ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ ಇರುವವರಿಗೆ ಮತ್ತು ಇತ್ತೀಚಿಗೆ ಗ್ರಾಮೀಣ ಭಾಗದಲ್ಲಿ ಇರುವವರು ಪ್ರತಿದಿನ ಬೆಳಗ್ಗೆ ಕಾಫಿ ಟೀ ಹಾಲು ಅಥವಾ ಹಾಲಿನ ಪದಾರ್ಥಗಳನ್ನು ಮಾಡಲು ನಂದಿನಿ ಪಾಕೆಟ್ ಹಾಲು ಗಳನ್ನೇ ಅವಲಂಬಿಸಿದ್ದಾರೆ. ನಂದಿನಿ ಮಾತ್ ವಲ್ಲದೆ ಹಲವಾರು ಬ್ರಾಂಡ್ ಗಳು ಇದ್ದರೂ ಕೂಡ ನಮ್ಮ ರಾಜ್ಯದ ಹೆಮ್ಮೆ ನಂದಿನಿ ಹಾಲು. ಹಾಗಾಗಿ ರಾಜ್ಯದಾದ್ಯಂತ ಎಲ್ಲರೂ ನಂದಿನಿ ಹಾಲನ್ನೇ ಖರೀದಿಸಲು ಇಚ್ಚಿಸುತ್ತಾರೆ.
ಈ ನಂದಿನಿ ಹಾಲಿನಲ್ಲಿ ನಾಲ್ಕು ಬಗೆಯಲ್ಲಿ ನಾಲ್ಕು ಬಣ್ಣದ ಪ್ಯಾಕೆಟ್ ನಲ್ಲಿ ಹಾಲು ಬರುತ್ತದೆ ಎಂದು ಎಲ್ಲರಿಗೂ ಗೊತ್ತಿದೆ ಮತ್ತು ಬೆಲೆಯಲ್ಲೂ ಕೂಡ ಸ್ವಲ್ಪ ವ್ಯತ್ಯಾಸವಿರುತ್ತದೆ ಎಂದು ತಿಳಿದುಕೊಳ್ಳುವ ಗೋಜಿಗೆ ಮಾತ್ರ ಯಾರು ಹೋಗಿರುವುದಿಲ್ಲ. ನೀವು ಕೂಡ ನಂದಿನಿ ಹಾಲನ್ನೇ ಬಳಸುತ್ತಿದ್ದರೆ ತಪ್ಪದೆ ಈ ಮಾಹಿತಿಯನ್ನು ತಿಳಿದುಕೊಳ್ಳಿ ಯಾಕೆಂದರೆ ಒಂದೊಂದು ಪಾಕೆಟ್ ನ ಹಾಲಿಗೂ ಒಂದೊಂದು ಗುಣವಿದ್ದು ಯಾರು ಯಾವುದನ್ನು ಬಳಸಬೇಕು ಎನ್ನುವುದು ಎಲ್ಲರಿಗೂ ತಿಳಿದಿರಬೇಕು.
* ನೀಲಿ ಬಣ್ಣದ ಪ್ಯಾಕೆಟ್ ನಂದಿನಿ ಹಾಲು:- ಇದು ಕರ್ನಾಟಕದಲ್ಲಿ ಅತಿ ಹೆಚ್ಚು ಜನ ಬಳಸುವ ನಂದಿನಿ ಹಾಲಾಗಿದೆ. ಇದು ಪಾಶ್ಚೀಕರಿಸಿದ, ಸಿಂಗಲ್ ಟೋನ್ಡ್ ಹಾಲು. ಇದರಲ್ಲಿ 3% ಫ್ಯಾಟ್ ಇರುತ್ತದೆ. ಇದನ್ನು ಹಾಲಿನ ಅವಶ್ಯಕತೆ ಇರುವ ಎಲ್ಲ ಸಂದರ್ಭಗಳಲ್ಲೂ ಕೂಡ ಬಳಸಬಹುದು.
