Sunday, May 28, 2023
HomeEntertainmentಬೆಳ್ಳಂ ಬೆಳಗ್ಗೆ ದೇವಸ್ಥಾನದಲ್ಲಿ ನಟ ಡಾಲಿ ಧನಂಜಯ್ ಕೈ ಹಿಡಿದ ಮೋಹಕ ತಾರೆ ನಟಿ ರಮ್ಯಾ.

ಬೆಳ್ಳಂ ಬೆಳಗ್ಗೆ ದೇವಸ್ಥಾನದಲ್ಲಿ ನಟ ಡಾಲಿ ಧನಂಜಯ್ ಕೈ ಹಿಡಿದ ಮೋಹಕ ತಾರೆ ನಟಿ ರಮ್ಯಾ.

ಮೋಹಕ ತಾರೆ ರಮ್ಯ ಸ್ಯಾಂಡಲ್ ವುಡ್ ಕ್ವೀನ್ ಎಂದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತಿ ಪಡೆದಿದ್ದಾರೆ. ಸಿನಿಮಾ ಇಂಡಸ್ಟ್ರಿಯಿಂದ ದೂರವಾಗಿ ಇಷ್ಟು ವರ್ಷ ಕಳೆದರೂ ಕೂಡ ಬಹಳ ಬೇಡಿಕೆ ಉಳಿಸಿಕೊಂಡಿರುವ ಇವರು ಚಂದನವನದ ಒಬ್ಬಳೇ ಪದ್ಮಾವತಿ. ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ಸಿನಿಮಾ ರಂಗವನ್ನು ತೊರೆದು ರಾಜಕೀಯದಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಲು ಹೊರಟ ಇವರು ಅಲ್ಲೂ ಕೂಡ ತಮ್ಮನು ಸಮಾಜ ಸೇವೆಯಲ್ಲಿ ಉತ್ತಮವಾಗಿ ತೊಡಗಿಸಿಕೊಂಡಿದ್ದರು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ರಾಜಕೀಯದಿಂದ ಬೇಸತ್ತು ಹೋಗಿದ್ದ ರಮ್ಯಾ ಅವರು ಹಲವು ದಿನಗಳವರೆಗೆ ಯಾರಿಗೂ ಕಾಣದಂತೆ ಅಜ್ಞಾತ ಸ್ಥಳದಲ್ಲಿ ಸೈಲೆಂಟ್ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಬಹಳ ಆಕ್ಟಿವ್ ಆಗಿದ್ದ ರಮ್ಯ ಅವರನ್ನು ಅಭಿಮಾನಿಗಳು ಮತ್ತೆ ಸಿನಿಮಾಗಳಲ್ಲಿ ನಟಿಸುವಂತೆ ಯಾವಾಗಲೂ ಕೇಳುತ್ತಿದ್ದರು. ಈಗ ಅವರ ಅಭಿಮಾನಿಗಳ ಆಸೆ ಈಡೇರುತಿದೆ, ರಮ್ಯಾ ಅವರು ನಾಯಕಿಯಾಗಿ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ.

ಈಗಾಗಲೇ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎನ್ನುವ ಭರವಸೆ ನೀಡಿದ ರಮ್ಯಾ ಅವರು ಉತ್ತಮ ಕಥೆಗಳು ಸಿಗದ ಕಾರಣ ಯಾವ ಸಿನಿಮಾದಲ್ಲೂ ಅಭಿನಯಿಸಿರಲಿಲ್ಲ. ಆದರೆ ಸಿನಿಮಾ ಇಂಡಸ್ಟ್ರಿಯ ಸಂಬಂಧಿತ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಮ್ಯಾ ಅವರು ಸ್ವಾತಿ ಮುತ್ತಿನ ಮಳೆಹನಿಗೆ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು.

ಇವರದೇ ಆಪಲ್ ಬಾಕ್ಸ್ ಸಂಸ್ಥೆ ವತಿಯಿಂದ ರಾಜ್‌ಬಿ ಶೆಟ್ಟಿ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಇವರೇ ನಾಯಕಿ ಆಗಬೇಕಿತ್ತು, ಅದು ಯಾಕೋ ರಮ್ಯಾ ಅವರೇ ಈ ಸ್ಥಾನವನ್ನು ಸಿರಿ ರವಿಕುಮಾರ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಆದರೆ ನಿರ್ಮಾಪಕ್ಕೆ ಆಗಿ ಮಾತ್ರ ಆ ಟೀಮ್ ಅಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಾವು ಕಮ್ ಬ್ಯಾಕ್ ಆದರೆ ಪುನೀತ್ ರಾಜಕುಮಾರ್ ಅವರೊಂದಿಗೆ ಆಗಬೇಕು ಎನ್ನುವುದು ರಮ್ಯಾ ಅವರ ಮನದಾಳದ ಆಸೆ ಆಗಿತ್ತು.

ಜೇಮ್ಸ್ ಸಿನಿಮಾದಲ್ಲೂ ಕೂಡ ರಮ್ಯಾ ಅವರಿಗೆ ಪುನೀತ್ ಕಡೆಯಿಂದ ಈ ಆಫರ್ ಹೋಗಿತ್ತು ಆದರೆ ಆ ಸಿನಿಮಾದಲ್ಲಿ ನಾಯಕಿಯ ಪಾತ್ರಕ್ಕೆ ಅಷ್ಟೊಂದು ಮಹತ್ವ ಇಲ್ಲ ಹಾಗಾಗಿ ಬೇರೆ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿಕೊಂಡಿದ್ದ ಇವರು ಆ ಸಿನಿಮಾ ಆಫರ್ ಕಳೆದುಕೊಂಡಿದ್ದಕ್ಕಾಗಿ ಅಪ್ಪು ಅವರ ಅಗಲಿಕೆಯ ನಂತರ ಬಹಳ ಪಶ್ಚಾತ್ತಾಪ ಕಟ್ಟಿಕೊಂಡಿದ್ದರು.

ಅಪ್ಪು ಅವರ ದ್ವಿತ್ವ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತೇನೆ ಎಂದು ರಮ್ಯಾ ಅವರು ಒಪ್ಪಿಕೊಂಡಿದ್ದರು ಎನ್ನುವ ಸುದ್ದಿಗಳು ಕೂಡ ಆ ಸಮಯದಲ್ಲಿ ಬಹಳ ಸದ್ದು ಮಾಡಿದ್ದವು. ಈಗ ರಮ್ಯಾ ಅವರ ಎರಡನೇ ಇನ್ನಿಂಗ್ಸ್ ಕುರಿತು ತೆರೆ ಮೇಲೆ ಅವರು ಕಾಣಿಸಿಕೊಳ್ಳುವುದು ಯಾರ ಜೊತೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಈ ಬಾರಿ ರಮ್ಯಾ ಅವರು ಧನಂಜಯ್ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಅದಕ್ಕೆ ಸಾಕ್ಷಿಯಾಗಿ ಭಾನುವಾರ ನಡೆದ ಉತ್ತರಕಾಂಡ ಎನ್ನುವ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ರಮ್ಯ ಅವರು ಭಾಗಿಯಾಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸ್ವತಃ ಧನಂಜಯ್ ಅವರೇ ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ರತ್ನನ್ ಪ್ರಪಂಚ ತಂಡದ ಮತ್ತೊಂದು ಪ್ರಯತ್ನ ಎಂದು ಬರೆದುಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಡಾಲಿ ನಾಯಕ ಆದರೆ ರಮ್ಯಾ ಅವರು ನಾಯಕಿ ಆಗಿರಲಿದ್ದಾರೆ. ಉತ್ತರಕಾಂಡ ಮುಹೂರ್ತ ಕಾರ್ಯಕ್ರಮದಲ್ಲಿ ವಿಜಯ ಕಿರಂಗದೂರ್ ಅಶ್ವಿನಿ ಪುನೀತ್ ರಾಜಕುಮಾರ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಉತ್ತರಕಾಂಡ ಸಿನಿಮಾಗೆ ರೋಹಿತ್ ಪದಕಿ ಅವರ ನಿರ್ದೇಶನ ಇದ್ದು ಡಾಲಿ ರೋಹಿತ್ ಕಾಂಬಿನೇಷನ್ನ ಎರಡನೇ ಸಿನಿಮಾ ಇದಾಗಿದೆ. ಸದ್ಯಕ್ಕೆ ಸಿನಿಮಾ ಬಗ್ಗೆ ಇದಿಷ್ಟು ಅಪ್ಡೇಟ್ ಹೊರ ಬಿದ್ದಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.