Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಟಿ ಅಮೂಲ್ಯ ಅವಳಿ ಮಕ್ಕಳ ನಾಮಕರಣ ಶಾಸ್ತ್ರದ ಕ್ಯೂಟ್ ವಿಡಿಯೋ ನೋಡಿ. ಅಮೂಲ್ಯ ತಮ್ಮ ಮಕ್ಕಳಿಗೆ ಬಹಳ ವಿಶೇಷವಾದ ಹೆಸರಿಟ್ಟಿದ್ದಾರೆ ಏನದು ಗೊತ್ತ.?

Posted on November 4, 2022November 4, 2022 By Kannada Trend News No Comments on ನಟಿ ಅಮೂಲ್ಯ ಅವಳಿ ಮಕ್ಕಳ ನಾಮಕರಣ ಶಾಸ್ತ್ರದ ಕ್ಯೂಟ್ ವಿಡಿಯೋ ನೋಡಿ. ಅಮೂಲ್ಯ ತಮ್ಮ ಮಕ್ಕಳಿಗೆ ಬಹಳ ವಿಶೇಷವಾದ ಹೆಸರಿಟ್ಟಿದ್ದಾರೆ ಏನದು ಗೊತ್ತ.?

ನಟಿ ಅಮೂಲ್ಯ ಅವರು ಕಳೆದ ವಾರವಷ್ಟೇ ಆದಿ ಚುಂಚನಗಿರಿ ಮಠಕ್ಕೆ ಹೋಗಿ ಅಲ್ಲಿ ಗುರುಗರ ಆಶೀರ್ವಾದವನ್ನು ಪಡೆದು ತಮ್ಮ ಮಕ್ಕಳ ನಾಮಕರಣ ಶಾಸ್ತ್ರವನ್ನು ಯಾವ ರೀತಿ ಮಾಡಬೇಕು ಹಾಗೂ ಯಾವ ಹೆಸರನ್ನು ಇಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿ ಬಂದಿದ್ದರು. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಅಭಿಮಾನಿಗಳೆಲ್ಲರೂ ಕೂಡ ಆದಿ ಚುಂಚನಗಿರಿ ಮಠದಲ್ಲಿಯೇ ನಟಿ ಅಮೂಲ್ಯ ಅವರ ನಾಮಕರಣ ಶಾಸ್ತ್ರ ನಡೆದು ಹೋಗಿದೆ ಅಂತ ಅಂದುಕೊಂಡಿದ್ದರು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಆದರೆ ನಿಜಕ್ಕೂ ಅದು ತಪ್ಪು ಕಲ್ಪನೆ ಗುರುಗಳನ್ನು ಭೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆದು ಅವರ ಮಾರ್ಗ ದರ್ಶನದಂತೆ ಈ ನಾಮಕರಣ ಶಾಸ್ತ್ರವನ್ನು ಅದ್ದೂರಿಯಾಗಿ ಮಾಡುವಂತಹ ಯೋಚನೆಯನ್ನು ಕುಟುಂಬದವರು ಮಾಡಿದ್ದರು. ಈ ಕಾರಣಕ್ಕಾಗಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಹಾಗೂ ಇಬ್ಬರು ಅವಳಿ ಮಕ್ಕಳು ಮತ್ತು ಕುಟುಂಬಸ್ಥರೆಲ್ಲರೂ ಕೂಡ ಶ್ರೀಕಾಳ ಭೈರವೇಶ್ವರನ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿಸಿ ತದನಂತರ ಗುರೂಜಿಯವರನ್ನು ಭೇಟಿ ಮಾಡಿ ನಾಮಕರಣ ಶಾಸ್ತ್ರದ ಸಕಲ ಸಿದ್ಧತೆಯನ್ನು ಯಾವ ರೀತಿ ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತಾರೆ.

ತದನಂತರ ಗುರುಗಳು ನೆನ್ನೆ ಅಂದರೆ ಶುಭ ಗುರುವಾರದಂದು ಅವಳಿ ಮಕ್ಕಳಿಗೆ ನಾಮಕರಣ ಶಾಸ್ತ್ರವನ್ನು ಮಾಡಿದರೆ ತುಂಬಾನೇ ಒಳ್ಳೆಯದು ಅವರು ಭವಿಷ್ಯದಲ್ಲಿ ಉನ್ನತ ಶಿಖರಕ್ಕೆ ಹೋಗುತ್ತಾರೆ ಎಂಬ ಆಶ್ವಾಸನೆಯನ್ನು ನೀಡುತ್ತಾರೆ. ಅದರಂತೆ ಅಮೂಲ್ಯ ಮತ್ತು ಜಗದೀಶ್ ದಂಪತಿಗಳು ನಿನ್ನೆ ಬೆಂಗಳೂರಿನಲ್ಲಿಯೇ ಸರಳವಾಗಿ ನಾಮಕರಣ ಶಾಸ್ತ್ರವನ್ನು ಮುಗಿಸಿದ್ದಾರೆ. ನಾಮಕರಣ ಶಾಸ್ತ್ರ ಮಾಡುವ ಕೆಲವೊಂದು ವಿಡಿಯೋ ತುಣುಕುಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಇನ್ನು ನಟಿ ಅಮೂಲ್ಯ ಅವರು ತಮ್ಮ ಇಬ್ಬರೂ ಅವಳಿ ಮಕ್ಕಳಿಗೆ “ಅಥರ್ವ ಮತ್ತು ಆಧವ್” ಎಂಬ ಹೆಸರನ್ನು ಇಟ್ಟಿದ್ದಾರೆ. ಈ ಹೆಸರು ನಿಜಕ್ಕೂ ಕೂಡ ಬಹಳಾನೇ ಅರ್ಥಗರ್ಭಿತವಾಗಿದೆ ಹಾಗೂ ಇದುವರೆಗೂ ಕೂಡ ಚಿತ್ರರಂಗದಲ್ಲಿ ಯಾರು ಕೂಡ ಇಂತಹ ಹೆಸರನ್ನು ಇಟ್ಟಿಲ್ಲ. ಇನ್ನು ಕೆಲವು ಅಭಿಮಾನಿಗಳು ಅಮೂಲ್ಯ ಅವರಿಗೆ ಅವಳಿ ಮಕ್ಕಳು ಆಗಿರುವುದರಿಂದ ಲವ-ಕುಶ ಅಂತ ಇಡಬಹುದು ಎಂದು ಊಹೆ ಮಾಡಿದ್ದರು ಆದರೆ ಅಭಿಮಾನಿಗಳ ಊಹೆ ಇದೀಗ ಸುಳ್ಳಾಗಿದೆ.

