ಕೇಂದ್ರ ಗೃಹ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರು ವಂತಹ ಬಜೆಟ್ ನಲ್ಲಿ ದೇಶದ ಬಡ ಕುಟುಂಬದ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರುಪಾಯಿ ಹಣವನ್ನು ಘೋಷಿಸಿದ್ದಾರೆ. ಕರ್ನಾಟಕ ರಾಜ್ಯ ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆಗೆ ಟಕ್ಕರ್ ಕೊಡಲು ಕೇಂದ್ರ ಸರ್ಕಾರ ದೊಡ್ಡ ಕ್ರಮ ತೆಗೆದುಕೊಂಡಿದೆ ದೇಶದಾದ್ಯಂತ ಇರುವ ದೇಶದ ಎಲ್ಲಾ ಬಡ ಕುಟುಂಬದ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ನೀಡುವ ಮಹತ್ವದ ಯೋಜನೆ ಈಗ ಈ ಬಜೆಟ್ ನಲ್ಲಿ ಈಗಾಗಲೇ ಘೋಷಿಸಲಾಗಿದ್ದು ಮಹಿಳೆಯರು ಪಡೆದುಕೊಳ್ಳಬಹುದಾಗಿದೆ.
ಕೇಂದ್ರ ಸರ್ಕಾರವು ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಹಣವನ್ನು ಘೋಷಿಸಿರುವುದು ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ಹಣವನ್ನು ಪಡೆದುಕೊಳ್ಳಬೇಕು ಎಂದರೆ ಮಹಿಳೆಯರು ಯಾವೆಲ್ಲ ಶರತ್ತುಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಯಾರಿಗೆ ಈ ಹಣ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಹಣವನ್ನು ಪಡೆದುಕೊಳ್ಳಬೇಕು ಎಂದರೆ ಹೇಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:-ಸದಾ ಕಾಲ ಆರೋಗ್ಯವಾಗಿರಲಿ ಈ ಸಲಹೆ ಪಾಲಿಸಿ.!
ಪ್ರಧಾನಿ ನರೇಂದ್ರ ಮೋದಿಯವರಿಗೆ 2023ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಲಕ್ ಪತಿ ದೀದಿ ಯೋಜನೆ ಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಆಗ ಅವರು 2 ಕೋಟಿ ಲಕ್ ಪತಿ ದೀದಿಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದರು. ಇದೀಗ ನಿರ್ಮಲಾ ಸೀತಾರಾಮನ್ ಈ ಗುರಿಯನ್ನು 3 ಕೋಟಿಗೆ ಹೆಚ್ಚಿಸಿದ್ದಾರೆ. ಆ ಮೂಲಕ ಈ ಯೋಜನೆಯಿಂದ 9 ಕೋಟಿ ಮಹಿಳೆಯರ ಜೀವನದ ಮೇಲೆ ಪರಿಣಾಮ ಬೀರಲಿದೆ.
ಲಕ್ ಪತಿ ದೀದಿ ಯೋಜನೆಯ ಪ್ರಮುಖ ಉದ್ದೇಶವು ಏನು ಎಂದು ನೋಡುವುದಾದರೆ :-
* ಬಡತನ ನಿರ್ಮೂಲನೆ ಮತ್ತು ಆರ್ಥಿಕ ಸಬಲೀಕರಣವಾಗಿದೆ.
ಈ ಯೋಜನೆಯ ಅಡಿ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಗು ತ್ತಿದ್ದು ಇದರಿಂದ ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ವರ್ಷಕ್ಕೆ 1 ಲಕ್ಷ ರೂಪಾಯಿ ಸಹಾಯಧನ ನೀಡಿ ಈ ಯೋಜನೆಯನ್ನು ಜಾರಿಗೊಳಿಸುವ ಉದ್ದೇಶ ಹೊಂದಲಾಗಿದೆ.
ಲಕ್ ಪತಿ ದೀದಿ ಯಾಗಲು ಮಹಿಳೆಯರಿಗೆ ವಿವಿಧ ರೀತಿಯ ತರಬೇತಿ ನೀಡಲಾಗುವುದು ಇದರಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ ಗಳನ್ನು ಒದಗಿಸುವ ಮೂಲಕ ಅವರಿಗೆ ಡ್ರೋನ್ ಗಳ ಕಾರ್ಯಚರಣೆ ಮತ್ತು ದುರಸ್ತಿ ಬಗ್ಗೆ ಕುರಿತು ತರಬೇತಿ ನೀಡಲಾಗುತ್ತದೆ. 2023 24ರ ವರ್ಷದ ಮಾರ್ಚ್ ವೇಳೆಗೆ
ಈ ಸುದ್ದಿ ಓದಿ:-ಮಹಿಳೆಯರಿಗೆ 3 ಲಕ್ಷ ಬಡ್ಡಿ ಇಲ್ಲದೆ ಲೋನ್.!
