ಗೃಹಲಕ್ಷ್ಮಿ ಯೋಜನೆಯ (Gruhalakshmi) ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಸಮಾಧಾನಕರ ಸುದ್ದಿ ಇದೆ. ಪ್ರತಿ ತಿಂಗಳು ಕೂಡ ಗೃಹಲಕ್ಷ್ಮಿ ಯೋಜನೆ ಕುರಿತು ಸಾಕಷ್ಟು ವಿಚಾರಗಳು ಚರ್ಚೆಯಾಗುತ್ತಲೇ ಇರುತ್ತದೆ ಮತ್ತು ಈ ಕುರಿತಾದ ಸುದ್ದಿಗಳು ಹರಡುತ್ತಲೇ ಇರುತ್ತದೆ.
ಯಾಕೆಂದರೆ ಕಾಂಗ್ರೆಸ್ ಸರ್ಕಾರ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳಲ್ಲಿ ಹೈ ಬಜೆಟ್ ಯೋಜನೆಯಾಗಿದೆ ಗೃಹಲಕ್ಷ್ಮಿ ಯೋಜನೆ. ಗೃಹಲಕ್ಷ್ಮಿ ಯೋಜನೆ ಮೂಲಕ APL ಕಾರ್ಡ್ ದಾರರು ಸೇರಿದಂತೆ ಕರ್ನಾಟಕದ ಪ್ರತಿಯೊಂದು ಕುಟುಂಬದ ಮುಖ್ಯಸ್ಥೆಯು (HOF Women) ಕೂಡ ಸರ್ಕಾರದಿಂದ ಪ್ರತಿ ತಿಂಗಳು ರೂ.2000 ಸಹಾಯಧನವನ್ನು ಪಡೆಯುತ್ತಿದ್ದಾರೆ ಮತ್ತು ಇದುವರೆಗೂ ಕೂಡ ಯೋಜನೆಗೆ ನೋಂದಾಯಿಸಿಕೊಂಡಿರುವವರ ಸಂಖ್ಯೆ 1.20 ಕೋಟಿ ಇದೆ.
ಜುಲೈ 19, 2023 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ ಮಾಡಲಾಗಿತ್ತು ಮತ್ತು ಆಗಸ್ಟ್ 30, 2023ರಂದು ಗೃಹಲಕ್ಷ್ಮಿ ಯೋಜನೆ ಯ ಮೊದಲನೆ ಕಂತಿನ ಹಣ (1st Installment amount release) ಬಿಡುಗಡೆಯಾಗಿತ್ತು. ಮತ್ತು ಈವರೆಗೆ ಯಶಸ್ವಿಯಾಗಿ ಆರು ಕಂತುಗಳ ಗೃಹಲಕ್ಷ್ಮಿ ಯೋಜನೆ ಅರ್ಹ ಫಲಾನುಭವಿಗಳ ಖಾತೆಗೆ DBT ಮೂಲಕ ವರ್ಗಾವಣೆಯಾಗಿದೆ.
ಈ ಸುದ್ದಿ ಓದಿ:- ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಇದನ್ನು ಇಟ್ಟು ಮಲಗಿ, ವರಾಹಿ ದೇವಿ ನಿಮ್ಮ ಕೋರಿಕೆಗಳನ್ನು ಮೂರೇ ದಿನಗಳಲ್ಲಿ ನೆರವೇರಿಸುತ್ತಾರೆ.!
ಆದರೆ ಎಷ್ಟೇ ಕ್ರಮಗಳನ್ನು ಕೈಗೊಂಡು ಈ ಯೋಜನೆಯನ್ನು 100% ಯಶಸ್ವಿಗೊಳಿಸಲು ಪ್ರಯತ್ನ ಪಟ್ಟಿದ್ದರೂ ಕೂಡ ಇದುವರೆಗೆ ಶೇಕಡ 90% ಮಹಿಳೆಯರು ಮಾತ್ರ ಗೃಹಲಕ್ಷ್ಮಿ ಯೋಜನೆ ಹಣ ಪಡೆಯುತ್ತಿದ್ದಾರೆ ಸುಮಾರು 6 ಲಕ್ಷಕ್ಕಿಂತ ಹೆಚ್ಚು ಮಹಿಳೆಯರಿಗೆ ಹಲವಾರು ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಆಗುತ್ತಿಲ್ಲ.
ಕೆಲವರು ಒಂದು ಕಂತಿನ ಹಣ ಕೂಡ ಪಡೆಯದೆ ಇದ್ದರೆ ಇನ್ನು ಕೆಲವರಿಗೆ ಒಂದೆರಡು ಕಂತುಗಳ ಹಣ ಬಂದು ನಂತರ ನಿಂತು ಹೋಗಿದೆ. ಈ ಬಗ್ಗೆ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಡಿಸೆಂಬರ್ 2023 ರಲ್ಲಿ ಮುಖ್ಯಮಂತ್ರಿಗಳ (CM) ಸಮ್ಮುಖದಲ್ಲಿ ನಡೆದ ಗೃಹಲಕ್ಷ್ಮಿ ಪ್ರಗತಿ ಪರಿಶೀಲನ ಸಭೆಗಳಲ್ಲಿ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು (Gruhalakshmi Camp) ಏರ್ಪಡಿಸಿ.
