Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಮದುವೆ ಆದ್ಮೇಲೆ ಸಿನಿಮಾದಿಂದ ಕಣ್ಮರೆಯಾಗುತ್ತಾರೆ ಅಂತಾರೆ ನಿಜಾನಾ ಅಂದಿದ್ದಕ್ಕೆ ನಟಿ ಅದಿತಿ ಪ್ರಭುದೇವ್ ಹೇಳಿದ್ದೇನು ಗೊತ್ತಾ.?

ಮದುವೆ ಆದ್ಮೇಲೆ ಸಿನಿಮಾದಿಂದ ಕಣ್ಮರೆಯಾಗುತ್ತಾರೆ ಅಂತಾರೆ ನಿಜಾನಾ ಅಂದಿದ್ದಕ್ಕೆ ನಟಿ ಅದಿತಿ ಪ್ರಭುದೇವ್ ಹೇಳಿದ್ದೇನು ಗೊತ್ತಾ.?

60 ವರ್ಷ ಆದ್ರೂ ಮದುವೆ ಆಗಿಲ್ಲ ಅಂದ್ರೆ ಹೀರೋಯಿನ್ ರೋಲ್‌ ನೇ ಕೊಡ್ತೀರಾ.? ಸಂದರ್ಶನದಲ್ಲಿ ನಟಿ ಅದಿತಿ ಪ್ರಭುದೇವ ಕೇಳಿದ ಪ್ರಶ್ನೆಗೆ ದಂಗಾದ ರಿಪೋರ್ಟರ್.

ಸದ್ಯಕ್ಕೆ ಕನ್ನಡ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಬಿಜಿ ಇರುವ ನಟಿಯರ ಪೈಕಿ ಅದಿತಿ ಪ್ರಭುದೇವ ಅವರು ಕೂಡ ಒಬ್ಬರು ಅಂತಾನೇ ಹೇಳಬಹುದು. ಏಕೆಂದರೆ ಈ ವರ್ಷ ನಟಿ ಪ್ರಭುದೇವ್ ಅವರ ಸಾಕಷ್ಟು ಸಿನಿಮಾಗಳು ರಿಲೀಸ್ ಆಗಿವೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಇದಾದ ನಂತರ ನಟಿ ಅದಿತಿ ಪ್ರಭುದೇವ ಡಾಲಿ ಧನಂಜಯ್ ಅಭಿನಯದ ಜಾಮಾಲಿ ಗುಡ್ಡ ಎಂಬ ಸಿನಿಮಾದಲ್ಲಿಯೂ ಕೂಡ ನಟಿಸಿದ್ದಾರೆ ಈ ಸಿನಿಮಾ ಮುಂದಿನ ವಾರ ತೆರೆ ಕಾಣಲಿದೆ.

ಮದುವೆಯಾದ ಎರಡೇ ವಾರಕ್ಕೆ ನಟಿ ಅದಿತಿ ಪ್ರಭುದೇವ ಅವರು ಇದೀಗ ಜಾಮಾಲ್ಲಿ ಗುಡ್ಡ ಪ್ರಮೋಷನ್ ಕಾರ್ಯದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಎಲ್ಲಾ ಕಡೆಯಲ್ಲೂ ಕೂಡ ಧನಂಜಯ್ ಅವರ ಜೊತೆ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ ಇದೇ ವೇಳೆಯಲ್ಲಿ ಸಂದರ್ಶನಗಾರರು ನಟಿ ಪ್ರಭುದೇವ ಅವರನ್ನು ಸಾಕಷ್ಟು ಪ್ರಶ್ನೆಗಳು ಕೇಳುತ್ತಾರೆ. ಆ ಪ್ರಶ್ನೆಗಳಲ್ಲಿ ಒಂದು ಪ್ರಶ್ನೆ ಮಾತ್ರ ಇದೀಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ, ಹೌದು ನಟಿ ಅದಿತಿ ಪ್ರಭುದೇವ ಅವರ ವೈಯಕ್ತಿಕ ಜೀವನ ಮತ್ತು ಸಿನೆಜೀವನ ಎರಡಕ್ಕೂ ಕೂಡ ಸಂಬಂಧ ಪಟ್ಟಂತಹ ಪ್ರಶ್ನೆ ಒಂದನ್ನು ಸಂದರ್ಶನಗಾರರು ಕೇಳಿದ್ದಾರೆ.

