ಇತ್ತೀಚೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹೊಸ ಕಾನೂನನ್ನೇ ಶುರು ಮಾಡಿದೆ ಎಂದು ಹೇಳಬಹುದು. ಹೌದು ಅದರಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ಐದು ಗ್ಯಾರಂಟಿಯನ್ನು ಕೊಡುತ್ತೇವೆ ಎನ್ನುವಂತಹ ಭರವಸೆಯನ್ನು ಕೊಟ್ಟಿದ್ದರೋ ಅದೇ ರೀತಿ ಈಗ 4 ಗ್ಯಾರಂಟಿಗಳು ಜಾರಿಗೆ ಬಂದಿದ್ದು.
ಅದರ ಪ್ರಯೋಜನವನ್ನು ಜನರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಹಾಗಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅವರು ಯಾವ 5 ಗ್ಯಾರಂಟಿಗಳನ್ನು ಜನರಿಗೆ ಕೊಡುತ್ತೇವೆ ಎಂದು ಹೇಳಿದ್ದರು ಅವು ಯಾವುವು ಎಂದು ನೋಡುವುದಾದರೆ.
ಒಂದು ತಿಂಗಳು ಕಳೆದರೂ ಹೂ ಬಾಡುವುದಿಲ್ಲ, ಫ್ರಿಜ್ ಇಲ್ಲದವರು ಇನ್ನೂ ಮುಂದೆ ಹೂವನ್ನು ಹೀಗೆ ಸಂಗ್ರಹಿಸಿ.!
• ಶಕ್ತಿ ಯೋಜನೆ ಅಂದರೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ.
• 5 ಕೆಜಿ ಅಕ್ಕಿಯ ಹಣ
• 2,000 ಗೃಹಲಕ್ಷ್ಮಿ ಯೋಜನೆ
• ಹಾಗೂ 200 ಯೂನಿಟ್ ಉಚಿತ ವಿದ್ಯುತ್
ಹೀಗೆ ಈ ನಾಲ್ಕು ಯೋಜನೆ ಈಗಾಗಲೇ ಜಾರಿಗೆ ಬಂದಿದ್ದು. ಉಚಿತ ಬಸ್ ಪ್ರಯಾಣದ ವ್ಯವಸ್ಥೆ, 5 ಕೆಜಿ ಅಕ್ಕಿಯ ಹಣ, ಈಗಾಗಲೇ ಜನರಿಗೆ ಬಂದು ತಲುಪಿದೆ. ಅದೇ ರೀತಿಯಾಗಿ 2,000 ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ ಪ್ರಾರಂಭವಾಗಿದ್ದು ಇದಕ್ಕೆ ಅರ್ಜಿಯನ್ನು ಜನರು ಈಗ ಸಲ್ಲಿಸುತ್ತಿದ್ದಾರೆ ಈಗಾಗಲೇ ಇದರ ಹಿಂದೆ ಉಚಿತ ವಿದ್ಯುತ್ ಯೋಜನೆಗೆ ಜನರು ಅರ್ಜಿಯನ್ನು ಸಲ್ಲಿಸಿದ್ದು.
ಇನ್ನು ಮುಂದೆ ಅಂದರೆ ಆಗಸ್ಟ್ ತಿಂಗಳಿನಲ್ಲಿ ಬರುವಂತಹ ವಿದ್ಯುತ್ ಬಿಲ್ ಅನ್ನು ಜನರು ಪಾವತಿಸುವ ಅಗತ್ಯವಿಲ್ಲ ಎಂಬ ಮಾಹಿತಿಯನ್ನು ಹೇಳಿದ್ದರು. ಆದರೆ ಈಗ ಇದರಲ್ಲಿ ಒಂದು ದೊಡ್ಡ ಬದಲಾವಣೆಯೇ ಆಗಿದೆ. ಹಾಗಾದರೆ ವಿದ್ಯುತ್ ಸರಬರಾಜು ನಿಗಮ ಯಾವ ಒಂದು ವಿಧಾನಗಳನ್ನು ಅನುಸರಿಸಿ ಯಾರಿಗೆ ಉಚಿತ ಬಿಲ್ ಬರುತ್ತದೆ ಹಾಗೂ ಯಾರಿಗೆ ಇದು ಅನ್ವಯಿಸುವುದಿಲ್ಲ ಎನ್ನುವಂತಹ ಮಾಹಿತಿಯನ್ನು ಈಗ ನೆನ್ನೆಯಷ್ಟೇ ತಿಳಿಸಿದ್ದಾರೆ.