ತಮ್ಮ ಮಕ್ಕಳಿಗೆ ವಿಭಿನ್ನವಾದ ಹೆಸರು ಇರಬೇಕು ಹಾಗೂ ಈ ಹೆಸರನ್ನು ಇದುವರೆಗೂ ಚಿತ್ರರಂಗದಲ್ಲಿ ಯಾರು ಕೂಡ ಇಟ್ಟು ಕೊಂಡಿರಬಾರದು ಎಂದು ಜಗದೀಶ್ ಮತ್ತು ಅಮೂಲ್ಯ ಅವರು ಬಹಳ ಯೋಚನೆ ಮಾಡಿ ಮಗು ಹುಟ್ಟಿದ ಸುಮಾರು ಆರು ತಿಂಗಳ ನಂತರ ನಾಮಕರಣ ಶಾಸ್ತ್ರವನ್ನು ಮಾಡಿದ್ದಾರೆ. ಇನ್ನು ತಮ್ಮ ಮುದ್ದು ಮಕ್ಕಳ ಜೊತೆಗೆ ನಟಿ ಅಮೂಲ್ಯ ಅವರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಕಾಶ ನೀಲಿ ಬಣ್ಣದ ಬಟ್ಟೆಯನ್ನು ಮಕ್ಕಳಿಗೆ ತುದಿಸಿ ಅದಕ್ಕೆ ಮ್ಯಾಚ್ ಆಗುವಂತಹ ಸೀರೆಯನ್ನು ನಟಿ ಅಮೂಲ್ಯ ಅವರು ಧರಿಸಿದ್ದಾರೆ.

ಈ ವಿಡಿಯೋ ನೋಡಿದರೆ ನಿಜಕ್ಕೂ ಅಮೂಲ್ಯ ಅವರು ಎರಡು ಮಕ್ಕಳ ತಾಯಿ ಅಂತ ಅನ್ನಿಸುವುದಿಲ್ಲ ಏಕೆಂದರೆ ಇನ್ನೂ ಕೂಡ ಗ್ಲಾಮರಾಗಿ ಕಾಣುತ್ತಾರೆ. ಇವರನ್ನು ನೋಡಿದರೆ 18 ವರ್ಷದ ಹುಡುಗಿಯಂತೆ ಕಾಣುತ್ತಾರೆ ಅದೇನೇ ಆಗಲಿ ಸದ್ಯಕ್ಕಂತು ಸೋಶಿಯಲ್ ಮೀಡಿಯಾದಲ್ಲಿ ನಟಿ ಅಮೂಲ್ಯ ಅವರ ನಾಮಕರಣದ ಶಾಸ್ತ್ರದ ವೈರಲ್ ಆಗಿದೆ. ನೀವು ಕೂಡ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ ಹಾಗೂ ಈ ವಿಡಿಯೋಗೆ ಒಂದು ಲೈಕ್ ಕೊಡುವುದನ್ನು ಮರೆಯದಿರಿ.

Entertainment Tags:Amulya, Amulya Jagadeesh
WhatsApp Group Join Now
Telegram Group Join Now

Post navigation

Previous Post: “ಚಳಿ ಚಳಿ ತಾಳೇನೂ ಈ ಚಳಿಯ” ಹಾಡಿಗೆ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಜೊತೆ ಅನುಶ್ರೀ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ ನಿಜಕ್ಕೂ ಫೀದಾ ಆಗ್ತೀರಾ.
Next Post: ರಿಷಬ್ ಶೆಟ್ಟಿ ಜೊತೆ ಕಾಂತಾರ ಸಿನಿಮಾ ನೋಡಿ ಡೈಲಾಗ್ ಹೊಡೆದ ಎಬಿಡಿ ಈ ಚಿಂದಿ ವಿಡಿಯೋ ಒಮ್ಮೆ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore