ಕೆ ಕೊಡುತ್ತೇನೆ. ಇನ್ನೂ ಕಾಲು ಭಾಗದಷ್ಟು ಸಮಾಜ ಸೇವೆಗೆ ಮೀಸಲಿಡುತ್ತೇನೆ ಇನ್ನು ಕಾಲು ಭಾಗದ ಹಣವನ್ನು ಅಪ್ಪು ಹೆಸರಿನಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಅಪ್ಪು ಅವರಂತೆ ನಾನು ಕೂಡ ಅವರ ಸಮಾಜ ಸೇವೆಯನ್ನು ಮುಂದುವರಿಸಲು ಬಳಸಿಕೊಳ್ಳುತ್ತೇನೆ ಅಂತ ಅಶ್ವಿನಿ ಅವರು ಹೇಳಿದ ಮಾತು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಗಂಧದಗುಡಿ ಸಿನಿಮಾದಿಂದ ಬರುವ ಅಷ್ಟು ಹಣವನ್ನು ಎಫ್ ಡಿ ಮಾಡಿ ಕರ್ನಾಟಕದ ಜನಸೇವೆಗೆ ಮೀಸಲಿಡುತ್ತೇನೆ ಎಂದಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮಾಡಿ