ಮೀನ ರಾಶಿ ದ್ವಾದಶ ರಾಶಿಯಲ್ಲಿ ಕೊನೆಯ ರಾಶಿ ಪೂರ್ವಭಾದ್ರ ನಕ್ಷತ್ರದ ನಾಲ್ಕನೇ ಪಾದ ಉತ್ತರಭಾದ್ರ ಮತ್ತು ರೇವತಿ ನಕ್ಷತ್ರಗಳಲ್ಲಿ ಜನಿಸಿದವರು ಮೀನ ರಾಶಿಗೆ ಬರುತ್ತಾರೆ. ಮೀನ ರಾಶಿಯವರ ಅಕ್ಷರಗಳು ದಿ ದು ಖ ಝ ಧ ದೆ ದೊ ಚ ಚಿ ಆಗಿರುತ್ತದೆ ಮೀನ ರಾಶಿಯ ಸಂಕೇತವು ನೀರಿನೊಳಗಿರುವ ಮೀನು ಆಗಿದೆ ಮೀನ ರಾಶಿಯ ರಾಶಿಯಾಧಿಪತಿ ಗುರು.
ಇನ್ನು ಈ ರಾಶಿಯವರ ಗುಣ ಸ್ವಭಾವ ಮತ್ತು ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ ಮೀನ ರಾಶಿ ಅಥವಾ ಮೀನು ಎನ್ನುವುದು ಚುರುಕುತನವನ್ನು ಪ್ರತಿನಿಧಿಸುತ್ತದೆ. ಆದರೆ ಮೀನು ನೀರಿನ ಒಳಗಡೆ ಇದ್ದು ಮೇಲ್ಭಾಗದಲ್ಲಿ ನೀರು ಪ್ರಶಾಂತವಾಗಿರುವ ಹಾಗೆ ಕಂಡು ಬರುವಂತೆ ಮೀನ ರಾಶಿಯವರ ಸ್ವಭಾವ ಕೂಡ.
ಇವರು ತಮ್ಮ ಒಳಗೆ ಸಾಕಷ್ಟು ರಹಸ್ಯಗಳನ್ನು ಇಟ್ಟುಕೊಂಡಿರುತ್ತಾರೆ ಆದರೆ ಒಳ ನೋಟಕ್ಕೆ ಇವರು ಇಷ್ಟು ವಿಷಯವನ್ನು ತಿಳಿದುಕೊಂಡಿದ್ದಾರೆ ಎಂದು ಅಥವಾ ಯಾವುದಾದರು ಸಂಗತಿಗಳಾದಾಗ ಇಂತಹ ವಿಷಯಗಳು ಇವರಿಗೆ ಮೊದಲೇ ಗೊತ್ತಿತ್ತು ಎಂದು ತೋರಿಸಿಕೊಳ್ಳದಷ್ಟು ರಹಸ್ಯವನ್ನು ಕಾಪಾಡಿಕೊಳ್ಳುತ್ತಾರೆ.
ಈ ಸುದ್ದಿ ಓದಿ:- ಹನುಮನಿಗೆ ಈ 6 ರಾಶಿಯವರು ಎಂದರೆ ಬಹಳ ಪ್ರೀತಿ, ಹನುಮನಿಗೂ ಈ ರಾಶಿಗಳಿಗೂ ಇರುವ ಸಂಬಂಧವೇನು.? ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ…
ಇವರ ಇದೇ ಗುಣವು ಅನೇಕ ಬಾರಿ ಸ್ನೇಹಿತರ ಮಧ್ಯೆ ಮನಸ್ತಾಪ ಉಂಟಾಗುವುದಕ್ಕೆ ಕಾರಣ ಆಗಿರುತ್ತದೆ ಆದರೂ ಕೂಡ ಮೀನ ರಾಶಿಯವರು ಬಹಳ ಸೀಕ್ರೆಟ್ ಮಾಡುತ್ತಾರೆ. ಕೆಲವೊಮ್ಮೆ ಇದು ಒಳ್ಳೆಯ ಉದ್ದೇಶಗಳಿಗೆ ಆಗಿದ್ದರೂ ಇದೇ ಇವರ ಪ್ಲಸ್ ಮತ್ತು ಮೈನಸ್ ಪಾಯಿಂಟ್ ಇದೇ ಆಗಿರುತ್ತದೆ.
ಮೀನ ರಾಶಿಯ ಗಂಡು ಮಕ್ಕಳಾಗಲಿ ಹೆಣ್ಣು ಮಕ್ಕಳ ಆಗಲಿ ವಿದ್ಯಾಭ್ಯಾಸದಲ್ಲಿ ಟಾಪ್ ಬರೆದೇ ಇದ್ದರು ಶಾಲಾ ಕಾಲೇಜುಗಳಲ್ಲಿ ಈ ರೀತಿ ಗುರುತಿಸಿಕೊಳ್ಳದೆ ಇದ್ದರೂ ಕೆಲಸದ ವಿಷಯ ಬಂದಾಗ ಹೆಚ್ಚು ವೇತನದ ಕೆಲಸಗಳಲ್ಲಿ ಮತ್ತು ಪ್ರತಿಷ್ಠಿತ ಹುದ್ದೆಗಳಲ್ಲಿ ಇರುತ್ತಾರೆ.
ಇವರು ಮಾತಿನಲ್ಲಿ ಒರಟಾಗಿ ವಾದ ಮಾಡದೇ ಇದ್ದರೂ ಜೊತೆಗೆ ಇರುವವರ ಮನಸ್ಸನ್ನು ತಮ್ಮ ಮೃದು ಮಾತುಗಳಲ್ಲಿ ಗೆಲ್ಲುತ್ತಾರೆ, ಇವರ ಮಾತುಗಳನ್ನು ಕೇಳಿ ಎಷ್ಟೇ ಕಟ್ಟು ಮನಸ್ಸಿನವರು ಕೂಡ ಅರ್ಥ ಮಾಡಿಕೊಡಬೇಕು ಅಥವಾ ಒಪ್ಪಿಕೊಳ್ಳಬೇಕು ಆ ರೀತಿ ಮಾತನಾಡುತ್ತಾರೆ.
