ಈಗ ಕಳೆದ ಎರಡು ದಶಕದ ಹಿಂದೆ ಹೇಳುವುದಾದರೂ ಸಾಮಾನ್ಯವಾಗಿ ಜನರು ತಮ್ಮ ಮಕ್ಕಳಿಗೆ ಪರಿಚಯಸ್ಥರಲ್ಲಿ, ಸಂಬಂಧಿಕರಲ್ಲಿ ನೋಡಿ ಮದುವೆ ಮಾಡುತ್ತಿದ್ದರು. ಕಾಲ ಬದಲಾದಂತೆ ಈಗ ಮದುವೆ ಎನ್ನುವುದು ಮಕ್ಕಳ ಇಚ್ಛೆ ಆಗಿದೆ. ಸ್ನೇಹಿತರಲ್ಲಿ, ಸಹೋದ್ಯೋಗಿಗಳಲ್ಲಿ ಅಥವಾ ಸಂಬಂಧಿಕರಲ್ಲೇ ತಮಗೆ ಇಷ್ಟ ಆದವರನ್ನು ಒಪ್ಪಿಕೊಂಡರೆ ಕುಟುಂಬಸ್ಥರು ಅಸ್ತು ಎನ್ನುತ್ತಾರೆ.
ಇನ್ನು ಒಂದು ಹೆಚ್ಚು ಮುಂದೆ ಹೋಗಿ ಮ್ಯಾಟ್ರಿಮೋನಿಗಳಲ್ಲಿ ಪ್ರೊಫೈಲ್ಗಳನ್ನು ನೋಡಿ ತಮಗೆ ಬೇಕಾದವರನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು. ಎಲ್ಲವು ಕೂಡಿ ಬಂದರೆ ಮದುವೆ ನೆರವೇರುತ್ತದೆ ಇಷ್ಟೆಲ್ಲಾ ಅನುಕೂಲತೆ ಇದ್ದರೂ ಕೂಡ ಮದುವೆಗೆ ಹೆಣ್ಣು ಸಿಗುತ್ತಿಲ್ಲ, ಯಾವ ಗಂಡು ಇಷ್ಟ ಆಗುತ್ತಿಲ್ಲ, ಮದುವೆ ವಿಳಂಭವಾಗುತ್ತಿದೆ ಎಂದು ಸಂಕಟ ಪಡುತ್ತಿರುವ ಸಂಖ್ಯೆಯೂ ಅಷ್ಟೇ ಇದೆ.
ಹೆಣ್ಣು ಮಕ್ಕಳಿಗೂ ಕೂಡ ಈ ಸಮಸ್ಯೆ ಇದೆ, ಗಂಡು ಮಕ್ಕಳಿಗೂ ಕೂಡ ಈ ಸಮಸ್ಯೆ ಇದೆ ಮತ್ತು ಇದರಿಂದ ಪೋಷಕರು ನೊಂದು ಕೊಳ್ಳುತ್ತಿದ್ದಾರೆ. ಇರುವ ಒಬ್ಬರು, ಇಬ್ಬರು ಮಕ್ಕಳಿಗೂ ಕೂಡ ಸರಿಯಾದ ವಯಸ್ಸಿಗೆ ಮದುವೆಯಾಗುತ್ತಿಲ್ಲವಲ್ಲ ಎನ್ನುವ ಕೊರಗು ಅವರನ್ನು ಹಗಲಿರುಲು ಕಾಡುತ್ತಿರುತ್ತದೆ.
ಈ ಸುದ್ದಿ ಓದಿ:- ಮೀನ ರಾಶಿ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು ಇವು, ಈ ರಾಶಿಯವರಲ್ಲಿ ನಿಗೂಢತೆ ಹೆಚ್ಚು ಯಾಕೆ ಅಂತ ನೋಡಿ.!
ನೀವು ಕೂಡ ಹತ್ತಾರು ಕಡೆ ಹೋಗಿ ಬಂದು ಮಾತುಕತೆ ಹಂತಕ್ಕೆ ಬಂದಾಗ ಮದುವೆ ಮುರಿದು ಬೀಳುತ್ತಿದೆ ಎಂದರೆ ಅಥವಾ ಯಾವ ಜಾತಕಗಳು ನಿಮಗೆ ಜಾತಕಕ್ಕೆ ಹೊಂದಿಕೆ ಆಗದೆ ಸಮಸ್ಯೆ ಆಗುತ್ತಿದೆ ಎಂದರೆ ನಾವು ಹೇಳುವ ಸುಲಭ ಪರಿಹಾರ ಮಾಡಿ ಇದನ್ನು ಮಾಡಿದ ತಿಂಗಳ ಒಳಗೆ ನಿಮಗೆ ಬಹಳ ಒಳ್ಳೆಯ ಸಂಬಂಧ ಕೂಡಿಬರುತ್ತದೆ ನಿಮ್ಮ ವಿವಾಹ ಜೀವನವು ಸಂತೋಷದಿಂದ ಕೂಡಿರುತ್ತದೆ.
ಏಲಕ್ಕಿ ಕಾಯಿ ಎಲ್ಲರಿಗೂ ಗೊತ್ತು ಅಡುಗೆ ರುಚಿಯನ್ನು ಮತ್ತು ಸುವಾಸನೆಯನ್ನು ಹೆಚ್ಚಿಸುವ ಸಾಂಬಾರ್ ಪದಾರ್ಥ. ಕಣ್ಣು ಮುಚ್ಚಿಕೊಂಡು ಕೂಡ ಅದರ ಘಮದಿಂದಲೇ ಏಲಕ್ಕಿಯನ್ನು ಗುರುತಿಸಬಹುದು, ಅಷ್ಟು ಆಕರ್ಷಣೀಯ ಗುಣವನ್ನು ಹೊಂದಿದೆ. ಈ ಏಲಕ್ಕಿಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಇದೆ.
ಅದೇನೆಂದರೆ ಏಲಕ್ಕಿಯನ್ನು ಬಿಡಿಸಿದಾಗ ಒಳಗಡೆ ಕಪ್ಪು ಕಾಳುಗಳು ಇರುತ್ತವೆ ಕೆಲವು ಏಲಕ್ಕಿಗಳು ಕೆಟ್ಟು ಹೋಗಿದ್ದರೆ ಬೀಜಗಳು ಕಂದು ಅಥವಾ ಕೇಸರಿ ಬಣ್ಣ ಬಿಳಿ ಬಣ್ಣ ಆಗಿರುತ್ತದೆ. ಅದನ್ನು ತೆಗೆದುಕೊಳ್ಳಬಾರದು ಕಪ್ಪು ಬಣ್ಣದ್ದೇ 108 ಏಲಕ್ಕಿ ಕಾಳುಗಳನ್ನು ತೆಗೆದುಕೊಳ್ಳಬೇಕು.
ಈ ಸುದ್ದಿ ಓದಿ:- ಹನುಮನಿಗೆ ಈ 6 ರಾಶಿಯವರು ಎಂದರೆ ಬಹಳ ಪ್ರೀತಿ, ಹನುಮನಿಗೂ ಈ ರಾಶಿಗಳಿಗೂ ಇರುವ ಸಂಬಂಧವೇನು.? ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ…
ಗಂಡು ಮಕ್ಕಳಾದರೆ ಶುಕ್ರವಾರದಂದು ಬೆಳಿಗ್ಗೆ ಅಥವಾ ಸಂಜೆ ತಮಗೆ ಅನುಕೂಲವಾದಾಗ ಸ್ನಾನ ಮಾಡಿ ಮಡಿಯುಟ್ಟು ಬಿಳಿ ಬಣ್ಣದ ಬಟ್ಟೆಯಲ್ಲಿ 108 ಏಲಕ್ಕಿ ಕಾಳುಗಳನ್ನು ಹಾಕಿ ಬಿಳಿ ಬಣ್ಣದ ದಾರದಲ್ಲಿ ಕಟ್ಟಿ ಗಣೇಶನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು. ಗಣೇಶನ ಸೊಂಡಿಲ ಬಳಿ ಇಡುವಂತೆ ಅರ್ಚಕರನ್ನು ಕೇಳಿಕೊಂಡು ಪೂಜೆ ಮಾಡಿಸಬೇಕು.
ನೀವು ಕೂಡ ಅಲ್ಲೇ ಸ್ವಲ್ಪ ಸಮಯ ಕಳೆದು, ನಿಮ್ಮ ಮದುವೆಗೆ ಬರುತ್ತಿರುವ ವಿಜ್ಞಗಳನ್ನು ನಿವಾರಿಸುವಂತೆ ಪ್ರಾರ್ಥಿಸಿ ಕೊಳ್ಳಬೇಕು ಬಳಿಕ ಅಲ್ಲಿಂದ ನೇರವಾಗಿ ಆಂಜನೇಯ ದೇವಸ್ಥಾನಕ್ಕೆ ಹೋಗಿ ಆಂಜನೇಯನ ಅಭಯ ಹಸ್ತದ ಹತ್ತಿರ ಇಡುವಂತೆ ಕೇಳಿಕೊಳ್ಳಬೇಕು. ನೀವು ಕೂಡ ಆಂಜನೇಯನನ್ನು ಆದಷ್ಟು ಬೇಗ ನಿಮ್ಮ ಜೋಡಿ ಜೊತೆ ಸೇರಿಸುವಂತೆ ಪ್ರಾರ್ಥಿಸಿ ಕೊಳ್ಳಬೇಕು. ನಂತರ ಮನೆಗೆ ತಂದು ನೀವು ಮಲಗುವ ದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಬೇಕು.
ಹೆಣ್ಣು ಮಕ್ಕಳಾದರೂ ಇದೇ ರೀತಿಯಾಗಿ ಮಾಡಬೇಕು ಆದರೆ ಹೆಣ್ಣು ಮಕ್ಕಳು ಮಂಗಳವಾರದಂದು ಮಾಡಬೇಕು ಮತ್ತು ಬಿಳಿ ಬಣ್ಣದ ವಸ್ತ್ರದ ಬದಲು ಕೆಂಪು ಬಣ್ಣದ ವಸ್ತ್ರ ಹಾಗೂ ಕೆಂಪು ಬಣ್ಣದ ದಾರದಲ್ಲಿ 108 ಏಲಕ್ಕಿ ಕಾಳುಗಳನ್ನು ಕಟ್ಟಬೇಕು. ಈ ರೀತಿ ಮಾಡಿದರೆ ನಿಮಗೆ ಒಂದು ತಿಂಗಳ ಒಳಗೆ ಶುಭ ಸುದ್ದಿ ಬರುತ್ತದೆ. ಒಂದು ವೇಳೆ ವಿಳಂಭವಾಗುತ್ತಿದ್ದರೆ 108 ದಿನಗಳಾದರೂ ಶುಭ ಕಾರ್ಯ ನಡೆಯದೆ ಇದ್ದರೆ 108ನೇ ದಿನ ಇದನ್ನು ಬದಲಾಯಿಸಿ ಮತ್ತೊಮ್ಮೆ ಈ ರೀತಿ ಮಾಡಬೇಕು.