Friday, June 9, 2023
HomeEntertainmentಪ್ರಶಾಂತ್ ತಬ್ಬಿಕೊಳ್ಳುವಾಗ, ಟಚ್ ಮಾಡುವಾಗ ಅದು ನಾರ್ಮಲ್ ತರ ಇರಲ್ಲ ಬೇರೆ ತರನೇ ಫಿಲ್ ಬರುತ್ತೆ....

ಪ್ರಶಾಂತ್ ತಬ್ಬಿಕೊಳ್ಳುವಾಗ, ಟಚ್ ಮಾಡುವಾಗ ಅದು ನಾರ್ಮಲ್ ತರ ಇರಲ್ಲ ಬೇರೆ ತರನೇ ಫಿಲ್ ಬರುತ್ತೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಸತ್ಯ ಹೇಳಿದ ನೇಹಗೌಡ ಈ ವಿಡಿಯೋ ನೋಡಿ.

ಬಿಗ್ ಬಾಸ್ ಮನೆಯ ಆಟ ದಿನದಿಂದ ದಿನಕ್ಕೆ ರೋಚಕವಾಗುತ್ತಿದೆ. ಒಂಬತ್ತನೇ ಸೀಸನ್ ನ ಕಾಲು ಭಾಗ ಮುಗಿದಿದ್ದು ದಿನೇ ದಿನೇ ಆಟದ ಬಿಸಿ ಕಾವೇರುತ್ತಿದೆ. ಈಗಾಗಲೇ ಮನೆಯಲ್ಲಿ ಇರುವ ಇತರ ಸ್ಪರ್ಧಿಗಳ ಜೊತೆ ಸಾಕಷ್ಟು ಸಮಯ ಕಳೆದಿರುವ ಕಂಟೆಸ್ಟೆಂಟ್ ಗಳಿಗೆ ಮುಖ ಹಾಗೂ ಮುಖವಾಡಗಳ ವ್ಯತ್ಯಾಸ ಚೆನ್ನಾಗಿ ಅರ್ಥ ಆಗಿದ್ದು, ಒಬ್ಬರನ್ನು ಮೀರಿಸಿ ಒಬ್ಬರು ಉಳಿದು ಕೊಳ್ಳುವುದಕ್ಕೆ ತಮ್ಮಿಂದ ಆದಷ್ಟು ಎಫರ್ಟ್ ಹಾಕುತ್ತಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಆದರೂ ಕೂಡ ಅದೃಷ್ಟ ಇರದ ಸ್ಪರ್ಧಿಗಳು, ಮತ್ತು ಜನ ಮೆಚ್ಚುಗೆ ಪಡೆಯದ ಸ್ಪರ್ಧಿಗಳು ವಾರಕ್ಕೊಬ್ಬರಂತೆ ಪ್ರತಿವಾರ ಮನೆಯಿಂದ ಆಚೆ ಬರುತ್ತಿದ್ದಾರೆ. ಅದೇ ರೀತಿ ಐದನೇ ವಾರ ಮನೆಯಿಂದ ಆಚೆ ಬಂದ ಸ್ಪರ್ಧಿ ನೇಹಾ ಗೌಡ. ಅವರು ಬಹಳ ಬೇಗ ಮನೆಯಿಂದ ಹೊರ ಬಿದ್ದಿದ್ದು ಸದ್ಯಕ್ಕೆ ಆಚೆ ಬಂದ ಮೇಲೆ ಬಿಗ್ ಬಾಸ್ ಆಟದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಮನೆಯಿಂದ ಆಚೆ ಬಂದ ದಿನದಿಂದಲೂ ಸತತವಾಗಿ ಇಂಟರ್ವ್ಯೂಗಳನ್ನು ಕೊಡುತ್ತಿರುವ ನೇಹಾ ಗೌಡ ಅವರು ಬಿಗ್ ಬಾಸ್ ಮನೆಯ ಅನುಭವಗಳ ಬಗ್ಗೆ ಅಲ್ಲಿರುವ ಸಹ ಸ್ಪರ್ಧಿಗಳ ವರ್ತನೆಗಳ ಬಗ್ಗೆ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಎನ್ನುವ ಪಾತ್ರದಿಂದ ಬಹಳ ಫೇಮಸ್ ಆಗಿದ್ದ ನೇಹಾ ಗೌಡ ಅವರು ಕರ್ನಾಟಕದಲ್ಲಿ ಅದೇ ಹೆಸರಿನಿಂದ ಗುರುತಿಸಿ ಕೊಳ್ಳುತ್ತಿದ್ದಾರೆ ಮತ್ತು ರಾಜಾರಾಣಿ ಎನ್ನುವ ರಿಯಾಲಿಟಿ ಶೋ ಅನ್ನು ಕೂಡ ಕಾಣಿಸಿಕೊಂಡಿದ್ದ ನೇಹ ಗೌಡ ಅವರು ಕಿರುತರೆ ಪ್ರೇಕ್ಷಕರಿಗೆ ಆ ಮೂಲಕ ಮತ್ತಷ್ಟು ಹತ್ತಿರವಾಗಿದ್ದರು.

ಸುಂದರ ಮುಖದ ಈ ಬೆಡಗಿ ಅಷ್ಟೇ ಮುದ್ದು ಮನಸ್ಸಿನ ಹುಡುಗಿ. ಆದರೂ ಕೂಡ ಮನೆ ಒಳಗಿನ ಜನರಿಗೆ ಇವರ ಆಟ ಇಷ್ಟ ಆಗದೆ ಪ್ರತಿವಾರ ನಾಮಿನೇಟ್ ಮಾಡುತ್ತಿದ್ದರು ಮನೆಯಲ್ಲಿ ಟಾಸ್ಕಗಳ ವಿಚಾರದಲ್ಲಿ ಬಹಳ ಆಕ್ಟಿವ್ ಆಗಿರುತ್ತಿದ್ದ ಗೊಂಬೆ ಮನೆಯಲ್ಲಿದ್ದ ಸಹ ಸ್ಪರ್ಧಿಗಳ ಜೊತೆ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು.

ಆದರೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದದ್ದು ತನ್ನ ಗುಂಪಿನ ಜೊತೆಗೆ ಆಗಿದ್ದ ಇವರು ಅನುಪಮ ಮತ್ತು ಅಮೂಲ್ಯ ಅವರ ಜೊತೆಗೆ ಮಾತ್ರ ಹೆಚ್ಚಾಗಿ ಇರುತ್ತಿದ್ದರು. ಇದೇ ಕಾರಣದಿಂದ ಕೆಲವೊಮ್ಮೆ ಮನೆಯಲ್ಲಿ ಇದ್ದು ಇರದವರಂತೆ ಅನಿಸುತ್ತಿದ್ದರು. ಇದೇ ಅವರ ಆಟಕ್ಕೆ ನೆಗೆಟಿವ್ ಆಗಿ ಮನೆಯಿಂದ ಆಚೆ ಬಂದಿದ್ದಾರೆ ಎನ್ನುವುದು ಹಲವರ ಅಭಿಪ್ರಾಯ. ಮನೆಯಲ್ಲಿ ಇದ್ದಷ್ಟು ದಿನ ತನಗನಿಸಿದ್ದನ್ನು ನೇರವಾಗಿ ಮಾತನಾಡುತ್ತಿದ್ದ ಇವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಹಕ್ಕುಗಳ ಬಗ್ಗೆ ಕೂಡ ಧ್ವನಿ ಎತ್ತಿದರು.

ಇದ್ದಿದ್ದು ಕಡಿಮೆ ಸಮಯ ಆದರೂ ಉತ್ತಮ ಪ್ರದರ್ಶನ ನೀಡಿದ ಇವರು ಆಚೆ ಬಂದ ಮೇಲೆ ಸಹಸ್ಪರ್ಧಿಗಳ ಜೊತೆಗಿದ್ದ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ. ರೂಪೇಶ್ ರಾಜಣ್ಣ ಅವರ ಬಗ್ಗೆ ಮಾತನಾಡಿರುವ ನೇಹ ಗೌಡ ಅವರು ರೂಪೇಶ್ ರಾಜಣ್ಣ ಉದ್ದೇಶಪೂರ್ವಕವಾಗಿ ಮನೆಯಲ್ಲಿ ಜಗಳ ಆಡುತ್ತಿಲ್ಲ, ಅವರಿಗೆ ಆ ಕ್ಷಣಕ್ಕೆ ನಿಜವಾಗಿಯೂ ಅಷ್ಟೇ ಕೋಪ ಬರುತ್ತದೆ. ಆದರೆ ಸಮಯ ಕಳೆದ ಬಳಿಕ ಅವರ ಅರ್ಥ ಮಾಡಿಕೊಂಡು ಸುಮ್ಮನಾಗಿಬಿಡುತ್ತಾರೆ ಅವರು ತುಂಬಾ ಸ್ವೀಟ್ ವ್ಯಕ್ತಿ ಎಂದು ಹೊಗಳಿದ್ದಾರೆ.

ಆದರೆ ಪ್ರಶಾಂತ್ ಸಂಬರ್ಗಿ ವರ್ತನೆ ಬಗ್ಗೆ ಬೇಸರ ಮಾಡಿಕೊಂಡಿರುವ ನೇಹ ಗೌಡ ಅವರು ಹೆಣ್ಣು ಮಕ್ಕಳನ್ನು ಟಚ್ ಮಾಡುವಾಗ, ಕೈ ಕುಲುಕುವಾಗ, ಹಗ್ ಮಾಡುವಾಗ ಅವರ ಭಾವನೆ ಸರಿ ಇರುತ್ತಿರಲಿಲ್ಲ, ಅದು ಕ್ಲಿಯರ್ ಆಗಿಯೇ ಅವರ ಮುಖದ ಮೇಲೆ ಕಾಣುತ್ತದೆ. ನನಗಂತೂ ಅದು ಫೀಲ್ ಆಗಿದೆ ಹಾಗಾಗಿ ನಾನು ಅವರಿಗೆ ಹಗ್ ಕೊಡಲು ಇಷ್ಟ ಪಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ನೇಹಗೌಡ ಮಾತನಾಡಿದ ವಿಡಿಯೋ ಈ ಕೆಳಗಿದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