ಮಹಿಳಾ ಫಲಾನುಭವಿಗಳಿಗೆ ಹಣ ಪಡೆಯಲು ಆಗಿರುವ ಸಮಸ್ಯೆಗಳನ್ನು ಪರಿಹರಿಸಿಕೊಟ್ಟು ವರ್ಷದ ಅಂತ್ಯದೊಳಗೆ ಎಲ್ಲಾ ಮಹಿಳೆಯರು ಕೂಡ ಹಣ ಪಡೆಯುವಂತಾಗಬೇಕು ಮತ್ತು ಯೋಜನೆಗೆ ಸೇರ್ಪಡೆ ಆಗದೆ ಇದ್ದವರನ್ನು ಕೂಡ ವ್ಯಾಪ್ತಿಗೆ ಸೇರಿಸಬೇಕು ಎಂದು ಸೂಚನೆ ಕೊಟ್ಟಿದ್ದರು.
ಈ ಸುದ್ದಿ ಓದಿ:-ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!
ಆ ಪ್ರಕಾರವಾಗಿ ಸ್ಥಳೀಯ ಅಂಚೆ ಕಚೇರಿ, ಬ್ಯಾಂಕ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಇವರನ್ನೊಳಗೊಂಡು ಕ್ಯಾಂಪ್ ನಡೆದವು. ಹೀಗಿದ್ದು ಕೂಡ ಮತ್ತೆ ಸಮಸ್ಯೆ ಮುಂದುವರೆದಿದೆ.
ಬ್ಯಾಂಕ್ ಖಾತೆಗಳು ಆಕ್ಟಿವ್ ಆಗಿರದೇ ಈರುವುದು ಬ್ಯಾಂಕ್ ಖಾತೆಗಳು ಮತ್ತು ಬ್ಯಾಂಕ್ ಖಾತೆಗಳಿಗೆ Aadhar Seeding NPCI ಮ್ಯಾಪಿಂಗ್ ಆಗಿರದೇ ಇರುವುದು, ದಾಖಲೆಗಳಲ್ಲಿ ಹೆಸರಿನಲ್ಲಿ ವ್ಯತ್ಯಾಸ ಇರುವುದು ಮತ್ತು ಇ-ಕೆವೈಸಿ ಆಗಿರದೇ ಇರುವುದು ಗೃಹಲಕ್ಷ್ಮಿ ಹಣದಿಂದ ವಂಚಿತರಾಗಲು ಇರುವ ಕಾರಣಗಳಾಗಿವೆ.
ಈಗ ಇಂತಹ ಮಹಿಳೆಯರಿಗೆ ಸರ್ಕಾರದಿಂದ ಮತ್ತೊಂದು ರಿಲೀಫ್ ಇದೆ. ಅದೇನೆಂದರೆ, ಇನ್ನೂ ಕೂಡ ನಿಮಗೆ ಗೃಹಲಕ್ಷ್ಮಿ ಹಣ ಪಡೆಯಲು ಸಮಸ್ಯೆ ಆಗುತ್ತಿದ್ದರೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಗೃಹಲಕ್ಷ್ಮಿ ಅರ್ಜಿ ಸ್ವೀಕೃತಿ ಪ್ರತಿ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಗಳೊಂದಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಇರುವ ಅಧಿಕಾರಿಗಳನ್ನು ಭೇಟಿಯಾಗಿ ಅರ್ಜಿ ಸಲ್ಲಿಸಿ.
ಈ ಸುದ್ದಿ ಓದಿ:-ನಿಮ್ಮ ರಾಶಿ ಪ್ರಕಾರವಾಗಿ ನೀವು ಇನ್ನು ಎಷ್ಟು ವರ್ಷ ಬದುಕುತ್ತೀರಿ ಎಂದು ತಿಳಿಯಿರಿ.!
ಅವರು ಮೊದಲಿಗೆ ನಿಮ್ಮ ದಾಖಲೆಗಳನ್ನು ಪರಿಶೀಲಿಸಿ ಸಮಸ್ಯೆ ಏನಾಗಿದೆ ಎಂದು ಸೂಚಿಸುತ್ತಾರೆ. ಬ್ಯಾಂಕ್ ಖಾತೆಗಳಲ್ಲಿ ಸಮಸ್ಯೆ ಇರುವವರು ಅಂಚೆಕಛೇರಿಯಲ್ಲಿ ಉಳಿತಾಯ ಖಾತೆ ತೆರೆದರೆ ಸಮಸ್ಯೆ ಬಗ್ಗೆ ಹರಿಯುತ್ತದೆ ಎಂದು ಕೂಡ ಸೂಚಿಸಲಾಗಿದೆ. ಒಂದು ವೇಳೆ ಇದು ಕೂಡ ಸಾಧ್ಯವಾಗದೆ ಇದ್ದವರಿಗೆ ಮತ್ತೊಮ್ಮೆ ಸರ್ಕಾರದ ಕಡೆಯಿಂದ ಗ್ರಾಮಗಳಿಗೆ ಅಧಿಕಾರಿಗಳನ್ನು ಕಳುಹಿಸಲಾಗುತ್ತಿದೆ.
ಸರ್ಕಾರ ಈಗ ಗೃಹಲಕ್ಷ್ಮಿ ಹಣ ಪಡೆಯುತ್ತಿರುವವರು ಹಾಗೂ ಪಡೆಯಲು ಸಮಸ್ಯೆ ಇರುವವರ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿದೆ ಮತ್ತು ಈ ಪಟ್ಟಿಯಲ್ಲಿರುವ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳನ್ನು ಗ್ರಾಮಗಳಿಗೆ ಕಳುಹಿಸಲು ನಿರ್ಧರಿಸಿದೆ ಈ ಸಭೆಗಳಲ್ಲಿ ಭಾಗಿಯಾಗಿ ಸಮಸ್ಯೆ ಪರಿಹರಿಸಿಕೊಳ್ಳಿ.