ಈ ಸುದ್ದಿ ಓದಿ:-10 ವರ್ಷ ದುಡಿದು 100 ವರ್ಷ ಸುಖವಾಗಿ ಜೀವನ ಮಾಡುವಂತಹ ಅದೃಷ್ಟವಂತ ರಾಶಿಗಳು ಇವು.!
ಇದರ ಜೀವನದಲ್ಲಿ ಇವರು ಪ್ಲಾನ್ ಮಾಡುವುದಕ್ಕಿಂತ ಹೆಚ್ಚು ಸಕ್ಸಸ್ ಕಾಣುತ್ತಾರೆ ಮತ್ತು ಪ್ರತಿಯೊಂದು ಹಂತದಲ್ಲೂ ಕೂಡ ಬಹಳ ಸಲೀಸಾಗಿ ಎಲ್ಲಾ ಕಾರ್ಯಗಳು ಜರುಗುತ್ತವೆ. ಆದರೆ ಇದರ ಜೊತೆಗೆ ಕುಟುಂಬದ ಜವಾಬ್ದಾರಿಯು ಕೂಡ ಬಹಳ ಬೇಗ ಇವರ ಮೇಲೆ ಬೀಳುತ್ತದೆ. ಇಡೀ ಕುಟುಂಬವನ್ನು ಹಿಡಿತದಲ್ಲಿ ಇಟ್ಟುಕೊಂಡು ನಿಭಾಯಿಸಿಕೊಳ್ಳ ಸಾಮರ್ಥ್ಯವನ್ನು ಈ ರಾಶಿಯವರು ಹೊಂದಿರುತ್ತಾರೆ.
ಆದರೆ ಅಷ್ಟೇ ಹಿರಿಯರಿಗೆ ಗೌರವ ಮತ್ತು ಕಿರಿಯರೊಂದಿಗೆ ಸಲಹೆಯನ್ನು ಕೂಡ ಇವರು ಹೊಂದಿರುತ್ತಾರೆ. ಮೀನ ರಾಶಿಯವರ ನೋಡಲು ಆಕರ್ಷಣೀಯವಾಗಿರುತ್ತಾರೆ. ಸೌಂದರ್ಯದಿಂದ ಮತ್ತು ವ್ಯಕ್ತಿತ್ವದಿಂದ ಎಲ್ಲರ ಗಮನವನ್ನು ಸೆಳೆಯುತ್ತಾರೆ. ಬಹಳ ನಂಬಿಕಸ್ಥ ಸ್ನೇಹಿತರನ್ನು ಹೊಂದಿರುತ್ತಾರೆ.
ಕುಟುಂಬದವರ ಜೊತೆಗೂ ಕೂಡ ಬಹಳ ಆತ್ಮೀಯತೆ ಹೊಂದಿರುತ್ತಾರೆ ಇವೆರಡೂ ಕೂಡ ಇವರ ಶಕ್ತಿ ಎಂದು ಹೇಳಬಹುದು. ಮೀನ ರಾಶಿ ಅವರಿಗೆ ಹಣಕಾಸಿನ ಸಮಸ್ಯೆ ಬರುವುದು ಬಹಳ ಕಡಿಮೆ. ಇವರ ಬಳಿ ಹಣ ಇದ್ದರೂ ಕೂಡ ಇಲ್ಲದಂತೆ ಕಾಣುತ್ತಾರೆ, ಇವರ ಹಣಕಾಸಿನ ಮೂಲಗಳ ಬಗ್ಗೆ ಯಾರ ಜೊತೆಗೂ ಇವರು ಮಾಹಿತಿ ಹಂಚಿಕೊಳ್ಳುವುದಿಲ್ಲ ಈ ವಿಚಾರದಲ್ಲೂ ಕೂಡ ಇವರು ಬಹಳ ಗುಟ್ಟು ಮಾಡುತ್ತಾರೆ.
ಈ ಸುದ್ದಿ ಓದಿ:-ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಹೀಗೆ ಮಾಡಿ.! ನಿಮ್ಮ ಆಸೆ ಶೀಘ್ರದಲ್ಲಿ ನೆರವೇರುತ್ತದೆ.!
ಈಗಿನ ಕಾಲದಲ್ಲಿ ಈ ರೀತಿ ಇರುವುದೇ ಒಳ್ಳೆಯದು ಕೂಡ ಯಾವುದಕ್ಕೂ ತಮ್ಮ ಬದುಕಿನಲ್ಲಿ ಯಾವುದಕ್ಕೂ ಕೊರತೆ ಇಲ್ಲದಂತೆ ಜೀವನ ನಡೆಸುತ್ತಾರೆ.
ಶುಭ ವಾರ: ಭಾನುವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ
ಶುಭ ದಿನಾಂಕ: 3, 9 12, 18, 21, 27, 30
ಶುಭ ಸಂಖ್ಯೆ: 1, 3, 8, 9
ಶುಭ ವರ್ಣ: ಹಳದಿ, ಕೆಂಪು, ಕೇಸರಿ, ತಾಮ್ರವರ್ಣ
ಶುಭ ದಿಕ್ಕು: ಈಶಾನ್ಯ
ಶುಭ ರತ್ನ: ಪುಷ್ಯರಾಗ, ಹವಳ, ಮಾಣಿಕ್ಯ ನೀಲ.