ನಾವು ಮಾರ್ಕೆಟ್ ಗೆ ಹೋಗಿ ತರಕಾರಿ ಖರೀದಿಸಿ ತರುವಾಗ ಕಡಿಮೆ ರೇಟ್ ಇದ್ದರೆ ಅಗತ್ಯಕ್ಕಿಂತ ಹೆಚ್ಚು ತರಕಾರಿಯನ್ನು ಒಟ್ಟಿಗೆ ತರುತ್ತೇವೆ ಅಥವಾ ಮನೆಯಲ್ಲಿ ಫಂಕ್ಷನ್ ಗಳಿದ್ದಾಗ ಹಲವು ತರಕಾರಿಗಳು ಉಳಿದುಕೊಂಡು ಬಿಡುತ್ತವೆ. ನಾವೇ ಬೆಳೆಯುವ ತರಕಾರಿಗಳಾದರು ಹೆಚ್ಚಿಗೆ ಸಿಕ್ಕಾಗ ಹಲವು ದಿನಗಳವರೆಗೆ ಸ್ಟೋರ್ ಮಾಡಿ ಇರಬೇಕಾಗುತ್ತದೆ.
ಒಂದು ವೇಳೆ ಮನೆಯಲ್ಲಿ ಫ್ರಿಜ್ ಇದ್ದರು ಕರೆಂಟ್ ಸರಿಯಾಗಿ ಇಲ್ಲದೆ ಇದ್ದರೆ ಇವು ಬೇಗ ಹಾಳಾಗುತ್ತದೆ, ಕೆಲವರು ಫ್ರಿಜ್ಜಿನಲ್ಲಿ ಇಟ್ಟರೆ ಟೇಸ್ಟ್ ಹಾಳಾಗುತ್ತದೆ ಎಂದು ಇಡಲು ಇಷ್ಟಪಡುವುದಿಲ್ಲ. ಇನ್ನು ಕೆಲವರ ಮನೆಯಲ್ಲಿ ಫ್ರಿಡ್ಜ್ ಇರುವುದಿಲ್ಲ ಇಂತಹ ಸಂದರ್ಭಗಳಲ್ಲಿ ತರಕಾರಿಗಳು ಕೆಡದಂತೆ ತಿಂಗಳವರೆಗೆ ಹೇಗೆ ಇಡಬಹುದು ಎನ್ನುವ ಉಪಾಯವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* ತೆಂಗಿನಕಾಯಿಯನ್ನು ಹೊಡೆದಾಗ ಪೂರ್ತಿ ಹೊಳನ್ನು ನಾವು ಉಪಯೋಗಿಸುವುದಿಲ್ಲ ಇಂತಹ ಸಮಯದಲ್ಲಿ ಹೇಗೆ ಇದನ್ನು ಶೇಖರಿಸಿರಬಹುದು ಎಂದರೆ ಒಂದು ಪ್ಲಾಸ್ಟಿಕ್ ಬಾಟಲ್ ತೆಗೆದುಕೊಳ್ಳಿ, ಚಾಕುವಿನ ಕಾಯಿಸಿ ಮಧ್ಯಕ್ಕೆ ಅರ್ಧ ಭಾಗದವರೆಗೆ ಮಾತ್ರ ಕಟ್ ಮಾಡಿ ಪೂರ್ತಿ ಕಟ್ ಮಾಡಿ ತುಂಡು ಮಾಡಬೇಡಿ.
ಈ ಸುದ್ದಿ ಓದಿ:-ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಬರುವುದೇ ಇಲ್ಲ, ಆದಾಯ ಹೆಚ್ಚಾಗುತ್ತದೆ.!
ಈಗ ಇದನ್ನು ಓಪನ್ ಮಾಡಲು ಆಗುತ್ತದೆ ಕೆಳಗೆ ಸ್ವಲ್ಪ ನೀರು ಹಾಕಿ ತೆಂಗಿನಕಾಯಿಯನ್ನು ಅಥವಾ ಕೊಬ್ಬರಿಯನ್ನು ಸಣ್ಣದಾಗಿ ಕತ್ತರಿಸಿ ಇದಕ್ಕೆ ತುಂಬಿ ಮೇಲಿನಿಂದ ಇನ್ನೊಂದು ಭಾಗವನ್ನು ಕ್ಲೋಸ್ ಮಾಡಿ ಹೀಗೆ ಮಾಡಿದರೆ ಬಹಳ ದಿನ ಇಡಬಹುದು ಆದರೆ ಪ್ರತಿನಿತ್ಯವೂ ನೀವು ಇದರಲ್ಲಿ ನೀರು ಚೇಂಜ್ ಮಾಡುತ್ತಾ ಇರಬೇಕು
* ಹಸಿಮೆಣಸಿನಕಾಯಿಯನ್ನು ಕೂಡ ಹೆಚ್ಚು ದಿನ ಇಡಲು ಆಗುವುದಿಲ್ಲ ಬೇಗ ಕೊಳೆತು ಹೋಗುತ್ತದೆ, ಅಂತಹ ಸಂದರ್ಭದಲ್ಲಿ ಫ್ರೆಶ್ ಆಗಿಯೇ ಇಡಬೇಕು ಎಂದರೆ ಗಾಜಿನ ಡಬ್ಬದಲ್ಲಿ ಅಥವಾ ಪ್ಲಾಸ್ಟಿಕ್ ಬಾಟಲ್ ನಲ್ಲಿ ಮೆಣಸಿನ ಕಾಯಿಯ ಮುಂದಿನ ತೊಟ್ಟನ್ನು ತೆಗೆದು ಶೇಖರಿಸಿ ಇಡಬೇಕು
* ಕರಿಬೇವಿನ ಎಲೆಗಳನ್ನು ಕೂಡ ಈ ಮೇಲೆ ತಿಳಿಸಿದಂತೆ ಪ್ಲಾಸ್ಟಿಕ್ ಡಬ್ಬವನ್ನು ಅರ್ಥ ಕಟ್ ಮಾಡಿ ಕೆಳಗೆ ಸ್ವಲ್ಪ ನೀರು ತುಂಬಿಸಿ ಕೆಳಗಿನ ಎಲೆಗಳನ್ನು ತೆಗೆದು ಕಡ್ಡಿ ನೀರಿಗೆ ತಾಗುವಂತೆ ಇಡಬೇಕು ಈ ರೀತಿ ಮಾಡುವುದರಿಂದ ಬಹಳ ದಿನದವರೆಗೆ ಇದು ಫ್ರೆಶ್ ಆಗಿರುತ್ತದೆ.
ಈ ಸುದ್ದಿ ಓದಿ:-ಮದುವೆ ವಿಳಂಬ ಎದುರಿಸುತ್ತಿದ್ದೀರಾ.? ಒಳ್ಳೆಯ ಸಂಬಂಧ ಬರುತ್ತಿಲ್ಲವೇ.? ಒಂದು ಏಲಕ್ಕಿಯಿಂದ ಹೀಗೆ ಮಾಡಿ ತಿಂಗಳೊಳಗೆ ರಾಜ ರಾಣಿಯಂತಹ ಸಂಬಂಧ ಸಿಗೋದು ಖಚಿತ.!
* ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು ಇವುಗಳನ್ನು ಕೂಡ ಈ ಮೇಲೆ ತಿಳಿಸಿದಂತೆ ಪ್ಲಾಸ್ಟಿಕ್ ಕತ್ತರಿಸಿ ಕೆಳಗೆ ನೀರು ಹಾಕಿ, ಬೇರು ಮುಳುಗುವಂತೆ ಇಟ್ಟು ಮೇಲಿನಿಂದ ಪೂರ್ತಿ ಕ್ಲೋಸ್ ಮಾಡಿ ಇಟ್ಟರೆ ಬಹಳ ದಿನದವರೆಗೆ ಫ್ರೆಶ್ ಆಗಿ ಇರುತ್ತದೆ. ಈ ರೀತಿ ಸೊಪ್ಪುಗಳಿಗೆ ದಿನ ಬಿಟ್ಟು ದಿನ ನೀರು ಚೇಂಜ್ ಮಾಡಿದರು ಆಗುತ್ತದೆ
* ಕ್ಯಾರೆಟ್, ನಿಂಬೆಹಣ್ಣು ಇವುಗಳನ್ನು ಕೂಡ ಈ ಮೇಲೆ ತಿಳಿಸಿದ ವಿಧಾನದಲ್ಲಿ ಸ್ಟೋರ್ ಮಾಡಿ ಇಡಬಹುದು. ಕ್ಯಾರೆಟ್ ನ್ನು ಮುಂದೆ ಮತ್ತೆ ಹಿಂದೆ ತುದಿ ತೆಗೆದು ಸ್ಟೋರ್ ಮಾಡಬೇಕು. ಆದರೆ ಪ್ರತಿದಿನವೂ ಕೂಡ ನೀರು ಚೇಂಜ್ ಮಾಡುತ್ತಾ ಇರಬೇಕು.
* ಆಲೂಗಡ್ಡೆಯನ್ನು ಮನೆಗೆ ತಂದ ಮೇಲೆ ಸ್ವಲ್ಪ ದಿನಕ್ಕೆ ಮೊಳಕೆ ಬಂದುಬಿಡುತ್ತದೆ. ಈ ರೀತಿ ಆಗಬಾರದು ಎಂದರೆ ಒಂದು ಕಾಟನ್ ಬಾಕ್ಸ್ ಗೆ ಕೆಳಗೆ ಪೇಪರ್ ಹಾಕಿ ಅದರ ಮೇಲೆ ಸ್ಟೋರ್ ಮಾಡಬೇಕು ಮತ್ತು ಟೊಮ್ಯಾಟೋ ಹಾಗೂ ಈರುಳ್ಳಿಯನ್ನು ಇದರ ಜೊತೆಗೆ ಇಡಬಾರದು. ಈ ಕಾಟನ್ ಬಾಕ್ಸ್ ಗಳನ್ನು ಫ್ರಿಡ್ಜ್, ವಾಷಿಂಗ್ ಮಷೀನ್ ಈ ರೀತಿ ಬಿಸಿ ಇರುವ ಪದಾರ್ಥಗಳಿಗೆ ತಾಗುವಂತೆ ಇಡಬೇಕು ಆಗ ಬೇಗ ಮೊಳಕೆ ಬರುವುದಿಲ್ಲ.
ಈ ಸುದ್ದಿ ಓದಿ:-ಈ ರಾಶಿ ಹೆಣ್ಣು ಮಕ್ಕಳು ಪಾಪ ಸದಾ ಕಣ್ಣೀರು ಇಡುತ್ತಿರುತ್ತಾರೆ.! ನೆಮ್ಮದಿ ಅನ್ನುವುದೇ ಇವರ ಜೀವನದಲ್ಲಿ ಇರಲ್ಲ
* ಬೆಳ್ಳುಳ್ಳಿಯನ್ನು ಕೂಡ ತಂದ ಕೂಡಲೇ ಬಿಡಿಬಿಡಿಯಾಗಿ ಬಿಡಿಸಿ ಯಾವುದಾದರೂ ಪ್ಲಾಸ್ಟಿಕ್ ಡಬ್ಬದಲ್ಲಿ ಸ್ಟೋರ್ ಮಾಡಿ ಇಟ್ಟರೆ ಫ್ರೆಶ್ ಆಗಿರುತ್ತದೆ, ಮೊಳಕೆ ಬರುವುದಿಲ್ಲ.