* ಹಸಿರು ಬಣ್ಣದ ಪಾಕೆಟ್ ನಂದಿನಿ ಹಾಲು:- ಮನೆಯಲ್ಲಿ ಒಂದು ವರ್ಷದ ಚಿಕ್ಕ ಮಗು ಇದ್ದರೆ ನೀವು ಆ ಮಗುವಿಗೆ ಈಗಷ್ಟೇ ತಾಯಿ ಹಾಲು ಬಿಡಿಸಿ ಹಸುವಿನ ಹಾಲು ಕುಡಿಸಲು ಶುರು ಮಾಡುತ್ತಿದ್ದರೆ ಹಸಿರು ಬಣ್ಣದ ಪ್ಯಾಕೆಟ್ ಹಾಲು ಬೆಸ್ಟ್. ಇದು ಹೋಮೋಜಿನೈಸ್ಡ್ , ಪಾಶ್ಚೀಕರಿಸಿದ ಹಾಲು, 3.5% ಫ್ಯಾಟ್ ಕಂಟೆಂಟ್ ಇರುತ್ತದೆ.
ಇದು ಶುದ್ಧ ಹಸುವಿನ ಹಾಲಾಗಿದ್ದು, ಮಗುವಿಗೆ ಜೀರ್ಣ ಆಗುವುದಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಮತ್ತು ಹಸುವಿನ ಹಾಲಿನಲ್ಲಿರುವ ಎಲ್ಲಾ ಪೋಷಕಾಂಶಗಳು ಇದರಲ್ಲಿ ಇರುತ್ತದೆ. ನೀವು ಕಾಫಿ ಟೀ ಶಾಪ್ ಇಟ್ಟಿದ್ದರೆ ನಿಮಗೆ ಹೆಚ್ಚಿನ ಹಾಲಿನ ಅವಶ್ಯಕತೆ ಇದ್ದರೆ ಈ ಹಸಿರು ಬಣ್ಣದ ಪ್ಯಾಕೆಟ್ ಹಾಲು ಖರೀದಿಸುವುದು ಒಳ್ಳೆಯದು.
* ಕೇಸರಿ ಬಣ್ಣದ ಪ್ಯಾಕೆಟ್ ನಂದಿನಿ ಹಾಲು:- ಮನೆಯಲ್ಲಿ ಬೆಳೆಯುವ ಮಕ್ಕಳಿದ್ದರೆ ಕೇಸರಿ ಬಣ್ಣದ ಪ್ಯಾಕೆಟ್ ನಲ್ಲಿ ಬರುವ ಶುಭಂ ಪಾಶ್ಚೀಕರಿಸಿದ ಸ್ಟಾಂಡರ್ಡೈಸ್ಡ್ ಹಾಲು ಎಂದು ಬರುವ ಕೇಸರಿ ಬಣ್ಣದ ಪ್ಯಾಕೆಟ್ ನಂದಿನಿ ಹಾಲನ್ನು ಬಳಸಿರಿ. 4.5% ಫ್ಯಾಟ್ ಅಂಶ ಇರುತ್ತದೆ, ಕೆನೆ ಭರಿತ ಹಾಲಾಗಿರುತ್ತದೆ. ಹಾಲಿನಲ್ಲಿರುವ ಎಲ್ಲಾ ರೀತಿಯ ಪೋಷಕಾಂಶಗಳು ಕುಡಿಯುವವರಿಗೆ ಸಿಗುತ್ತದೆ.
* ತಿಳಿ ನೇರಳೆ ಬಣ್ಣದ ಪಾಕೆಟ್ ನಂದಿನಿ ಹಾಲು:- ಪಾಯಸ, ಕೀರು ಅಥವಾ ಹಾಲಿನಿಂದ ಮಾಡುವ ಯಾವುದಾದರೂ ಸ್ವೀಟ್ ತಯಾರಿಸಬೇಕು ಎಂದರೆ ಮಿಲ್ಕ್ ಮೇಡ್ ಬಳಸಿ ಮಾಡುತ್ತಾರೆ ಆದರೆ ಅದರ ಅವಶ್ಯಕತೆ ಇರುವುದಿಲ್ಲ ತಿಳಿ ನೇರಳೆ ಬಣ್ಣದ ಪ್ಯಾಕೆಟ್ ನಂದಿನಿ ಹಾಲಿನಲ್ಲಿ ಬರುವ ಸಮೃದ್ಧಿ ಪಾಶ್ಚೀಕರಿಸಿದ ಕೆನೆಭರಿತ ಕೆನೆ ಹಾಲು ಎನ್ನುವ ಹೆಸರಿನ ನಂದಿನಿ ಹಾಲನ್ನು ತಂದರೆ ಇಷ್ಟೇ ಗಟ್ಟಿಯಾದ ಹಾಲು ಸಿಗುತ್ತದೆ. ಈ ಪ್ಯಾಕೆಟ್ ಹಾಲಿನಲ್ಲಿ 6.5% ಫ್ಯಾಟ್ ಇರುತ್ತದೆ.
* ಹಳದಿ ಬಣ್ಣದ ಪ್ಯಾಕೆಟ್ ನಂದಿನಿ ಹಾಲು ಮತ್ತು Good life ಹಾಲು:- ಹಾಲಿನಲ್ಲಿ ಹೆಚ್ಚು ಜಿಡ್ಡಿನಾಂಶ ಇರುತ್ತದೆ ಜೀರ್ಣವಾಗುವುದಿಲ್ಲ ಎನ್ನುವವರು ಡಯಟ್ ಮಾಡುವವರು, ಹಿರಿಯ ನಾಗರಿಕರು ರೋಗಿಗಳು ಫ್ಯಾಟ್ ಅಂಶ ಬೇಡ ಆದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಪ್ರೋಟೀನ್ ಈ ಪೋಷಕಾಂಶಗಳು ಬೇಕು ಎನ್ನುವುದಾದರೆ.
Good life Skimmed milk ಹಾಲನ್ನು ಬಳಸಬಹುದು ಇದನ್ನು ಕಾಯಿಸುವ ಅವಶ್ಯಕತೆಯೂ ಇಲ್ಲ ತುಂಬ ದಿನ ಬಾಳಿಕೆಯು ಬರುತ್ತದೆ, 0% ಫ್ಯಾಟ್ ಇರುತ್ತದೆ ಅಥವಾ ಹಳದಿ ಬಣ್ಣದ ಪ್ಯಾಕೆಟ್ ನಲ್ಲಿ ಬರುವ ಡಬಲ್ ಟೋನ್ಡ್ ಹಾಲು ಬಳಕೆ ಮಾಡಬಹುದು ಇದರಲ್ಲಿ 1.5% ಫ್ಯಾಟ್ ಮಾತ್ರ ಇರುತ್ತದೆ.
* ನಂದಿನಿ ಸ್ಪೆಷಲ್ ಹಾಲು:- ನಂದಿನಿ ಸ್ಪೆಷಲ್ ಹಾಲನ್ನು ಮನೆಯಲ್ಲಿಯೇ ಮೊಸರು ಮಾಡುವವರು ಅಥವಾ ಮನೆಯಲ್ಲಿಯೇ ಪ್ಯಾಕೆಟ್ ಹಾಲಿನಿಂದ ಬೆಣ್ಣೆ ತುಪ್ಪ ಮಾಡಲು ಬಯಸುವವರು ಖರೀದಿಸಬಹುದು. ಇದು ಕೂಡ ಹಸಿರು ಬಣ್ಣದ ಪ್ಯಾಕೆಟ್ ನಲ್ಲಿ ಬರುತ್ತದೆ, Special toned milk ಎಂದು ಇರುತ್ತದೆ.