ರಸಗೊಬ್ಬರ ಕಂಪನಿಗಳು ಮಹಿಳಾ ಸ್ವಸಹಾಯ ಗುಂಪುಗಳಿಗೆ 500 ಡ್ರೋನ್ ಗಳನ್ನು ನೀಡುತ್ತದೆ. ಈ ಡ್ರೋನ್ ಗಳನ್ನು ವಿಶೇಷವಾಗಿ ಕೃಷಿ ಕೆಲಸದಲ್ಲಿ ವಿಶೇಷವಾಗಿ ಕೀಟನಾಶಕ ಮತ್ತು ರಸಗೊಬ್ಬರ ಗಳನ್ನು ಸಿಂಪಡಿಸಲು ಬಳಸಲಾಗುತ್ತದೆ.
ಈ ಡ್ರೋನ್ ಗಳನ್ನು ರೈತರಿಗೆ ಬಾಡಿಗೆಗೆ ನೀಡಲಾಗುತ್ತದೆ ಇದು ಮಹಿಳಾ ಸ್ವಸಹಾಯ ಸಂಘಗಳಿಗೆ ಆದಾಯವನ್ನು ತರಲಿದೆ ಕೃಷಿಯಲ್ಲಿ ಡ್ರೋನ್ ಗಳನ್ನು ಬಳಸಬಹುದಾದ ಪ್ರದೇಶಗಳನ್ನು ಪರಿಗಣಿಸಿ 15 ಸಾವಿರ ಸ್ವಸಹಾಯ ಮಹಿಳಾ ಗುಂಪು ಗಳನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಕ್ಲಸ್ಟರ್ ಲೆವೆಲ್ ಪೆಡರೇಶನ್ ರಚಿಸಲಾಗುತ್ತದೆ.
ಒಂದು ಡ್ರೋನ್ ಬೆಲೆ 10 ಲಕ್ಷ ರೂಪಾಯಿ ಮತ್ತು ಇದರಲ್ಲಿ ಸರ್ಕಾರ 8 ಲಕ್ಷ ರೂಪಾಯಿಯನ್ನು ಪಾವತಿಸುತ್ತದೆ. ಉಳಿದ ಹಣವನ್ನು ಸಿಎಲ್ಎಫ್ ರಾಷ್ಟ್ರೀಯ ಕೃಷಿ ಇನ್ಫ್ರಾ ಫೈನಾನ್ಸಿಂಗ್ ಫೆಸಿಲಿಟಿ ಇಂದ ಸಾಲವನ್ನು ತೆಗೆದುಕೊಳ್ಳುತ್ತದೆ.
ಈ ಸುದ್ದಿ ಓದಿ:-ಹೊಸ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!
ಡ್ರೋನ್ ಪೈಲೆಟ್ ಗೆ 15000 ಗೌರವ ಧನ. 18 ವರ್ಷ ಮೇಲ್ಪಟ್ಟ 10ನೇ ತರಗತಿ ಉತ್ತೀರ್ಣನಾದ ಯಾವುದೇ ಸ್ವಸಹಾಯ ಸಂಘಕ್ಕೆ ಸೇರಿದ ಮಹಿಳೆಗೆ ಡ್ರೋನ್ ಹಾರಿಸಲು 15 ಸಾವಿರಗಳನ್ನು ನೀಡಲಾಗುವುದು. ಪೈಲೆಟ್ ಗೆ ಸಹಾಯ ಮಾಡಲು ಸಹ ಪೈಲೆಟ್ ಇರುತ್ತಾರೆ. ಅವರಿಗೂ ಕೂಡ ತಿಂಗಳಿಗೆ 10,000 ನೀಡಲಾಗುತ್ತದೆ.
ಅದೇ ರೀತಿ ಡ್ರೋನ್ ಬಗ್ಗೆ ಮಾಹಿತಿ ನೀಡಲು ಕೆಲವೊಂದಷ್ಟು ಮಹಿಳೆಯರಿಗೆ ತರಬೇತಿಯನ್ನು ಸಹ ನೀಡಲಾಗುವುದು. ಹಾಗೂ ಅವರಿಗೆ ತಿಂಗಳಿಗೆ 5,000 ಸಹಾಯಧನ ನೀಡುವ ಉದ್ದೇಶ ಹೊಂದಲಾಗಿದೆ. ಲಕ್ ಪತಿ ದೀದಿ ಯೋಜನೆಯ ಉದ್ದೇಶವು ಮೊದಲೇ ಹೇಳಿದಂತೆ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎನ್ನುವುದು ಇದರ ಪ್ರಮುಖ ಉದ್ದೇಶವಾಗಿದೆ.