ನಟಿ ಅಮೃತ ಅಯ್ಯಂಗಾರ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಬೇಡಿಕೆಯ ನಟಿಯಾಗಿದ್ದಾರೆ. ಅಮೃತ ರವರು ಕೃಷ್ಣ ಹಾಗೂ ಮಿಲನಾರಾ ನಾಗರಾಜ್ ಅವರು ಜೊತೆಯಾಗಿ ನಟಿಸಿರುವ ಚಿತ್ರದ ಮೂಲಕ ಹೆಚ್ಚು ವೀಕ್ಷಕರನ್ನು ಸೆಳೆದಿದ್ದರು. ನಂತರ ಕನ್ನಡದ ನಾಯಕನಟ ಹಾಗೂ ಖಳ ನಟ ಎರಡಕ್ಕೂ ಸೈ ಎನಿಸಿಕೊಂಡ ಡಾಲಿ ಧನಂಜಯ ಅವರ ಜೊತೆ ಪಾಪ್ ಕಾರ್ನ್ ಮಂಕಿ ಟೈಗರ್ ಎಂಬ ಚಿತ್ರದಲ್ಲಿ ಮತ್ತೆ ಜನರನ್ನು ಮನರಂಜಿಸಿದ್ದರು.
ಈ ಮೂಲಕ ಜನರಿಗೆ ಹೆಚ್ಚು ಹತ್ತಿರವಾದರೂ ಈ ಚಿತ್ರವು ಅಮೃತಾ ರವರಿಗೆ ಅವರ ವೃತ್ತಿ ಜೀವನದಲ್ಲಿ ತಿರುವು ತಂದಿತು ಎಂದರೆ ತತಪ್ಪಾಗಲಾರದು. ಇನ್ನು ಅನು ಭಂಡಾರಿ ಅವರ ವಿಂಡೋಸಿತದಲ್ಲೂ ಕೂಡ ಇವರು ಅಭಿನಯಿಸಿದ್ದಾರೆ ಇದಾದ ಕೆಲವು ವರ್ಷಗಳ ನಂತರ ಮತ್ತೆ ಡಾಲಿ ಧನಂಜಯ್ ರವರ ಜೊತೆಯಾಗಿ ನಾಯಕನಟಿ ಪಾತ್ರದಲ್ಲಿ ಬಡವ ರಾಸ್ಕಲ್ ಎಂಬ ಚಿತ್ರದಲ್ಲಿ ಕಾಣಿಸಿಕೊಂಡರು, ಈ ಸಿನಿಮಾ ಸೂಪರ್ ಹಿಟ್ಟಾಗಿ ಚಿತ್ರಮಂದರಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿತು. ಈ ಚಿತ್ರವು ಕೂಡ ಅಮೃತ ಅಯ್ಯಂಗಾರ್ ಅವರಿಗೆ ಒಳ್ಳೆ ಸಕ್ಸಸ್ ಅನ್ನು ತಂದು ಕೊಟ್ಟಿತ್ತು.
ಸದ್ಯ ನಟಿ ಅಮೃತ ಅಯ್ಯಂಗಾರ್ ಅವರು ಮಿಲನ ರಾಂಕ್ ರಾಜು ರವರ ಜೊತೆ ‘ಓ’ ಎಂಬ ಚಿತ್ರದ ಮೂಲಕ ಕನ್ನಡಿಗರನ್ನು ಮನೋರಂಜಿಸಲು ಮಾತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಡಾರ್ಲಿಂಗ್ ಕೃಷ್ಣ, ನಿಷ್ಚಿಕ, ಮೇಘನಾ ಶೆಟ್ಟಿ ರವರು ನಟಿಸಿರುವ ದಿಲ್ ಪಸಂದ್ ಚಿತ್ರದ ಬಿಡುಗಡೆಯ ದಿನದಂದೇ ಬಿಡುಗಡೆಯಾಗುತ್ತಿರುವುದು ವಿಶೇಷ ಇದರಿಂದ ಈ ಎರಡು ಚಿತ್ರಕ್ಕೂ ಕೊಂಚ ಜಟಾಪಟಿ ನಡೆಯುತ್ತಿದೆ.
ಹಾಗಾಗಿ ಅಮೃತ ಅಯ್ಯಂಗಾರ್ ಹಾಗೂ ಮಿಲನ ನಾಗರಾಜ್ ರವರು ಇಬ್ಬರು ಸಿನಿಮಾ ಪ್ರೋಮೋಶನ್ಗಾಗಿ ಹೆಚ್ಚು ಓಡಾಟ ನಡೆಸಿದ್ದಾರೆ ಎಂದರೆ ಸುಳ್ಳಲ್ಲ. ಹೌದು ಈ ಚಿತ್ರದ ಪ್ರಮೋಶನ್ ವೇಳೆ ಸಂದರ್ಶನ ಒಂದರಲ್ಲಿ ಮಾತಾಡಿದ ಅಮೃತರವರು ಇವರಿಗೆ ಆಟೋ ಹಾಗೂ ಬೈಕ್ ಎಂದರೆ ಇಷ್ಟ, ಕಾರ್ ಎಂದರೆ ಇಷ್ಟ ಇಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಕಾರಣ ಅಮೃತ ರವರು ಚಿಕ್ಕ ವಯ್ಸಿನಿಂದ ಆಟೋದಲ್ಲಿ ಹೆಚ್ಚಾಗಿ ಓಡಾಡುತ್ತಿದ್ದಾರಂತೆ, ಇನ್ನು ಕಾರಲ್ಲಿ ಕಿಟಕಿ ಗಳನ್ನೂ ಸದಾ ಮುಚ್ಚುವ ಕಾರಣದಿಂದಾಗಿ ಕಾರನ್ನು ಇವರು ಇಷ್ಟ ಪಡುವುದಿಲ್ಲ ಎಂದು ತಿಳಿಸಿದ್ದಾರೆ.
ಇದಾದ ನಂತರ ತಮ್ಮ ಚಿತ್ರಗಳ ಬಗ್ಗೆ ಮಾತಾಡಿದ ಅಮೃತ ಅಯ್ಯಂಗಾರ್ ಅವರು ಇವರಿಗೆ ಲವ್ ಮಾಕ್ಟೈಲ್ ಚಿತ್ರವೆಂದರೆ ತುಂಬಾ ಇಷ್ಟ ಅಂತೆ, ಹಾಗೂ ಬಡವ ರಾಷ್ಕಲ್ ಚಿತ್ರವು ಇವರ ಕೆರೆಯರ್ ಡೆವಲಪ್ಮೆಂಟ್ ಮಾಡಿರುವುದರಿಂದ ಈ ಎರಡು ಚಿತ್ರವು ಅವರ ಕಣ್ಣುಗಳಂತೆ. ಇನ್ನೂ ಇವರ ನೆಚ್ಚಿನ ನಟಿಯರ ಬಗ್ಗೆ ಮಾತನಾಡಿದ ಅಮೃತ ರವರು ರಮ್ಯ ಹಾಗೂ ರಕ್ಷಿತವೆಂದರೆ ಇಷ್ಟ ಎಂದು ಹೇಳಿಕೊಂಡಿದ್ದಾರೆ ಇನ್ನು ರಮ್ಯಾ ರವರ ಕ್ಲಾಸಿಕ್ ಲುಕ್ ಹಾಗೂ ರಕ್ಷಿತಾ ರವರ ಮಾಸ್ ಲುಕ್ ಇವರಿಗೆ ಇಷ್ಟ ಎಂದು ಹೇಳಿದ್ದಾರೆ.
ಇನ್ನು ಇವರ ಮದುವೆಯ ಬಗ್ಗೆ ಕೇಳಿದಾಗ ಅಮೃತಾ ಅವರು ಹೀಗೆ ಉತ್ತರಿಸಿದ್ದಾರೆ, ನಾನು ನನ್ನ ಲೈಫಿನಲ್ಲಿ ತುಂಬಾ ಚೆನ್ನಾಗಿದ್ದೇನೆ. ನಾನು ಸಿಂಗಲ್ ಆಗಿರುವುದಕ್ಕೆ ಹೆಚ್ಚು ಇಷ್ಟ ಪಡುತ್ತೇನೆ ನನ್ನನ್ನು ನಾನು ನೋಡಿಕೊಳ್ಳುವುದೇ ಕಷ್ಟವಾಗಿದೆ ಅವನನ್ನು ಎಲ್ಲಿ ನೋಡಿಕೊಳ್ಳಲಿ ನಾನು ಬೇರೆಯವರ ಜೀವನದಲ್ಲಿ ಹೋಗಿ ಅವನ ಜೀವನವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ ಹಾಗಾಗಿ ನಾನು ಸಿಂಗಲ್ ಆಗಿ ಇರಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.