ಸರ್ಕಾರಿ ಹುದ್ದೆಗಳನ್ನು ಪಡೆಯಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಸರ್ಕಾರಿ ಹುದ್ದೆಗಳಲ್ಲಿ ಭದ್ರತೆ ಹೆಚ್ಚು ಹಾಗೂ ವೇತನವು ಕೂಡ ತೃಪ್ತಿಕರವಾಗಿರುತ್ತದೆ ಎನ್ನುವ ಕಾರಣಕ್ಕಾಗಿ ಪ್ರತಿಯೊಬ್ಬರು ಕೂಡ ತಮ್ಮ ವಿದ್ಯಾಭ್ಯಾಸದ ದಿನದಿಂದಲೂ ಇದಕ್ಕೆ ತಯಾರಿ ನಡೆಸುತ್ತಾರೆ. ಕೆಲವರು ಖಾಸಗಿ ಉದ್ಯೋಗದ ಕಷ್ಟಗಳನ್ನು ಅರಿತ ಮೇಲೆ ಸರ್ಕಾರಿ ಹುದ್ದೆಗಳನ್ನು ಪಡೆದು ನೆಮ್ಮದಿಯಾಗಿ ಜೀವನ ಸಾಗಿಸಬಹುದು ಎನ್ನುವ ಕಾರಣಕ್ಕೆ ಸರ್ಕಾರಿ ಹುದ್ದೆಗಳ ಕಡೆ ವಾಲುತ್ತಾರೆ.
ಅದಕ್ಕಾಗಿ ತರಬೇತಿ ಅದು ಪರೀಕ್ಷೆ ಬರೆದು ಹುದ್ದೆ ಪಡೆಯುತ್ತಾರೆ. ಆದರೆ ವಿದ್ಯಾರ್ಹತೆ ಕಡಿಮೆ ಹೊಂದಿದವರಿಗೆ ಕೂಡ ಸರ್ಕಾರಿ ಉದ್ಯೋಗಗಳು ಸಿಗುತ್ತದೆಯಾ ಎನ್ನುವ ಅನುಮಾನ ಹಲವರಲ್ಲಿ ಇದೆ. ಸರ್ಕಾರದ ಕೆಲ ಹುದ್ದೆಗಳು ಕಡಿಮೆ ವಿದ್ಯಾಭ್ಯಾಸ ಹೊಂದಿದವರಿಗಾಗಿಯೇ ಇವೆ. ಈ ಹುದ್ದೆಗಳಿಗೆ ಪ್ರತಿಭಾನ್ವಿತರಾಗಿದ್ದರೆ ಸಾಕು ವಿದ್ಯಾರ್ಹತೆ ಕಡಿಮೆ ಇದ್ದರೂ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆ ಇದೆ ಎನ್ನುವ ಸುದ್ದಿಯನ್ನು ನಾವು ಕೇಳುತ್ತಿದ್ದೇವೆ. ಆ ಪ್ರಕರವಾಗಿಯೇ ಈ ಸುದ್ದಿ ಇದೆ. ಯಾಕೆಂದರೆ ಈಗಷ್ಟೇ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಪಿಂಪ್ರಿ ಚಿಂಚ್ ಲಾರ್ಡ್ ಮುನ್ಸಿಪಲ್ ಕಾರ್ಪೊರೇಷನ್ ಸಂಸ್ಥೆಯು ಅಧಿಸೂಚನೆಯನ್ನು ಹೊರಡಿಸಿದ್ದು ಆಸಕ್ತರಿಂದ ಅರ್ಜಿ ಆಹ್ವಾನ ಮಾಡಿದೆ.
ಆಶಾ ಸ್ವಯಂ ಕಾರ್ಯಕರ್ತೆಯರ ಹುದ್ದೆಗಳಿಗಾಗಿ ಈ ನೇಮಕಾತಿ ನಡೆಯುತ್ತಿದ್ದು ಇದಕ್ಕೆ ದೇಶದಾದ್ಯಂತ ಇರುವ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿಧಿಸಲಾಗಿರುವ ಶೈಕ್ಷಣಿಕ ವಿದ್ಯಾರ್ಹತೆ, ವಯೋಮಾನ ಮಿತಿ ಮತ್ತು ಅರ್ಜಿ ಸಲ್ಲಿಸುವ ರೀತಿ, ಕಡೆ ದಿನಾಂಕ ಮತ್ತಿತರ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.
ಸಂಸ್ಥೆಯ ಹೆಸರು:- ಪಿಂಪ್ರಿ ಚಿಂಚ್ ಲಾಡ್ ಮುನ್ಸಿಪಲ್ ಕಾರ್ಪೊರೇಷನ್ ( PCMC ).
ಹುದ್ದೆಗಳ ಸಂಖ್ಯೆ:- 154.
ಹುದ್ದೆಯ ಹೆಸರು:- ಆಶಾ ಸ್ವಯಂ ಕಾರ್ಯಕರ್ತೆಯರು.
ವೇತನ ಶ್ರೇಣಿ:- ಮೂಲಗಳ ಪ್ರಕಾರ 15,000 ದಿಂದ 20,000 ಮಾಸಿಕ ವೇತನ ಇರುತ್ತದೆ. ಹಾಗೂ PCMC ನಿಯಮಗಳ ಅನುಸಾರವಾಗಿ ಕಾಲಕಾಲಕ್ಕೆ ಇದು ಪರಿಷ್ಕೃತಗೊಳ್ಳುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:- ಪ್ರಿಂಪಿ ಚಿಂಚ್ ಲಾರ್ಡ್ ಮುನ್ಸಿಪಲ್ ಕಾರ್ಪೊರೇಷನ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಅದಕ್ಕಿಂತಲೂ ಹೆಚ್ಚು ಅಥವಾ ಅದಕ್ಕೆ ತತ್ಸಮಾನ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.
ವಯೋಮಿತಿ:- ಪಿಂಪ್ರಿ ಚಿಂಚ್ ಲಾರ್ಡ್ ಮುನ್ಸಿಪಲ್ ಕಾರ್ಪೊರೇಷನ್ ಸಂಸ್ಥೆಯ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು
ಕನಿಷ್ಠ 20 ವರ್ಷಗಳನ್ನು ಪೂರೈಸಬೇಕು ಹಾಗೂ ಗರಿಷ್ಠ 45 ವರ್ಷಗಳನ್ನು ಮೀರಿರಬಾರದು.
ಅರ್ಜಿ ಶುಲ್ಕ:- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ವಿಧಿಸಿಲ್ಲ.
ಆಯ್ಕೆ ಪ್ರಕ್ರಿಯೆ:-
● ಸಂದರ್ಶನ
● ದಾಖಲೆಗಳ ಪರಿಶೀಲನೆ
ಅರ್ಜಿ ಸಲ್ಲಿಸುವ ವಿಧಾನ:- ಆಫ್ ಲೈನ್ ಮೂಲಕ. ●ಸಂಸ್ಥೆಯ ಅಧಿಕೃತ ವೆಬ್ಸೈಟ್ ಆದ pcmcindia.gov.in ವೆಬ್ಸೈಟ್ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ವಿವರಗಳನ್ನು ತುಂಬಿಸಿ ಸಂಬಂಧ ಪಟ್ಟ ದಾಖಲೆಗಳನ್ನು ಲಗತ್ತಿಸಿ ಸಂಸ್ಥೆಯ ಮಹಾರಾಷ್ಟ್ರದಲ್ಲಿರುವ ಆಡಳಿತ ಕಛೇರಿಗೆ ಅಂಚೆ ಮೂಲಕ ಕಳುಹಿಸಿಕೊಡಬೇಕು.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ – 25.04.2023.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 04.05.2023.