ಮೇ 1, 2024ರಂದು ಬೃಹಸ್ಪತಿ ಗುರುವು ಮೇಷ ರಾಶಿಯಿಂದ ವೃಷಭ ರಾಶಿಗೆ ಸಂಚಾರ ಮಾಡುತ್ತಿದ್ದಾರೆ. ಇದು ದ್ವಾದಶ ರಾಶಿಗಳ ಮೇಲೂ ಕೂಡ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಗುರುಬಲ ದೊರೆತರೆ ಇನ್ನು ಕೆಲವು ರಾಶಿಗಳಿಗೆ ಗುರುಬಲ ಕಳೆಯುತ್ತದೆ. ಸಾಮಾನ್ಯವಾಗಿ ಚಂದ್ರನಿಂದ ಎರಡು, ಐದು, ಏಳು, ಒಂಬತ್ತು ಮತ್ತು ಹನ್ನೊಂದನೇ ಮನೆಯಲ್ಲಿ ಗುರು ಇದ್ದಾಗ ನಮಗೆ ಗುರುಬಲ ಇರುತ್ತದೆ ಎಂದು ಹೇಳಲಾಗುತ್ತದೆ.
ಸೌರಮಂಡಲದ ಅತಿ ದೊಡ್ಡ ಗ್ರಹವಾದ ಗುರುಗ್ರಹವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಸೌರಮಂಡಲದ ದೇವಗುರು ಎಂದು ಕರೆಯುತ್ತಾರೆ. ಹೀಗಾಗಿ ಗುರು ಗ್ರಹದ ಪ್ರಭಾವ ಭೂಮಂಡಲದ ಪ್ರತಿಯೊಂದು ಜೀವಿಯ ಮೇಲು ಕೂಡ ಇರುತ್ತದೆ. ಗುರುಬಲ ಇದ್ದರೆ ಬಹಳ ಯೋಗ ಎಲ್ಲಾ ಕಾರ್ಯಗಳನ್ನು ಯಶಸ್ಸು, ಮದುವೆ ಯೋಗ, ಸಂತಾನ ಯೋಗ, ಕನ್ಯಾ ದಾನ ಕಲ್ಪಿಸಿ ಕೊಡುವ ಯೋಗ ಇತ್ಯಾದಿಗಳಿಗೆಲ್ಲ ಗುರುಬಲವನ್ನೇ ನೋಡಲಾಗುತ್ತದೆ.
ಈ ಸುದ್ದಿ ಓದಿ:-ಮಾರ್ಚ್ 1 ರಿಂದ ಗೃಹಲಕ್ಷ್ಮಿ ಹಣ ಪಡೆಯಲು ಹೊಸ ರೂಲ್ಸ್, 6 ಮತ್ತು 7ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.!
ಗುರು ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡಲು ಒಂದು ವರ್ಷ ಸಮಯ ತೆಗೆದುಕೊಳ್ಳುತ್ತದೆ ಕಲಿಯುಗದಲ್ಲಿ ಗುರು, ಶನಿ ಹಾಗೂ ರಾಹು ಮತ್ತು ಕೇತುಗಳ ಬಲ ಮತ್ತು ಸಂಚಾರ ಫಲಗಳನ್ನು ನೋಡಲೇಬೇಕು, ಇವು ದ್ವಾದಶ ರಾಶಿಗಳ ಮೇಲೆ ಬಹಳ ಪ್ರಭಾವ ಬೀರುತ್ತವೆ ಗುರು ಗ್ರಹವು ತಾನಿರುವ ಸ್ಥಾನದಿಂದ 5, 7 ಹಾಗೂ 9 ನೇ ಮನೆಗಳಿಗೆ ದೃಷ್ಟಿಯಾಗುತ್ತಾರೆ.
ಇದು ಬಹಳ ಉತ್ತಮ ಪ್ರಭಾವವಾಗಿದ್ದು, ಈ ದೃಷ್ಟಿ ಪ್ರಭಾವದಿಂದ 5, 7 ಮತ್ತು 9ನೇ ಮನೆಗಳಲ್ಲಿ ಅಭಿವೃದ್ಧಿ ಹೆಚ್ಚು ಸಾಧ್ಯವಿದೆ. ಮೊದಲೇ ತಿಳಿಸಿದಂತೆ ಮೇ 1, 2024ರಂದು ಗುರು ಗ್ರಹದ ಸ್ಥಾನ ಬದಲಾವಣೆ ಆಗುತ್ತಿರುವುದರಿಂದ ದ್ವಾದಶ ರಾಶಿ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ವಿವರ ಹೀಗಿದೆ ನೋಡಿ.
ಈ ಸುದ್ದಿ ಓದಿ:-ಕೊರಗಜ್ಜನಿಗೆ ಹರಕೆ ಮಾಡುವ ವಿಧಾನ.! ಕೇವಲ ಒಂದು ರೂಪಾಯಿ ನಾಣ್ಯ ಇದ್ದರೆ ಸಾಕು ತಿಂಗಳ ಒಳಗೆ ನಿಮ್ಮ ಆಸೆ ನೆರವೇರುತ್ತದೆ.!