ಸಾಮಾನ್ಯವಾಗಿ ಮದುವೆಯಾದ ನಂತರ ಸಾಕಷ್ಟು ನಟಿಯರು ಸಿನಿಮಾದಿಂದ ದೂರ ಉಳಿಯುತ್ತಾರೆ ಅಥವಾ ತಮ್ಮ ಕುಟುಂಬ ಜೀವನ ಅಂತ ಸಾಕಷ್ಟು ಬ್ರೇಕ್ ಪಡೆಯುತ್ತಾರೆ ನೀವು ಹಾಗೆ ಮಾಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ನೇರವಾಗಿ ಅದಿತಿ ಪ್ರಭುದೇವ ಅವರು ಉತ್ತರ ಕೊಟ್ಟಿದ್ದಾರೆ ಮದುವೆಯಾದ ನಂತರ ನಟಿಸಬಾರದು ಎಂಬ ಪ್ರಮೇಯವೇನಿಲ್ಲ, ಅಷ್ಟೇ ಅಲ್ಲದೆ ಈಗ ಕಾಲ ಬದಲಾಗಿದೆ ವೈಯಕ್ತಿಕ ಜೀವನವೇ ಬೇರೆ ವೃತ್ತಿ ಜೀವನವೇ ಬೇರೆ ನಾನು ಮದುವೆಯಾಗಿರುವ ಹುಡುಗ ನನ್ನ ವೃತ್ತಿ ಜೀವನಕ್ಕೆ ಸಪೋರ್ಟ ಆಗಿ ನಿಲ್ಲುತ್ತಾರೆ.

ಹಾಗಾಗಿ ಮದುವೆಯಾದ ನಂತರ ನಾನು ಸಿನಿಮಾ ರಂಗದಿಂದ ದೂರ ಉಳಿಯುತ್ತೇನೆ ಎಂಬುದು ತಪ್ಪು ಕಲ್ಪನೆ ಒಳ್ಳೊಳ್ಳೆ ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಕನಸನ್ನು ಹೊಂದಿದ್ದೇನೆ. ನನ್ನ ಎಲ್ಲಾ ಕನಸುಗಳಿಗೂ ನನ್ನ ಪತಿ ಬೆಂಬಲವಾಗಿ ನಿಲ್ಲುತ್ತಾರೆ ಎಂದು ಹೇಳಿದ್ದಾರೆ ಇನ್ನು ಮದುವೆಯಾದ ನಂತರ ಹೀರೋಯಿನ್ ಗಳಿಗೆ ಇರುವಂತಹ ಬೇಡಿಕೆ ಕಡಿಮೆಯಾಗುತ್ತದೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ನಟಿ ಅದಿತಿ ಪ್ರಭುದೇವ್ ಅವರು 60 ವರ್ಷವಾದರೂ ಮದುವೆಯಾಗದೆ ಇದ್ದರೆ ನೀವು ಹೀರೋಯಿನ್ ರೋಲ್ ನೇ ಕೊಡುತ್ತೀರಾ ಎಂದು ಮರು ಪ್ರಶ್ನೆ ಮಾಡಿದ್ದಾರೆ.

ನಟಿ ಅದಿತಿ ಪ್ರಭುದೇವ ಕೇಳಿದಂತಹ ಈ ಪ್ರಶ್ನೆ ಇದೀಗ ಹೆಚ್ಚು ಮೆಚ್ಚುಗೆ ಪಡೆದುಕೊಂಡಿದೆ. ಇದರ ಜೊತೆಗೆ ಸಿನಿಮಾ ಬಗ್ಗೆ ಮಾತನಾಡಿರುವ ಅದಿತಿ ಪ್ರಭುದೇವ ನನಗೆ ಒಳ್ಳೆಯ ಹೀರೋಯಿನ್ ಪಟ್ಟ ಗಿಟ್ಟಿಸಿಕೊಳ್ಳಬೇಕು ಎಂಬ ಆಸೆ ಮತ್ತು ಗುಂಗು ಇಲ್ಲ .ಅದರ ಬದಲು ಒಳ್ಳೊಳ್ಳೆ ಪಾತ್ರದಲ್ಲಿ ನಟಿಸಬೇಕು ಎಂಬ ಗುಂಗಂತೂ ಇದೆ ಎಂದು ತಮ್ಮ ಮನಸ್ಸಿನಲ್ಲಿ ಇರುವಂತಹ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಜಮಾಲಿ ಗುಡ್ಡದ ಟ್ರೈಲರ್ ಬಿಡುಗಡೆಯಾಗಿದ್ದು ಎಲ್ಲರಿಂದಲೂ ಕೂಡ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾ ಯಾವ ರೀತಿ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ ನಟಿ ಅತಿ ಪ್ರಭುದೇವ ಅವರು ಮಾತನಾಡಿರುವ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.