ಕೈಯಲ್ಲಿರುವ ಹಸ್ತ ರೇಖೆಗಳು ನಮ್ಮ ಭವಿಷ್ಯವನ್ನು ಹೇಳುತ್ತದೆ ಎಂದು ಅನಾಧಿಕಾಲದಿಂದಲೂ ನಂಬಲಾಗಿದೆ. ಇದನ್ನು ಹಸ್ತ ಸಾಮೂದ್ರಿಕ ಶಾಸ್ತ್ರ ಎಂದು ಕೂಡ ಕರೆಯುತ್ತಾರೆ. ಇದರ ಮೂಲಕ ಉದ್ಯೋಗದ ಸಂಬಂಧಗಳು, ಸಂತಾನ, ವಿವಾಹ, ವ್ಯಾಪಾರ ಹಣಕಾಸಿಗೆ ಸಂಬಂಧಿಸಿದ ವಿಷಯಗಳು ಇದೆಲ್ಲದರ ಬಗ್ಗೆ ಪ್ರಗತಿ ಹಾಗೂ ಇದರಲ್ಲಾಗುವ ಅಡೆತಡೆಗಳ ಬಗ್ಗೆ ತಿಳಿದುಕೊಳ್ಳಬಹುದು.
ಈ ಅಂಕಣದಲ್ಲಿ ಆ ಪ್ರಕಾರವಾಗಿ ನಮ್ಮ ಮದುವೆಯ ಜೀವನದ ಬಗ್ಗೆ ಮದುವೆಯ ನಂತರದ ಜೀವನ ಹೇಗೆ ಇರುತ್ತದೆ ಎನ್ನುವುದರ ಬಗ್ಗೆ ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾವ ರೇಖೆಗಳು ಏನನ್ನು ತಿಳಿಸುತ್ತದೆ ಎನ್ನುವ ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
* ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಯಾವಾಗಲೂ ಹೆಣ್ಣು ಮಕ್ಕಳಿಗೆ ಎಡಗೈ ಹಾಗೂ ಗಂಡು ಮಕ್ಕಳಿಗೆ ಬಲಗೈನಲ್ಲಿರುವ ರೇಖೆಗಳನ್ನು ನೋಡಿ ಬಗ್ಗೆ ಭವಿಷ್ಯ ಹೇಳಲಾಗುತ್ತದೆ.
ಈ ಸುದ್ದಿ ಓದಿ:- ಹನುಮನಿಗೆ ಈ 6 ರಾಶಿಯವರು ಎಂದರೆ ಬಹಳ ಪ್ರೀತಿ, ಹನುಮನಿಗೂ ಈ ರಾಶಿಗಳಿಗೂ ಇರುವ ಸಂಬಂಧವೇನು.? ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ…
* ಇದರ ಪ್ರಕಾರ ಹೆಣ್ಣು ಮಕ್ಕಳು ಎಡಗೈ ಕಿರುಬೆರಳಿನ ಕೆಳಗೆ ಇರುವ ಬುಧ ಪರ್ವತ ಹಾಗೂ ಗಂಡು ಮಕ್ಕಳಿಗೆ ಬಲಗೈ ನಲ್ಲಿರುವ ಕಿರು ಬೆರಳಿನ ಕೆಳಗಿರುವ ಬುಧ ಪರ್ವತವನ್ನು ನೋಡಬೇಕು. ಇದರಲ್ಲಿ ಒಂದು ಗಾಢವಾದ ರೇಖೆ ಇರುತ್ತದೆ ಅದು ಕೆಳಭಾಗಕ್ಕೆ ಬೆಂಡ್ ಆಗಿದ್ದರೆ ಅವರ ವಿವಾಹ ಜೀವನ ಚೆನ್ನಾಗಿರುತ್ತೆ, ಪತಿ-ಪತ್ನಿ ನಡುವೆ ಅನ್ಯೋನತೆ ಇರುತ್ತದೆ, ಸಂತೋಷವಾಗಿ ಜೀವನ ಕಳೆಯುತ್ತಾರೆ ಎಂದು ಅರ್ಥ.
ಒಂದು ವೇಳೆ ಇದು ಕಿರು ಬೆರಳ ಕಡೆಗೆ ಬೆಳೆಯುತ್ತಾ ಇರುವಂತೆ ಬೆಂಡ್ ಆಗಿದ್ದರೆ ಇದಕ್ಕೆ ವಿರುದ್ಧವಾದ ಪರಿಣಾಮ ಎಂದು ಅರ್ಥ ಮಾಡಿಕೊಳ್ಳಬೇಕು ಇಬ್ಬರ ನಡುವೆ ಸಂಬಂಧ ಹದಗೆಡುವ, ವಿವಾಹದಿಂದ ಮನಶಾಂತಿ ಹಾಳಾಗುವ ಸಾಧ್ಯತೆ ಇರುತ್ತದೆ.