ಹೌದು 200 ಯೂನಿಟ್ ಒಳಗಡೆ ಬಳಕೆ ಮಾಡುತ್ತಿರುವಂತಹ ಪ್ರತಿಯೊಬ್ಬರಿಗೂ ಕೂಡ ಈ ಒಂದು ಯೋಜನೆಯ ಲಾಭ ಸಿಗುವುದಿಲ್ಲ. ಹೌದು ಏನಿದು ಎಂದು ನೀವು ಯೋಚಿಸುತ್ತಿರಬಹುದು ಆದರೆ ಇದಕ್ಕೆ ಒಂದು ಕಾರಣ ಇದೆ ಎಂದೇ ಹೇಳಬಹುದು.
• ಉದಾಹರಣೆಗೆ ನೀವೇನಾದರೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿ ದ್ದರೆ ನೀವು ಈಗ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಬಂದಿದ್ದರೆ ನೀವು 200 ಯೂನಿಟ್ ಒಳಗಡೆ ವಿದ್ಯುತ್ ಉಪಯೋಗಿಸುತ್ತಿದ್ದು.
ನಿಮಗೂ ಹಿಂದೆ ಇದ್ದಂತಹ ಬಾಡಿಗೆದಾರರು 200 ಯೂನಿಟ್ ಮೇಲೆ ಉಪಯೋಗಿಸುತ್ತಿದ್ದರೆ ನಿಮಗೆ ಈ ಒಂದು ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
• ಹೌದು ವಿದ್ಯುತ್ ಸರಬರಾಜು ಕೇಂದ್ರ ಯಾರು ಅರ್ಜಿಯನ್ನು ಸಲ್ಲಿಸಿ ರುತ್ತಾರೋ ಅವರ ಒಂದು ವರ್ಷದ ವಿದ್ಯುತ್ ಬಿಲ್ ಅನ್ನು ಆಯವ್ಯಯ ಮಾಡಿ ಅವರು ಒಂದೇ ರೀತಿಯಾಗಿ ವಿದ್ಯುತ್ ಉಪಯೋಗಿಸುತ್ತಿದ್ದಾರ ಅಥವಾ ಗೃಹಜ್ಯೋತಿ ಯೋಜನೆ ಬಂದ ನಂತರ ವಿದ್ಯುತ್ ಬಿಲ್ 200 ಯೂನಿಟ್ ಒಳಗಡೆ ಬಂದರೆ ನಮಗೆ ವಿದ್ಯುತ್ ಉಚಿತ ಎಂಬ ಕಾರಣ ದಿಂದ ವಿದ್ಯುತ್ ಕಡಿಮೆ ಉಪಯೋಗಿಸುತ್ತಿದ್ದರೆ.
ಅವರಿಗೆ ಯಾವುದೇ ಕಾರಣಕ್ಕೂ ಈ ಒಂದು ಉಚಿತ ವಿದ್ಯುತ್ ಯೋಜನೆ ಅನ್ವಯವಾಗುವು ದಿಲ್ಲ. ಬದಲಿಗೆ ಅವರು 100 ಯೂನಿಟ್ ವಿದ್ಯುತ್ ಉಪಯೋಗಿಸಿ ದ್ದರೂ ಸಹ ಅವರು ಅದಕ್ಕೆ ಹಣವನ್ನು ಕಟ್ಟಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ ನೀವು ಎಷ್ಟೇ ಕಡಿಮೆ ವಿದ್ಯುತ್ ಉಪಯೋಗಿಸಿದ್ದರು ನಿಮ್ಮ ಹಿಂದೆ ಇದ್ದಂತಹ ಜನರು ಹೆಚ್ಚು ಉಪಯೋಗಿಸಿದ್ದರೆ ನಿಮಗೆ ಇದರ ಅನ್ವಯ ಆಗುವುದಿಲ್ಲ.
ಹಾಗೂ ಉಚಿತ ಎಂಬ ಕಾರಣಕ್ಕಾಗಿ ಹೆಚ್ಚಿನ ಜನ ವಿದ್ಯುತ್ ವಸ್ತುಗ ಳನ್ನು ಖರೀದಿ ಮಾಡಿ ಉಪಯೋಗಿಸಿದರೆ ಅವರಿಗೂ ಕೂಡ ಈ ಒಂದು ಯೋಜನೆಯ ಪ್ರಯೋಜನ ಸಿಗುವುದಿಲ್ಲ. ಬದಲಿಗೆ ಎಷ್ಟು ಯೂನಿಟ್ ವಿದ್ಯುತ್ ಖರ್ಚಾಗಿರುತ್ತದೆಯೋ ಅಷ್ಟರ ಹಣವನ್ನು ಕಟ್ಟಬೇಕಾಗಿದೆ. ಇದು ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯವನ್ನು ಹುಟ್ಟಿಸುವಂತಹ ವಿಷಯವೇ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.