ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಅದು ದೊಡ್ಮನೆ ಸೊಸೆಯ ಕುರಿತು ಇದುವರೆಗೆ ಅಪ್ಪು (Appu)ಅವರಿಗೆ ಆಗುವ ಸನ್ಮಾನ ಸಮಾರಂಭದ ಕುರಿತಾಗಿ, ಅಥವಾ ದೊಡ್ಮನೆ ಕಲಾವಿದರ ಸಿನಿಮಾ ವಿಷಯ ಕುರಿತವಾಗಿ ಕಾಣಿಸಿಕೊಳ್ಳುತ್ತಿದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ (Aswini punith rajkumar) ಅವರ ಹೊಸ ವಿಡಿಯೋ ಒಂದು ವೈರಲ್ (Video viral) ಆಗಿದೆ. ಇದುವರೆಗೂ ನಾವು ಅಶ್ವಿನಿ ಅವರನ್ನು ತುಂಬಾ ಸಾಂಸ್ಕೃತಿಕವಾಗಿ ನೋಡಿದ್ದೇವೆ.
ಅದರಲ್ಲೂ ಅಪ್ಪು ಅವರು ವಿ’ಯೋ’ಗವಾದ ದಿನದಿಂದ ಅಶ್ವಿನಿ ಅವರ ಬಗ್ಗೆ ಅದೇನು ಕಿಂಚಿತ್ತು ಮಮತೆ ಹೆಚ್ಚು. ಅಂತಹ ಕಠಿಣ ಪರಿಸ್ಥಿತಿಯಲ್ಲೂ ಎಲ್ಲವನ್ನೂ ಸಮಚಿತ್ತದಿಂದ ಎದುರಿಸಿದ ಹಾಗೂ ರಾಜವಂಶದ ಸೊಸೆ ಪಟ್ಟಕ್ಕೆ ತಕ್ಕಂತೆ ಗಂಭೀರವಾಗಿ ನಡೆದುಕೊಂಡ ಅಶ್ವಿನಿ ಅವರ ನಡೆಯನ್ನು ಇಡೀ ಕರುನಾಡ ಜನತೆ ಕೊಂಡಾಡಿದ್ದಾರೆ. ಈಗ ಅಶ್ವಿನಿ ಅವರ ಈ ನಡೆ ಎಲ್ಲರಿಗೂ ಅಚ್ಚರಿ ತಂದಿದೆ.
ಒಂದು ರೀತಿ ಇದು ಪುನೀತ್ ರಾಜಕುಮಾರ್ ಅವರಿಗೆ ಹೋಲುತ್ತಿರುವ ವಿಡಿಯೋ ಆಗಿದೆ ಎನ್ನಬಹುದು. ಯಾಕೆಂದರೆ ಎಲ್ಲರಿಗೂ ತಿಳಿದಿರುವಂತೆ ಪುನೀತ್ ರಾಜಕುಮಾರ್ ಅವರು ಬಹಳ ದೇಹ ದಂಡನೆಗೆ ಸಮಯ ಮೀಸಲಿಡುತ್ತಿದ್ದರು. ವರ್ಕೌಟ್, ಅಡ್ವೆಂಚರ್, ಸ್ಟಂಟ್ಸ್ ,ಸ್ವಿಮ್ಮಿಂಗ್, ಟ್ರಕ್ಕಿಂಗ್ ಈ ರೀತಿ ಅಪ್ಪು ಫಿಸಿಕಲ್ ಆಕ್ಟಿವಿಟೀಸ್ ಅಲ್ಲಿ ಬಹಳ ಇಂಟರೆಸ್ಟ್ ಹೊಂದಿದ್ದರು ಮತ್ತು ಇದಕ್ಕೆ ಸಂಬಂಧಿತ ವಿಡಿಯೋಗಳನ್ನು ಅಭಿಮಾನಿ ದೇವರುಗಳ ಜೊತೆ ಹಂಚಿಕೊಳ್ಳುತ್ತಿದ್ದರು.
ಪುನೀತ್ ಅವರು ಹಲವು ಸಲ ಅಶ್ವಿನಿ ಅವರು ಸಹ ಇದರಲ್ಲಿ ಸಮಾನ ಆಸಕ್ತರು ಅವರಿಗೂ ಈ ವಿಚಾರಗಳಲ್ಲಿ ಅಷ್ಟೇ ಇಂಟರೆಸ್ಟ್ ಇದೆ ಎಂದು ಹೇಳಿಕೊಳ್ಳುತ್ತಿದ್ದರು ಎಂದೂ ಸಹ ಅಶ್ವಿನಿ ಅವರು ಈ ರೀತಿ ಕಾಣಿಸಿಕೊಂಡಿರುವುದನ್ನು ಕನ್ನಡಿಗರು ನೋಡಿರಲಿಲ್ಲ. ಕುಟುಂಬದ ಜೊತೆ ವಿದೇಶ ಪ್ರವಾಸ ಹೋಗುತ್ತಿದ್ದ ಫೋಟೋಸ್ ಬಿಟ್ಟರೆ ಅಶ್ವಿನಿ ಅವರ ಇತರ ಇಂಟರೆಸ್ಟ್ ಕುರಿತ ಯಾವ ವಿಷಯವೂ ಸಮಾಜಕ್ಕೆ ತಿಳಿದಿರಲಿಲ್ಲ.
ಈಗ ವೈರಲ್ ಆಗಿರುವ ಈ ವಿಡಿಯೋ ಪುನೀತ್ ರಾಜಕುಮಾರ್ ಅವರನ್ನು ನೆನಪು ಮಾಡುವಂತೆ ಇದೆ. ಅದೇನೆಂದರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ವರ್ಕೌಟ್ ಮಾಡಿ ಕಿಕ್ ಬಾಕ್ಸಿಂಗ್ ಮಾಡುತ್ತಿರುವ ವಿಡಿಯೋ ಇದಾಗಿದೆ. ಎದುರಿಗಿರುವ ಟ್ರೈನಿ ಮಾಸ್ಟರ್ ಕೊಡುತ್ತಿರುವ ಸೂಚನೆಯಂತೆ ಅಶ್ವಿನಿ ಅವರು ವರ್ಕೌಟ್ ಮಾಡುತ್ತಿದ್ದಾರೆ. ಕೆಲವು ಸೆಕೆಂಡುಗಳ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಾರಿ ಮಾತುಕತೆಗೆ ಆಸ್ಪದ ಕೊಟ್ಟಿದೆ.
ಇದನ್ನು ಅಪ್ಪು ಅಭಿಮಾನಿಗಳು ಅತ್ತಿಗೆ ಖಡಕ್ ಆಗಿ ರೆಡಿ ಆಗುತ್ತಿದ್ದಾರೆ ಹೇಗೋ ಎಲ್ಲಾ ನೋವಿನಿಂದ ಆಚೆ ಬರದು ಅವರು ಚೆನ್ನಾಗಿರಲಿ ಎಂದು ಖುಷಿ ಪಡುತ್ತಿದ್ದರೆ, ಕೆಲವರು ಇವರು ಈಗ್ಯಾಕೆ ಈ ರೀತಿ ತಯಾರಾಗುತ್ತಿರುತ್ತಾರೆ ಏನಾದರೂ ಆರೋಗ್ಯ ಸಮಸ್ಯೆ ಇದೆಯಾ ಅಥವಾ ಇವರು ಸಹ ಅಭಿನಯಕ್ಕೆ ಕಾಲಿಡುತ್ತಿದ್ದಾರ ಎನ್ನುವ ಅನುಮಾನವನ್ನು ಇಟ್ಟುಕೊಂಡಿದ್ದಾರೆ.
ಇದೆಲ್ಲವನ್ನು ಮೀರಿ ಮತ್ತೊಂದು ಕಿಡಿಗೇಡಿ ವಲಯವು ಈ ಸಮಯದಲ್ಲಿ ನಿಮಗೆ ಇದೆಲ್ಲ ಬೇಕಿತ್ತಾ, ದೊಡ್ಮನೆ ಸೊಸೆಯರಿಗೆ ಇದು ತಕ್ಕದ್ದಲ್ಲ, ಪುನೀತ್ ಅವರ ಮರ್ಯಾದೆ ಈ ರೀತಿ ಹಾಳು ಮಾಡಬೇಡಿ ಖಾಸಗಿ ವಿಷಯಗಳನ್ನು ಯಾಕೆ ಈ ರೀತಿ ಹಂಚಿಕೊಂಡು ಆಡುವ ಬಾಯಿಗಳಿಗೆ ಆಹಾರ ಆಗುತ್ತಿದ್ದೀರ ಎಂದು ಅಶ್ವಿನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಈ ವಿಡಿಯೋವನ್ನು ನೀವು ಒಮ್ಮೆ ನೋಡಿ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.