ಹೀಗೆ ಒಂದಕ್ಕಿಂತ ಹೆಚ್ಚು ಗಾಢವಾಗಿರುವ ಸಣ್ಣಪುಟ್ಟ ರೇಖೆಗಳು ಇದ್ದರೆ ಇವರಿಗೆ ಬಹಳ ಬೇಗ ಮದುವೆ ಆಗುವುದಿಲ್ಲ ಅನೇಕ ಸಂಬಂಧಗಳು ಕೂಡಿ ಬಂದರೂ ನಿಶ್ಚಿತಾರ್ಥಕ್ಕೆ ಹಂತಕ್ಕೆ ಬಂದು ಮುರಿದು ಹೋಗುವ ಸಾಧ್ಯತೆ ಇರುತ್ತದೆ ಅಥವಾ ಪ್ರೀತಿ ಪ್ರೇಮದಲ್ಲಿ ವಿಫಲ ಹೊಂದುತ್ತಾರೆ ಎಂದು ಒಟ್ಟಾಗಿ ಪರ್ಸನಲ್ ಲೈಫ್ ನಲ್ಲಿ ತೊಂದ್ರೆಗಳನ್ನು ಅನುಭವಿಸುತ್ತಾರೆ ಎಂದು ಅರ್ಥ.
ಈ ಸುದ್ದಿ ಓದಿ:-ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!
* ಅದೇ ರೀತಿ ಹೆಬ್ಬೆರಳಿನ ಕೆಳಗೆ ಇರುವ ಪ್ರದೇಶವನ್ನು ಶುಕ್ರ ಪರ್ವತ ಎಂದು ಕರೆಯುತ್ತಾರೆ ಇಲ್ಲಿ ಕೆಲವರಿಗೆ ಅಡ್ಡ ರೇಖೆಗಳು ಇರುತ್ತವೆ ಕೆಲವರಿಗೆ ಉದ್ದ ರೇಖೆಗಳು ಇರುತ್ತವೆ. ಅಡ್ಡ ರೇಖೆಗಳೇನಾದರೂ ಇದ್ದರೆ ಅವರ ವಿವಾಹ ಜೀವನದಲ್ಲಿ ಸಮಸ್ಯೆಗಳಿರುತ್ತವೆ. ಮದುವೆ ಆದ ನಂತರ ಹೊಂದಿಕೊಳ್ಳುವುದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತಾರೆ ಎಂದು ಅರ್ಥ.
ಒಂದು ವೇಳೆ ಉದ್ದವಾದ ರೇಖೆಗಳು ಇದ್ದರೆ ತಾವು ಆರಿಸಿಕೊಂಡ ಸಂಗಾತಿಯ ಸಹಕಾರದಿಂದ ಜೀವನದಲ್ಲಿ ಬಹಳ ಯಶಸ್ವಿ ವ್ಯಕ್ತಿಗಳಾಗುತ್ತಾರೆ ಸಂಗಾತಿಯಿಂದ ಸಪೋರ್ಟ್ ಯಾವಾಗಲೂ ಇರುತ್ತದೆ ಜೀವನದಲ್ಲಿ ಎಲ್ಲವೂ ಒಳ್ಳೆಯದೇ ಆಗುತ್ತದೆ ಇವರು ಪಡೆದ ಸಂಗಾತಿ ಇವರಿಗೆ ಲಕ್ಕಿ ಆಗಿರುತ್ತಾರೆ ಎಂದು ಅರ್ಥ.
* ಹಸ್ತದಲ್ಲಿ ಹೃದಯ ರೇಖೆ ಎನ್ನುವುದು ಇರುತ್ತದೆ ಇದು ಗಾಢವಾದ ಲೈನ್ ಆಗಿದ್ದು ಯಾವಾಗಲು ತೋರು ಬೆರಳ ಕಡೆಗೆ ಹತ್ತುತ್ತಾ ಇರುತ್ತದೆ. ಇದನ್ನು ಗುರು ಪರ್ವತ ಎಂದು ಕರೆಯುತ್ತಾರೆ ಇದು ತೋರುಬೆರಳಿನ ಕಡೆಗೆ ಬೆಳೆಯುತ್ತಾ ಹೋಗುತ್ತಿದ್ದರೆ ನಿಮ್ಮ ಜೀವನದಲ್ಲಿ ನೀವು ಯಶಸ್ವಿ ವ್ಯಕ್ತಿಗಳಾಗುತ್ತೀರಿ.
ಈ ಸುದ್ದಿ ಓದಿ:- ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಹೀಗೆ ಮಾಡಿ.! ನಿಮ್ಮ ಆಸೆ ಶೀಘ್ರದಲ್ಲಿ ನೆರವೇರುತ್ತದೆ.!
ನೀವು ಅಂದುಕೊಂಡಿದ್ದನ್ನೆಲ್ಲ ಪಡೆಯುತ್ತೀರಿ ನಿಮಗೆ ಸಂಸಾರದಲ್ಲಿ ಅಥವಾ ಸಾಧನೆಯಲ್ಲಿ ಯಾವುದೇ ಅಡ್ಡಿ ಇಲ್ಲ ಎಂದು ಅರ್ಥ. ಇದಕ್ಕೆ ವಿರುದ್ಧವಾಗಿ ಇದು ನೇರವಾಗಿ ಬೆಳೆದು ಮುಂಗೈ ಕಡೆಗೆ ಹೋಗುವ ರೀತಿ ಇದ್ದರೆ ಇದಕ್ಕೆ ವಿರುದ್ಧವಾದ ಪರಿಣಾಮಗಳನ್ನು ಅನುಭವಿಸಬೇಕಾಗಿ ಬರುತ್ತದೆ.