ಮಕರ ರಾಶಿಗೆ ಐದನೇ ಮನೆಯಲ್ಲಿ ಗುರು ಸಂಚಾರ ಮಾಡುತ್ತಾರೆ. 5ನೇ ಮನೆಯನ್ನು ನಾವು ಸಾಮಾನ್ಯವಾಗಿ ಪುತ್ರಸ್ಥಾನ ಎಂದು ಕರೆಯುತ್ತೇವೆ. ಕ್ರಿಯೇಟಿವಿಟಿ ಮತ್ತು ಪ್ರೈಮರಿ ಎಜುಕೇಶನ್ ಎಂದು ಕೂಡ ಕರೆಯುತ್ತಾರೆ ಇದರ ಪ್ರಭಾವ ಈಗ ವಿದ್ಯಾಭ್ಯಾಸ ಮಾಡಲು ಆರಂಭಿಸಿರುವ ಮಕರ ರಾಶಿಯ ಮಕ್ಕಳಿಗೆ ಬಹಳ ಉತ್ತಮ ರಿಸಲ್ಟ್ ನೀಡಲಿದೆ.
ಗುರು ಗ್ರಹದ ಪ್ರಭಾವದಿಂದ ನೀವು ಸ್ವಲ್ಪ ಓದಿದರೂ ಕೂಡ ಅದು ಶಾಶ್ವತವಾಗಿ ನಿಮ್ಮ ಮನಸ್ಸಿನಲ್ಲಿ ಇರುವಂತಹ ಏಕಗ್ರತೆಯನ್ನು ಪಡೆಯುತ್ತೀರಿ. ಕ್ರಿಯೇಟಿವಿಟಿ ಕೂಡ ಉತ್ತಮವಾಗಿರುವುದರಿಂದ ಆರ್ಕಿಟೆಕ್ಟ್, ಇಂಟೀರಿಯರ್ ಡಿಸೈನ್, ಸಿವಿಲ್ ಇಂಜಿನಿಯರಿಂಗ್ ಈ ರೀತಿಯಾಗಿ ಕ್ರಿಯೇಟಿವಿಟಿಯಿಂದ ಕೆಲಸ ಮಾಡುವಂತಹ ಕ್ಷೇತ್ರಗಳಲ್ಲಿ ಇರುವ ಮಕರ ರಾಶಿಯವರಿಗೆ ಒಳ್ಳೆಯ ಹಣ ಕೀರ್ತಿ ಗೌರವ ಎಲ್ಲವೂ ಸಿಗುತ್ತದೆ.
ಈ ಸುದ್ದಿ ಓದಿ:-ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಇದನ್ನು ಇಟ್ಟು ಮಲಗಿ, ವರಾಹಿ ದೇವಿ ನಿಮ್ಮ ಕೋರಿಕೆಗಳನ್ನು ಮೂರೇ ದಿನಗಳಲ್ಲಿ ನೆರವೇರಿಸುತ್ತಾರೆ.!
ಪುತ್ರಸ್ಥಾನವು ಆಗಿರುವುದರಿಂದ ಸಂತಾನಕ್ಕೆ ಸಂಬಂಧಪಟ್ಟ ಸಮಸ್ಯೆಯಲ್ಲಿ ಇರುವ ಮಕರ ರಾಶಿಯವರಿಗೆ ಈಗ ಇದು ಪರಿಹಾರವಾಗಿ ಶುಭ ಸುದ್ದಿ ಕೇಳುವ ಸಮಯ ಎಂದೇ ಹೇಳಬಹುದು. 5ನೇ ಮನೆಯಲ್ಲಿ ಇದ್ದುಕೊಂಡು 9ನೇ ಮನೆಯ ಮೇಲೆ ದೃಷ್ಟಿ ಇಡುವುದರಿಂದ ಅದೃಷ್ಟ ವೃದ್ಧಿಯಾಗುತ್ತದೆ.
ಮಕರ ರಾಶಿಯವರಿಗೆ ಹಲವು ವರ್ಷಗಳಿಂದ ಅಥವಾ ದಿನಗಳಿಂದ ಕೈಗೂಡದೆ ಇದ್ದ ಕೆಲಸಗಳು ಪೂರ್ತಿ ಗೊಳ್ಳುವ ಅದೃಷ್ಟವನ್ನು ಇದು ತರಲಿದೆ. ವಿದೇಶದಲ್ಲಿ ಹೋಗಿ ವಿದ್ಯಾಭ್ಯಾಸ ಮಾಡುವ ಅಥವಾ ಉದ್ಯೋಗವನ್ನು ಮಾಡುವ ಯೋಗವನ್ನು ಕೂಡ ತರಲಿದೆ. ಇದೆಲ್ಲದರ ಜೊತೆಗೆ ಜಾತಕ ವಿಮರ್ಶೆ ಮಾಡಿಸಿಕೊಂಡು ಮುಂದುವರೆಯುವುದು ಕೂಡ ಒಳ್ಳೆಯದು, ಜಾತಕದಲ್ಲೂ ಕೂಡ ಗುರು ಯಾವ ಸ್ಥಾನದಲ್ಲಿದ್ದಾರೆ ಗುರುಬಲ ಇದೆಯೇ ಎಂದು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ.